ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ಯಾನಸೋನಿಕ್ ಸ್ಮಾರ್ಟ್ ವೈ-ಫೈ ಎಲ್ಇಡಿ ಬಲ್ಬ್ ಬಿಡುಗಡೆ: ಆ್ಯಪ್ ಮೂಲಕ ಲೈಟ್ ಸ್ವಿಚ್ On/Off ಮಾಡಿ

|
Google Oneindia Kannada News

ನವದೆಹಲಿ, ಅಕ್ಟೋಬರ್ 09: ಪ್ಯಾನಸೋನಿಕ್ ಇಂಡಿಯಾ ತನ್ನ ಸ್ಮಾರ್ಟ್ ಹೋಮ್ ಪರಿಸರ ವ್ಯವಸ್ಥೆಗೆ ಹೊಸ ಉತ್ಪನ್ನವನ್ನು ಸೇರ್ಪಡೆ ಮಾಡಿದ್ದು, ಹೊಸ ಸ್ಮಾರ್ಟ್ ವೈ-ಫೈ ಎಲ್ಇಡಿ ಬಲ್ಬ್ ಅನ್ನು ಬಿಡುಗಡೆ ಮಾಡಿದೆ.

ಕಂಪನಿಯ ಪ್ರಕಾರ, 9 ವ್ಯಾಟ್ ಸ್ಮಾರ್ಟ್ ವೈ-ಫೈ ಎಲ್ಇಡಿ ಬಲ್ಬ್‌ನ ಪ್ರಮುಖ ಪ್ರಯೋಜನವೆಂದರೆ ಅದರ ಬಹು-ಬಣ್ಣದ ಬೆಳಕಿನ ಆಯ್ಕೆ ಮತ್ತು ಸ್ವಯಂಚಾಲಿತ ವೇಳಾಪಟ್ಟಿ ಕಾರ್ಯಗಳಾಗಿವೆ. ಈ ಎಲ್‌ಇಡಿ ಬಲ್ಬ್‌ಗಳು ಅಮೆಜಾನ್ ಮತ್ತು ಸಾಮಾನ್ಯ ಸ್ವರೂಪದ ಚಿಲ್ಲರೆ ಅಂಗಡಿಗಳಂತಹ ಆನ್‌ಲೈನ್ ಮಾಧ್ಯಮಗಳ ಮೂಲಕ ಲಭ್ಯವಿದೆ.

 ಗೂಗಲ್ ಪಿಕ್ಸೆಲ್ 4 ಎ ಭಾರತದಲ್ಲಿ ಬಿಡುಗಡೆ: ಬೆಲೆ, ವೈಶಿಷ್ಟ್ಯತೆ ತಿಳಿದುಕೊಳ್ಳಿ ಗೂಗಲ್ ಪಿಕ್ಸೆಲ್ 4 ಎ ಭಾರತದಲ್ಲಿ ಬಿಡುಗಡೆ: ಬೆಲೆ, ವೈಶಿಷ್ಟ್ಯತೆ ತಿಳಿದುಕೊಳ್ಳಿ

ಬಹು-ಬಣ್ಣದ ಆಯ್ಕೆಗಳು ಸುಮಾರು 16 ಮಿಲಿಯನ್ ಷೇಡ್‌ಗಳನ್ನು ನೀಡುತ್ತವೆ. ಪಾರ್ಟಿ, ಭೋಜನದಿಂದ ಹಿಡಿದು ಮಕ್ಕಳು ಆಡುವ ಪ್ರದೇಶ, ಮನರಂಜನಾ ಕೊಠಡಿಗಳವರೆಗೆ ಬಳಕೆದಾರರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಬೆಳಕಿನ ಸೆಟ್ಟಿಂಗ್‌ಗಳನ್ನು ಹೊಂದಿಸಬಹುದು. ಹೆಚ್ಚುವರಿಯಾಗಿ, ಬಲ್ಬ್ ಪೂರ್ವವಾಗಿ ಸೆಟ್ ಮಾಡುವ ವೈಶಿಷ್ಟ್ಯವನ್ನು ಒಳಗೊಂಡಿರುತ್ತದೆ, ಇದು ದೀಪಗಳನ್ನು ಆನ್ ಮತ್ತು ಆಫ್ ಮಾಡುವುದನ್ನು ಸ್ವಯಂಚಾಲಿತವಾಗಿ ನಿಗದಿಪಡಿಸಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.

Panasonic Launches Wi-Fi Enabled Smart LED Bulb: Controlled Through The App

ಕಂಪನಿಯು ಬಿಡುಗಡೆ ಮಾಡಿದ ಹೇಳಿಕೆ ಪ್ರಕಾರ ಎಲ್ಇಡಿ ಸ್ಮಾರ್ಟ್ ಬಲ್ಬ್ ಮನೆಯೊಳಗೆ ಇಂಧನ ಉಳಿತಾಯವನ್ನು ಹೆಚ್ಚಿಸುತ್ತದೆ ಮತ್ತು ಇದು ದೀರ್ಘ ಬಾಳಿಕೆಗಳೊಂದಿಗೆ ಹೆಚ್ಚು ಸಮರ್ಥನೀಯವಾಗಿಸುತ್ತದೆ ಎಂದು ಹೇಳಿದೆ.

ಗೂಗಲ್ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್‌ನಲ್ಲಿ ಲಭ್ಯವಿರುವ ಪ್ಯಾನಾಸೋನಿಕ್ ಸ್ಮಾರ್ಟ್ ವೈ-ಫೈ ಅಪ್ಲಿಕೇಶನ್ ಮೂಲಕ ಹೊಸ ಸ್ಮಾರ್ಟ್ ವೈ-ಫೈ ಎಲ್ಇಡಿ ಬಲ್ಬ್ ಅನ್ನು ನಿಯಂತ್ರಿಸಬಹುದು. ಗೂಗಲ್ ಅಸಿಸ್ಟೆಂಟ್ ಮತ್ತು ಅಲೆಕ್ಸಾದಿಂದ ಧ್ವನಿ ಆಜ್ಞೆಗಳ ವೈಶಿಷ್ಟ್ಯದ ಮೂಲಕ ಬಲ್ಬ್ ಅನ್ನು ಸಂಪರ್ಕಿಸಬಹುದು ಮತ್ತು ಬಳಸಬಹುದು.

English summary
Panasonic India has launched a new addition to its smart home ecosystem. The company has unveiled a new Smart Wi-Fi LED Bulb.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X