ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತಿ ಆಶಾವಾದಿ ಬ್ಯಾಂಕ್‌ಗಳೇ ಕೆಟ್ಟ ಸಾಲಕ್ಕೆ ಹೊಣೆಗಾರರು: ರಘುರಾಂ ರಾಜನ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 11: ಕೆಟ್ಟ ಸಾಲದ ಪ್ರಮಾಣ ಮಿತಿ ಮೀರಿ ಹೆಚ್ಚಲು ಅತಿ ಆಶಾವಾದಿ ಬ್ಯಾಂಕರ್‌ಗಳು, ಸರ್ಕಾರದ ನೀತಿ ನಿರ್ಣಯದ ವಿಳಂಬ ಮತ್ತು ಆರ್ಥಿಕತೆಯ ಬೆಳವಣಿಗೆಯಲ್ಲಿನ ಬದಲಾವಣೆಗಳು ಕಾರಣ ಎಂದು ಆರ್‌ಬಿಐ ಮಾಜಿ ಗವರ್ನರ್ ರಘುರಾಂ ರಾಜನ್ ಸಂಸದೀಯ ಸಮಿತಿಗೆ ತಿಳಿಸಿದ್ದಾರೆ.

ಅಂದಾಜು ಸಮಿತಿಯ ಅಧ್ಯಕ್ಷ ಮುರಳಿ ಮನೋಹರ್ ಜೋಶಿ ಅವರಿಗೆ ಬರೆದಿರುವ ಪತ್ರದಲ್ಲಿ ರಾಜನ್, ಯುಪಿಎ ಮತ್ತು ಎನ್‌ಡಿಎ ಸರ್ಕಾರಗಳ ಅವಧಿಯಲ್ಲಿ ಕಲ್ಲಿದ್ದಲು ಗಣಿಗಳ ಹಂಚಿಕೆ ಅವ್ಯವಹಾರದ ಕುರಿತ ತನಿಖೆಯ ವಿಳಂಬದಂತಹ ವಿವಿಧ ಸರ್ಕಾರಿ ಸಮಸ್ಯೆಗಳು ಕೂಡ ಇದ್ದಕ್ಕೆ ಕಾರಣ ಎಂದು ಹೇಳಿದ್ದಾರೆ.

ಹರಿದ ನೋಟು ಬದಲಾವಣೆಗೆ ಹೊಸ ನಿಯಮ ಬಿಡುಗಡೆ ಮಾಡಿದ ಆರ್‌ಬಿಐಹರಿದ ನೋಟು ಬದಲಾವಣೆಗೆ ಹೊಸ ನಿಯಮ ಬಿಡುಗಡೆ ಮಾಡಿದ ಆರ್‌ಬಿಐ

2006-2008ರ ಅವಧಿಯಲ್ಲಿ ಆರ್ಥಿಕ ಬೆಳವಣಿಗೆ ಪ್ರಬಲವಾಗಿದ್ದಾಗ ಹೆಚ್ಚು ಪ್ರಮಾಣದಲ್ಲಿ ಕೆಟ್ಟ ಸಾಲಗಳು ಸೃಷ್ಟಿಯಾಗಿದ್ದವು. ವಿದ್ಯುತ್ ಸ್ಥಾವರದಂತಹ ಹಳೆಯ ಮೂಲಸೌಕರ್ಯ ಯೋಜನೆಗಳು ಸೂಕ್ತ ಸಮಯ ಮತ್ತು ಬಜೆಟ್‌ಗೆ ಅನುಗುಣವಾಗಿ ಪೂರ್ಣಗೊಂಡಿದ್ದವು.

Over optimistic bankers responsible for bad loans: Raghuram Rajan

ಈ ಸಮಯದಲ್ಲಿ ಬ್ಯಾಂಕುಗಳು ಪ್ರಮಾದಗಳನ್ನೆಸಗಿದ್ದವು. ಹಿಂದಿನ ಬೆಳವಣಿಗೆ ಮತ್ತು ಚಟುವಟಿಕೆಗಳನ್ನು ಭವಿಷ್ಯದಲ್ಲಿಯೂ ನಿರೀಕ್ಷಿಸಿದ್ದವು. ಹೀಗಾಗಿ ಯೋಜನೆಗಳ ಮೇಲಿನ ಅಧಿಕ ಹೂಡಿಕೆ ಹಾಗೂ ಕಡಿಮೆ ಈಕ್ವಿಟಿಯನ್ನು ಒಪ್ಪಿಕೊಳ್ಳಲು ಉತ್ಸುಕವಾಗಿದ್ದವು. ಕೆಲವೊಮ್ಮೆ ಬ್ಯಾಂಕುಗಳು ಪ್ರಮೋಟರ್‌ಗಳ ಹೂಡಿಕೆ ಬ್ಯಾಂಕುಗಳ ಯೋಜನಾ ವರದಿಯ ಆಧಾರದಲ್ಲಿ ಸಾಲ ನೀಡಲು ಸಹಿ ಹಾಕುತ್ತಿದ್ದವು.

ರೆಪೋದರ ಏರಿಕೆ ನಿರೀಕ್ಷೆ, ಮತ್ತೆ ಗೃಹ, ವಾಹನ ಸಾಲ ಮೇಲಕ್ಕೆ?ರೆಪೋದರ ಏರಿಕೆ ನಿರೀಕ್ಷೆ, ಮತ್ತೆ ಗೃಹ, ವಾಹನ ಸಾಲ ಮೇಲಕ್ಕೆ?

ಆದರೆ, ನಿರೀಕ್ಷೆ ಮಾಡಿದ ರೀತಿಯಲ್ಲಿ ಬೆಳವಣಿಗೆಆಗಲಿಲ್ಲ. ಜಾಗತಿಕ ಹಣಕಾಸು ಬಿಕ್ಕಟ್ಟಿನ ಬೆನ್ನಲ್ಲೇ ಪ್ರಬಲ ಜಾಗತಿಕ ಬೆಳವಣಿಗೆ ಕುಂಠಿತವಾಯಿತು. ಇದು ಭಾರತಕ್ಕೂ ವಿಸ್ತರಿಸಿತು.

'ಎನ್ ಪಿಎದಿಂದ ಆರ್ಥಿಕತೆಗೆ ಹೊಡೆತ ಹೊರತು ಅಪನಗದೀಕರಣದಿಂದಲ್ಲ''ಎನ್ ಪಿಎದಿಂದ ಆರ್ಥಿಕತೆಗೆ ಹೊಡೆತ ಹೊರತು ಅಪನಗದೀಕರಣದಿಂದಲ್ಲ'

ವಸೂಲಾಗದ ಸಾಲದ (ಎನ್‌ಪಿಎ) ಕುರಿತ ಬ್ಯಾಂಕರ್‌ಗಳು ಮತ್ತು ಹೂಡಿಕೆದಾರರ ಆಸಕ್ತಿ ಕೂಡ ಇದಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ.

English summary
RBI former governer Raghuram Rajan said that, over-optimistic bankers, slowdown in government decision making process contributed mainly to the increase in bad loans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X