ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾವುದೇ ಬ್ಯಾಂಕಿನ ಕ್ರೆಡಿಟ್ ಕಾರ್ಡ್‌ಗಳ ಬಾಕಿ ಪಾವತಿಸಲು APP

|
Google Oneindia Kannada News

ಮುಂಬೈ, ಸೆಪ್ಟೆಂಬರ್ 7: ಐಸಿಐಸಿಐ ಬ್ಯಾಂಕ್ ತನ್ನ ಲಕ್ಷಾಂತರ ಉಳಿತಾಯ ಖಾತೆ ಗ್ರಾಹಕರಿಗೆ ಬ್ಯಾಂಕಿನ ಮೊಬೈಲ್ ಅಪ್ಲಿಕೇಶನ್ 'ಐಮೊಬೈಲ್‍ಪೇ' ಬಳಸಿಕೊಂಡು ಯಾವುದೇ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಬಾಕಿ ಪಾವತಿಸಲು ಮತ್ತು ಅವುಗಳನ್ನು ನಿರ್ವಹಿಸಲು ಅನುವು ಮಾಡಿಕೊಟ್ಟಿರುವುದಾಗಿ ಘೋಷಿಸಿದೆ.

ಕೆಲವೇ ಸೆಕೆಂಡುಗಳಲ್ಲಿ ಗ್ರಾಹಕರು ಯಾವುದೇ ಬ್ಯಾಂಕಿನ ಕ್ರೆಡಿಟ್ ಕಾರ್ಡ್‌ಗಳನ್ನು ಆ್ಯಪ್‍ಗೆ ಸೇರಿಸಬಹುದು ಮತ್ತು ನಂತರ ಅದೇ ಆ್ಯಪ್‍ನಿಂದ ತಮ್ಮ ಬಾಕಿಯನ್ನು ಪಾವತಿಸಬಹುದು ಮತ್ತು ಕಾರ್ಡ್ ನಿರ್ವಹಿಸಬಹುದು. ಇದು ಸಾಮಾನ್ಯವಾಗಿ ಅನೇಕ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವ ಗ್ರಾಹಕರಿಗೆ ಸುಧಾರಿತ ಅನುಕೂಲತೆಯನ್ನು ನೀಡುತ್ತದೆ, ಅವರ ಎಲ್ಲ ಕಾರ್ಡ್‍ಗಳನ್ನು ಸುಲಭವಾಗಿ, ಸುರಕ್ಷಿತ ಮತ್ತು ಸುಭದ್ರ ರೀತಿಯಲ್ಲಿ ನಿರ್ವಹಿಸಲು ಏಕ ನಿಲುಗಡೆಯ ಪರಿಹಾರವನ್ನು ಒದಗಿಸುತ್ತದೆ.

ಹೊಸ ವೈಶಿಷ್ಟ್ಯವು ಗ್ರಾಹಕರು ಹಲವಾರು ಕಾರ್ಡ್‌ಗಳ ನಿರ್ವಹಣೆಯನ್ನು ಅಥವಾ ಪಾವತಿಸಲು ಹಲವಾರು ವೆಬ್‍ಸೈಟ್‍ಗಳಿಗೆ ಭೇಟಿ ನೀಡುವ ತೊಂದರೆಯನ್ನು ನಿವಾರಿಸುತ್ತದೆ. ಹೆಚ್ಚುವರಿಯಾಗಿ, ಗ್ರಾಹಕರು ಬಿಲ್ ಪಾವತಿ ಜ್ಞಾಪನೆಗಳನ್ನು ಹೊಂದಿಸಲು, ಎಲ್ಲ ಕಾರ್ಡ್‌ಗಳ ಪಾವತಿ ಇತಿಹಾಸವನ್ನು ವೀಕ್ಷಿಸಲು, ವಾಟ್ಸಾಪ್ ಮೂಲಕ ಪಾವತಿ ದೃಢೀಕರಣವನ್ನು ಹಂಚಿಕೊಳ್ಳಬಹುದು ಮತ್ತು ತಮ್ಮ ಕಾರ್ಡ್‌ಗಳ ಬಿಲ್ಲಿಂಗ್ ಸೈಕಲ್‍ಗೆ ಅನುಗುಣವಾಗಿ ನಿಗದಿತ ದಿನಾಂಕಗಳನ್ನು ನಿರ್ವಹಿಸಲು ಮತ್ತು ಬದಲಾಯಿಸಲು ಅನುವು ಮಾಡಿಕೊಡುತ್ತದೆ.

ಈ ವಿಶೇಷ ಉಪಕ್ರಮದ ಕುರಿತು ಬಿಜಿತ್ ಭಾಸ್ಕರ್

ಈ ವಿಶೇಷ ಉಪಕ್ರಮದ ಕುರಿತು ಬಿಜಿತ್ ಭಾಸ್ಕರ್

ಈ ವಿಶೇಷ ಉಪಕ್ರಮದ ಕುರಿತು ಮಾತನಾಡಿದ ಡಿಜಿಟಲ್ ಚಾನೆಲ್‍ಗಳು ಮತ್ತು ಪಾಲುದಾರಿಕೆ ವಿಭಾಗದ ಮುಖ್ಯಸ್ಥರಾದ ಬಿಜಿತ್ ಭಾಸ್ಕರ್, "ಐಸಿಐಸಿಐ ಬ್ಯಾಂಕ್ ಯಾವಾಗಲೂ ಗ್ರಾಹಕರ ಅನುಕೂಲತೆಯನ್ನು ಸುಧಾರಿಸುವ ಮತ್ತು ಅವರ ಬ್ಯಾಂಕಿಂಗ್ ಅನುಭವವನ್ನು ಹೆಚ್ಚಿಸುವ ಪರಿಹಾರಗಳನ್ನು ಪರಿಚಯಿಸಲು ಶಕ್ತಿ ಮೀರಿ ಶ್ರಮಿಸುತ್ತದೆ. ಬ್ಯಾಂಕಿನ ಅತ್ಯಾಧುನಿಕ ಮೊಬೈಲ್ ಬ್ಯಾಂಕಿಂಗ್ ಆ್ಯಪ್‍ನಲ್ಲಿನ ಈ ಹೊಸ ವೈಶಿಷ್ಟ್ಯಗಳು ಈ ಪ್ರಯತ್ನಕ್ಕೆ ಸಾಕ್ಷಿಯಾಗಿದೆ. ಹೆಚ್ಚಿನ ಸಂಖ್ಯೆಯ ಗ್ರಾಹಕರು ತಮ್ಮ ವಿವಿಧ ಅಗತ್ಯಗಳಿಗೆ ಅನುಗುಣವಾಗಿ ಬಹು ಕಾರ್ಡ್‍ಗಳನ್ನು ಬಳಸುತ್ತಿರುವುದರಿಂದ, ಈ ಹೊಸ ಪರಿಹಾರವು ಅವರ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗಳ ಪ್ರಕ್ರಿಯೆಯ ದಟ್ಟಣೆಯನ್ನು ಕಡಿಮೆ ಮಾಡಲು ನೆರವಾಗುವ ಗುರಿಯನ್ನು ಹೊಂದಿದೆ. ಇದು ಅವರ ಎಲ್ಲ ಕ್ರೆಡಿಟ್ ಕಾರ್ಡ್‍ಗಳಿಗೆ ಒಂದೇ ಪ್ಲಾಟ್‍ಫಾರ್ಮ್‍ನಲ್ಲಿ ಏಕ ನಿಲುಗಡೆಯ ಪಾವತಿ ಪರಿಹಾರದ ಅನುಕೂಲವನ್ನು ನೀಡುತ್ತದೆ ಮತ್ತು ಪಾವತಿಗಳಿಗಾಗಿ ಅನೇಕ ಪೋರ್ಟಲ್‍ಗಳ ನಡುವೆ ತೊಳಲಾಡುವ ತೊಂದರೆಯನ್ನು ತಪ್ಪಿಸುತ್ತದೆ" ಎಂದು ಹೇಳಿದರು.

ಈ ಸೌಲಭ್ಯವನ್ನು ಹೇಗೆ ಬಳಸಿಕೊಳ್ಳಬಹುದು

ಈ ಸೌಲಭ್ಯವನ್ನು ಹೇಗೆ ಬಳಸಿಕೊಳ್ಳಬಹುದು

ಗ್ರಾಹಕರು ಈ ಸೌಲಭ್ಯವನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದು ಇಲ್ಲಿದೆ:
* ಐಮೊಬೈಲ್ ಪೇಗೆ ಲಾಗಿನ್ ಮಾಡಿ ಮತ್ತು 'ಕಾರ್ಡ್‍ಗಳು ಮತ್ತು ವಿದೇಶೀ ವಿನಿಮಯ' ವಿಭಾಗವನ್ನು ಆಯ್ಕೆ ಮಾಡಿ
* ಇತರೆ ಬ್ಯಾಂಕ್ ಕ್ರೆಡಿಟ್ ಕಾರ್ಡ್' ಗೆ ಹೋಗಿ
* 'ಕಾರ್ಡ್ ಸೇರಿಸಿ' ಮೇಲೆ ಟ್ಯಾಪ್ ಮಾಡಿ ಮತ್ತು ಅಗತ್ಯ ವಿವರಗಳನ್ನು ನಮೂದಿಸಿ
* ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಕಳುಹಿಸಿದ ಓಟಿಪಿಯನ್ನು ದೃಢೀಕರಿಸಿ ಮತ್ತು ಕಾರ್ಡ್ ತಕ್ಷಣವೇ ಸೇರಿಸಲ್ಪಟ್ಟಿರುತ್ತದೆ.
* ಕಾರ್ಡನ್ನು ಒಮ್ಮೆ ಸೇರಿಸಿದ ನಂತರ, ಅದನ್ನು "ಇತರೆ ಬ್ಯಾಂಕ್ ಕ್ರೆಡಿಟ್ ಕಾರ್ಡ್" ಟ್ಯಾಬ್ ಅಡಿಯಲ್ಲಿ ನೋಡಬಹುದು ಮತ್ತು ನಿರ್ವಹಿಸಬಹುದು

ಅತ್ಯಾಧುನಿಕ ಮೊಬೈಲ್ ಬ್ಯಾಂಕಿಂಗ್ APP

ಅತ್ಯಾಧುನಿಕ ಮೊಬೈಲ್ ಬ್ಯಾಂಕಿಂಗ್ APP

'ಐಮೊಬೈಲ್ ಪೇ' ಬ್ಯಾಂಕಿನ ಅತ್ಯಾಧುನಿಕ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಆಗಿದ್ದು ಅದು 350 ಕ್ಕೂ ಹೆಚ್ಚು ಸೇವೆಗಳನ್ನು ನೀಡುತ್ತದೆ. ಯಾವುದೇ ಬ್ಯಾಂಕಿನ ಗ್ರಾಹಕರಿಗೆ ಪಾವತಿ ಮತ್ತು ಬ್ಯಾಂಕಿಂಗ್ ಸೇವೆಗಳನ್ನು ನೀಡಲು ಬ್ಯಾಂಕ್ ಈ ಹಿಂದೆ ಐಮೊಬೈಲ್ ಎಂದು ಕರೆಯಲ್ಪಡುತ್ತಿದ್ದ ಆ್ಯಪ್‍ಅನ್ನು 'ಐಮೊಬೈಲ್ ಪೇ' ಆಗಿ ಡಿಸೆಂಬರ್ 2020 ರಲ್ಲಿ ಪರಿವರ್ತಿಸಿತು.

ಉದ್ಯಮದಲ್ಲೇ ಮೊದಲು ಎನಿಸಿದ ಈ ಉಪಕ್ರಮವು ಇಂಟರ್ ಆಪರೇಬಿಲಿಟಿಯ ಗಮನಾರ್ಹ ಅನುಕೂಲತೆಯನ್ನು ಒದಗಿಸಿತು, ಏಕೆಂದರೆ ಇದು ಯಾವುದೇ ಬ್ಯಾಂಕಿನ ಬಳಕೆದಾರರು ತಮ್ಮ ಖಾತೆಯನ್ನು ಆ್ಯಪ್‍ಗೆ ಲಿಂಕ್ ಮಾಡಲು ಮತ್ತು ಪಾವತಿ/ವಹಿವಾಟುಗಳನ್ನು ಡಿಜಿಟಲ್ ಆಗಿ ಮಾಡಲು ಅನುವು ಮಾಡಿಕೊಟ್ಟಿತು.

ಮನೆಯಲ್ಲೇ ಕುಳಿತು ಬ್ಯಾಂಕಿಂಗ್ ಸೇವೆ

ಮನೆಯಲ್ಲೇ ಕುಳಿತು ಬ್ಯಾಂಕಿಂಗ್ ಸೇವೆ

ಸಾಂಕ್ರಾಮಿಕದ ಈ ಸವಾಲಿನ ಸಮಯದಲ್ಲಿ ಅವರ ಮನೆಯಲ್ಲೇ ಆರಾಮವಾಗಿ ಮತ್ತು ಸುರಕ್ಷತೆಯಿಂದ ಕುಳಿತುಕೊಂಡು ಉಳಿತಾಯ ಖಾತೆ, ಗೃಹ ಸಾಲ, ಕ್ರೆಡಿಟ್ ಕಾರ್ಡ್, ವೈಯಕ್ತಿಕ ಸಾಲ ಸೇರಿದಂತೆ ಸಂಪೂರ್ಣ ಶ್ರೇಣಿಯ ಐಸಿಐಸಿಐ ಬ್ಯಾಂಕ್ ಸೇವೆಗಳಿಗೆ ಇದು ಪ್ರವೇಶವನ್ನು ನೀಡುತ್ತದೆ. ಹಲವು ವರ್ಷಗಳಿಂದ, ಬ್ಯಾಂಕಿಂಗ್ ಆ್ಯಪ್ ತನ್ನ ವ್ಯಾಪಕ ಶ್ರೇಣಿಯ ಸೇವೆಗಳು, ಬಳಕೆದಾರ ಸ್ನೇಹಿ ಕಾರ್ಯಗಳು ಮತ್ತು ಅರ್ಥಗರ್ಭಿತ ವಿನ್ಯಾಸಕ್ಕಾಗಿ ವಿಶ್ವದ ಅತ್ಯುತ್ತಮವಾದವುಗಳಲ್ಲಿ ಒಂದಾಗಿದೆ.

'ಐಮೊಬೈಲ್ ಪೇ' ಕುರಿತು ಹೆಚ್ಚಿನ ಮಾಹಿತಿಗಾಗಿ, ಭೇಟಿ ನೀಡಿ: https://www.icicibank.com/mobile-banking/imobile-pay.page; ಅಪ್ಲಿಕೇಶನ್ ಡೌನ್‍ಲೋಡ್ ಮಾಡಲು, ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ಗೆ ಭೇಟಿ ನೀಡಿ.

English summary
ICICI Bank today announced that it has enabled millions of its savings account customers to pay and manage dues of credit cards of any bank instantly using the Bank’s mobile application ‘iMobile Pay’.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X