ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಎಫೆಕ್ಟ್‌: 68 ವರ್ಷಗಳಲ್ಲಿ ಪಾಕಿಸ್ತಾನದ ಜಿಡಿಪಿ ಮೊದಲ ಬಾರಿಗೆ ಕುಸಿತ

|
Google Oneindia Kannada News

ಇಸ್ಲಮಾಬಾದ್, ಜೂನ್ 12: ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಪಾಕಿಸ್ತಾನದ ಆರ್ಥಿಕತೆಯು ದೊಡ್ಡ ಹಿನ್ನಡೆ ಅನುಭವಿಸಿದೆ. ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಪಾಕಿಸ್ತಾನದ ಆರ್ಥಿಕತೆಯು 68 ವರ್ಷಗಳಲ್ಲಿ ಮೊದಲ ಬಾರಿಗೆ ಕುಸಿದಿದೆ. ಹಣದ ಕೊರತೆ ಮತ್ತು ಆರ್ಥಿಕ ಹಿಂಜರಿತದಿಂದಾಗಿ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ.

Recommended Video

Bengaluru corona cases are getting scarier everyday | Bengaluru | Oneindia Kannada

ಪಾಕಿಸ್ತಾನದ ಜಿಡಿಪಿ 2019-20ನೇ ಹಣಕಾಸು ವರ್ಷದಲ್ಲಿ 0.38 ಪರ್ಸೆಂಟ್‌ರಷ್ಟು ಕುಸಿತ ದಾಖಲಿಸಿದೆ. ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಆರ್ಥಿಕತೆಯು ವ್ಯಾಪಕವಾಗಿ ನಷ್ಟ ಅನುಭವಿಸಿದೆ ಎಂದು ಹಣಕಾಸು ವ್ಯವಹಾರಗಳ ಸಲಹೆಗಾರ ಅಬ್ದುಲ್ ಹಫೀಜ್ ಶೇಖ್ ಆರ್ಥಿಕ ವಿಮರ್ಶೆ ಹೊರಡಿಸಿದ್ದಾರೆ.

ಪಿಒಕೆಯನ್ನು ಭಾರತದ ಭಾಗ ಎಂದು ತೋರಿಸಿದ್ದ ಪಾಕ್ ಪತ್ರಕರ್ತರ ವಜಾಪಿಒಕೆಯನ್ನು ಭಾರತದ ಭಾಗ ಎಂದು ತೋರಿಸಿದ್ದ ಪಾಕ್ ಪತ್ರಕರ್ತರ ವಜಾ

ಪಾಕ್‌ನಲ್ಲಿಯೂ ಮಾರ್ಚ್‌ನಿಂದ ಹಲವಾರು ವಾರಗಳವರೆಗೆ ಲಾಕ್‌ಡೌನ್ ಜಾರಿಗೆ ತರಲಾಗಿತ್ತು. 68 ವರ್ಷಗಳಲ್ಲಿ ಪಾಕಿಸ್ತಾನದ ಆರ್ಥಿಕತೆಯ ಮೊದಲ ಕುಸಿತ ಇದಾಗಿದೆ. ಪಾಕಿಸ್ತಾನದಲ್ಲಿ ಹಣಕಾಸು ವರ್ಷ ಜುಲೈ 1 ರಿಂದ ಜೂನ್ 30 ರವರೆಗೆ.

Pakistan Economy Contracts For First Time In 68 Years Due To Coronavirus

ಪಾಕಿಸ್ತಾನದಲ್ಲಿ ಕೊರೊನಾವೈರಸ್‌ನಿಂದ ಇದುವರೆಗೆ ಸುಮಾರು 1,20,000 ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆ. ಇದು ಪ್ರಸಕ್ತ ಹಣಕಾಸು ವರ್ಷದಲ್ಲಿ ಪಾಕಿಸ್ತಾನದ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಎಕನಾಮಿಕ್ ರಿವ್ಯೂ ಪ್ರಕಾರ, ಕೊರೊನಾ ವೈರಸ್‌ನ ದುಷ್ಪರಿಣಾಮದಿಂದಾಗಿ ಆರ್ಥಿಕತೆಯು 2019-20ರ ಆರ್ಥಿಕ ವರ್ಷದಲ್ಲಿ 0.38 ಪರ್ಸೆಂಟ್‌ರಷ್ಟು ಕುಸಿತವನ್ನು ದಾಖಲಿಸಿದೆ. ಪರಿಶೀಲನಾ ವರದಿಯ ಪ್ರಕಾರ, ಕೃಷಿ ಕ್ಷೇತ್ರವು 2.7 ಪರ್ಸೆಂಟ್‌ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಆದಾಗ್ಯೂ, ಇದರ ಹೊರತಾಗಿ, ಕೈಗಾರಿಕಾ ಮತ್ತು ಸೇವಾ ಕ್ಷೇತ್ರಗಳು ಕುಸಿತ ಕಂಡಿವೆ.

Fact Check: ಸರ್ಕಾರದ ವಿದ್ಯುತ್ ಬಿಲ್ ಕಟ್ಟಲಾಗದ ಪಾಕ್‌ನಿಂದ ಭಾರತಕ್ಕೆ ಆರ್ಥಿಕ ಸಹಾಯFact Check: ಸರ್ಕಾರದ ವಿದ್ಯುತ್ ಬಿಲ್ ಕಟ್ಟಲಾಗದ ಪಾಕ್‌ನಿಂದ ಭಾರತಕ್ಕೆ ಆರ್ಥಿಕ ಸಹಾಯ

ಐಎಂಎಫ್ ಮತ್ತು ವಿಶ್ವಬ್ಯಾಂಕ್ ಪ್ರಕಾರ, ಕೊರೊನಾವೈರಸ್ ಕಾರಣದಿಂದಾಗಿ ಪಾಕಿಸ್ತಾನದ ಆರ್ಥಿಕತೆಯು 2.6 ಪರ್ಸೆಂಟ್‌ರಷ್ಟು ಕುಸಿಯುತ್ತದೆ.

English summary
For the first time in 68 years, Pakistan's economy is set to contract in the outgoing fiscal year with a negative 0.38 per cent due to the adverse impact of the coronavirus pandemic
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X