ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೇಟಿಯಂ ಬಳಸಿ ಪೆಟ್ರೋಲ್ ಖರೀದಿಸಿ, ಸಕತ್ ಕ್ಯಾಶ್ ಬ್ಯಾಕ್ ಗಳಿಸಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 15: ಸತತವಾಗಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಬಿಸಿಗೆ ತುತ್ತಾಗಿ ನರಳಿರುವ ಗ್ರಾಹಕರಿಗೊಂದು ಆಶಾದಾಯಕ ಸುದ್ದಿ ಇಲ್ಲಿದೆ. ಪೆಟ್ರೋಲ್ , ಡೀಸೆಲ್ ಖರೀದಿಸಿ 7,500 ರು ತನಕ ಕ್ಯಾಶ್ ಬ್ಯಾಕ್ ಪಡೆಯುವ ಕೊಡುಗೆಯನ್ನು ಮೊಬೈಲ್ ವ್ಯಾಲೆಟ್ ಪೇಟಿಯಂ ಘೋಷಿಸಿದೆ.

ಇಂಧನ ಖರೀದಿ ಮೇಲೆ ರಿಯಾಯಿತಿ ಪ್ರಕಟಿಸುವ ಮೂಲಕ ಪೇಟಿಯಂ, ಸಾರ್ವಜನಿಕರಿಂದ ಹೆಚ್ಚಿನ ಪ್ರಮಾಣದಲ್ಲಿ ಡಿಜಿಟಲ್ ವ್ಯವಹಾರ ನಿರೀಕ್ಷಿಸಿದೆ.

ತೈಲ ಬೆಲೆ ಮತ್ತೆ ಏರಿಕೆ: ಪೆಟ್ರೋಲ್ ಬೆಲೆಯಲ್ಲಿ 35 ಪೈಸೆ ಹೆಚ್ಚಳತೈಲ ಬೆಲೆ ಮತ್ತೆ ಏರಿಕೆ: ಪೆಟ್ರೋಲ್ ಬೆಲೆಯಲ್ಲಿ 35 ಪೈಸೆ ಹೆಚ್ಚಳ

ಶನಿವಾರದ ದರ: ದೆಹಲಿಯಲ್ಲಿ ಪ್ರತಿ ಪೆಟ್ರೋಲ್ 81.28 ರು, ಮುಂಬೈಯಲ್ಲಿ 88.67 ರು, ಚೆನ್ನೈನಲ್ಲಿ 84.49ರು, ಕೋಲ್ಕತ್ತಾದಲ್ಲಿ 83.14ರು ಹಾಗೂ ಬೆಂಗಳೂರಿನಲ್ಲಿ ರು 84.79 ನಷ್ಟಿದೆ.

ಕುಮಾರಸ್ವಾಮಿ ಅವರು ಪೆಟ್ರೋಲ್ ಬೆಲೆ ಎಷ್ಟು ಇಳಿಸ್ಬಹುದು?ಕುಮಾರಸ್ವಾಮಿ ಅವರು ಪೆಟ್ರೋಲ್ ಬೆಲೆ ಎಷ್ಟು ಇಳಿಸ್ಬಹುದು?

ಡೀಸೆಲ್ ದರ ದೆಹಲಿಯಲ್ಲಿ ಪ್ರತಿ ಲೀಟರ್ ಗೆ 73.30 ರು, ಮುಂಬೈಯಲ್ಲಿ 77.82ರು, ಚೆನ್ನೈ
ಯಲ್ಲಿ 77.49ರು, ಕೋಲ್ಕತ್ತಾದಲ್ಲಿ 75.15ರು ಹಾಗೂ ಬೆಂಗಳೂರಿನಲ್ಲಿ 77.13ರು ನಷ್ಟಿದೆ.

ಪೇಟಿಯಂ ಆಫರ್ ಪಡೆಯುವುದು ಹೇಗೆ? ಎಲ್ಲಿಯವರೆಗೆ ಈ ಕೊಡುಗೆ ಲಭ್ಯವಿರಲಿದೆ? ಮುಂತಾದ ವಿವರಗಳಿಗಾಗಿ ಮುಂದೆ ಓದಿ...

ಪೇಟಿಯಂ ಆಫರ್ ಪಡೆಯುವುದು ಹೇಗೆ?

ಪೇಟಿಯಂ ಆಫರ್ ಪಡೆಯುವುದು ಹೇಗೆ?

ಆಯ್ದ ಪೆಟ್ರೋಲ್ ಬಂಕ್ ಗಳಲ್ಲಿ ಪೇಟಿಯಂ ವ್ಯಾಲೆಟ್ ಮೂಲಕ ಪೆಟ್ರೋಲ್, ಡೀಸೆಲ್ ಖರೀದಿ ಮೂಲಕ 7,500 ರು ತನಕ ಕ್ಯಾಶ್ ಬ್ಯಾಕ್ ಪಡೆಯಬಹುದು. ಆಯ್ದ ಪೆಟ್ರೋಲ್ ಬಂಕ್ ಗಳ ವಿವರ ಪೇಟಿಯಂ ವೆಬ್ ತಾಣ, ಆಪ್ ನಲ್ಲಿ ಲಭ್ಯ.

ಕನಿಷ್ಟ ಎಷ್ಟು ಮೊತ್ತದ ವ್ಯವಹಾರ ಮಾಡಬೇಕು?

ಕನಿಷ್ಟ ಎಷ್ಟು ಮೊತ್ತದ ವ್ಯವಹಾರ ಮಾಡಬೇಕು?

* ಕನಿಷ್ಟ 50 ರು ವ್ಯವಹಾರಕ್ಕೂ ಈ ಸೌಲಭ್ಯ ಲಭ್ಯ, ಆಗಸ್ಟ್ 01, 2019ರ ತನಕ ಈ ಕೊಡುಗೆ ಇರಲಿದೆ.
* ಪೇಟಿಯಂ ಬಳಸಿ ಮೊದಲ ಬಾರಿಗೆ ಪೆಟ್ರೋಲ್ ಪಂಪ್ ಗಳಲ್ಲಿ ವ್ಯವಹರಿಸುತ್ತಿದ್ದಂತೆ ನಿಮ್ಮ ಮೊಬೈಲ್ ಗೆ ಆಫರ್ ಬಗ್ಗೆ ಎಸ್ಎಂಎಸ್ ಬರಲಿದೆ.

ಎಸ್ಎಂಎಸ್ ನೋಡಿ ನಿರ್ದೇಶನಗಳನ್ನು ಪಾಲಿಸಿ

ಎಸ್ಎಂಎಸ್ ನೋಡಿ ನಿರ್ದೇಶನಗಳನ್ನು ಪಾಲಿಸಿ

* ನಿಮ್ಮ ಮೊಬೈಲಿಗೆ ಬರುವ ಎಸ್ಎಂಎಸ್ ನಲ್ಲಿ ನೀಡಿರುವ ನಿರ್ದೇಶನಗಳನ್ನು ಪಾಲಿಸಿ, ಕ್ಯಾಶ್ ಬ್ಯಾಕ್ ಆಫರ್ ವಿಭಾಗದಲ್ಲಿ ಮಾಹಿತಿ ಪಡೆಯಬಹುದಾಗಿದೆ.
* ಪೇಟಿಯಂ ಕ್ಯಾಶ್ ಬ್ಯಾಕ್ ಆಫರ್ ಗೆ ನೀವು ಅರ್ಹರಾದರೆ, ನಿಮ್ಮ ಮೊಬೈಲಿಗೆ ಮುಂದಿನ 48 ಗಂಟೆಗಳ ಒಳಗೆ ಪೇಟಿಯಂ ಪ್ರೋಮೋ ಕೋಡ್ ಇರುವ ಎಸ್ಎಂಎಸ್ ಬರಲಿದೆ.

ಆಫರ್ ಕೋಡ್ ಬೇರೆಯವರಿಗೆ ವರ್ಗಾಯಿಸುವಂತಿಲ್ಲ

ಆಫರ್ ಕೋಡ್ ಬೇರೆಯವರಿಗೆ ವರ್ಗಾಯಿಸುವಂತಿಲ್ಲ

* ಈ ಆಫರ್ ಕೋಡ್ ಬೇರೆಯವರಿಗೆ ವರ್ಗಾಯಿಸುವಂತಿಲ್ಲ. ಒಂದು ಮೊಬೈಲ್ ವ್ಯಾಲೆಟ್ ಗೆ ಮಾತ್ರ ಸೀಮಿತವಾಗಿರುತ್ತದೆ.

* ಗ್ರಾಹಕರು ಈ ಆಫರ್ ಕೋಡ್ ಪಡೆದ ನಂತರ ಸಕ್ರಿಯವಾಗಿದ್ದು, 11, 21, 31, 41 ಹೀಗೆ ಮೊದಲ ವ್ಯವಹಾರದಿಂದ ಕೆಲವು ಆಯ್ದ ವ್ಯವಹಾರಗಳನ್ನು ಯಶಸ್ವಿಗೊಳಿಸಬೇಕು.
* ವಾರದಲ್ಲಿ ಮೊದಲ ವ್ಯವಹಾರಕ್ಕೆ ಆದ್ಯತೆ ನೀಡಲಾಗುತ್ತದೆ. ಅನೇಕ ಬಾರಿ ಪೆಟ್ರೋಲ್ ಖರೀದಿಸಿದರೆ ಮಾನ್ಯ ಮಾಡುವುದಿಲ್ಲ.


{document1}

English summary
Amid rising prices of petrol and diesel in the country, mobile wallet Paytm is offering cashback and discount schemes on purchase of fuel. Petrol and diesel prices surged to record levels on Friday as oil marketing companies (OMCs) raised fuel rates across metro cities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X