ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2020: ಪೇಟಿಎಂ ಮಾತೃಸಂಸ್ಥೆ One 97 ಕಮ್ಯುನಿಕೇಷನ್ಸ್‌ಗೆ ಸತತ ಏಳನೇ ವರ್ಷ ನಷ್ಟ

|
Google Oneindia Kannada News

ನವದೆಹಲಿ, ಡಿಸೆಂಬರ್ 24: ಪೇಟಿಎಂನ ಮಾತೃಸಂಸ್ಥೆ ಒನ್‌ 97 ಕಮ್ಯುನಿಕೇಷನ್ಸ್ ಸತತ ಏಳನೇ ವರ್ಷ ನಷ್ಟವನ್ನು ದಾಖಲಿಸಿದ್ದು, ತನ್ನ ನಷ್ಟವನ್ನು 2019-20ರಲ್ಲಿ ಶೇಕಡಾ 28ರಷ್ಟು ಕಡಿತಗೊಳಿಸಿ 2,833 ಕೋಟಿ ರೂ.ಗಳಿಗೆ ಇಳಿಸಿದೆ ಎಂದು ಎಕನಾಮಿಕ್ಸ್‌ ಟೈಮ್ಸ್‌ ವರದಿ ತಿಳಿಸಿವೆ.

ನೊಯ್ಡಾ ಮೂಲದ ಒನ್‌ 97 ಕಮ್ಯುನಿಕೇಷನ್ಸ್‌ ವಾರ್ಷಿಕ ಹಣಕಾಸು ವರದಿ ಪ್ರಕಾರ ವೆಚ್ಚವು ಶೇಕಡಾ 20ರಷ್ಟು ಇಳಿದು 5,861 ಕೋಟಿ ರೂ.ಗೆ ತಲುಪಿದೆ. ಅದೇ ಸಮಯದಲ್ಲಿ, ಕಂಪನಿಯ ಆದಾಯವು ಶೇಕಡಾ 1ರಷ್ಟು ಕುಸಿದು 3,350 ಕೋಟಿ ರೂ. ಮುಟ್ಟಿದೆ.

ಜನವರಿಯಿಂದ ಈ ಕಾರುಗಳ ಬೆಲೆ ಹೆಚ್ಚಳವಾಗಲಿದೆ: ಎಷ್ಟು ರೂಪಾಯಿ ಬೆಲೆ ಏರಿಕೆ?ಜನವರಿಯಿಂದ ಈ ಕಾರುಗಳ ಬೆಲೆ ಹೆಚ್ಚಳವಾಗಲಿದೆ: ಎಷ್ಟು ರೂಪಾಯಿ ಬೆಲೆ ಏರಿಕೆ?

ಇನ್ನು ಕಾರ್ಯಾಚರಣೆಯ ಆದಾಯವು 3,115 ಕೋಟಿ ರೂ.ಗಳಾಗಿದ್ದು, 2019-20 ರಲ್ಲಿ 3,049 ಕೋಟಿ ರೂ. ಬಂದಿತ್ತು. ಅಂತೆಯೇ ಕಂಪನಿಯ ಹೆಚ್ಚಿನ ಖರ್ಚುಗಳನ್ನು ಇತರೆ ಖರ್ಚುಗಳ ಅಡಿಯಲ್ಲಿ ವರ್ಗೀಕರಿಸಲಾಗಿದ್ದು, ಅದು 5,861 ಕೋಟಿ ರೂ.ಗಳಿಗೆ ತಲುಪಿದೆ.

1,550 ಕೋಟಿ ರೂಪಾಯಿ ಬ್ಯಾಂಕ್ ಸಾಲ ತೀರಿಸಿದ ಟಾಟಾ ಪವರ್ ಅಂಗಸಂಸ್ಥೆ CGPL1,550 ಕೋಟಿ ರೂಪಾಯಿ ಬ್ಯಾಂಕ್ ಸಾಲ ತೀರಿಸಿದ ಟಾಟಾ ಪವರ್ ಅಂಗಸಂಸ್ಥೆ CGPL

ಸತತ ಏಳನೇ ವರ್ಷ ನಷ್ಟ

ಸತತ ಏಳನೇ ವರ್ಷ ನಷ್ಟ

ಒನ್‌ 97 ಕಮ್ಯುನಿಕೇಷನ್ಸ್‌ಗೆ ಇದು ಸತತ ಏಳನೇ ಆರ್ಥಿಕ ವರ್ಷದ ನಷ್ಟವಾಗಿದೆ. ಸಾಲ, ವಿಮೆ, ಸಂಪತ್ತು ನಿರ್ವಹಣೆ, ವಾಣಿಜ್ಯ ಮತ್ತು ಗೇಮಿಂಗ್‌ನಂತಹ ಹಲವಾರು ಹಣಕಾಸು ಸೇವಾ ವ್ಯವಹಾರಗಳನ್ನು ಆರಂಭಿಸಿರುವುದರಿಂದ ಹಣಕಾಸು ವರ್ಷ 2022 ರ ಹೊತ್ತಿಗೆ ಲಾಭವಾಗಬಹುದು ಎಂದು ಕಂಪನಿ ಅಂದಾಜಿಸಿದೆ.

ಪೇಟಿಎಂಗೆ ತೀವ್ರ ಸ್ಪರ್ಧೆ

ಪೇಟಿಎಂಗೆ ತೀವ್ರ ಸ್ಪರ್ಧೆ

ಭಾರತದಲ್ಲಿ ಡಿಜಿಟಲ್ ಪಾವತಿಯ ಕ್ರಾಂತಿಯಾದ ಬಳಿಕ ಇ-ವ್ಯಾಲೆಟ್ ವ್ಯವಹಾರದಲ್ಲಿ, ಪೇಟಿಎಂ ಗೂಗಲ್ ಪೇ, ವಾಲ್‌ಮಾರ್ಟ್‌ನ ಫೋನ್‌ಪೇ, ಮೊಬಿಕ್ವಿಕ್, ಭಾರತ್‌ಪೆ ಮತ್ತು ಅಮೆಜಾನ್ ಪೇ ಜೊತೆ ಸ್ಪರ್ಧಿಸುತ್ತದೆ. ಕಂಪನಿಯು 17 ದಶಲಕ್ಷಕ್ಕೂ ಹೆಚ್ಚಿನ ವ್ಯಾಪಾರಿಗಳನ್ನು, ಸಕ್ರಿಯ ಸಣ್ಣ ಉದ್ಯಮಿಗಳನ್ನು ಒಳಗೊಂಡಿದೆ.

ಹೊಸ ವ್ಯವಹಾರವನ್ನು ಪ್ರಾರಂಭಿಸಿರುವ ಪೇಟಿಎಂ

ಹೊಸ ವ್ಯವಹಾರವನ್ನು ಪ್ರಾರಂಭಿಸಿರುವ ಪೇಟಿಎಂ

ಒಂದೆಡೆ ವಾರ್ಷಿಕ ನಷ್ಟವನ್ನು ಅನುಭವಿಸಿದರೂ ಪೇಟಿಎಂ ಹೊಸ ಹೊಸ ವ್ಯವಹಾರಗಳನ್ನು ಆರಂಭಿಸಿದೆ. ಬಿಜಿನೆಸ್ ಆ್ಯಪ್, ಸೌಂಡ್‌ಬಾಕ್ಸ್‌, ಬಿಜಿನೆಸ್‌ ಖಾತಾ, ಪೇಔಟ್‌ ಸೇವೆಗಳಂತಹ ಕೇಂದ್ರೀಕೃತ ಉತ್ಪನ್ನಗಳನ್ನು ಪ್ರಾರಂಭಿಸಿದೆ.

ವೆಚ್ಚ ಇಳಿಕೆಯಾಗಿ ಲಾಭದ ನಿರೀಕ್ಷೆ

ವೆಚ್ಚ ಇಳಿಕೆಯಾಗಿ ಲಾಭದ ನಿರೀಕ್ಷೆ

ಹಣಕಾಸು ವರ್ಷ 2020ರ ಸೆಪ್ಟೆಂಬರ್ ತ್ರೈಮಾಸಿಕವೊಂದರಲ್ಲೇ ಪೇಟಿಎಂ ನಷ್ಟವು ಶೇಕಡಾ 37ರಷ್ಟು ಇಳಿಕೆಯಾಗಿ, 2,597 ಕೋಟಿ ರುಪಾಯಿ ಮುಟ್ಟಿದೆ ಎಂದು ವರದಿ ಆಗಿತ್ತು. ವೆಚ್ಚವನ್ನು ಗಣನೀಯವಾಗಿ ಇಳಿಕೆ ಮಾಡಿದ್ದು, ಹಣಕಾಸು ವರ್ಷ 2022ರ ಹೊತ್ತಿಗೆ ಕಂಪೆನಿಯು ಲಾಭದಾಯಕವಾಗಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿತ್ತು.

English summary
Paytm parent One 97 Communications has cut its losses by 28% to Rs 2,833 crore in 2019-20.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X