• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೊಬೈಲ್ 'ಪೋರ್ಟ್'(ಎಂಎನ್ಪಿ) ಏನು ಪ್ರಯೋಜನ?

By Mahesh
|

ನವದೆಹಲಿ, ಮಾ.2: ಮೊಬೈಲ್ ನಂಬರ್ ಪೋರ್ಟಬಲಿಟಿಯಿಂದ ಮೊಬೈಲ್ ಬಳಕೆದಾರರು ತಮ್ಮ ನೆಚ್ಚಿನ ಸಂಖ್ಯೆ ಯನ್ನು ಉಳಿಸಿಕೊಳ್ಳಬಹುದಾಗಿದೆ. ಜೊತೆಗೆ ದೇಶದ ಯಾವುದೇ ಮೊಬೈಲ್ ಕಂಪನಿಗೆ ನೀವು ಚಂದಾದಾರರಾಗಬಹುದು. ಭಾರತದಲ್ಲಿ ಎಂಎನ್ ಪಿ ಹೊಸದೇನಲ್ಲ, ಅದರೆ, ಈಗ ಮೇ3ರಿಂದ ರಾಷ್ಟೃವ್ಯಾಪಿ ಜಾರಿಗೊಳ್ಳುವುದರಿಂದ ಗ್ರಾಹಕರಿಗೆ ಅನುಕೂಲವೇ ಹೆಚ್ಚು.

ಸದ್ಯಕ್ಕೆ ಜಾರಿಯಲ್ಲಿರುವ ಮೊಬೈಲ್ ನಂಬರ್ ಪೋರ್ಟಬಿಲಿಟಿ (ಎಂಎನ್‌ಪಿ) ನಿಯಮದ ಪ್ರಕಾರ ಬಳಕೆದಾರರು ಒಂದು ಟೆಲಿಕಾಮ್ ವೃತ್ತದೊಳಗೆ (ಒಂದು ಟೆಲಿಕಾಂ ವೃತ್ತ ಎಂದರೆ ಒಂದು ರಾಜ್ಯ ಅಥವಾ ನಗರಗಳಿಗೆ ಸೀಮಿತ) ಹಳೆಯ ಸಂಖ್ಯೆಗಳನ್ನು ಉಳಿಸಿಕೊಂಡು ಮೊಬೈಲ್ ಸೇವಾ ಪೂರೈಕೆದಾರರನ್ನು ಬದಲಾಯಿಸಲು ಸಾಧ್ಯ. ಹೋಂ ಟೆಲಿಕಾಂ ಸರ್ಕಲ್ ದಾಟಿದರೆ ರೋಮಿಂಗ್ ಚಾರ್ಜ್ ಹಾಗೂ ಹೆಚ್ಚುವರಿ ಎಸ್ ಟಿಡಿ ಕರೆ ದರ ನೀಡಬೇಕಾಗುತ್ತದೆ.

ಉದಾಹರಣೆ: ದೆಹಲಿಯಿಂದ ಬೆಂಗಳೂರಿಗೆ ವರ್ಗಾವಣೆಗೊಳ್ಳುವ ಗ್ರಾಹಕನೊಬ್ಬ ತನ್ನ ವಾಸ್ತವ್ಯವನ್ನು ಬದಲಾಯಿಸಿದ ಮೇಲೆ ದೆಹಲಿಯಲ್ಲಿ ಬಳಸುತ್ತಿದ್ದ ಮೊಬೈಲ್ ಸಂಖ್ಯೆಯನ್ನೇ ಬೆಂಗಳೂರಿನಲ್ಲೂ ಬಳಸಬಹುದು. ಇದಕ್ಕಾಗಿ ಮೊಬೈಲ್ ಸೇವೆ ಪೂರೈಸುವ ಕಂಪೆನಿಯನ್ನು ಬದಲಾಯಿಸಿದರೆ ಸಾಕು.

ಕರ್ನಾಟಕದಲ್ಲಿ ಸೇವೆ ಒದಗಿಸುವ ಯಾವುದೇ ಮೊಬೈಲ್ ಕಂಪೆನಿಗೆ ಪೋರ್ಟ್ ಮಾಡಬಹುದು.ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಹೇಳಿದೆ. 2009ರ ಟೆಲಿಕಮ್ಯೂನಿಕೇಷನ್ ಮೊಬೈಲ್ ಪೋರ್ಟಬಿಲಿಟಿ ನಿಯಂತ್ರಣ ಕಾಯ್ದೆ ತಿದ್ದುಪಡಿ(6ನೇ) ನಂತರ ಟ್ರಾಯ್ ರಾಷ್ಟ್ರವ್ಯಾಪ್ತಿ ಎಂಎನ್ ಪಿ ಸೌಲಭ್ಯ ನೀಡಲು ಮುಂದಾಗಿದೆ.

ಡಿಸೆಂಬರ್ 2014 ಅಂತ್ಯಕ್ಕೆ ಸುಮಾರು 97ಕೋಟಿ ಟೆಲಿಕಾಂ ಗ್ರಾಹಕರು ಚಂದಾದಾರರಿದ್ದಾರೆ. ಸುಮಾರು 35 ಲಕ್ಷ ಮಂದಿ ಎಂಎನ್ ಪಿಗೆ ಅರ್ಜಿ ಸಲ್ಲಿಸಿದ್ದಾರೆ. ಒಟ್ಟಾರೆ ಎಂಎನ್ ಪಿ ಅರ್ಜಿ ಸಲ್ಲಿಸಿದ್ದವರ ಸಂಖ್ಯೆ 14.29 ಕೋಟಿ ದಾಟಿದೆ.

ಏನಿದು ನಂಬರ್ ಪೊರ್ಟೆಬಿಲಿಟಿ?: ಸಿಂಪಲ್ ಆಗಿ ಹೇಳಬೇಕೆಂದರೆ ಹಳೆಯ ಮೊಬೈಲ್ ನಂಬರ್ ಉಳಿಸಿಕೊಂಡು ಹೊಸ ಮೊಬೈಲ್ ಕಂಪನಿಯ ಸೇವೆಯನ್ನು ಪಡೆಯುವುದು. ಅಂದರೆ ಈಗಿನ ಕಂಪನಿ ನೀಡುತ್ತಿರುವ ಸೇವೆ ನಿಮಗೆ ಇಷ್ಟವಾಗದೇ ಇದ್ದರೆ ಅದೇ ನಂಬರ್ ನ ಬೇರೊಂದು ಕಂಪನಿಯ ಸಿಮ್ ಖರೀದಿಸಬಹುದು.

ಈಗ ಮೊಬೈಲ್ ಸೇವಾದಾರ ಕಂಪನಿಗಳು ನೀಡುವ ಆಫರ್ ಗಳು ಒಂದಕ್ಕಿಂತ ಒಂದು ಅತ್ಯುತ್ತಮವಾಗಿವೆ. ಬೇರೊಂದು ಕಂಪನಿಯ ಆಫರ್ ನೋಡಿ ಛೇ ಆ ಸಿಮ್ ನನ್ನಲ್ಲಿರುತ್ತಿದ್ದರೆ? ಎಂಬ ಬಯಕೆ ನಿಮಗಿರಬಹುದು. ಅಥವಾ ಇಂತಹ ಆಫರ್ ಗಳಿಂದಾಗಿ ನೀವು ಹಲವು ಸಿಮ್ ಗಳ ಒಡೆಯರಾಗಿರಬಹುದು. ಇನ್ನು ಮುಂದೆ ಹಳೆಯ ನಂಬರ್ ಉಳಿಸಿಕೊಂಡೇ ನಿಮಗಿಷ್ಟವಾದ ಯಾವುದೇ ಕಂಪನಿಯ ಸಿಮ್ ಖರೀದಿಸಬಹುದು.

ಪೊರ್ಟೆಬಿಲಿಟಿ ಬೇಕಾದರೆ ಹೀಗೆ ಮಾಡಿ

* PORT ಅಂತ ಟೈಪ್ ಮಾಡಿ ಅದರ ಮುಂದೆ ನಿಮ್ಮ ಮೊಬೈಲ್ ಸಂಖೈ ಬರೆದು 1900ಕ್ಕೆ ಕಳಿಸಿ. ನಿಮಗೆ ಅಲ್ಲಿಂದ ಯೂನಿಕ್ಯೂ ಪೊರ್ಟಿಂಗ್ ನಂಬರ್ ಎಸ್ಎಂಎಸ್ ಮೂಲಕ ದೊರಕುತ್ತದೆ.

* ಅಲ್ಲಿ ದೊರಕಿದ ಯೂನಿಕ್ಯೂ ಪೊರ್ಟಿಂಗ್ ನಂಬರ್ ನ್ನು ನಿಮ್ಮ ಹಿಂದಿನ ಮೊಬೈಲ್ ಸೇವಾ ಕಂಪನಿಗೆ ಎಸ್ ಎಂ ಎಸ್ ಮಾಡಿ.

* ಹಳೆಯ ಕಂಪನಿ ನಿಮ್ಮ ದಾಖಲೆ ಪರಿಶೀಲಿಸಿ ಯಾವುದೇ ಬಾಕಿ ಇಲ್ಲವೆಂದು ಪರಿಶೀಲಿಸುತ್ತದೆ. ಎಲ್ಲ ಚುಕ್ತಾ ಮಾಡಿದ ಮೇಲೆ ಬೇರೆ ಸೇವಾದಾರಲ್ಲಿಗೆ ಹೋಗಲು ಅವಕಾಶ ನೀಡುತ್ತದೆ.

* ಹೊಸ ಮೊಬೈಲ್ ಸೇವಾದಾರ ಕಂಪನಿ ನಿಮಗೆ ಎಸ್ಎಂಎಸ್ ಕಳುಹಿಸಿ ಕೊಡುತ್ತದೆ. ನಂತರದ ನಾಲ್ಕು ದಿನಗಳೊಳಗೆ ಈ ಸೇವೆ ನಿಮಗೆ ದೊರಕಬಹುದು.

* ನಿಮ್ಮ ಹಳೆಯ ಸಿಮ್ ಡೆಡ್ ಆದ ಎರಡು ಗಂಟೆಯ ನಂತರ ಸುಮಾರು 19 ರೂಪಾಯಿ ಮತ್ತು ಸೂಕ್ತ ದಾಖಲೆ ನೀಡಿ ಹೊಸ ಕಂಪನಿಯಿಂದ ಸೇವೆ ಪಡೆದುಕೊಳ್ಳಬಹುದು.

ಬ್ರೆಜಿಲ್, ಅಮೆರಿಕ, ಆಸ್ಟ್ರೇಲಿಯಾ, ಹಾಂಕಾಂಗ್ ಸೇರಿದಂತೆ ಹೆಚ್ಚಿನ ದೇಶಗಳಿಗೆ ಈ ಸೇವೆ ಆಗಮಿಸಿ ಹಲವು ವರ್ಷಗಳೇ ಕಳೆದಿವೆ. ಭಾರತದಲ್ಲೂ ಈಗ ಜನಪ್ರಿಯತೆ ಗಳಿಸುತ್ತಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
From May 3, subscribers will be able to retain the same mobile number on relocating to anywhere in India. The Telecom Regulatory Authority of India amended the mobile number portability (MNP) regulations to allow users to change their service provider in any part of the country while retaining the number.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more