ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ 2022 ನಿರೀಕ್ಷೆ: ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಳ ಸಾಧ್ಯತೆ

|
Google Oneindia Kannada News

ನವದೆಹಲಿ, ಜನವರಿ 21: ಕೇಂದ್ರ ಸರ್ಕಾರದ 2022ರ ಬಜೆಟ್‌ ಬಗ್ಗೆ ಜನತೆಯಲ್ಲಿ ಸಾಕಷ್ಟು ಕುತೂಹಲಗಳಿವೆ. ಈ ಬಾರಿ ಆದಾಯ ತೆರಿಗೆ ವಿನಾಯಿತಿ ಮಿತ್ತಿ ಹೆಚ್ಚಳದ ಸಾಧ್ಯತೆ ಇದೆ, ಪ್ರಸ್ತುತ ತೆರಿಗೆ ವಿನಾಯಿತಿ ಮಿತಿ 2.5 ಲಕ್ಷ ರೂ.ಗಳಾಗಿದ್ದು, ಕಳೆದ 8 ವರ್ಷಗಳಿಂದ ಏರಿಕೆ ಮಾಡಿರಲಿಲ್ಲ. ಕಳೆದ ಬಾರಿ ತೆರಿಗೆ ವಿನಾಯಿತಿ ಮಿತಿಯನ್ನು 2 ಲಕ್ಷದಿಂದ 2.5 ಲಕ್ಷಕ್ಕೆ ಹೆಚ್ಚಿಸಲಾಗಿತ್ತು.

ಈ ಬಾರಿ ತೆರಿಗೆ ವಿನಾಯಿತಿ ಮಿತಿಯನ್ನು 3 ಲಕ್ಷ ರೂ.ಗೆ ಹೆಚ್ಚಿಸುವ ಸಾಧ್ಯತೆ ಇದೆ. ಅದೇನೇ ಇರಲಿ, ಈ ಬಾರಿ ದೇಶದ ದೊಡ್ಡ ರಾಜ್ಯವಾದ ಉತ್ತರಪ್ರದೇಶ ಸೇರಿದಂತೆ 5 ರಾಜ್ಯಗಳಲ್ಲಿ ಚುನಾವಣೆ ಇದೆ. ಹೀಗಿರುವಾಗ ಬಜೆಟ್ ನಲ್ಲಿ ತೆರಿಗೆ ಮಿತಿ ಹೆಚ್ಚಿಸುವ ನಿರ್ಧಾರ ಜನರ ವಿಶ್ವಾಸ ಗೆಲ್ಲಲು ಸಹಾಯಕವಾಗಲಿದೆ.

ಕೇಂದ್ರ ಬಜೆಟ್ 2022: ದೇಶದ ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರದ ಬಂಪರ್ ಗಿಫ್ಟ್?ಕೇಂದ್ರ ಬಜೆಟ್ 2022: ದೇಶದ ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರದ ಬಂಪರ್ ಗಿಫ್ಟ್?

ಮಧ್ಯಮ ವರ್ಗಕ್ಕೂ ಅನುಕೂಲವಾಗಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಕೇಂದ್ರ ಸರ್ಕಾರವು ಫೆಬ್ರುವರಿ 1 ರಂದು ಲೋಕಸಭೆಯಲ್ಲಿ ಮಂಡಿಸುವ ಕೇಂದ್ರದ 2022-23ನೇ ಸಾಲಿನ ಸಾಮಾನ್ಯ ಬಜೆಟ್ ಬಗ್ಗೆ ದೇಶದ ಜನರಲ್ಲಿ ತಮ್ಮದೇ ಆದ ನಿರೀಕ್ಷೆಗಳಿರುವುದು ಸಹಜ. ಸಮಾಜದ ಬಹುತೇಕ ಎಲ್ಲ ವರ್ಗಗಳ ಜನರು ಬಜೆಟ್​ನಲ್ಲಿ ತಮ್ಮ ಏಳಿಗೆಗೆ ಏನಾದರೂ ಹೊಸ ಯೋಜನೆ ಘೋಷಣೆ ಮಾಡಬಹುದು ಎಂಬ ನಿರೀಕ್ಷೆಯಲ್ಲೇ ಇರುತ್ತಾರೆ.

people-feel-i-t-exemption-limit-could-be-raised-from-rs-2-5-lakh-survey

ಆದಾಯ ಗಳಿಸುವ ಹಾಗೂ ಆದಾಯ ತೆರಿಗೆ ಪಾವತಿಸುವ ವರ್ಗವು ಆದಾಯ ತೆರಿಗೆ ಕಡಿತದ ನಿರೀಕ್ಷೆ ಇರಿಸಿಕೊಳ್ಳುವುದು ಸಹಜ. ಈ ವರ್ಷ ಆದಾಯ ತೆರಿಗೆ ದರಗಳಲ್ಲಿ ಹೆಚ್ಚಿನ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ.

ಆದರೆ ಹೊಸ ಆದಾಯ ತೆರಿಗೆ ಪದ್ಧತಿಗೆ ಬದಲಾಗುವಂತೆ ಜನರಿಗೆ ಉತ್ತೇಜನ ನೀಡುವ ಸಾಧ್ಯತೆಯೂ ಇದೆ. ಇನ್ನೂ ಕೋಟ್ಯಂತರ ಆದಾಯ ತೆರಿಗೆ ಪಾವತಿದಾರರು ಹಳೆಯ ಪದ್ಧತಿ ಪ್ರಕಾರವೇ ತೆರಿಗೆ ಪಾವತಿಸುತ್ತಿದ್ದಾರೆ.

ಪ್ರಸ್ತುತ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 80 ಸಿ ಅಡಿ ತೆರಿಗೆ ವಿನಾಯಿತಿಗೆ ಹೂಡಿಕೆ ಮಿತಿ 1.5 ಲಕ್ಷ ರೂ. ಇದೆ. 2014ರಲ್ಲಿ 1 ರೂ. ಲಕ್ಷ ಇದ್ದ ಹೂಡಿಕೆ ಮಿತಿಯನ್ನು 1.5 ರೂ. ಲಕ್ಷಕ್ಕೆ ಹೆಚ್ಚಿಸಲಾಗಿತ್ತು. ಅಲ್ಲಿಂದೀಚೆಗೆ ಈ ಮಿತಿಯನ್ನು ಹೆಚ್ಚಿಸಲಾಗಿಲ್ಲ. ಉದ್ಯೋಗಿಗಳಿಗೆ ತೆರಿಗೆ ಉಳಿಸಲು ಸೆಕ್ಷನ್ 80ಸಿ ಪ್ರಮುಖ ವಿಭಾಗವಾಗಿದೆ.

ಅಂದರೆ, ಈ ಸೆಕ್ಷನ್ ಅಡಿಯಲ್ಲಿ ವಿನಾಯಿತಿ ಮಿತಿಯನ್ನು ಹೆಚ್ಚಿಸುವುದು ಎಂದರೆ ಹೆಚ್ಚು ಜನರಿಗೆ ಸಹಾಯಕವಾಗಲಿದೆ. ಈ ಬಾರಿಯ ಬಜೆಟ್‌ನಲ್ಲಿ ಈ ಮಿತಿಯನ್ನು ಹೆಚ್ಚಿಸುವ ನಿರೀಕ್ಷೆ ಇದೆ.

ಮುಕ್ತ ಎಫ್‌ಡಿಗಳ ಲಾಕ್-ಇನ್ ಅವಧಿಯನ್ನು ವಿಸ್ತರಿಸುವಂತೆ ಭಾರತೀಯ ಬ್ಯಾಂಕ್‌ಗಳ ಸಂಘ ಒತ್ತಾಯಿಸಿದೆ. ಸದ್ಯ 5 ವರ್ಷಗಳ ಎಫ್‌ಡಿ ಮೇಲೆ ತೆರಿಗೆ ವಿನಾಯಿತಿ ಲಭ್ಯವಿದ್ದು, 3 ವರ್ಷ ಅವಧಿಯ ಅವಧಿಯ ಎಫ್‌ಡಿಗಳಿಗೂ ತೆರಿಗೆ ವಿನಾಯಿತಿ ನೀಡಬೇಕೆಂದು ಬೇಡಿಕೆ ಇಟ್ಟಿದೆ. ಬ್ಯಾಂಕುಗಳು ಬಡ್ಡಿದರಗಳನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಿದೆ, ಆದರೆ ಎಫ್‌ಡಿಗೆ ಹೋಲಿಸಿದರೆ ಪಿಪಿಎಫ್‌ನಂತಹ ಉತ್ಪನ್ನಗಳ ಮೇಲಿನ ಬಡ್ಡಿದರ ಉತ್ತಮವಾಗಿದೆ. ಇದರಿಂದಾಗಿ ಜನರು ಎಫ್‌ಡಿಗಳಲ್ಲಿ ಕಡಿಮೆ ಹೂಡಿಕೆ ಮಾಡುತ್ತಿದ್ದಾರೆ.

ಅನೇಕ ಜನರು ಮ್ಯೂಚುವಲ್ ಫಂಡ್‌ಗಳು ಮತ್ತು ಷೇರುಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಹೀಗಾಗಿ 5 ವರ್ಷಗಳ ಎಫ್‌ಡಿ ಕಡೆಗಣಿಸುತ್ತಿದ್ದಾರೆ. ಹೀಗಾಗಿ ತೆರಿಗೆ ವಿನಾಯಿತಿ ವ್ಯಾಪ್ತಿಗೆ 3 ವರ್ಷ ಅವಧಿಯ ಎಫ್‌ಡಿಯನ್ನೂ ಸೇರುವ ಸಾಧ್ಯತೆಗಳಿವೆ.

ಹೊಸ ಆದಾಯ ತೆರಿಗೆ ಪದ್ಧತಿಯಲ್ಲಿ 2.5 ಲಕ್ಷ ರೂ. ವರೆಗೂ ಯಾವುದೇ ಆದಾಯ ತೆರಿಗೆ ಇಲ್ಲ. 2.5 ಲಕ್ಷ ರೂಪಾಯಿಯಿಂದ 5 ಲಕ್ಷದವರೆಗೂ ವಾರ್ಷಿಕ ಆದಾಯ ಇರುವವರು ಶೇ 5ರಷ್ಟು ಆದಾಯ ತೆರಿಗೆ ಪಾವತಿಸಬೇಕು.

ವಾರ್ಷಿಕ 5ರಿಂದ 7.5 ಲಕ್ಷ ರೂ. ಆದಾಯ ಇರುವವರು ಶೇ 10ರಷ್ಟು ಆದಾಯ ತೆರಿಗೆ ಪಾವತಿಸಬೇಕು. ಇನ್ನು ಗೃಹ ಖರೀದಿ, ಗೃಹ ನಿರ್ಮಾಣ ಮಾಡುವವರಿಗೆ ನಿರ್ಮಲಾ ಸೀತಾರಾಮನ್ ಖುಷಿ ಸುದ್ದಿ ನೀಡುವ ಸಾಧ್ಯತೆ ಇದೆ. ಗೃಹಸಾಲದ ಮೇಲಿನ ತೆರಿಗೆ ಕಡಿತವನ್ನು ಹೆಚ್ಚಳ ಮಾಡುವ ಸಾಧ್ಯತೆ ಇದೆ.

ದೇಶದಲ್ಲಿ ಹೆಚ್ಚೆಚ್ಚು ಜನರು ಗೃಹ ನಿರ್ಮಾಣ ಮಾಡಬೇಕು, ಜನರು ಸ್ವಂತ ಮನೆಯನ್ನು ಹೊಂದಲು ಉತ್ತೇಜನ ನೀಡಬೇಕೆಂಬ ಉದ್ದೇಶದಿಂದ ಗೃಹ ಸಾಲದ ಮೇಲೆ ಹೆಚ್ಚಿನ ತೆರಿಗೆ ಕಡಿತದ ಮಿತಿ ಏರಿಕೆಯ ಘೋಷಣೆ ಮಾಡುವ ಸಾಧ್ಯತೆ ಇದೆ.

ಸೆಕ್ಷನ್ 80ಸಿ ಅಡಿ ಗೃಹಸಾಲದ ಅಸಲು ಮೊತ್ತದ ಮೇಲಿನ ಆದಾಯ ತೆರಿಗೆ ವಿನಾಯಿತಿ ಮೊತ್ತವನ್ನು 2 ಲಕ್ಷ ರೂಪಾಯಿಗೆ ಏರಿಸುವುದರಿಂದ ಸ್ವಲ್ಪ ಅನುಕೂಲ ಆಗುತ್ತೆ, ಹೆಚ್ಚುವರಿಯಾಗಿ 50 ಸಾವಿರ ರೂಪಾಯಿಗೆ ಆದಾಯ ತೆರಿಗೆಯಿಂದ ವಿನಾಯಿತಿ ಸಿಕ್ಕಂತಾಗುತ್ತೆ ಎಂದು ಗೃಹ ಸಾಲ ಪಡೆದಿರುವ ಬೆಂಗಳೂರಿನ ಅತ್ತಿಬೆಲೆಯ ನಿವಾಸಿ ಡಿ.ಎನ್.ದಯಾನಂದಮೂರ್ತಿ ಹೇಳಿದ್ದಾರೆ. ಕೇಂದ್ರ ಸರ್ಕಾರವು ಗೃಹಸಾಲದ ಅಸಲು ಮೊತ್ತದ ಮೇಲಿನ ಆದಾಯ ತೆರಿಗೆ ವಿನಾಯಿತಿಯನ್ನು 2014ರಲ್ಲಿ ಏರಿಸಿತ್ತು.

ಆದಾದ ಬಳಿಕ ವಿನಾಯಿತಿ ಮಿತಿ ಏರಿಸಿಲ್ಲ. ಹೀಗಾಗಿ ಎಂಟು ವರ್ಷಗಳ ಬಳಿಕ ಆದಾಯ ತೆರಿಗೆ ವಿನಾಯಿತಿ ಮಿತಿ ಏರಿಕೆ ಅಗತ್ಯವಾಗಿದೆ ಎಂದು ರಿಯಲ್ ಎಸ್ಟೇಟ್ ಕ್ಷೇತ್ರದ ತಜ್ಞರು ಪ್ರತಿಪಾದಿಸುತ್ತಿದ್ದಾರೆ.

ಗೃಹಸಾಲದ ಮೇಲಿನ ಯಾವುದೇ ವಿನಾಯಿತಿಯು ಅಗ್ಗದ, ಮಧ್ಯಮ ಹಾಗೂ ಹೈರೇಂಜ್ ಪ್ರಾಪರ್ಟಿ ಖರೀದಿಗೆ ಉತ್ತೇಜನ ನೀಡುತ್ತೆ ಎಂದು ರಿಯಲ್ ಎಸ್ಟೇಟ್ ಕ್ಷೇತ್ರದ ಎಸ್.ಪಿ.ಚಿದಾನಂದ ಹೇಳಿದ್ದಾರೆ.

ಜೊತೆಗೆ ಕೊರೊನಾದ ಕಾರಣದಿಂದ ಬೆಲೆಗಳು ಏರಿಕೆಯಾಗಿವೆ, ಹಣದುಬ್ಬರ ಏರಿಕೆಯಾಗಿದೆ. ಹೀಗಾಗಿ ಬೇರೆ ದೇಶಗಳಲ್ಲಿ ಆದಾಯ ತೆರಿಗೆ ಪಾವತಿದಾರರಿಗೆ ವಿನಾಯಿತಿ ನೀಡುವಂತೆ ಭಾರತದಲ್ಲೂ ವಿನಾಯಿತಿ ನೀಡಬೇಕೆಂದು ರಿಯಲ್ ಎಸ್ಟೇಟ್ ಕ್ಷೇತ್ರದ ತಜ್ಞರು ಆಗ್ರಹಿಸಿದ್ದಾರೆ.

English summary
A majority of respondents (64 per cent) feel that the Union Budget 2022-23, to be unveiled on February 1, will increase the basic income tax exemption limit from the current Rs 2.5 lakh, according to a pre-budget survey by KPMG in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X