• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರುಚಿ ಸೋಯಾ ಇಂಡಸ್ಟ್ರೀಸ್ MDಯಾಗಲಿರುವ ಬಾಬಾ ರಾಮದೇವ್‌ ಸಹೋದರ

|
Google Oneindia Kannada News

ನವದೆಹಲಿ, ನವೆಂಬರ್ 28: ಪತಂಜಲಿ ಆಯುರ್ವೇದ್‌ನ ಭಾಗವಾಗಿರುವ ಸೋಯಾ ಫುಡ್ ಬ್ರಾಂಡ್ ನ್ಯೂಟ್ರೆಲಾ ತಯಾರಕ ರುಚಿ ಸೋಯಾ ಮಂಡಳಿಗೆ ಯೋಗಗುರು ಬಾಬಾ ರಾಮದೇವ್ ಸಹೋದರ ರಾಮ್ ಭರತ್‌ರನ್ನು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಮಾಡಲು ಹೊರಟಿದೆ.

ರುಚಿ ಸೋಯಾ ಇಂಡಸ್ಟ್ರೀಸ್ ಲಿಮಿಟೆಡ್ ಷೇರುದಾರರಿಗೆ ನೀಡಿದ ನೋಟಿಸ್‌ನಲ್ಲಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ರಾಮ್ ಭಾರತ್ (41) ಅವರನ್ನು ನೇಮಕ ಮಾಡಲು ಅನುಮೋದನೆ ಕೋರಿದೆ. ಪತಂಜಲಿ ಆಯುರ್ವೇದವು ಕಳೆದ ವರ್ಷ ರುಚಿ ಸೋಯಾ ಬ್ರ್ಯಾಂಡ್‌ ಕಂಪನಿಯನ್ನು ಸ್ವಾಧೀನಪಡಿಸಿಕೊಂಡಿತು.

 ಆನೆ ಮೇಲೆ ಯೋಗ ಮಾಡಲು ಹೋಗಿ ಉರುಳಿ ಬಿದ್ದ ರಾಮ್‌ದೇವ್: ವೈರಲ್ ವಿಡಿಯೋ ಆನೆ ಮೇಲೆ ಯೋಗ ಮಾಡಲು ಹೋಗಿ ಉರುಳಿ ಬಿದ್ದ ರಾಮ್‌ದೇವ್: ವೈರಲ್ ವಿಡಿಯೋ

ಪತಂಜಲಿ ಆಯುರ್ವೇದವು ಕಳೆದ ವರ್ಷ ರುಚಿ ಸೋಯಾ ಕಂಪನಿಯ ದಿವಾಳಿತನದ ಪ್ರಕ್ರಿಯೆಯ ಸಂದರ್ಭದಲ್ಲಿ ಸ್ವಾಧೀನಪಡಿಸಿಕೊಂಡಿತು. ಪತಂಜಲಿ ಆಯುರ್ವೇದ ಲಿಮಿಟೆಡ್‌ನ ಒಕ್ಕೂಟದ ನಂತರ, ದಿವ್ಯಾ ಯೋಗ ಮಂದಿರ ಟ್ರಸ್ಟ್ (ಅದರ ವ್ಯವಹಾರ ಸಂಸ್ಥೆ, ದಿವ್ಯಾ ಫಾರ್ಮಸಿ ಮೂಲಕ), ಪತಂಜಲಿ ಪರಿವಾಹನ್ ಪ್ರೈವೇಟ್ ಲಿಮಿಟೆಡ್ ಮತ್ತು ಪತಂಜಲಿ ಗ್ರಾಮಧ್ಯೋಗ್ ಸ್ವಾಧೀನಪಡಿಸಿಕೊಂಡಿತು.

ಈ ಮೂಲಕ ರುಚಿ ಸೋಯಾ ಕಂಪನಿಗೆ ಹೊಸ ನಿರ್ವಹಣೆಯು ಮಂಡಳಿಯನ್ನು ನೇಮಿಸುವ ಹಕ್ಕನ್ನು ಪಡೆದುಕೊಂಡಿತು ಎಂದು ಅನುಮೋದನೆಯಲ್ಲಿ ಹೇಳಿದೆ.

"ಆಗಸ್ಟ್ 19, 2020 ರಂದು ನಡೆದ ಕಂಪನಿಯ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಶ್ರೀ ರಾಮ್ ಭಾರತ್ ಅವರನ್ನು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ 2020 ರ ಆಗಸ್ಟ್ 19 ರಿಂದ 2022 ರ ಡಿಸೆಂಬರ್ 17 ರವರೆಗೆ ಆಯ್ಕೆ ಮಾಡಿದೆ ಮತ್ತು ಅವರ ಹುದ್ದೆಯನ್ನು ನಿರ್ದೇಶಕರಿಂದ, ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಬದಲಾಯಿಸಿದೆ "ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಈ ಹುದ್ದೆಗಳ ನೇಮಕಾತಿಗಾಗಿ ಷೇರುದಾರರ ಅನುಮೋದನೆ ಪಡೆಯಲಾಗುತ್ತದೆ. ರಾಮ್‌ ಭರತ್‌ಗೆ ವಾರ್ಷಿಕ 1 ರೂಪಾಯಿ ಸಂಬಳ ನೀಡಲಾಗುವುದು ಎಂದು ನೋಟಿಸ್‌ನಲ್ಲಿ ತಿಳಿಸಿದೆ. ಅಲ್ಲದೆ ಬಾಬಾ ರಾಮದೇವ್ ಆಪ್ತ 48 ವರ್ಷದ ಆಚಾರ್ಯ ಬಾಲಕೃಷ್ಣರನ್ನು ಕಂಪನಿಯ ಅಧ್ಯಕ್ಷರನ್ನಾಗಿ ಮರುನೇಮಕ ಮಾಡಿದೆ. ಇವರಿಗೂ ವರ್ಷಕ್ಕೆ 1 ರೂಪಾಯಿ ಸಂಬಳ ನೀಡಲಾಗುವುದು.

ಇನ್ನು ಬಾಬಾ ರಾಮದೇವ್ ಅವರನ್ನು ಕಂಪನಿಯ ಮಂಡಳಿಯಲ್ಲಿ ನಿರ್ದೇಶಕರಾಗಿ ನೇಮಕ ಮಾಡುವಂತೆ ನೋಟಿಸ್‌ನಲ್ಲಿ ಕೋರಲಾಗಿದೆ.

English summary
Yoga guru Swami Ram Dev, his younger brother Ram Bharat and close aide Acharya Balkrishna will be on the board of soya food brand Nutrela-maker Ruchi Soya
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X