• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರುಪಾಯಿ ದುರ್ಬಲಕ್ಕೆ ಪಿ-ನೋಟ್ಸ್ ಕಾರಣ ಎಂದ ಸ್ವಾಮಿ, ಏನಿದು ಪಿ-ನೋಟ್ಸ್?

|

ಅಮೆರಿಕದ ಡಾಲರ್ ವಿರುದ್ಧ ಭಾರತದ ರುಪಾಯಿ ಮೌಲ್ಯ ದುರ್ಬಲವಾಗಲು ಪಾರ್ಟಿಸಿಪೇಟರಿ ನೋಟ್ಸ್ (ಪಿಎನ್) ಕಾರಣವೇ? ಹೌದು ಎನ್ನುತ್ತಿದ್ದಾರೆ ಬಿಜೆಪಿಯ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ.

"ನಾನು ಮುಂಚಿನಿಂದಲೂ ಎಚ್ಚರಿಸುತ್ತಿದ್ದೇನೆ. ಕಪ್ಪು ಹಣವನ್ನು ಕಾನೂನುಬದ್ಧಗೊಳಿಸಿ ಭಾರತದೊಳಕ್ಕೆ ದೊಡ್ಡ ಮಟ್ಟದ ಹಣ ವಿದೇಶಿ ಬಂಡವಾಳವಾಗಿ ಹರಿದು ಬರುತ್ತಿರುವುದು ಸಿಂಗಾಪುರ ಹಾಗೂ ಮಾರಿಷಸ್ ನಿಂದ. ಅದೂ ಪಾರ್ಟಿಸಿಪೇಟರಿ ನೋಟ್ಸ್ ಮೂಲಕ ಕಪ್ಪು ಹಣ ಭಾರತದೊಳಗೆ ಬಂದು, ದೇಶದ ಕರೆನ್ಸಿ ಮೌಲ್ಯವನ್ನು ಕುಗ್ಗಿಸುತ್ತಿದೆ. ಆದ್ದರಿಂದ ಅವುಗಳನ್ನು ರದ್ದು ಮಾಡಬೇಕು" ಎಂದು ಹೇಳಿದ್ದಾರೆ.

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಮಾಮೂಲೆಂದ ಅರುಣ್ ಜೇಟ್ಲಿ

ಅಂದಹಾಗೆ ಪಿ- ನೋಟ್ಸ್ ಅಂತ ಕರೆಯುವ ಇವುಗಳಿಂದ ಭಾರತದ ಆರ್ಥಿಕತೆಯಲ್ಲಿ ಬಹಳ ಏರುಪೇರಾಗುತ್ತದೆ ಎಂಬ ಕಾಳಜಿ ಬಹಳ ಹಿಂದಿನಿಂದಲೂ ಇದೆ. ಪಿ-ನೋಟ್ಸ್ ಅಂದರೆ ಫೈನಾನ್ಷಿಯಲ್ ಇನ್ ಸ್ಟ್ರುಮೆಂಟ್. ಹೂಡಿಕೆದಾರರು ಅಥವಾ ಹೆಡ್ಜ್ ಫಂಡ್ಸ್ ಹೀಗೆ ಯಾರು ಭಾರತದ 'ಸೆಬಿ' ಜತೆಗೆ ನೋಂದಣಿ ಮಾಡಿರುವುದಿಲ್ಲವೋ ಅಂಥವರು ದೇಶದ 'ಸೆಕ್ಯೂರಿಟೀಸ್'ನಲ್ಲಿ (ಷೇರು ಮತ್ತಿತರದರಲ್ಲಿ) ಹೂಡಿಕೆ ಮಾಡಲು ಇದು ಅಗತ್ಯ.

ಈ ಹೂಡಿಕೆಯಿಂದ ಬರುವ ಡಿವಿಡೆಂಡ್ (ಲಾಭಾಂಶ) ಅಥವಾ ಬಂಡವಾಳದ ಮೇಲಿನ ಲಾಭ ಹೂಡಿಕೆದಾರರಿಗೆ ವಾಪಸ್ ಆಗುತ್ತದೆ. ಭಾರತದ ನೀತಿ ನಿರೂಪಕರು ಈ ಪಿ-ನೋಟ್ಸ್ ಗಳ ವಿರುದ್ಧವಾಗಿದ್ದಾರೆ. ಅದಕ್ಕೆ ಕಾರಣ ಏನೆಂದರೆ ದೇಶದ ಆರ್ಥಿಕ ವ್ಯವಸ್ಥೆಗೆ ಇದರಿಂದ ಮಾರಕವಾಗುತ್ತದೆ ಎಂಬುದು ಅವರ ಅಭಿಪ್ರಾಯ.

ರುಪಾಯಿ ದುರ್ಬಲ ಆಗುತ್ತಿದ್ದಂತೆ ವಿದೇಶಿ ಹಣದ ಹರಿವು ಹೆಚ್ಚಾಗಿದೆ ಏಕೆ?

ಇನ್ನು ಭಾರತದ ಬಂಡವಾಳ ಮಾರುಕಟ್ಟೆಗೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ ಐಐ) ಶೀಘ್ರವಾಗಿ ಹಣ ಒದಗಿಸುತ್ತಾರೆ. ಅದೂ ಅಲ್ಪಾವಧಿಯ ಹೂಡಿಕೆಯಾಗಿರುತ್ತದೆ. ಅದಕ್ಕಾಗಿ ಹೆಚ್ಚು ನಿಯಮಗಳೇನೂ ಇಲ್ಲ. ಆದ್ದರಿಂದ ಭಾರತದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದಕ್ಕೆ ಮತ್ತು ನೀತಿ-ನಿಬಂಧನೆಗಳ ಸಿಕ್ಕು ತಪ್ಪಿಸಿಕೊಂಡು ಅನುಮತಿ ಪಡೆಯುವುದಕ್ಕೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಪಿ-ನೋಟ್ಸ್ ಬಳಸುತ್ತಾರೆ.

ಪಿ-ನೋಟ್ಶ್ ಗಳನ್ನು ನೀಡುವವರು ಯಾರು, ಅದರ ನಿಜವಾದ ಮಾಲೀಕರು ಯಾರು ಅಂತೆಲ್ಲ ಗುರುತಿಸುವುದು ಕಷ್ಟ. ಆ ಮೂಲಕ ಬರುವ ಹಣದ ಲೆಕ್ಕ ಕೂಡ ಸಿಗಲ್ಲ. ಪಿ-ನೋಟ್ಸ್ ಮೂಲಕ ನಡೆಸುವ ವ್ಯವಹಾರ ಸೆಬಿ ವ್ಯಾಪ್ತಿಗೂ ಬರುವುದಿಲ. ಸೆಬಿ ಜತೆಗೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ನೋಂದಣಿ ಮಾಡಬೇಕೇನೋ ಹೌದು. ಆದರೆ ಪಿ-ನೋಟ್ಸ್ ವ್ಯವಹಾರ ನೋಂದಣಿ ಆಗಬೇಕೆಂದಿಲ್ಲ. ಇದರಿಂದ ಅಕ್ರಮ ಹಣ ವರ್ಗಾವಣೆಗೆ ಅವಕಾಶ ಆಗುತ್ತದೆ.

ಡಾಲರ್ ವಿರುದ್ಧ ಮುಂದುವರಿದ ರುಪಾಯಿ ಮೌಲ್ಯ ಕುಸಿತ, ಇದು ನಿಲ್ಲೋದೆಲ್ಲಿ?

ಆದರೆ, ಪಿ-ನೋಟ್ಸ್ ಮೇಲೆ ನಿಬಂಧನೆ ಹೇರುವುದಕ್ಕೆ ಸರಕಾರ ಪ್ರಯತ್ನಿಸಿದರೆ ವಿದೇಶಿ ಬಂಡವಾಳ ಹರಿದುಬರುವುದಕ್ಕೆ ತೊಡಕಾಗುತ್ತದೆ. ಈ ಹಿಂದೆ ಅಂದರೆ 2007ರ ಅಕ್ಟೋಬರ್ ನಲ್ಲಿ ಅಂಥ ವ್ಯವಹಾರಕ್ಕೆ ತಡೆ ಹಾಕಲು ಸರಕಾರ ಮುಂದಾದಾಗ ಷೇರು ಮಾರುಕಟ್ಟೆಯು 1744 ಅಂಶಗಳ ಕುಸಿತ ಕಂಡಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
I had been warning that since Mauritius and Singapore are the two largest providers of foreign investment into India mostly through the destabilising blackmoney whitener: Participatory Notes, therefore today’s slide of the ₹/$ is due PNs fleeing India. Abolish PNs therefore, BJP MP Subramanian Swamy tweeted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more