ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ ಬಿಐನಿಂದ ವಿಥ್ ಡ್ರಾ ಮಿತಿ ಪ್ರಸ್ತಾವಕ್ಕೆ ಸಾರ್ವಜನಿಕರು ಸಿಟ್ಟೋ ಸಿಟ್ಟು

|
Google Oneindia Kannada News

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಗಳು ಯಾರು ಒಂದು ದಿನಕ್ಕೆ ನಾನೆಷ್ಟು ಹಣ ವಿಥ್ ಡ್ರಾ ಮಾಡಬಹುದು ಅನ್ನೋದನ್ನು ತೀರ್ಮಾನ ಮಾಡುವುದಕ್ಕೆ? ಮತ್ತು ನನಗೆ ಖಂಡಿತಾ ಗೊತ್ತು; ಇವೆಲ್ಲ ಸಾಮಾನ್ಯ ಖಾತೆಗಳಿಗೆ. ಪ್ರೀಮಿಯಂ ಖಾತೆಗಳಿಗೆ ಇಂಥ ಯಾವ ಮಿತಿಯೂ ಇರುವುದಿಲ್ಲ. ಇಡೀ ನಿಯಮ ಗುರಿ ಮಾಡಿಕೊಂಡಿರುವುದೇ ಸಾಮಾನ್ಯ ಜನರನ್ನು.

-ಆದಿತ್ಯ ಎಂಬುವವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಸ್ತಾವಿತ ಹೊಸ ನಿಯಮಾವಳಿಗೆ ಆಕ್ರೋಶ ವ್ಯಕ್ತವಾಗಿರುವ ಬಗೆ ಇದು. ಅದೇನು ಹೊಸ ನಿಯಮಾವಳಿ ಅಂತೀರಾ? ಈಗಲೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಿಂದ ದಿನಕ್ಕೆ ನಲವತ್ತು ಸಾವಿರ ರುಪಾಯಿ ವಿಥ್ ಡ್ರಾ ಮಾಡಬಹುದು.

ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ದೊಡ್ಡ ಶಾಕ್: ಎಟಿಎಂ ವಿತ್ ಡ್ರಾ ಮಿತಿಯಲ್ಲಿ ಭಾರೀ ಕಡಿತಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ದೊಡ್ಡ ಶಾಕ್: ಎಟಿಎಂ ವಿತ್ ಡ್ರಾ ಮಿತಿಯಲ್ಲಿ ಭಾರೀ ಕಡಿತ

ಆದರೆ, ಅಕ್ಟೋಬರ್ ಮೂವತ್ತೊಂದರಿಂದ ಅದು ಇಪ್ಪತ್ತು ಸಾವಿರಕ್ಕೆ ಕಡಿತವಾಗುತ್ತದೆ. ಡಿಜಿಟಲ್ ವ್ಯವಹಾರಗಳನ್ನು ಪ್ರೋತ್ಸಾಹಿಸಲು, ವಂಚನೆಗಳನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂಬುದು ಬ್ಯಾಂಕ್ ಮೂಲಗಳ ಮಾಹಿತಿ. ಆದರೆ ಈ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಅಕ್ರೋಶ ವ್ಯಕ್ತವಾಗಿದೆ. ಅದರ ಇನ್ನಷ್ಟು ಉದಾಹರಣೆ ಇಲ್ಲಿದೆ.

People reaction on SBI ATM withdrawal limit cut down

ಅನಿಲ್ ಕುಮಾರ್
ನಾನು ಶಿಲ್ಲಾಂಗ್ ನ ಎಸ್ ಬಿಐ ಶಾಖೆಯೊಂದಕ್ಕೆ ಹಣ ವರ್ಗಾವಣೆ ಮಾಡಿದ್ದೇನೆ. ಆದರೆ ಹಣ ವಿಥ್ ಡ್ರಾ ಮಾಡಲು ಆಗುತ್ತಿಲ್ಲ. ಗ್ರಾಹಕ ದೂರು ಕೇಂದ್ರದವರ ಬಳಿ ಕೇಳಿದರೆ, ಖಾತೆ ಇನ್ ಆಕ್ಟಿವ್ ಆಗಿದೆ. ಹೋಮ್ ಬ್ರ್ಯಾಂಚ್ ಗೆ ಹೋಗಬೇಕು ಅಂತಿದ್ದಾರೆ. ಸಮಸ್ಯೆ ಏನು ಗೊತ್ತಾ? ನಾನು ಇರುವುದು ಬೆಂಗಳೂರಿನಲ್ಲಿ. ನನ್ನ್ ಶಾಖೆ ಇರುವುದು ಶಿಲ್ಲಾಂಗ್ ನಲ್ಲಿ. ಅಲ್ಲಿಗೆ ಹೋಗಲು ನನಗೆ ಸಾಧ್ಯವಿಲ್ಲ. ದಯವಿಟ್ಟು ಸಹಾಯ ಮಾಡಿ.

ತರುಣ್ ಶುಕ್ಲಾ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಇತ್ತೀಚೆಗೆ ಹೊಸ ಖಾತೆ ತೆರೆದಾಗ ತಮಾಷೆ ಎನಿಸುವ ಕೆಲವು ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿವೆ. ಕಳೆದ ಎರಡು ತಿಂಗಳಿಂದ ಮ್ಯಾನೇಜರ್ ಹೇಳ್ತಿದ್ದಾರೆ: ನೀವು ಡೆಪಾಸಿಟ್ ಮಾಡಬಹುದು, ಆದರೆ ವಿಥ್ ಡ್ರಾ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ.

ಗಣೇಶ ಚತುರ್ಥಿಗೆ ಈ ಸಲ ಸಾಲ ದುಬಾರಿ, ಎಸ್ ಬಿಐನಿಂದ ಹೊಸ ದರ ಜಾರಿಗಣೇಶ ಚತುರ್ಥಿಗೆ ಈ ಸಲ ಸಾಲ ದುಬಾರಿ, ಎಸ್ ಬಿಐನಿಂದ ಹೊಸ ದರ ಜಾರಿ

ಜಯಾನಂದ್ ಸಾಗರ್
ಎಸ್ ಬಿಐ ಯಾವಾಗಲೂ ಕೆಟ್ಟ ಸೇವೆ ನೀಡುತ್ತದೆ. ಕನಿಷ್ಠ ಬ್ಯಾಲೆನ್ಸ್, ಕನಿಷ್ಠ ವಿಥ್ ಡ್ರಾ ಎಲ್ಲಕ್ಕೂ ಹೆಚ್ಚಿನ ಸೇವಾ ಶುಲ್ಕ ವಿಧಿಸುತ್ತಾರೆ. ಆದ್ದರಿಂದ ಎಸ್ ಬಿಐ ಬಳಸುವುದಿಲ್ಲ. ಸುಮ್ಮನೆ ಖಾತೆ ಇಟ್ಟುಕೊಂಡಿದ್ದೀನಿ. ವಾಣಿಜ್ಯ ಕಾರಣಗಳಿಗೆ ಬ್ಯಾಂಕ್ ನ ಉಪಯೋಗ ನಿಲ್ಲಿಸಿದ್ದೇನೆ.

ವೇದ್ ನಿವಾಸ್ ಆರ್ಯ
ವಂಚನೆಯ ಕಾರಣಗಳಿಗಾಗಿ ದಿನದ ವಿಥ್ ಡ್ರಾ ಮಿತಿಯನ್ನು ಇಪ್ಪತ್ತು ಸಾವಿರಕ್ಕೆ ಮಾತ್ರ ಇಳಿಸಬೇಕು ಅನ್ನೋದು ಎಸ್ ಬಿಐ ಅಧಿಕಾರಿಗಳ ಮಾತು. ಹಾಗಿದ್ದರೆ ಎಸ್ ಬಿಐವೊಂದಕ್ಕೆ ಮಾತ್ರ ಇಂಥ ಸಮಸ್ಯೆಯಿದ್ದು, ಗ್ರಾಹಕರ ಕುತ್ತಿಗೆ ಮೇಲೆ ಕತ್ತಿ ಇಟ್ಟಿದೆ ಅನ್ನೋದನ್ನು ಒಪ್ಪುತ್ತಾರಾ? ಅರುಣ್ ಜೇಟ್ಲಿ ಸಾಹೇಬರೇ ನಿಮ್ಮ ಬಹು ನಂಬಿಕೆಯ ಬ್ಯಾಂಕ್ ಎಲ್ಲದಕ್ಕೂ ಶುಲ್ಕ ವಿಧಿಸುತ್ತಿದೆ, ಆನ್ ಲೈನ್ ವ್ಯವಹಾರಕ್ಕೂ. ಇದು ಯಾವ ಸೀಮೆ ಡಿಜಿಟಲ್ ಇಂಡಿಯಾ!

Q1 ವರದಿ : ಎಸ್ಬಿಐಗೆ 4,876 ಕೋಟಿ ರು ನಷ್ಟQ1 ವರದಿ : ಎಸ್ಬಿಐಗೆ 4,876 ಕೋಟಿ ರು ನಷ್ಟ

ಗೋಪಾಲ್ ಕಾವಲಿರೆಡ್ಡಿ
ಇಂಥ ನಡೆಗಳು ಭಯವನ್ನು ಹುಟ್ಟಿಸುತ್ತವೆ. ಸದ್ಯದ ಪರಿಸ್ಥಿತಿಯಲ್ಲಿ ಜನ ಏನೆಂದುಕೊಳ್ತಾರೆ ಗೊತ್ತಾ? ಎಲ್ಲೋ ನಗದು ಕೊರತೆ ಇರಬೇಕೇನೋ ಎಂದು ಹಣ ಡ್ರಾ ಮಾಡುವುದಕ್ಕೆ ಎಟಿಎಂಗೆ ದಾಂಗುಡಿ ಇಡಬಹುದು. ಇದರಿಂದ ನಗದು ಕೊರತೆ ಇನ್ನಷ್ಟು ಕಾಡಬಹುದು. ಹುಚ್ಚಾಟ...ನಾವು ಇದಕ್ಕೆ ಎಸ್ ಬಿಐ ಮಾತ್ರ ನಿಂದಿಸುವುದಕ್ಕೆ ಆಗಲ್ಲ. ಐಎಲ್ ಎಫ್ ಎಸ್ ಹೊಡೆತದಿಂದ ಹೊರಬರಲು ಅವರಿಗೆ ಹಣ ಬೇಕಿದೆ.

English summary
People angry about India's leading bank SBI proposed rule of ATM withdrawal limit cut down which will applicable from October 31, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X