ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತನ್ನದೇ ಆದ ಪ್ರತ್ಯೇಕ ಆಂಡ್ರಾಯ್ಡ್‌ ಮಿನಿ App ಸ್ಟೋರ್ ಪ್ರಾರಂಭಿಸಿದ ಪೇಟಿಎಂ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 05: ಇತ್ತೀಚೆಗಷ್ಟೇ ಕ್ರೀಡಾ ಬೆಟ್ಟಿಂಗ್ ಚಟುವಟಿಕೆಗಳ ಕುರಿತಾದ ನೀತಿಯನ್ನು ಉಲ್ಲಂಘಿಸಿದ್ದಕ್ಕಾಗಿ ಪೇಟಿಎಂ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಕೆಲವು ಗಂಟೆಗಳ ಕಾಲ ನಿರ್ಬಂಧಿಸಿದ ಕೆಲವೇ ವಾರಗಳ ನಂತರ ಭಾರೀ ಬೆಳವಣಿಗೆ ನಡೆದಿದೆ.

ಭಾರತೀಯಡೆವಲಪರ್ ಗಳನ್ನು ಪೇಟಿಎಂ ತನ್ನದೇ ಆದ ಪ್ರತ್ಯೇಕ ಆಂಡ್ರಾಯ್ಡ್ ಮಿನಿ ಆ್ಯಪ್ ಸ್ಟೋರ್ ಅನ್ನು ಪ್ರಾರಂಭಿಸಿದೆ ಎಂದು ಹೇಳಿದೆ. ಇದು ಪೇಟಿಎಂ ಹಾಗೂ ಟೆಕ್ ದೈತ್ಯ ಗೂಗಲ್ ನಡುವಿನ ಜಗಳವನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದೆ.

ಗೂಗಲ್‌ಗೆ ಮತ್ತೆ ಮರಳಿದ ಪೇಟಿಎಂ: ಪ್ಲೇ ಸ್ಟೋರ್‌ನಲ್ಲಿ ಲಭ್ಯಗೂಗಲ್‌ಗೆ ಮತ್ತೆ ಮರಳಿದ ಪೇಟಿಎಂ: ಪ್ಲೇ ಸ್ಟೋರ್‌ನಲ್ಲಿ ಲಭ್ಯ

ಪೇಟಿಎಂ ಮಿನಿ ಅಪ್ಲಿಕೇಶನ್‌ಗಳ ಲಿಸ್ಟ್ ಮತ್ತು ಡಿಸ್ಟ್ರಿಬ್ಯೂಷನ್ ಅನ್ನು ಯಾವುದೇ ಶುಲ್ಕವಿಲ್ಲದೆ ತನ್ನ ಅಪ್ಲಿಕೇಶನ್‌ನಲ್ಲಿ ಒದಗಿಸುತ್ತಿದೆ ಮತ್ತು ಪಾವತಿಗಳಿಗಾಗಿ, ಡೆವಲಪರ್‌ಗಳು ತಮ್ಮ ಬಳಕೆದಾರರಿಗೆ ಪೇಟಿಎಂ ವಾಲೆಟ್, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್, ಯುಪಿಐ, ನೆಟ್‌ ಬ್ಯಾಂಕ್ ಮತ್ತು ಕಾರ್ಡ್ಸ್ ಆಯ್ಕೆಗಳನ್ನು ನೀಡಲು ಸಾಧ್ಯವಾಗುತ್ತದೆ ಎಂದು ಪೇಟಿಎಂ ಹೇಳಿದೆ.

Paytm Launches a Mini-App Store Within Its Own App

ಇದರ ಜೊತೆಗೆ 300 ಕ್ಕೂ ಹೆಚ್ಚು ಅಪ್ಲಿಕೇಶನ್ ಆಧಾರಿತ ಸೇವಾ ಪೂರೈಕೆದಾರರಾದ ಡೆಕಾಥ್ಲಾನ್, ಓಲಾ, ಪಾರ್ಕ್ +, ರಾಪಿಡೊ, ನೆಟ್‌ಮೆಡ್ಸ್, 1 ಎಂಜಿ, ಡೊಮಿನೊಸ್ ಪಿಜ್ಜಾ, ಫ್ರೆಶ್‌ಮೆನು, ನೋಬ್ರೊಕರ್ ಈಗಾಗಲೇ ಪ್ರೋಗ್ರಾಮ್ ಗೆ ಸೇರ್ಪಡೆಗೊಂಡಿದೆ ಎಂದು ಅದು ಹೇಳಿದೆ.

ಪೇಟಿಎಂ ಬಳಕೆದಾರರಿಗೆ, ಇದು ಪ್ರತ್ಯೇಕ ಡೌನ್‌ಲೋಡ್‌ಗಳ ಅಗತ್ಯವಿಲ್ಲದ ಕಾರಣ ಇದು ತಡೆರಹಿತ ಅನುಭವವಾಗಿರುತ್ತದೆ ಮತ್ತು ಅವರು ತಮ್ಮ ಆದ್ಯತೆಯ ಪಾವತಿ ಆಯ್ಕೆಯನ್ನು ಬಳಸಬಹುದು ಎಂದು ಅವರು ಹೇಳಿದರು. ಮಿನಿ ಅಪ್ಲಿಕೇಶನ್‌ಗಳು ಕಸ್ಟಮ್-ಬಿಲ್ಟ್ ಮೊಬೈಲ್ ವೆಬ್‌ಸೈಟ್ ಆಗಿದ್ದು, ಅವುಗಳನ್ನು ಡೌನ್‌ಲೋಡ್ ಮಾಡದೆಯೇ ಬಳಕೆದಾರರಿಗೆ ಅಪ್ಲಿಕೇಶನ್‌ನಂತಹ ಅನುಭವವನ್ನು ನೀಡುತ್ತದೆ. ಸೀಮಿತ ಡೇಟಾ ಮತ್ತು ಫೋನ್ ಮೆಮೊರಿ ಹೊಂದಿರುವ ಬಳಕೆದಾರರಿಗೆ ಇದು ಸಹಕಾರಿಯಾಗಿರಲಿದೆ.

English summary
Digital payments firm Paytm has launched a mini-app store to support Indian developers, in a direct challenge to Google’s dominance in the space.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X