ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ಥಿಕ ಸಂಕಷ್ಟದಲ್ಲಿದ್ದ ಪಾರ್ಲೆ ಸಂಸ್ಥೆಯ ನಿವ್ವಳ ಲಾಭ 15ರಷ್ಟು ಏರಿಕೆ!

|
Google Oneindia Kannada News

ನವದೆಹಲಿ, ಅಕ್ಟೋಬರ್ 16: ದೇಶದ ಅತಿ ದೊಡ್ಡ ಬಿಸ್ಕೆಟ್ ತಯಾರಕ ಸಂಸ್ಥೆ, ಅತ್ಯಂತ ಪುರಾತನ ಸಂಸ್ಥೆ ಪಾರ್ಲೆ ಪ್ರಾಡಕ್ಟ್ಸ್ ಬೇಡಿಕೆ ಕುಸಿದು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ತಿಳಿದಿರಬಹುದು. ಈಗ ಪಾರ್ಲೆ ಜಿಗೆ ಶುಭ ಸುದ್ದಿ ಸಿಕ್ಕಿದೆ.

ಕೆಲ ತಿಂಗಳುಗಳ ಹಿಂದೆಯಷ್ಟೇ ಸಂಸ್ಥೆಯ ಸುಮಾರು 10,000 ನೌಕರರು ಕೆಲಸ ಕಳೆದುಕೊಳ್ಳುವ ಭೀತಿಗೆ ಒಳಗಾಗಿದ್ದರು. 'ಪರಿಸ್ಥಿತಿ ತೀರಾ ಶೋಚನೀಯವಾಗಿದೆ. ಸರ್ಕಾರ ಈ ಕೂಡಲೇ ಮಧ್ಯಪ್ರವೇಶ ಮಾಡದೆ ಹೋದರೆ ಉದ್ಯೋಗಿಗಳನ್ನು ವಜಾಗೊಳಿಸಬೇಕಾದ ಅನಿವಾರ್ಯ ಒತ್ತಡಕ್ಕೆ ನಾವು ಸಿಲುಕಬೇಕಾಗುತ್ತದೆ' ಎಂದು ಕಂಪೆನಿಯ ಉತ್ಪಾದನೆ ಮತ್ತು ಮಾರಾಟ ವಿಭಾಗದ ಮುಖ್ಯಸ್ಥ ಮಯಂಕ್ ಶಾ ಹೇಳಿದ್ದರು.

ಆದರೆ ಈಗ ಪ್ರಕಟವಾಗಿರುವ ತ್ರೈಮಾಸಿಕ ವರದಿಯಂತೆ ಪಾರ್ಲೆ ಬಿಸ್ಕೆಟ್ ಪ್ರೈ ಲಿಮಿಟೆಡ್ ನ ನಿವ್ವಳ ಲಾಭ ವರ್ಷದಿಂದ ವರ್ಷಕ್ಕೆ ಹೋಲಿಕೆಯಲ್ಲಿ ಶೇ 15.2ರಷ್ಟು ಏರಿಕೆ ಕಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 355 ಕೋಟಿ ರು ಮಾತ್ರ ಗಳಿಕೆಯಾಗಿತ್ತು. ಈ ಬಾರಿ ನಿವ್ವಳ ಲಾಭ 419 ಕೋಟಿ ರು ಗೇರಿದೆ.

ಪಾರ್ಲೆಯನ್ನೇ ನುಂಗಿದ ಜಿಎಸ್ಟಿಪಾರ್ಲೆಯನ್ನೇ ನುಂಗಿದ ಜಿಎಸ್ಟಿ

1929ರಲ್ಲಿ ಪಾರ್ಲೆ ಪ್ರಾಡಕ್ಟ್ಸ್‌ನಲ್ಲಿ ಸುಮಾರು 1 ಲಕ್ಷದಷ್ಟು ಮಂದಿ ಕೆಲಸ ಮಾಡುತ್ತಿದ್ದಾರೆ. ಪಾರ್ಲೆ ಒಟ್ಟು 125 ಉತ್ಪಾದನಾ ಘಟಕಗಳನ್ನು ಹೊಂದಿದ್ದು, 10 ಕಂಪೆನಿ ಮಾಲೀಕತ್ವದ ಘಟಕಗಳಿವೆ.

ನಿವ್ವಳ ಲಾಭದ ಜೊತೆ ಆದಾಯವೂ ಏರಿಕೆ

ನಿವ್ವಳ ಲಾಭದ ಜೊತೆ ಆದಾಯವೂ ಏರಿಕೆ

ಈ ತ್ರೈಮಾಸಿಕದಲ್ಲಿ ಒಟ್ಟಾರೆ ಆದಾಯ ವರ್ಷದಿಂದ ವರ್ಷಕ್ಕೆ ಲೆಕ್ಕದಲ್ಲಿ ಶೇ6.4ರಷ್ಟು ಏರಿಕೆ ಕಂಡು 9030ರಷ್ಟು ಗಳಿಕೆಯಾಗಿದೆ. ಆಗಸ್ಟ್ ತಿಂಗಳಿನಲ್ಲಿ ಸರಕು ಸೇವಾ ತೆರಿಗೆ(ಜಿಎಸ್ಟಿ) ಹೊಡೆತಕ್ಕೆ ಸಿಲುಕಿ ಸುಮಾರು 10 ಸಾವಿರ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಲು ಪಾರ್ಲೆ ಜಿ ಮುಂದಾಗಿತ್ತು. ಆದರೆ ತ್ರೈಮಾಸಿಕ ವರದಿಯಂತೆ ಪಾರ್ಲೆ ಬಿಸ್ಕಟ್ ಪ್ರೈ ಲಿಮಿಟೆಡ್ ನ ನಿವ್ವಳ ಲಾಭ ವರ್ಷದಿಂದ ವರ್ಷಕ್ಕೆ ಹೋಲಿಕೆಯಲ್ಲಿ ಶೇ 15.2ರಷ್ಟು ಏರಿಕೆ ಕಂಡಿದೆ. ಈಗ ವಿವಿಧ ವಿಭಾಗಗಳಲ್ಲಿ ಪಾರ್ಲೆ ಜಿ ಉತ್ತಮ ಪ್ರಗತಿ ಕಂಡಿದ್ದು, ಸಂಸ್ಥೆಯ ಸಿಬ್ಬಂದಿ ಸಂತಸದಲ್ಲಿದ್ದಾರೆ.

ಗ್ಲುಕೋ ಎಂಬ ಹೆಸರಿನ ಬಿಸ್ಕತ್‌

ಗ್ಲುಕೋ ಎಂಬ ಹೆಸರಿನ ಬಿಸ್ಕತ್‌

ಪಾರ್ಲೆ-ಜಿ, ಮೊನ್ಯಾಕೋ, ಕ್ರಾಕ್ ಜಾಕ್ ಮತ್ತು ಮಾರಿ ಬ್ರ್ಯಾಂಡ್ ಸೇರಿದಂತೆ ವಿವಿಧ ಬಗೆಯ ಬಿಸ್ಕತ್‌ಗಳನ್ನು ಪಾರ್ಲೆ ತಯಾರಿಸುತ್ತದೆ. ಕಂಪೆನಿಯು ಪ್ರಸ್ತುತ 1.4 ಶತಕೋಟಿ ಡಾಲರ್‌ಗೂ ಅಧಿಕ ವಾರ್ಷಿಕ ಆದಾಯ ಹೊಂದಿದೆ. ಮುಂಬೈನಲ್ಲಿ ಕೇಂದ್ರ ಕಚೇರಿ ಹೊಂದಿರುವ ಕಂಪೆನಿ ಪಾರ್ಲೆ ಗ್ಲುಕೋ ಎಂಬ ಹೆಸರಿನ ಬಿಸ್ಕತ್‌ನಿಂದ ಜನಪ್ರಿಯವಾಗಿತ್ತು. ಬಳಿಕ ಅದಕ್ಕೆ ಪಾರ್ಲೆ-ಜಿ ಎಂದು ಮರುನಾಮಕರಣ ಮಾಡಲಾಗಿತ್ತು. 1980ರ ದಶಕದಿಂದ ಪಾರ್ಲೆ ಮನೆಮಾತಾಗಿದೆ. 2003ರಲ್ಲಿ ಪಾರ್ಲೆ-ಜಿ ಜಗತ್ತಿನ ಅತಿ ದೊಡ್ಡ ಮಾರಾಟ ಬಿಸ್ಕತ್ ಬ್ರ್ಯಾಂಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

ಗ್ರಾಮೀಣ ಪ್ರದೇಶದಲ್ಲಿ ಬೇಡಿಕೆ ಹೆಚ್ಚಳ

ಗ್ರಾಮೀಣ ಪ್ರದೇಶದಲ್ಲಿ ಬೇಡಿಕೆ ಹೆಚ್ಚಳ

ಈ ಕುಸಿತಕ್ಕೆ ಗ್ರಾಮೀಣ ಪ್ರದೇಶದಲ್ಲಿ ಬೇಡಿಕೆ ಹೆಚ್ಚಾಗಿರುವುದು ಲಾಭಗಳಿಕೆಗೆ ಕಾರಣ ಎಂದು ಮಾರಾಟ ವಿಭಾಗದ ಮುಖ್ಯಸ್ಥ ಮಯಾಂಕ್ ಶಾ ತಿಳಿಸಿದ್ದಾರೆ. ಪಾರ್ಲೆಯ ಒಟ್ಟು ಆದಾಯದ ಅರ್ಧದಷ್ಟು ಭಾಗವು ಗ್ರಾಮೀಣ ಪ್ರದೇಶಗಳ ಗ್ರಾಹಕರಿಂದ ಬರುತ್ತದೆ. ತೆರಿಗೆ ಹೆಚ್ಚಳದಿಂದಾಗಿ ಹೊರೆ ತಗ್ಗಿಸಲು ಪೊಟ್ಟಣದ ಒಳಗಿನ ಬಿಸ್ಕತ್‌ಗಳ ಸಂಖ್ಯೆ ಕಡಿಮೆ ಮಾಡುವುದು ಅನಿವಾರ್ಯವಾಗಿತ್ತು. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಬೇಡಿಕೆ ಇಳಿದಿತ್ತು. 'ಗ್ರಾಮೀಣ ಪ್ರದೇಶಗಳ ಜನರು ಬೆಲೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ನಿರ್ದಿಷ್ಟ ದರಕ್ಕೆ ಎಷ್ಟು ಬಿಸ್ಕತ್ ಸಿಗುತ್ತದೆ ಎಂಬುದನ್ನು ಪರಿಗಣಿಸುತ್ತಾರೆ' ಎಂದು ಹೇಳಿದರು

ಮಧ್ಯಮ ಆದಾಯವುಳ್ಳ ಗ್ರಾಹಕರೆ ಹೆಚ್ಚು

ಮಧ್ಯಮ ಆದಾಯವುಳ್ಳ ಗ್ರಾಹಕರೆ ಹೆಚ್ಚು

'ನಮ್ಮಲ್ಲಿ ವಿವಿಧ ಬಗೆಯ ಬಿಸ್ಕತ್ ಉತ್ಪನ್ನಗಳಿವೆ. ಹೆಚ್ಚಿನವು ಕೆಳ ಹಾಗೂ ಮಧ್ಯಮ ಆದಾಯವುಳ್ಳ ಗ್ರಾಹಕರನ್ನು ಗುರಿಯನ್ನಾಗಿರಿಸಿಕೊಂಡಿದೆ. ಇವರೇ ನಮ್ಮ ಪ್ರಮುಖ ಗ್ರಾಹಕರು. ಆದರೆ, 2017ರಲ್ಲಿ ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಬಂದ ನಂತರ ಬಹು ಪ್ರಸಿದ್ಧ ಪಾರ್ಲೆ-ಜಿ ಸೇರಿದಂತೆ ಕಂಪೆನಿಯ ಇತರೆ ಬ್ರ್ಯಾಂಡ್ ಬಿಸ್ಕತ್‌ಗಳ ಬೇಡಿಕೆ ಕುಸಿತ ಕಂಡಿದೆ. 5 ರೂ ಮತ್ತು 7 ಸೆಂಟ್ಸ್ ಬಿಸ್ಕತ್ ಪೊಟ್ಟಣಗಳ ಮೇಲೆ ಅಧಿಕ ಜಿಎಸ್‌ಟಿ ವಿಧಿಸಿರುವುದು ಈ ಬೇಡಿಕೆ ಕುಸಿತಕ್ಕೆ ಕಾರಣವಾಗಿತ್ತು ಎಂದು ಮಯಾಂಕ್ ವಿವರಿಸಿದರು.

English summary
One of the oldest biscuit-makers Parle Biscuits Private Ltd has reported 15.2 per cent year-on-year (YoY) growth in net profit for financial year 2018-19 (FY19).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X