ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಬಲ್‌ನಲ್ಲಿ ನಿಮ್ಮ ಇಷ್ಟದ ಚಾನೆಲ್‌ಗೆ ಮಾತ್ರ ಹಣ ಕೊಡಿ

|
Google Oneindia Kannada News

ಬೆಂಗಳೂರು, ಡಿ. 24 : ಕೇಬಲ್ ಬಿಲ್ ಜಾಸ್ತಿ ಆಯ್ತಪ್ಪ ಎಂದು ಹೇಳುವ ಜನರಿಗೆ ಸಿಹಿ ಸುದ್ದಿ ಕಾದಿದೆ. ಡಿಟಿಎಚ್ ಮಾದರಿಯಲ್ಲಿ ನಿಮಗೆ ಬೇಕಾದ ಚಾನೆಲ್‌ಗಳಿಗೆ ಮಾತ್ರ ಹಣ ಪಾವತಿ ಮಾಡುವ ವ್ಯವಸ್ಥೆ ಕೇಬಲ್ ಟಿವಿ ಗ್ರಾಹಕರಿಗೂ 2015ರಲ್ಲಿ ಲಭ್ಯವಾಗಲಿದೆ, ಇದರಿಂದ ಕೇಬಲ್ ಬಿಲ್ ಕಡಿಮೆಯಾಗಲಿದೆ.

ಡೈರೆಕ್ಟ್‌ ಟು ಹೋಮ್‌ (ಡಿಟಿಎಚ್‌) ಮಾದರಿಯಲ್ಲೇ ಸೆಟ್‌­ಟಾಪ್‌ ಬಾಕ್ಸ್‌ ಕೇಬಲ್‌ ಸೇವೆ­ಯಲ್ಲೂ ಗ್ರಾಹಕರಿಗೆ ಇಷ್ಟದ ಚಾನೆಲ್‌ಗಳ ಆಯ್ಕೆಗೆ ಅವಕಾಶ ಕಲ್ಪಿಸಲು ರಾಜ್ಯ ಕೇಬಲ್‌ ಟಿ.ವಿ ಆಪ­ರೇಟರ್‌ಗಳ ಸಂಘ ನಿರ್ಧರಿಸಿದೆ. ಇದರಂತೆ ನೀವು ಪ್ಯಾಕೇ­ಜ್‌ಗೆ ಅನುಗುಣ­ವಾಗಿ ಹಣ ಪಾವತಿ ಮಾಡುವ ಅವಕಾಶವಿದೆ.

set top boxes

ಸದ್ಯ, ಬೆಂಗಳೂರು ಮತ್ತು ಮೈಸೂರಿ­ನ­ಲ್ಲಿರುವ ಸೆಟ್‌ಟಾಪ್‌ ಬಾಕ್ಸ್‌ ಕೇಬಲ್‌ ಸಂಪರ್ಕ­ದಾರರಿಗೆ ತಮ್ಮ ನೆಚ್ಚಿನ ಚಾನೆಲ್‌­ಗಳ ಪ್ಯಾಕೇಜ್‌ ಆಯ್ಕೆ ಮಾಡಿ­ಕೊಳ್ಳುವ ಅವಕಾಶವನ್ನು ಜನವರಿಯಲ್ಲಿ ನೀಡಲಾಗುತ್ತದೆ. ಪ್ಯಾಕೇಜ್‌ಗೆ ಸಂಬಂಧಿಸಿದಂತೆ ದರ ಪಟ್ಟಿ ನಿಗದಿಯಾಗಲಿದ್ದು, ಜನವರಿಯಲ್ಲಿ ಇದು ಬಿಡುಗಡೆಗೊಳ್ಳಲಿದೆ. [ಕೇಬಲ್ ಟಿವಿ ನೋಡಲು ಹೆಚ್ಚು ಹಣ ಪಾವತಿಸಬೇಕು]

ರಾಜ್ಯ ಕೇಬಲ್‌ ಟಿ.ವಿ ಆಪ­ರೇಟರ್‌ಗಳ ಸಂಘದ (ಕೆಎಸ್‌ಸಿಒಎ) ಅಧ್ಯಕ್ಷ ವಿ.ಎಸ್‌.­ಪ್ಯಾಟ್ರಿಕ್‌ ­ರಾಜು ಅವರು ಈ ಕುರಿತು ಮಾಹಿತಿ ನೀಡಿದ್ದು, 4 ಬಗೆಯ ಚಾನೆಲ್‌ ಪ್ಯಾಕೇಜ್‌ಗಳನ್ನು ಸಿದ್ಧಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಗ್ರಾಹಕರು ಆಯ್ಕೆ ಮಾಡಿ­­ಕೊಳ್ಳುವ ಪ್ಯಾಕೇಜ್‌ಗೆ ಅನು­ಗುಣ­­­­ವಾಗಿ ದರ ನಿಗದಿಯಾಗಲಿದೆ. ಈ ಬಗ್ಗೆ ಕೇಬಲ್‌ನಲ್ಲೇ ವಿವರ­ಗಳನ್ನು ಪ್ರಸಾರ ಮಾಡಿ, ಕರ­ಪತ್ರ­ಗಳ ಮೂಲಕ ಜನರಿಗೆ ಮಾಹಿತಿ ನೀಡ­ಲಾಗುತ್ತದೆ ಎಂದು ಹೇಳಿದ್ದಾರೆ.

ಹೇಗಿದೆ ಪ್ಯಾಕೇಜ್ : ಗ್ರಾಹಕರಿಗೆ ಮೊದಲ ಹಂತದ ಬೇಸಿಕ್‌ ಪ್ಯಾಕೇಜ್‌ನಲ್ಲಿ 203 ಚಾನೆಲ್‌ಗಳನ್ನು ನೀಡಲಾಗುತ್ತದೆ. ಅದಕ್ಕೆ ರೂ. 118 ದರವಿರುತ್ತದೆ. ಸರ್ಕಾರದ ತೆರಿಗೆ ಹಾಗೂ ಚಾನೆಲ್‌ ಸಂಸ್ಥೆಗಳು ನಿಗದಿಪಡಿಸಿರುವ ಶುಲ್ಕಕ್ಕೆ ಅನು­ಗುಣ­ವಾಗಿ ಪ್ಯಾಕೇಜ್‌ಗಳ ದರ­ಪಟ್ಟಿ ಸಿದ್ಧ­ಪಡಿ­ಸಲಾಗಿದೆ ಎಂದು ಪ್ಯಾಟ್ರಿಕ್ ರಾಜು ತಿಳಿಸಿದರು.

ಬೆಂಗ­ಳೂರಿನಲ್ಲಿ 22 ಲಕ್ಷ ಮತ್ತು ಮೈಸೂರಿನಲ್ಲಿ 1.50 ಲಕ್ಷ ಸೆಟ್‌­ಟಾಪ್‌ ಬಾಕ್ಸ್‌ ಕೇಬಲ್‌ ಸಂಪರ್ಕ­ದಾರ­­ರಿದ್ದಾರೆ. ಜನವರಿಯಿಂದ ಈ ಗ್ರಾಹಕರಿಗೆ ಇಷ್ಟದ ಚಾನೆಲ್‌ಗಳಿಗೆ ಮಾತ್ರ ಹಣ ಪಾವತಿ ಮಾಡುವ ಸೇವೆ ಲಭ್ಯವಾಗಲಿದೆ.

English summary
You can pay for your favorite channels in set top boxes form January 2015 in Bengaluru and Mysuru citys. Cable operators will introduced paid channel subscriptions soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X