ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈ ಅಂತ್ಯಕ್ಕೆ 32.71 ಕೋಟಿ ಪ್ಯಾನ್- ಆಧಾರ್ ಜೋಡಣೆ: ಕೇಂದ್ರ

|
Google Oneindia Kannada News

ನವದೆಹಲಿ, ಆ. 13: ಪ್ಯಾನ್ ಕಾರ್ಡ್‌ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಗಡುವನ್ನು ಮತ್ತೊಮ್ಮೆ ವಿಸ್ತರಣೆ ಮಾಡಲಾಗಿದೆ. ಮಾರ್ಚ್ 31, 2021 ರ ತನಕ ಲಿಂಕ್ ಮಾಡಲು ಅವಕಾಶ ಇರಲಿದೆ. ಈ ನಡುವೆ ಜುಲೈ ತಿಂಗಳ ಅಂತ್ಯಕ್ಕೆ 32.71 ಕೋಟಿ ಪ್ಯಾನ್- ಆಧಾರ್ ಜೋಡಣೆಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. 18 ಕೋಟಿ ಮಂದಿ ಪ್ಯಾನ್- ಆಧಾರ್ ಜೋಡಣೆ ಮಾಡಿಲ್ಲ ಎಂಬ ಮಾಹಿತಿಯನ್ನು ನೀಡಿದೆ.

ಪ್ಯಾನ್ ಮತ್ತು ಆಧಾರ್ ಕಾರ್ಡ್‌ ಲಿಂಕ್ ಆಗದಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಆದರೆ, ಲಿಂಕ್ ಮಾಡಲು ಇನ್ನೂ ಸಾಕಷ್ಟು ಕಾಲಾವಕಾಶವಿದ್ದು, ಸುಲಭವಾಗಿ ಜೋಡಣೆ ಮಾಡಬಹುದು.

ಆಧಾರ್ ಬಳಸಿ ಇ-ಪ್ಯಾನ್ ಕಾರ್ಡನ್ನು ತ್ವರಿತವಾಗಿ ಪಡೆಯುವುದು ಹೇಗೆ?ಆಧಾರ್ ಬಳಸಿ ಇ-ಪ್ಯಾನ್ ಕಾರ್ಡನ್ನು ತ್ವರಿತವಾಗಿ ಪಡೆಯುವುದು ಹೇಗೆ?

2020ರ ಜನವರಿ ವರೆಗಿನ ಅಂಕಿ ಅಂಶಗಳಂತೆ 30.75 ಕೋಟಿಗೂ ಹೆಚ್ಚು ಜನರು ಪ್ಯಾನ್ ಮತ್ತು ಆಧಾರ್ ಕಾರ್ಡ್‌ ಜೋಡಣೆ ಮಾಡಲಾಗಿತ್ತು.

ಆದಾಯ ತೆರಿಗೆ ಇ-ಫೈಲಿಂಗ್ ವೆಬ್‌ಸೈಟ್‌ನಲ್ಲಿ ಜನರು ಬಳಕೆದಾರರಾಗಿ ಹೆಸರು ನೋಂದಣಿ ಮಾಡಿಸಿದ್ದರೆ ಆಧಾರ್ ಮತ್ತು ಪ್ಯಾನ್ ಲಿಂಕ್ ಆಗಿರುತ್ತದೆ. ನೋಂದಣಿ ಆಗಿರದಿದ್ದರೆ ಅದೇ ವೆಬ್‌ಸೈಟ್‌ನಲ್ಲಿನ ಲಿಂಕ್‌ ಮೇಲೆ ಕ್ಲಿಕ್ ಮಾಡಿ ಜೋಡಣೆ ಮಾಡಬಹುದಾಗಿದೆ.

ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಂಡರೆ ಏನ್ ಮಾಡಬೇಕು?

ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಂಡರೆ ಏನ್ ಮಾಡಬೇಕು?

ಒಂದು ವೇಳೆ ನಿಮ್ಮ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಂಡಿದ್ದರೆ ಗಾಬರಿಯಾಗಬೇಡಿ, ಹೊಸ ಆದೇಶದಂತೆ ಪ್ಯಾನ್ ಕಾರ್ಡ್ ಮುಂದಿನ ವರ್ಷ ತನಕ ಚಾಲನೆಯಲ್ಲಿರಲಿದೆ. ಆದರೆ, ಆಧಾರ್ ಜೊತೆ ಜೋಡಿಸಬೇಕು. ಒಂದು ವೇಳೆ ನಿಷ್ಕ್ರಿಯವಾದರೆ ವ್ಯವಹಾರಕ್ಕೆ ಬಳಸುವಂತಿಲ್ಲ. ಆದರೆ ಗುರುತಿನ ಚೀಟಿಯಾಗಿ ಬಳಸಿಕೊಳ್ಳಬಹುದು. ಉದಾಹರಣೆಗೆ ಬ್ಯಾಂಕ್ ಖಾತೆ ತೆರೆಯಲು ಅಥವಾ ಡ್ರೈವಿಂಗ್ ಲೈಸೆನ್ಸ್‌ ಪಡೆಯಲು ಬಳಸಿದರೆ ನಿಮಗೆ ಯಾವುದೇ ದಂಡ ವಿಧಿಸುವುದಿಲ್ಲ. ಆದರೆ ಹಣ ಡೆಪಾಸಿಟ್ ಮಾಡಲು, ಹಣ ವರ್ಗಾವಣೆ ಯಾವುದೇ ಬ್ಯಾಂಕಿಂಗ್ ವ್ಯವಹಾರ ಮಾಡಲು ಸಕ್ರಿಯ ಪ್ಯಾನ್ ಕಾರ್ಡ್ ಅವಶ್ಯಕತೆ ಇದೆ.

ಆಧಾರ್ ಗೆ ಪ್ಯಾನ್ ಕಾರ್ಡ್ ಲಿಂಕ್ ಪರೀಕ್ಷಿಸಿಕೊಳ್ಳಿ

ಆಧಾರ್ ಗೆ ಪ್ಯಾನ್ ಕಾರ್ಡ್ ಲಿಂಕ್ ಪರೀಕ್ಷಿಸಿಕೊಳ್ಳಿ

ಆಧಾರ್ ಗೆ ಪ್ಯಾನ್ ಕಾರ್ಡ್ ಲಿಂಕ್ ಆಗಿದೆಯೇ ಅಥವಾ ಇಲ್ಲವೇ ಎಂದು ಚೆಕ್ ಮಾಡುವುದು ಹೇಗೆ?:
* ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್‌ಸೈಟ್‌ಗೆ ಹೋಗಿ.
* ಮೇಲ್ಭಾಗದ 'ಕ್ವಿಕ್ ಲಿಂಕ್ಸ್' ಮೇಲೆ 'ಲಿಂಕ್ ಆಧಾರ್' ಕ್ಲಿಕ್ ಮಾಡಿ. * ನಂತರ ಸ್ಕ್ರೀನ್ ಮೇಲೆ ಹೊಸ ಪೇಜ್ ತೆರೆಯುತ್ತದೆ.
* ಈ ಪುಟದ ಮೇಲ್ಭಾಗದಲ್ಲಿ ಹೈಪರ್ಲಿಂಕ್ ಇರುತ್ತದೆ, ಅದನ್ನು ಇಂಗ್ಲಿಷ್‌ನಲ್ಲಿ ಬರೆಯಲಾಗಿರುತ್ತದೆ, ನೀವು ಈಗಾಗಲೇ ಆಧಾರ್ ಲಿಂಕ್ ಮಾಡಲು ವಿನಂತಿಸಿದ್ದರೆ ಸ್ಟೇಟಸ್ ಪರಿಶೀಲಿಸಿ ಮೇಲೆ ಕ್ಲಿಕ್ ಮಾಡಿ.
* ಈ ಹೈಪರ್ ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ ನಿಮ್ಮ ಪ್ಯಾನ್ ಮತ್ತು ಆಧಾರ್ ವಿವರಗಳನ್ನು ನೀವು ನಮೂದಿಸಬೇಕಾಗುತ್ತದೆ. *'view ಲಿಂಕ್ ಆಧಾರ್ ಸ್ಥಿತಿ' ಕ್ಲಿಕ್ ಮಾಡಿ. ಅದರ ಫಲಿತಾಂಶದಲ್ಲಿ ಪ್ಯಾನ್ ನಿಮ್ಮ ಆಧಾರ್ ಗೆ ಲಿಂಕ್ ಆಗಿದೆಯೇ ಅಥವಾ ಇಲ್ಲವೇ ಎಂಬುದು ನಿಮಗೆ ತಿಳಿಯುತ್ತದೆ.

ಪ್ರಧಾನಿ ಮೋದಿ ಅವರ ಡಿಜಿಟಲ್ ಇಂಡಿಯಾ ಕಲ್ಪನೆ

ಪ್ರಧಾನಿ ಮೋದಿ ಅವರ ಡಿಜಿಟಲ್ ಇಂಡಿಯಾ ಕಲ್ಪನೆ

ಆದಾಯ ತೆರಿಗೆ ಇಲಾಖೆಯು ಪ್ರಧಾನಿ ಮೋದಿ ಅವರ ಡಿಜಿಟಲ್ ಇಂಡಿಯಾ ಕಲ್ಪನೆಯನ್ನು ಹೆಚ್ಚೆಚ್ಚು ಅನುಷ್ಠಾನಗೊಳಿಸಲು ಡಿಜಿಟಲೀಕರಣಕ್ಕೆ ಒತ್ತು ನೀಡುತ್ತಿದೆ. ಇ-ಪ್ಯಾನ್ ಕಾರ್ಡ್ ಸೌಲಭ್ಯ ಸಂಪೂರ್ಣವಾಗಿ ಉಚಿತವಾಗಿದೆ. ಪ್ಯಾನ್ ಕಾರ್ಡ್ ಕಳೆದುಕೊಂಡವರು ಕೂಡಾ ಸುಲಭವಾಗಿ ಕೆಲ ನಿಮಿಷಗಳಲ್ಲಿ ಬದಲಿ ಪ್ಯಾನ್ ಕಾರ್ಡ್ ಪಡೆದುಕೊಳ್ಳಬಹುದು. ಹಾಲಿ ಪ್ಯಾನ್ ಕಾರ್ಡ್ ಹೊಂದಿರುವವರು ಹಾಗೂ ಹೊಸ ಪ್ಯಾನ್ ಕಾರ್ಡ್ ದಾರರು ಇ ಪ್ಯಾನ್ ಪಡೆದುಕೊಳ್ಳಬಹುದು. ಇದು ಕ್ಯೂಆರ್ ಕೋಡ್ ಅನ್ನು ಹೊಂದಿರುತ್ತದೆ. ಇದರಲ್ಲಿ ಭೌಗೋಳಿಕ ಮಾಹಿತಿ, ಅರ್ಜಿದಾರರನ ಭಾವಚಿತ್ರ ಇರಲಿದೆ. ಎಲ್ಲಾ ಮಾಹಿತಿಯೂ encrypt ಆಗಿರುವುದರಿಂದ ಮಾಹಿತಿ ಸುರಕ್ಷವಾಗಿರಲಿದೆ.

ನಿಗದಿತ ಅವಧಿಯಲ್ಲಿ ಲಿಂಕ್ ಮಾಡದಿದ್ದರೆ?

ನಿಗದಿತ ಅವಧಿಯಲ್ಲಿ ಲಿಂಕ್ ಮಾಡದಿದ್ದರೆ?

ನಿಗದಿತ ಅವಧಿಯಲ್ಲಿ ಮೊದಲು ಆಧಾರ್‌ಗೆ ಲಿಂಕ್ ಮಾಡದಿದ್ದರೆ 10 ಸಾವಿರ ರೂಪಾಯಿಗಳ ದಂಡವನ್ನು ಪಾವತಿಸಲು ಸಿದ್ಧರಾಗಿರಿ. ಆಧಾರ್ ಕಾರ್ಡ್‌ ಜೊತೆಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡದಿದ್ದರೆ ನಿಮ್ಮ ಕಾರ್ಡ್ ನಿಷ್ಕ್ರಿಯವಾಗಲಿದೆ. ಆನಂತರ ಒಂದು ವೇಳೆ ಪ್ಯಾನ್ ಕಾರ್ಡ್ ಬಳಸಿದರೆ 10,000 ರುಪಾಯಿ ದಂಡ ತೆರಬೇಕಾಗುತ್ತದೆ. ಒಂದು ವೇಳೆ ನಿಮ್ಮ ಪ್ಯಾನ್ ಆಧಾರ್ ಲಿಂಕ್ ಆಗದಿದ್ದರೆ ಕಾರ್ಡ್ ನಿಷ್ಕ್ರಿಯವಾಗುತ್ತದೆ. ಈ ಸಂದರ್ಭದಲ್ಲಿ ಹೊಸ ಪ್ಯಾನ್ ಕಾರ್ಡ್ ಅರ್ಜಿ ಸಲ್ಲಿಸುವುದು ಬೇಡ. ಆಧಾರ್ ಜೊತೆ ಲಿಂಕ್ ಮಾಡಿದರೆ ಸಾಕು ಮತ್ತೆ ಪ್ಯಾನ್ ಕಾರ್ಡ್ ಸಕ್ರಿಯವಾಗುತ್ತದೆ.

English summary
As many as 32.71 crore permanent account numbers (PANs) have been linked with biometric ID Aadhaar, the government said on Wednesday. “Over 32.71 crore PANs linked with the Aadhaar,” MyGovIndia said in a tweet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X