ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಹಕಾರಿ ಬ್ಯಾಂಕುಗಳು ಇನ್ಮುಂದೆ ಆರ್‌ಬಿಐ ವ್ಯಾಪ್ತಿಗೆ: ಬ್ಯಾಂಕಿಂಗ್ ಕಾಯ್ದೆಗೆ ತಿದ್ದುಪಡಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 22: ಬ್ಯಾಂಕ್ ಠೇವಣಿದಾರರ ಹಿತವನ್ನು ಕಾಯಲು ಸಹಕಾರಿ ಬ್ಯಾಂಕುಗಳನ್ನು ಇನ್ಮುಂದೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮೇಲ್ವಿಚಾರಣಾ ವ್ಯಾಪ್ತಿಗೆ ತರುವ ಮಸೂದೆಯನ್ನು ಸಂಸತ್ತು ಮಂಗಳವಾರ ಅಂಗೀಕರಿಸಿದೆ.

ಮಸೂದೆ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949 ಅನ್ನು ತಿದ್ದುಪಡಿ ಮಾಡುವ ಮೂಲಕ, ಈ ಕಾಯಿದೆಯು ಬ್ಯಾಂಕುಗಳ ಕಾರ್ಯನಿರ್ವಹಣೆಯನ್ನು ನಿಯಂತ್ರಿಸುತ್ತದೆ ಮತ್ತು ಬ್ಯಾಂಕುಗಳ ಪರವಾನಗಿ, ನಿರ್ವಹಣೆ ಮತ್ತು ಕಾರ್ಯಾಚರಣೆಗಳಂತಹ ವಿವಿಧ ಅಂಶಗಳ ಬಗ್ಗೆ ವಿವರಗಳನ್ನು ನೀಡುತ್ತದೆ.

2,000 ನೋಟು ಮುದ್ರಣವನ್ನ ನಿಲ್ಲಿಸಲ್ಲ: ಅನುರಾಗ್ ಠಾಕೂರ್2,000 ನೋಟು ಮುದ್ರಣವನ್ನ ನಿಲ್ಲಿಸಲ್ಲ: ಅನುರಾಗ್ ಠಾಕೂರ್

ಜೂನ್ 26ರಂದು ಹೊರಡಿಸಲಾದ ಸುಗ್ರೀವಾಜ್ಞೆ ರೂಪದಲ್ಲಿ ಈ 'ಬ್ಯಾಂಕಿಂಗ್ ನಿಯಂತ್ರಣ(ತಿದ್ದುಪಡಿ) ಕಾಯ್ದೆ 2020' ಈಗಾಗಲೇ ಜಾರಿಯಲ್ಲಿದೆ. ರಾಜ್ಯಸಭೆಯು ಧ್ವನಿಮತದ ಮೂಲಕ ಮಸೂದೆಗೆ ಅನುಮೋದನೆ ನೀಡಿದೆ. ಲೋಕಸಭೆಯು ಈಗಾಗಲೇ ಸೆ. 16ರಂದು ಅಂಗೀಕಾರ ನೀಡಿತ್ತು.

Parliament Clears The Banking Regulation (Amendment) Bill, 2020 Gives Rbi Powers To Restructure Co-operative Banks

ಪ್ರಾಥಮಿಕ ಕೃಷಿ ಸಾಲ ಸಂಘಗಳು ಮತ್ತು ಸಹಕಾರಿ ಭೂ ಅಡಮಾನ ಬ್ಯಾಂಕುಗಳಂತಹ ಕೆಲವು ಸಹಕಾರಿ ಸಂಘಗಳಿಗೆ ಈ ಕಾಯ್ದೆ ಅನ್ವಯಿಸುವುದಿಲ್ಲ.

ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರದ ಬಳಿಕ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ''ಠೇವಣಿದಾರರ ಹಿತವನ್ನು ಸಂಪೂರ್ಣವಾಗಿ ರಕ್ಷಿಸುವುದು ಈ ಮಸೂದೆಯ ಉದ್ದೇಶ ಎಂದು ತಿಳಿಸಿದರು.

ಸಹಕಾರಿ ಬ್ಯಾಂಕುಗಳಲ್ಲಿ ವೃತ್ತಿಪರತೆಯನ್ನು ಬಲಪಡಿಸುವುದು, ಬಂಡವಾಳ ಕ್ರೂಢೀಕರಣಕ್ಕೆ ಅವಕಾಶ, ಆಡಳಿತ ವ್ಯವಸ್ಥೆ ಸುಧಾರಣೆ, ಮೇಲ್ವಿಚಾರಣೆ ಆರ್‌ಬಿಐ ವ್ಯಾಪ್ತಿಗೆ ತರುವುದು ಇದರ ಪ್ರಮುಖ ಉದ್ದೇಶವಾಗಿದೆ.

English summary
After Lok Sabha, the Rajya Sabha has also passed the Banking Regulation (Amendment) Bill, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X