ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಟ್ಸ್‌ಆಪ್‌ಗೆ ಪೈಪೋಟಿ ನೀಡಲು ಬಂತು ಪತಂಜಲಿ ಮೆಸೇಜಿಂಗ್ ಆಪ್

|
Google Oneindia Kannada News

ನವದೆಹಲಿ, ಮೇ 30: ಇದುವರೆಗೆ ವಿವಿಧ ಬಗೆಯ ಆಯುರ್ವೇದಿಕ್ ಉತ್ಪನ್ನಗಳನ್ನು ತಯಾರಿಸುತ್ತಿದ್ದ ಪತಂಜಲಿ, ಈಗ ತಂತ್ರಜ್ಞಾನ ವಿಭಾಗಕ್ಕೂ ಲಗ್ಗೆ ಇರಿಸಿದೆ.

ಇತ್ತೀಚೆಗಷ್ಟೇ ಸ್ವದೇಶಿ ಸಿಮ್ ಕಾರ್ಡ್‌ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದ ಪತಂಜಲಿ, ಈಗ ಅತಿ ದೊಡ್ಡ ಮೆಸೇಜಿಂಗ್ ಅಪ್ಲಿಕೇಷನ್, ವಾಟ್ಸ್‌ಆಪ್‌ಗೆ ಸ್ಪರ್ಧೆ ನೀಡಲು ಮುಂದಾಗಿದೆ.

ತಮ್ಮ ಪತಂಜಲಿ ಸಂಸ್ಥೆಯ ನೂತನ ಮೆಸೇಜಿಂಗ್ ಆಪ್ 'ಕಿಂಬೋ'ವನ್ನು ಯೋಗ ಗುರು ರಾಮ್‌ದೇವ್ ಬುಧವಾರ ಬಿಡುಗಡೆ ಮಾಡಿದರು.

ವಾಟ್ಸಾಪ್ ಬ್ಯಾಂಕಿಂಗ್ ಬಾಗಿಲು ತೆರೆಯಲು ಸಿದ್ಧವಾಗಿದೆ!ವಾಟ್ಸಾಪ್ ಬ್ಯಾಂಕಿಂಗ್ ಬಾಗಿಲು ತೆರೆಯಲು ಸಿದ್ಧವಾಗಿದೆ!

ಕಿಂಬೋ ಆಪ್‌, ವಾಟ್ಸ್‌ಆಪ್‌ಗೆ ಪೈಪೋಟಿ ನೀಡಲಿದೆ ಎಂದು ಹೇಳಲಾಗಿದೆ. ಕಿಂಬೋದ ಟ್ಯಾಗ್‌ಲೈನ್ 'ಈಗ ಭಾರತ ಮಾತನಾಡಲಿದೆ' ಎಂದು.

'ಇನ್ನು ಭಾರತ ಮಾತನಾಡಲಿದೆ. ಸಿಮ್ ಕಾರ್ಡ್‌ಗಳನ್ನು ಬಿಡುಗಡೆ ಮಾಡಿದ ಬಳಿಕ ಬಾಬಾ ರಾಮ್‌ದೇವ್ ಅವರು ಹೊಸ ಮೆಸೇಜಿಂಗ್ ಅಪ್ಲಿಕೇಷನ್ ಕಿಂಬೋವನ್ನು ಲಾಂಚ್ ಮಾಡಿದ್ದಾರೆ. ಈಗ ವಾಟ್ಸ್‌ಆಪ್‌ಗೆ ಸ್ಪರ್ಧೆ ಹುಟ್ಟಿದೆ. ನಮ್ಮದೇಯಾದ ಸ್ವದೇಶಿ ಮೆಸೇಜಿಂಗ್ ವೇದಿಕೆ. ಗೂಗಲ್ ಪ್ಲೇಸ್ಟೋರ್‌ನಿಂದ ನೇರವಾಗಿ ಡೌನ್‌ಲೋಡ್ ಮಾಡಿ' ಎಂದು ಪತಂಜಲಿಯ ವಕ್ತಾರ ಎಸ್‌ಕೆ ತಿಜಾರಾವಾಲ ಟ್ವೀಟ್ ಮಾಡಿದ್ದಾರೆ.

app kimbho

ಭಾರತ ಸಂಚಾರ ನಿಗಮ ಲಿಮಿಟೆಡ್ ಜತೆಗೂಡಿ ರಾಮ್‌ದೇವ್ ಅವರು ಮೇ 27ರಂದು ಸ್ವದೇಶಿ ಸಮೃದ್ಧಿ ಸಿಮ್‌ ಕಾರ್ಡ್‌ಗಳನ್ನು ಬಿಡುಗಡೆ ಮಾಡಿದ್ದರು.

ಆರಂಭದಲ್ಲಿ ಪತಂಜಲಿಯ ಉದ್ಯೋಗಿಗಳು ಮತ್ತು ಅಧಿಕಾರಿಗಳು ಮಾತ್ರ ಈ ಸಿಮ್ ಕಾರ್ಡ್‌ನ ಪ್ರಯೋಜನಗಳನ್ನು ಪಡೆದುಕೊಳ್ಳಲಿದ್ದಾರೆ. ಬಳಿಕ ಪೂರ್ಣ ಪ್ರಮಾಣದಲ್ಲಿ ಬಿಡುಗಡೆಯಾದ ಬಳಿಕ ಈ ಕಾರ್ಡ್‌ ಹೊಂದಿರುವವರು ಪತಂಜಲಿ ಉತ್ಪನ್ನಗಳ ಮೇಲೆ ಶೇ 10ರ ರಿಯಾಯಿತಿ ಪಡೆದುಕೊಳ್ಳಲಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

English summary
Yoga guru Ramdev Wednesday launched a new messaging application which is aimed to be a competitor of the messaging app whats app. New app 'kimbho' with the tagline of 'Ab Bharat Bolega' is now available at google play stores.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X