ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆರೋಧಾವನ್ನು ಹಿಂದಿಕ್ಕಿಂದ ಪೇಟಿಎಂ ಮನಿ: 6.6 ಮಿಲಿಯನ್ ಗ್ರಾಹಕರು

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 7: ಒನ್ 97 ಕಮ್ಯುನಿಕೇಷನ್ಸ್ ಲಿಮಿಟೆಡ್ (ಪೇಟಿಎಂ ಅನ್ನು ಹೊಂದಿರುವ) ನ ಸಂಪತ್ತು ನಿರ್ವಹಣಾ ವಿಭಾಗವಾದ ಪೇಟಿಎಂ ಮನಿ 6.6 ಮಿಲಿಯನ್ ಗ್ರಾಹಕರ ಸಂಖ್ಯೆಯನ್ನು ತಲುಪಿದೆ ಎಂದು ಹೇಳಿಕೊಂಡಿದೆ. ಇದರ ಜೊತೆಗೆ ಆನ್‌ಲೈನ್‌ ಷೇರುಪೇಟೆ ವಹಿವಾಟು ತಾಣವಾಗಿರುವ, ದೇಶದ ಅತಿದೊಡ್ಡ ಚಿಲ್ಲರೆ ದಲ್ಲಾಳಿ ಸಂಸ್ಥೆಗಳಲ್ಲಿ ಒಂದಾದ ಜೆರೋಧಾವನ್ನು ಮೀರಿಸಿದೆ.

ಎರಡು ವರ್ಷಗಳ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ ವಿಜಯ್ ಶೇಖರ್ ಶರ್ಮಾ ಒಡೆತನದ ಕಂಪನಿ, ತನ್ನ ಬಳಕೆದಾರರ ನೆಲೆಯಲ್ಲಿ ಶೇಕಡಾ 70ರಷ್ಟು ಮೊದಲ ಬಾರಿಗೆ ಹೂಡಿಕೆದಾರರಾಗಿದ್ದು, ಶೇ. 60 ಸಣ್ಣ ಪಟ್ಟಣಗಳು ​​ಮತ್ತು ನಗರಗಳಿಂದ ಬಂದಿದೆ.

 ಷೇರುಪೇಟೆಯಲ್ಲಿ 304 ಕೋಟಿ ರೂಪಾಯಿ ಕಳೆದುಕೊಂಡ ಜಪಾನ್‌ನ ಉದ್ಯಮಿ ಷೇರುಪೇಟೆಯಲ್ಲಿ 304 ಕೋಟಿ ರೂಪಾಯಿ ಕಳೆದುಕೊಂಡ ಜಪಾನ್‌ನ ಉದ್ಯಮಿ

ಮತ್ತೊಂದೆಡೆ, ಜೆರೋಧಾ 3 ಮಿಲಿಯನ್ ಬಳಕೆದಾರರನ್ನು ಹೊಂದಿದೆ ಎಂದು ಹೇಳಿಕೊಂಡಿದ್ದು, ಅದರಲ್ಲಿ ಶೇ. 65ರಷ್ಟು ಮೊದಲ ಬಾರಿಗೆ ಹೂಡಿಕೆದಾರರು.

Paytm Money Claims To Surpassing Zerodha: Reached a 6.6 Million Customer

ಪ್ರಸ್ತುತ, ಪೇಟಿಎಂ ಮನಿ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಪ್ರತಿದಿನ 20 ಕೋಟಿ ರೂಪಾಯಿ ಮೌಲ್ಯದ ನೇರ ಮ್ಯೂಚುವಲ್ ಫಂಡ್‌ಗಳನ್ನು ಮಾರಾಟ ಮಾಡುತ್ತದೆ. ಇದು ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ಮತ್ತು ಷೇರುಗಳಿಗೆ ಸಂಬಂಧಿಸಿದ ಉತ್ಪನ್ನವನ್ನು ಸಹ ಮಾರಾಟ ಮಾಡುತ್ತದೆ.

ಬೆಂಗಳೂರು ಮೂಲದ ಜೆರೋಧಾ ಇತ್ತೀಚೆಗೆ 1 ಬಿಲಿಯನ್ ಡಾಲರ್ ಮೌಲ್ಯವನ್ನು ನಿಗದಿಪಡಿಸಿದೆ. ಪ್ರತಿದಿನ 5 ಮಿಲಿಯನ್ ಆದೇಶಗಳನ್ನು ಒದಗಿಸುತ್ತಿದೆ ಎಂದು ಕಂಪನಿ ತಿಳಿಸಿದೆ. ಇದು ಭಾರತದ ದೈನಂದಿನ ಷೇರು ವಹಿವಾಟು ಪರಿಮಾಣದ ಸುಮಾರು ಶೇ. 15 ನಷ್ಟಿದೆ.

ಜೆರೋಡಾ ಸಂಸ್ಥಾಪಕ ನಿತಿನ್ ಕಾಮತ್ ಇತ್ತೀಚೆಗೆ ಮಿಂಟ್‌ಗೆ ತಿಳಿಸಿರುವ ಮಾಹಿತಿ ಪ್ರಕಾರ, ಪ್ರತಿ ತಿಂಗಳು 250,000 ಹೊಸ ಅನನ್ಯ ಖಾತೆಗಳನ್ನು ಸೇರಿಸುತ್ತಾರೆ. ಇದಕ್ಕೆ ಹೋಲಿಸಿದರೆ, ತಡವಾಗಿ ಪ್ರವೇಶಿಸಿದ ಪೇಟಿಎಂ ಮನಿ, 2019 ರ ಏಪ್ರಿಲ್‌ನಲ್ಲಿ ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಯಿಂದ ಪರವಾನಗಿ ಪಡೆದಿದ್ದರೂ ಆಗಸ್ಟ್‌ನಲ್ಲಿ ಮಾತ್ರ ಸ್ಟಾಕ್ ಬ್ರೋಕಿಂಗ್ ಸೇವೆಯನ್ನು ನೀಡಲು ಪ್ರಾರಂಭಿಸಿತು.

ಪೇಟಿಎಂ ಮನಿ ತನ್ನ ಸ್ಟಾಕ್ ಬ್ರೋಕಿಂಗ್ ಸೇವೆಯನ್ನು ಸೆಪ್ಟೆಂಬರ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸುವ ನಿರೀಕ್ಷೆಯಿದೆ ಮತ್ತು ಆರು ತಿಂಗಳಲ್ಲಿ ದೈನಂದಿನ ವಹಿವಾಟಿನಲ್ಲಿ 1,00,000 ಅನ್ನು ಹೊಂದುವ ನಿರೀಕ್ಷೆಯಿದೆ.

English summary
Paytm Money, the wealth management arm of One97 Communications Ltd. claims to have reached a customer base of 6.6 million, surpassing Zerodha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X