ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೇಟಿಎಂನಿಂದ 1 ಲಕ್ಷಕ್ಕೂ ಅಧಿಕ ಎಟಿಎಂ ಸ್ಥಾಪನೆ

By Mahesh
|
Google Oneindia Kannada News

ಬೆಂಗಳೂರು, ಡಿಸೆಂಬರ್ 06: ನಗದುರಹಿತ ಬ್ಯಾಂಕಿಂಗ್ ವ್ಯವಹಾರವನ್ನು ನಡೆಸಲು ಮುಂದಾಗಿರುವ ಸಾರ್ವಜನಿಕರಿಗೆ ನೆರವಾಗಲು ಈಗ ಅನೇಕ ಅಪ್ಲಿಕೇಷನ್ ಗಳಿವೆ. ಈ ಪೈಕಿ ಪೇಟಿಎಂ ತನ್ನದೇ ಆದ ಪೇಮೆಂಟ್ ಬ್ಯಾಂಕಿಂಗ್ ಸೇವೆ ಆರಂಭಿಸಿದ್ದು ತಿಳಿದಿರಬಹುದು, ಈಗ ಎಟಿಎಂ ಮಾದರಿಯಲ್ಲಿ ಬ್ಯಾಂಕಿಂಗ್ ಪಾಯಿಂಟ್ ಗಳನ್ನು ಸ್ಥಾಪಿಸಲು ಮುಂದಾಗಿದೆ.

ಪೇಟಿಎಂ ವಾಲೆಟ್ ಉಪಯೋಗಿಸುವುದು, ಹಣ ವರ್ಗಾವಣೆ ಹೇಗೆ?ಪೇಟಿಎಂ ವಾಲೆಟ್ ಉಪಯೋಗಿಸುವುದು, ಹಣ ವರ್ಗಾವಣೆ ಹೇಗೆ?

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ದೇಶದಲ್ಲಿ ಒಟ್ಟು 1 ಲಕ್ಷ ಎಟಿಎಂಗಳನ್ನು ತೆರೆಯಲು ಉದ್ದೇಶಿಸಿದೆ. ಈ ಮೂಲಕ ತನ್ನ ಗ್ರಾಹಕರಿಗೆ ವಹಿವಾಟು ನಡೆಸಲು ಹೊಸ ವೇದಿಕೆ ಒದಗಿಸುತ್ತಿದೆ.

Paytm Payments Bank invests Rs 3,000 crore to set up 1 lakh banking points,

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಖಾತೆಗೆ ಹಣವನ್ನು ಡೆಪಾಸಿಟ್ ಹಾಗೂ ವಿತ್ ಡ್ರಾ ಮಾಡಲು ಗ್ರಾಹಕರಿಗೆ ಸ್ಥಳೀಯ ಬ್ಯಾಂಕ್ ಪ್ರತಿನಿಧಿಗಳು ಸಹಕರಿಸುತ್ತಾರೆ. ಈಗಾಗಲೇ ದೆಹಲಿ, ಲಕ್ನೋ, ಕಾನ್ಪುರ, ಅಲಹಾಬಾದ್, ವಾರಣಾಸಿ, ಅಲಿಗಢ ಸೇರಿದಂತೆ ವಿವಿಧೆಡೆ 3,000 ಎಟಿಎಂಗಳನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ.

ಪೇಟಿಎಂ ಆ್ಯಪ್ ನಲ್ಲಿ ಪ್ರತ್ಯೇಕ ಬ್ಯಾಂಕ್ ಸೆಕ್ಷನ್ ಎಂದು ಸೌಲಭ್ಯ ನೀಡಲಾಗುತ್ತದೆ. ಪೇಮೆಂಟ್, ಡಿಜಿಟಲ್ ಡೆಬಿಟ್ ಕಾರ್ಡ್, ಪಾಸ್ಬುಕ್ ಸೌಲಭ್ಯ ಕೂಡ ಇರಲಿದೆ. ಮುಂದಿನ ಮೂರು ವರ್ಷಗಳ ಅವಧಿಗೆ 3000 ಕೋಟಿ ರೂಪಾಯಿ ಹೂಡಿಕೆ ಮಾಡಲು ಪೇಟಿಎಂ ನಿರ್ಧರಿಸಿದ್ದು, ಉಚಿತ ಡೆಬಿಟ್ ಕಾರ್ಡ್ ಗಳ ವಿತರಣೆಯನ್ನು ಹೆಚ್ಚಿಸಲು ನಿರ್ಧರಿಸಿದೆ.

ಭಾರತದ ಅತ್ಯುತ್ತಮ 5 ಮೊಬೈಲ್ ಅಪ್ಲಿಕೇಶನ್‌ಗಳು ಯಾವವು?

ಪೇಮೆಂಟ್ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಏರ್ ಟೆಲ್ ಪೇಮೆಂಟ್ ಬ್ಯಾಂಕ್, ಫಿನೋ ಪೇಮೆಂಟ್ ಬ್ಯಾಂಕ್ ಹಾಗೂ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಸದ್ಯಕ್ಕೆ ಚಾಲನೆಯಲ್ಲಿದೆ.

English summary
Paytm Payments Bank announced that it will invest Rs 3,000 crore to create a network of 1 lakh consumer banking touch points called Paytm Ka ATMs over the next three years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X