ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಕೆಟ್‌ಗೂ ಕೈ ಹಾಕಿದ ಬಾಬಾ ರಾಮದೇವ್: ಐಪಿಎಲ್ 2020 ಟೈಟಲ್ ಪ್ರಾಯೋಜಕತ್ವಕ್ಕಾಗಿ ಪತಂಜಲಿ ಬಿಡ್

|
Google Oneindia Kannada News

ನವ ದೆಹಲಿ, ಆಗಸ್ಟ್‌ 10: ಕೊರೊನಾ ಬಿಕ್ಕಟ್ಟಿನ ಮಧ್ಯೆ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 13ನೇ ಆವೃತ್ತಿ ನಡೆಯಲಿದೆ. ಆದರೆ, ಈ ವರ್ಷದ ಐಪಿಎಲ್ ಸೀಸನ್ ನಡೆಯುತ್ತಿರುವುದು ಭಾರತದಲ್ಲ ಬದಲಿಗೆ ಯುಎಇನಲ್ಲಿ.

Recommended Video

ರಾಜಸ್ಥಾನ ವಿಧಾನಸಭೆ ಅಧಿವೇಶನ ಆಗಸ್ಟ್ 14ರಿಂದ | Oneindia Kannada

ಕೇಂದ್ರ ಸರ್ಕಾರದಿಂದ ಅಧಿಕೃತ ಅನುಮತಿ ಮೇರೆಗೆ ಐಪಿಎಲ್ ಯುಎಇನಲ್ಲಿ ನಡೆಯಲಿದೆ. ಆದರೆ ಪಂದ್ಯಾವಳಿ ಪ್ರಾರಂಭಕ್ಕೂ ಮುನ್ನ ಅದರ ಟೈಟಲ್ ಪ್ರಾಯೋಜಕರಾಗಿದ್ದ ವಿವೊ ಐಪಿಎಲ್‌ನಿಂದ ಹಿಂದೆ ಸರಿದಿದೆ. ವಿವೊ ಈ ನಿರ್ಧಾರದಿಂದ ಭಾರತೀಯ ಕ್ರಿಕೆಟ್ ಮಂಡಳಿಗೆ ಬಿಸಿಸಿಐಗೆ ಹೊಸ ಟೈಟಲ್ ಪ್ರಾಯೋಜಕರು ಬೇಕಾಗಿದ್ದಾರೆ.

ಕೊರೊನಾ: ಜನರ ಭಯವೇ ನಿಮಗೆ ಬಂಡವಾಳ, ಹೈಕೋರ್ಟ್ ಛೀಮಾರಿ: ಪತಂಜಲಿಗೆ ಭಾರೀ ಹಿನ್ನಡೆಕೊರೊನಾ: ಜನರ ಭಯವೇ ನಿಮಗೆ ಬಂಡವಾಳ, ಹೈಕೋರ್ಟ್ ಛೀಮಾರಿ: ಪತಂಜಲಿಗೆ ಭಾರೀ ಹಿನ್ನಡೆ

ಐಪಿಎಲ್‌ನಲ್ಲಿ ಬಿಡ್‌ ಮಾಡಲು ಬಾಬಾ ರಾಮದೇವ್ ಯೋಜನೆ?

ಐಪಿಎಲ್‌ನಲ್ಲಿ ಬಿಡ್‌ ಮಾಡಲು ಬಾಬಾ ರಾಮದೇವ್ ಯೋಜನೆ?

ಐಪಿಎಲ್‌ನ ಟೈಟಲ್ ಪ್ರಾಯೋಜಕರಿಗಾಗಿ ಬಿಸಿಸಿಐ ಹೊಸ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ. ಐಪಿಎಲ್ ಪ್ರಾಯೋಜಕರ ಬಿಡ್ ಶೀಘ್ರದಲ್ಲೇ ಬರಬಹುದು. ಏತನ್ಮಧ್ಯೆ, ಬಾಬಾ ರಾಮದೇವ್ ಐಪಿಎಲ್ ಟೈಟಲ್ ಪ್ರಾಯೋಜಕತ್ವಕ್ಕಾಗಿ ಬಿಡ್ಡಿಂಗ್ ಮಾಡಲು ಯೋಚಿಸುತ್ತಿದ್ದಾರೆ ಎಂಬ ದೊಡ್ಡ ಸುದ್ದಿ ಬಂದಿದೆ. ಅವರ ಕಂಪನಿ ಪತಂಜಲಿ ಐಪಿಎಲ್ ಶೀರ್ಷಿಕೆ ಪ್ರಾಯೋಜಕರ ಬಿಡ್‌ಗೆ ಸೇರಬಹುದು.

ಐಪಿಎಲ್ ಟೈಟಲ್ ಬಿಡ್‌ ಕುರಿತು ಪತಂಜಲಿ ಕಂಪನಿ ಏನು ಹೇಳುತ್ತಿದೆ?

ಐಪಿಎಲ್ ಟೈಟಲ್ ಬಿಡ್‌ ಕುರಿತು ಪತಂಜಲಿ ಕಂಪನಿ ಏನು ಹೇಳುತ್ತಿದೆ?

ಪತಂಜಲಿ ವಕ್ತಾರ ಎಸ್.ಕೆ. ತಿಜರಾವಾಲಾ ಮಾತನಾಡಿ, ಕಂಪನಿಯು ಈ ವರ್ಷದ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವವನ್ನು ಪರಿಗಣಿಸುತ್ತಿದೆ. ಪತಂಜಲಿ ಬಿಸಿಸಿಐಗೆ ಪ್ರಸ್ತಾಪವನ್ನು ನೀಡಲು ಯೋಚಿಸುತ್ತಿದೆ. ಚೀನಾದ ಕಂಪನಿಯ ಬದಲು ಪತಂಜಲಿ ರಾಷ್ಟ್ರೀಯತಾವಾದಿ ಬ್ರಾಂಡ್ ಎಂದು ಮಾರುಕಟ್ಟೆ ತಜ್ಞರು ನಂಬಿದ್ದರೂ, ಆದರೆ ಇದಕ್ಕೆ ಬಹುರಾಷ್ಟ್ರೀಯ ಕಂಪನಿಯ ಬ್ರಾಂಡ್ ಇಲ್ಲ. ಒಂದು ವೇಳೆ ಐಪಿಎಲ್‌ಗೆ ಟೈಟಲ್ ಸ್ಪಾನ್ಸರ್‌ಶಿಪ್ ಪತಂಜಲಿಗೆ ಸಿಕ್ಕರೆ ಹೆಚ್ಚಿನ ಲಾಭ ಪಡೆಯಲಿದೆ ಎಂದು ತಜ್ಞರು ಹೇಳುತ್ತಾರೆ.

ವರ್ಷಕ್ಕೆ ಅಂದಾಜು 440 ಕೋಟಿ ರೂಪಾಯಿ ಬಿಡ್

ವರ್ಷಕ್ಕೆ ಅಂದಾಜು 440 ಕೋಟಿ ರೂಪಾಯಿ ಬಿಡ್

ವಿವೋ ಐಪಿಎಲ್ ಟೈಟಲ್ ಪ್ರಾಯೋಜಕತ್ವದ ಹಕ್ಕುಗಳನ್ನು 2018 ರಿಂದ 2022 ರವರೆಗೆ ಐದು ವರ್ಷಗಳ ಕಾಲ 2,190 ಕೋಟಿ ರೂಪಾಯಿಗೆ ಬಿಡ್ ಮಾಡಲಾಗಿತ್ತು. ಅಂದರೆ ವಾರ್ಷಿಕ ಅಂದಾಜು 440 ಕೋಟಿ ರೂಪಾಯಿ

ಪತಂಜಲಿ ವಾರ್ಷಿಕ ವಹಿವಾಟು ಎಷ್ಟು?

ಪತಂಜಲಿ ವಾರ್ಷಿಕ ವಹಿವಾಟು ಎಷ್ಟು?

ಹರಿದ್ವಾರ ಮೂಲದ ಪತಂಜಲಿ ಸಮೂಹವು ಸುಮಾರು 10,500 ಕೋಟಿ ರೂಪಾಯಿ ವಾರ್ಷಿಕ ವಹಿವಾಟು ಅನ್ನು ಹೊಂದಿದೆ. ಅದಾನಿ ಗ್ರೂಪ್‌ನೊಂದಿಗೆ ಸ್ಪರ್ಧಿಸಿದ ನಂತರ ಇದು ಸುಮಾರು 4,350 ಕೋಟಿ ರೂ.ಗಳಿಗೆ ಕಾರ್ಪೊರೇಟ್ ದಿವಾಳಿತನ ಪರಿಹಾರ ಪ್ರಕ್ರಿಯೆಯಲ್ಲಿ ಸಾಲ ಪೀಡಿತ ರುಚಿ ಸೋಯಾ ಕಂಪನಿಯನ್ನು ಸ್ವಾಧೀನಪಡಿಸಿಕೊಂಡಿತ್ತು.

ಯಾವ ಯಾವ ಕಂಪನಿಗಳು ಬಿಡ್‌ನಲ್ಲಿ ಆಸಕ್ತಿ ಹೊಂದಿವೆ?

ಯಾವ ಯಾವ ಕಂಪನಿಗಳು ಬಿಡ್‌ನಲ್ಲಿ ಆಸಕ್ತಿ ಹೊಂದಿವೆ?

ದೇಶದ ಅತಿದೊಡ್ಡ ಮತ್ತು ಪ್ರಮುಖ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ಜೊತೆಗೆ, ಟಾಟಾ ಗ್ರೂಪ್ ಸಹ ಐಪಿಎಲ್ ಟೈಟಲ್ ಪ್ರಾಯೋಜಕತ್ವದ ಬಗ್ಗೆ ಆಸಕ್ತಿ ತೋರಿಸಿದೆ.

ಜಿಯೋ, ಟಾಟಾ ಮತ್ತು ಪತಂಜಲಿ ಹೊರತುಪಡಿಸಿ, ಇನ್ನೂ ಅನೇಕ ಕಂಪನಿಗಳು ಐಪಿಎಲ್ ಟೈಟಲ್ ಸ್ಪಾನ್ಸರ್‌ಶಿಪ್ ವ್ಯವಹಾರಗಳನ್ನು ಪಡೆಯಲು ಬಯಸುತ್ತವೆ. ಇವುಗಳಲ್ಲಿ ಆನ್‌ಲೈನ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್, ಫ್ಯಾಂಟಸಿ ಸ್ಪೋರ್ಟ್ಸ್ ಕಂಪನಿ ಡ್ರೀಮ್ 11 ಮತ್ತು ಭಾರ್ತಿ ಕ್ರಿಕೆಟ್ ತಂಡಕ್ಕೆ ಜರ್ಸಿ ಪ್ರಾಯೋಜಕ ಬೈವ್ಸ್ ಸೇರಿದೆ.

ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದದ ನಂತರ, ವಿವೋ ಐಪಿಎಲ್ ಜೊತೆಗಿನ ಸಂಬಂಧವನ್ನು ಕೊನೆಗೊಳಿಸಲು ನಿರ್ಧರಿಸಿದೆ. ವಿವೋ ಟೈಟಲ್ ಪ್ರಾಯೋಜಕತ್ವಕ್ಕಾಗಿ ಬಿಸಿಸಿಐಗೆ ವಾರ್ಷಿಕವಾಗಿ 440 ಕೋಟಿ ರೂ. ನೀಡುತ್ತಿದೆ ಎಂದು ತಿಳಿದುಬಂದಿದೆ.

English summary
Baba Ramdev's Patanjali Ayurved is "considering" making a bid for the title sponsorship of the upcoming ipl, according to a company official.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X