ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತ್ವರಿತ ಬೆಳವಣಿಗೆ: 9 ನಗರ, 700 ಕಟ್ಟಡ, 40 ಸಾವಿರ ಬೆಡ್- ಓಯೋ ಲೈಫ್

|
Google Oneindia Kannada News

ಬೆಂಗಳೂರು, ನವೆಂಬರ್ 02: ದೇಶದ ಅತಿವೇಗವಾಗಿ ಬೆಳೆಯುತ್ತಿರುವ, ಧೀರ್ಘಾವಧಿ, ಸಂಪೂರ್ಣ ವ್ಯವಸ್ಥಾಪನೆಯ ಮನೆ ಬಾಡಿಗೆ ಸಲ್ಯೂಶನ್ ಕಂಪನಿ ಓಯೊ ಲೈಫ್ ಇಂದು ಈ ಕ್ಷೇತ್ರದ ಅತಿದೊಡ್ಡ ಕಂಪನಿಯಾಗಿ ಹೊರಹೊಮ್ಮಿದೆ. ದೆಹಲಿ, ನೋಯ್ಡಾ, ಗುರುಗಾಂವ್, ಪುಣೆ, ಬೆಂಗಳೂರು, ಕೊಲ್ಕತ್ತಾ, ಹೈದರಾಬಾದ್, ಮುಂಬೈ ಮತ್ತು ಚೆನ್ನೈ ಹೀಗೆ ಒಂಬತ್ತು ನಗರಗಳ 700ಕ್ಕೂ ಹೆಚ್ಚು ವಾಸದ ಕಟ್ಟಡಗಳಲ್ಲಿ 40 ಸಾವಿರಕ್ಕೂ ಅಧಿಕ ಬೆಡ್‍ಗಳನ್ನು ಹೊಂದುವ ಮೂಲಕ ದೇಶದಲ್ಲಿ ತನ್ನ ಹೆಜ್ಜೆಗುರುತು ಬಲಪಡಿಸಿರುವುದನ್ನು ಕಂಪನಿ ತನ್ನ ಮೊದಲ ವಾರ್ಷಿಕೋತ್ಸವ ಸಂದರ್ಭದಲ್ಲಿ ಪ್ರಕಟಿಸಿದೆ.

ಕಂಪನಿಯು ಗೃಹ ಹಾಗೂ ಧೀರ್ಘಾವಧಿ ಬಾಡಿಗೆ ಕಟ್ಟಡಗಳನ್ನು ನೀಡುವ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದ್ದು, ಈ ವಿಶಿಷ್ಟ ಸೇವೆ ದೇಶದಲ್ಲೇ ಮೊಟ್ಟಮೊದಲು, ಯಾವುದೇ ಅಡೆ ತಡೆ ಇಲ್ಲದ್ದು ಹಾಗೂ ತಂತ್ರಜ್ಞಾನ ಚಾಲಿತ ಗೃಹ ಉತ್ಪನ್ನವಾಗಿದೆ ಎಂದು ಕಂಪನಿ ವಿವರಿಸಿದೆ. ಹೊಸ ಸಹಸ್ರಮಾನದ ಪೀಳಿಗೆ ಮತ್ತು ಯುವ ವೃತ್ತಿಪರರನ್ನು ಗುರಿ ಮಾಡಿರುವ ಓಯೊ ಲೈಫ್, ಪ್ರತಿಯೊಂದು ಅಂಶಗಳ ವ್ಯವಸ್ಥಾಪನೆಯನ್ನು ನಿರ್ವಹಿಸುವ, ಆರಾಮದಾಯಕ, ಉತ್ತಮ ಗುಣಮಟ್ಟದ ಜೀವನ ಅನುಭವವನ್ನು ಖಾತರಿಪಡಿಸುತ್ತದೆ. ಮನೆಗಳನ್ನು ಹುಡುಕುವಲ್ಲಿ, ಅದರ ಮೌಲ್ಯಮಾಪನ ಹಾಗೂ ದೈನಂದಿನ ಗೃಹಕೃತ್ಯಗಳ ನಿರ್ವಹಣೆಯ ತೊಡಕುಗಳನ್ನು ನಿವಾರಿಸುತ್ತದೆ.

2018ರ ಅಕ್ಟೋಬರ್ ನಲ್ಲಿ ಆರಂಭವಾದ ಓಯೊ ಲೈಫ್ ಸೇವೆಯಡಿ ಪ್ರಸ್ತುತ ಲಭ್ಯವಿರುವ ಕೊಠಡಿಗಳ ಪೈಕಿ ಶೇಕಡ 85-90ರಷ್ಟು ಪಾಲು ಭರ್ತಿಯಾಗಿದ್ದು, ಶೇಕಡ 95ರಷ್ಟು ವಾಸಿಗಳು ತಮ್ಮ ವಾಸ್ತವ್ಯವನ್ನು ನವೀಕರಿಸುತ್ತಿದ್ದಾರೆ. ಗ್ರಾಹಕರ ಪ್ರಥಮ ಆದ್ಯತೆಯ ಆಯ್ಕೆ ಇದಾಗಿ ಹೊರಹೊಮ್ಮಿದ್ದು, ಪ್ರತಿ ತಿಂಗಳು 5 ರಿಂದ 8 ಸಾವಿರ ಹೊಸ ಬೆಡ್‍ಗಳು ಓಯೊ ಲೈಫ್ ಜಾಲಕ್ಕೆ ಸೇರುತ್ತಿವೆ. ಗುರುಗ್ರಾಮ, ನೋಯ್ಡಾ, ಬೆಂಗಳೂರು ಮತ್ತು ಪುಣೆಯಲ್ಲಿ 100ಕ್ಕೂ ಹೆಚ್ಚು ವಾಸದ ಮನೆಯನ್ನು ಹಾಗೂ 500ಕ್ಕೂ ಹೆಚ್ಚು ಬೆಡ್‍ಗಳನ್ನು ಹೊಂದಿ 2018ರಲ್ಲಿ ಕಾರ್ಯಾರಂಭ ಮಾಡಿತು.

 ಕೇವಲ ಒಂದು ವರ್ಷದಲ್ಲಿ ಅಗ್ರಸ್ಥಾನಕ್ಕೇರಿದ ಸಂಸ್ಥೆ

ಕೇವಲ ಒಂದು ವರ್ಷದಲ್ಲಿ ಅಗ್ರಸ್ಥಾನಕ್ಕೇರಿದ ಸಂಸ್ಥೆ

ಆದರೆ ಆರಂಭವಾಗಿ ಕೇವಲ ಒಂದು ವರ್ಷಗಳಲ್ಲಿ ಕಂಪನಿ ತನ್ನ ಹೆಜ್ಜೆಗುರುತನ್ನು ಮತ್ತೆ ಐದು ಹೊಸ ನಗರಗಳಿಗೆ ವಿಸ್ತರಿಸಿದ್ದು, ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈ ಮತ್ತು ಕೊಲ್ಕತ್ತಾದಲ್ಲಿ ಸೇವೆ ಪದಗಿಸುತ್ತಿದೆ. ಈ ಮೂಲಕ ಧೀಘಾವಧಿ ಬಾಡಿಗೆ ಕಟ್ಟಡ ಸೇವೆ ಒದಗಿಸುವ ಕಂಪನಿಗಳ ಪೈಕಿ ದೇಶದಲ್ಲೇ ಅತಿವೇಗವಾಗಿ ಬೆಳೆಯುತ್ತಿರುವ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಐಐಟಿ ದೆಹಲಿ ಮತ್ತು ಪ್ಲಾಕ್ಸಾ ವಿಶ್ವವಿದ್ಯಾನಿಲಯದ ಫೆಲೋಶಿಪ್ ಯೋಜನೆಗಳ ಜತೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಇತ್ತೀಚೆಗೆ ವಿದ್ಯಾರ್ಥಿ ವಸತಿ ವಲಯದಲ್ಲಿ ಕೂಡಾ ದೇಶದಲ್ಲೇ ಅತಿವೇಗವಾಗಿ ಬೆಳೆಯುತ್ತಿರುವ ಕಂಪನಿ ಎನಿಸಿಕೊಂಡಿದೆ.

ಉದ್ಯಮದ ಇತರ ಕಂಪನಿಗಳಿಗಿಂತ ಭಿನ್ನವಾಗಿ ಓಯೊ ಲೈಫ್ ಇಡೀ ಕಟ್ಟಡವನ್ನು ಲೀಸ್ ಆಧಾರದಲ್ಲಿ ನೀಡಿ ದಾಸ್ತಾನು ನಿಯಂತ್ರಿಸುವ ಮತ್ತು ಎಲ್ಲ ವ್ಯವಹಾರ ಕಾರ್ಯಾಚರಣೆಯನ್ನು ನಿಯಂತ್ರಿಸುವ ಮೂಲಕ ಶ್ರೇಷ್ಠ ಗುಣಮಟ್ಟದ ಸಹಜೀವನ ಅನುಭವವನ್ನು ಖಾತರಿಪಡಿಸುವ ಸಲುವಾಗಿ ಪರಸ್ಪರ ಪ್ರತ್ಯೇಕ ಸ್ಥಳಾವಕಾಶವನ್ನು ಒದಗಿಸುವ, ಸಮುದಾಯ ಕ್ರೀಡೆ ಮತ್ತು ಸಂವಾದ ಸ್ಥಳವನ್ನು ಹೊಂದಿರುತ್ತದೆ. ಕೈಗೆಟುಕುವ ದರದಲ್ಲಿ ಸಿಗುತ್ತಿದೆ.

5999 ರೂಪಾಯಿ ಬಾಡಿಗೆಯಿಂದ ಆರಂಭ

5999 ರೂಪಾಯಿ ಬಾಡಿಗೆಯಿಂದ ಆರಂಭ

ಪ್ರತಿ ಬೆಡ್‍ಗೆ 5999 ರೂಪಾಯಿ ಬಾಡಿಗೆಯಿಂದ ಆರಂಭವಾಗುವ ಓಯೊ ಲೈಫ್ ಕಟ್ಟಡಗಳಲ್ಲಿ ಎಲ್ಲ ಅಗತ್ಯ ಸೌಕರ್ಯಗಳಾದ ವೈ ಫೈ ಸಂಪರ್ಕ, ಟೆಲಿವಿಷನ್, ಫ್ರಿಡ್ಜ್, ಪೀಠೋಪಕರಣಗಳು, ಹವಾನಿಯಂತ್ರಣ ವ್ಯವಸ್ಥೆ, ನಿರಂತರ ಗೃಹ ನಿರ್ವಹಣೆ, ವಿದ್ಯುತ್ ಬ್ಯಾಕಪ್, ಸಿಸಿ ಟಿವಿ ಕಣ್ಗಾವಲು ಮತ್ತು ದಿನದ 24 ಗಂಟೆಗಳ ಕಾಲವೂ ಕೇಟರಿಂಗ್ ಸೇವೆಯನ್ನು ಹೊಂದಿರುತ್ತದೆ. ಧೀರ್ಘಾವಧಿ ಬಾಡಿಗೆ ಮನೆ ಕ್ಷೇತ್ರದಲ್ಲಿನ ಪೂರೈಕೆ ಮತ್ತು ಬೇಡಿಕೆಯ ನಡುವಿನ ಅಂತರವನ್ನು ನಿವಾರಿಸುವಲ್ಲಿ ಓಯೊ ಲೈಫ್ ಪ್ರಮುಖ ಪಾತ್ರ ವಹಿಸುತ್ತದೆ. ಅಧಿಕ ಮೊತ್ತದ ಠೇವಣಿ, ನಿರ್ಬಂಧಿತ ವೇಳಾಪಟ್ಟಿ, ಸುರಕ್ಷಾ ಮೂಲಸೌಕರ್ಯಗಳ ಕೊರತೆ, ಊಹಿಸಲು ಅಸಾಧ್ಯವಾದ ಜೀವನ ಸ್ಥಿತಿ, ಪೀಠೋಪಕರಣಗಳ ಮೇಲಿನ ವೆಚ್ಚ, ನಿರ್ವಹಣೆ ಮತ್ತು ವಿಶ್ವಾಸಾರ್ಹವಲ್ಲದ ದೈನಂದಿನ ಸೌಕರ್ಯಗಳ ಸಮಸ್ಯೆಯನ್ನು ಇದು ತಪ್ಪಿಸುತ್ತದೆ.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೋಹಿತ್ ಕಪೂರ್

ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೋಹಿತ್ ಕಪೂರ್

ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೋಹಿತ್ ಕಪೂರ್, "ಓಯೊ ಲೈಫ್ ಪರಿಕಲ್ಪನೆಯು ನಮ್ಮ ಮೌಲಿಕ ಗ್ರಾಹಕರಿಂದ ಮತ್ತು ಕಟ್ಟಡಗಳ ಮಾಲೀಕರಿಂದ ಪಡೆದ ಅಭಿಪ್ರಾಯ ಮತ್ತು ಬೇಡಿಕೆಗಳನ್ನು ಆಧರಿಸಿದೆ ಹಾಗೂ ಅಧಿಕ ಮೊತ್ತದ ಠೇವಣಿ, ನಿಗದಿತ ಅವಧಿಯೊಳಗೆ ಹಿಂದೆ ಸರಿಯಲು ಅವಕಾಶವಿಲ್ಲದಿರುವುದು, ಪಾರದರ್ಶಕವಲ್ಲದ ಪಾವತಿಗಳು ಮತ್ತು ಸೌಕರ್ಯಗಳ ಕೊರತೆಯಂಥ ಸಮಸ್ಯೆಗಳನ್ನು ನಿವಾರಿಸಿದೆ. ಓಯೊ ಲೈಫ್‍ಗೆ ನಿರೀಕ್ಷೆಗೂ ಮೀರಿದ ಸ್ಪಂದನೆ ಭಾರತದಲ್ಲಿ ದೊರಕಿರುವುದಕ್ಕೆ ನಮಗೆ ಅತೀವ ಸಂತಸವಿದೆ. ಈ ಮೈಲುಗಲ್ಲನ್ನು ಕ್ಷಿಪ್ರ ಅವಧಿಯಲ್ಲಿ ಸಾಧಿಸಿರುವುದಕ್ಕೆ ನಮಗೆ ಹೆಮ್ಮೆ ಎನಿಸುತ್ತಿದೆ. 2019ನೇ ಇಸ್ವಿಯ ಕೊನೆಯ ಒಳಗಾಗಿ ದೇಶದಲ್ಲಿ ಒಂದು ಲಕ್ಷ ಬೆಡ್ ಒದಗಿಸುವ ಗುರಿ ನಮ್ಮದು. ಪ್ರತಿಯೊಬ್ಬರಿಗೂ ಗುಣಮಟ್ಟದ ಜೀವನ ಸ್ಥಳವನ್ನು, ಅನುಭವವನ್ನು ಎಲ್ಲೆಡೆಯೂ ಕಲ್ಪಿಸುವ ಕಂಪನಿಯ ಗುರಿಗೆ ಪೂರಕವಾಗಿ ಈ ಪ್ರಗತಿಯ ಗುರಿ ಹಾಕಿಕೊಳ್ಳಲಾಗಿದೆ" ಎಂದು ಹೇಳಿದ್ದಾರೆ.

ಓಯೊ ಲೈಫ್ ವಸತಿ ಸೌಲಭ್ಯ

ಓಯೊ ಲೈಫ್ ವಸತಿ ಸೌಲಭ್ಯ

ಓಯೊ ಲೈಫ್ ವಸತಿ ಸೇವೆಯು ಎಲ್ಲ ಅಗತ್ಯ ಮೂಲಸೌಕರ್ಯಗಳಾದ ವೈ ಫೈ ಸಂಪರ್ಕ, ಟೆಲಿವಿಷನ್, ಫ್ರಿಡ್ಜ್, ಪೀಠೋಪಕರಣಗಳು, ಹವಾನಿಯಂತ್ರಣ ವ್ಯವಸ್ಥೆ, ನಿರಂತರ ಗೃಹ ನಿರ್ವಹಣೆ, ವಿದ್ಯುತ್ ಬ್ಯಾಕಪ್, ಸಿಸಿ ಟಿವಿ ಕಣ್ಗಾವಲು ಮತ್ತು ದಿನದ 24 ಗಂಟೆಗಳ ಕಾಲವೂ ಕೇಟರಿಂಗ್ ಸೇವೆಯನ್ನು ಹೊಂದಿರುತ್ತದೆ. ಇದರ ಜತೆಗೆ ನಿವಾಸಿಗಳಿಗೆ ಯಾವುದೇ ಸಂದರ್ಭದಲ್ಲಿ ಅಥವಾ ಸಮಸ್ಯೆಗಳಿದ್ದಾಗ ಓಯೊ ಬೆಂಬಲ ಸೇವೆಯು ನಿರಂತರವಾಗಿ ಲಭ್ಯ. ಯುವ ಹಾಗೂ ಸದಾ ಸಕ್ರಿಯವಾಗಿರುವ ಪೀಳೀಗೆಯ ಆದ್ಯತೆಗಳನ್ನು ಗಮನದಲ್ಲಿರಿಸಿಕೊಂಡು ಈ ವಿಶೇಷ ಯೋಜನೆ ಆರಂಭಿಸಲಾಗಿದ್ದು, ಇದು ಆರಾಮ, ಅನುಕೂಲತೆ ಎರಡಕ್ಕೂ ಪೂರಕವಾಗಲಿದೆ. ಈ ಮೂಲಕ ಯುವ ಸೃಜನಶೀಲ ಮನಸ್ಸುಗಳು ತಮ್ಮ ಒಲವಿನ ಕ್ಷೇತ್ರವನ್ನು ಬೆನ್ನಟ್ಟಲು ಸಹಕಾರಿಯಾಗಲಿದೆ. ಓಯೊ ಲೈಫ್, ದೆಹಲಿ, ನೋಯ್ಡಾ, ಗುರುಗಾಂವ್, ಪುಣೆ, ಬೆಂಗಳೂರು, ಕೊಲ್ಕತ್ತಾ, ಹೈದರಾಬಾದ್, ಮುಂಬೈ ಮತ್ತು ಚೆನ್ನೈ ಹೀಗೆ ಒಂಬತ್ತು ನಗರಗಳಲ್ಲಿ ಅಸ್ತಿತ್ವ ಹೊಂದಿದೆ.

English summary
OYO LIFE emerges as the largest long-term co-living player in India in just one year since launch. OYO LIFE announced that it has strengthened its footprint in the country with 40,000+ live beds and 700+ live buildings across 9 cities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X