ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5 ವರ್ಷಗಳಲ್ಲಿ ಇದೇ ಮೊದಲು, ಪತಂಜಲಿ ಉತ್ಪನ್ನ ಮಾರಾಟ ಕುಸಿತ

|
Google Oneindia Kannada News

ನವದೆಹಲಿ, ನವೆಂಬರ್ 22: ಬಾಬಾ ರಾಮ್ ದೇವ್ ಅವರ ಪತಂಜಲಿ ಆಯುರ್ವೇದ್ ಸಂಸ್ಥೆಗಳ ಮಾರಾಟ ಇದೇ ಮೊದಲ ಬಾರಿಗೆ ಕುಸಿತ ಕಂಡಿದೆ. ಎಫ್ಎಂಸಿಜಿ ಕ್ಷೇತ್ರದಲ್ಲಿ ಐದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮಾರಾಟ ಇಳಿಕೆ ಕಂಡಿದೆ.

ಸರಕು ಹಾಗೂ ಸೇವಾ ತೆರಿಗೆ ಜಾರಿಗೆ ಬಂದ ಬಳಿಕ ಉತ್ಪನ್ನಗಳ ವಿತರಣೆ ಜಾಲದಲ್ಲಿನ ವ್ಯತ್ಯಯದಿಂದ ಉತ್ಪನ್ನಗಳು ಬೇಡಿಕೆ ಕಳೆದುಕೊಂಡಿವೆ.

ಆಯುಷ್ ಮಂತ್ರಾಲಯದ ಬಗ್ಗೆ ಬಾಬಾ ರಾಮದೇವ್ ಅಸಮಾಧಾನಆಯುಷ್ ಮಂತ್ರಾಲಯದ ಬಗ್ಗೆ ಬಾಬಾ ರಾಮದೇವ್ ಅಸಮಾಧಾನ

ಸಂಸ್ಥೆಯ ವಾಣಿಜ್ಯ ಉತ್ಪನ್ನಗಳ ಆದಾಯದಲ್ಲಿ ಶೇ 10ರಷ್ಟು ಇಳಿಕೆ ಕಂಡು, ಮಾರ್ಚ್ 2018ರಂತೆ 8,148 ಕೋಟಿ ರುಗೆ ಇಳಿದಿದೆ ಎಂದು ಬ್ಲೂಮ್ ಬರ್ಗ್ ಕೇರ್ ರೇಟಿಂಗ್ ಮೂಲಕ ತಿಳಿದು ಬಂದಿದೆ.

Pain in Patanjali chain: Sales drop first time in five years

ಸ್ಥಾಪನೆಯಾಗಿ ಮೂರರಿಂದ ಐದು ವರ್ಷಗಳಲ್ಲಿ 20,000 ಕೋಟಿ ರು ಆದಾಯ ಗಳಿಕೆ ಗುರಿಯನ್ನು ಯೋಗಗುರು ಬಾಬಾ ರಾಮದೇವ್ ಹೊಂದಿದ್ದರು. 2016ರ ಆರ್ಥಿಕ ವರ್ಷದಲ್ಲಿ 10,000 ಕೋಟಿ ರು ಗಳಿಸಿತ್ತು, 2012ರಲ್ಲಿ 500 ಕೋಟಿ ರು ನೊಂದಿಗೆ ವಹಿವಾಟು ಮುಂದುವರೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಇನ್ನುಮುಂದೆ ಆನ್‌ಲೈನ್ ಮಳಿಗೆಯಲ್ಲೂ ಪತಂಜಲಿ ಉತ್ಪನ್ನ ಲಭ್ಯಇನ್ನುಮುಂದೆ ಆನ್‌ಲೈನ್ ಮಳಿಗೆಯಲ್ಲೂ ಪತಂಜಲಿ ಉತ್ಪನ್ನ ಲಭ್ಯ

ಸಂಸ್ಥೆಯ ವಿಸ್ತರಣೆ, ವಿತರಣೆ, ಮಾರಾಟ ವೆಚ್ಚ, ಜಾಹೀರಾತು ವೆಚ್ಚ, ಪ್ರಚಾರ, ಡೀಲರ್ ರಿಯಾಯಿತಿ, ಕಮಿಷನ್ ಎಲ್ಲವೂ ಕೈಕೊಟ್ಟಿದ್ದರಿಂದ ಆದಾಯ ಗಳಿಕೆಯಲ್ಲಿ ಹಿಂದೆ ಬಿದ್ದಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

English summary
Patanjali Ayurved's sprint to lead the FMCG race has witnessed a setback: sales fell for the first time in five years due to disruption by Goods and Services Tax and a weak distribution network.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X