• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕ್ರಿಪ್ಟೋಕರೆನ್ಸಿ ಬಳಸಿ ಪಾವತಿ, ಪೇಪಾಲ್ ಗ್ರಾಹಕರಿಗೆ ಸಿಕ್ತು ಸೌಲಭ್ಯ

|

ವಾಷಿಂಗ್ಟನ್, ಮಾರ್ಚ್ 30: ಜಾಗತಿಕ ಪೇಮೆಂಟ್ ದಿಗ್ಗಜ ಸಂಸ್ಥೆ ಪೇಪಾಲ್ ಐಎನ್‌ಸಿ ಮಾರ್ಚ್ 30ರಂದು ಮಹತ್ವದ ಘೋಷಣೆ ಹೊರಡಿಸಿದೆ. ಪೇಪಾಯ್ ಗ್ರಾಹಕರು ಕ್ರಿಪ್ಟೋ ಕರೆನ್ಸಿ ಬಳಸಿ ಪಾವತಿ ಮಾಡಬಹುದು ''ಚೆಕ್ ಔಟ್ ವಿಥ್ ಕ್ರಿಪ್ಟೋ'' ಎಂದು ಸಂದೇಶ ನೀಡಿದೆ.

ಈ ಹೊಸ ಸೌಲಭ್ಯದಿಂದ ಬಳಕೆದಾರರು ತ್ವರಿತವಾಗಿ ಕ್ರಿಪ್ಟೋಕರೆನ್ಸಿ ಬಳಸಿ ವ್ಯವಹರಿಸಬಹುದು. ಅಂದರೆ, ಬಿಟ್ ಕಾಯಿನ್, ಎಥೆರೆಯಂ, ಲೈಟ್ ಕಾಯಿನ್ ಮುಂತಾದ ಡಿಜಿಟಲ್ ಕರೆನ್ಸಿ ಗಳನ್ನು ತ್ವರಿತವಾಗಿ ಯುಎಸ್ ಡಾಲರ್ ಆಗಿ ಪರಿವರ್ತಿಸಿ ವಿನಿಮಯ ಮಾಡಿಕೊಳ್ಳಬಹುದು ಹಾಗೂ ವ್ಯವಹರಿಸಲು ಬಳಸಬಹುದು ಎಂದು ದಿ ವರ್ಜ್ ವರದಿ ಮಾಡಿದೆ.

ಒಂದು ವೇಳೆ ವ್ಯಾಪಾರಸ್ಥರು, ಯುಎಸ್ ಡಾಲರ್ ಬಳಸಲು ನಿರಾಕರಿಸಿದರೆ, ಸ್ಥಳೀಯ ಕರೆನ್ಸಿಗೆ ಕ್ರಿಪ್ಟೋ ಕರೆನ್ಸಿಯನ್ನು ವಿನಿಮಯ ಮಾಡಿಕೊಂಡು ವ್ಯವಹರಿಸಬಹುದಾಗಿದೆ ಎಂದು ಸಿಇಒ ಡಾನ್ ಶುಲ್ಮಾನ್ ಹೇಳಿದ್ದಾರೆ.

ಈ ಮೂಲಕ ಯಾವುದೇ ಮಳಿಗೆಯಲ್ಲಿ ಪಾವತಿ ಮಾಡುವಾಗ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಬಳಸುವಂತೆ ಕ್ರಿಪ್ಟೋಕರೆನ್ಸಿ ಬೆಂಬಲಿಸುವ ಪೇಪಾಲ್ ವ್ಯಾಲೆಟ್ ಕೂಡಾ ಬಳಸಬಹುದಾಗಿದೆ. ಸದ್ಯಕ್ಕೆ ಒಂದು ಬಾರಿ ವ್ಯವಹರಿಸಲು ಒಂದು ಮಾದರಿಯ ಕ್ರಿಪ್ಟೋಕರೆನ್ಸಿ ಮಾತ್ರ ಬಳಸಬಹುದು ಎಂದು ಸಂಸ್ಥೆ ಹೇಳಿದೆ.

ಮಾರ್ಚ್ 30ರಂದು ಈ ಸಮಯಕ್ಕೆ ಬಿಟ್ ಕಾಯಿನ್ ಮೌಲ್ಯ:
ಬಿಟ್ ಕಾಯಿನ್ ಬೆಲೆ: $58,948.67
ಒಟ್ಟಾರೆ ಮಾರುಕಟ್ಟೆ ಮೌಲ್ಯ: $1,101,612,165,886
ಒಂದು ಬಿಟ್ ಕಾಯಿನ್ ಬೆಲೆ = 43,17,066.48ರು
(1 USD=72.42 ರುಪಾಯಿ)

ಕಳೆದ 24 ಗಂಟೆಗಳಲ್ಲಿ ಬಿಟ್ ಕಾಯಿನ್ ಮೌಲ್ಯ ಶೇ 2.13ರಷ್ಟು ಏರಿಕೆ ಕಂಡಿದೆ. ಈ ವಾರ ಶೇ 6.90 ರಷ್ಟು ಏರಿಕೆಯಾಗಿದೆ. ಈ ನಡುವೆ ಮತ್ತೊಂದು ಡಿಜಿಟಲ್ ಕರೆನ್ಸಿ ಎಥೆರೆಯಂ (Ethereum) ಕಳೆದ 24 ಗಂಟೆಗಳಲ್ಲಿ ಶೇ 1.82ರಷ್ಟು ಏರಿಕೆ ಕಂಡು 1,839.79 ಡಾಲರ್ ಮೌಲ್ಯ ಪಡೆದಿದೆ. ಒಟ್ಟಾರೆ $212,166,935,558 ಮೌಲ್ಯ ಹೊಂದಿದೆ.

ಬಿಟ್‌ಕಾಯಿನ್‌: ಇದು ಅತ್ಯಂತ ಜನಪ್ರಿಯ ಕ್ರಿಪ್ಟೋಕರೆನ್ಸಿಯಾಗಿದೆ. ಡಿಜಿಟಲ್ ಕರೆನ್ಸಿಯಾಗಿರುವುದರಿಂದ ಯಾವುದೇ ರೀತಿಯಲ್ಲಿ ಮುದ್ರಣ ರೂಪದಲ್ಲಿ ಸಿಗುವುದಿಲ್ಲ. ರೂಪಾಯಿ, ಡಾಲರ್, ಯುರೋ ಗಳಂತೆ ಭೌತಿಕ ರೂಪದಲ್ಲಿ ಇರುವುದಿಲ್ಲ. ಯಾವುದೇ ದೇಶ, ಭಾಷೆ, ಬ್ಯಾಂಕುಗಳಿಗೆ ಇದು ಸೀಮಿತವಾಗಿಲ್ಲ.

English summary
Global payment giant PayPal Inc on Tuesday, 30 March, announced ‘Checkout with Crypto’, a new feature that will allow users to instantly transact via cryptocurrencies on its platform.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X