• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗೂಗಲ್‌ನಲ್ಲಿ ಕಿರುಕುಳ: ಸುಂದರ್ ಪಿಚೈಗೆ 500 ಉದ್ಯೋಗಿಗಳ ಬಹಿರಂಗ ಪತ್ರ

|
Google Oneindia Kannada News

ನವದೆಹಲಿ, ಏಪ್ರಿಲ್ 10: ಕಂಪೆನಿಯಲ್ಲಿ ಕಿರುಕುಳ ನೀಡುತ್ತಿದ್ದು, ಕಿರುಕುಳ ನೀಡುವವರ ರಕ್ಷಣೆಯನ್ನು ನಿಲ್ಲಿಸುವಂತೆ 500 ಕ್ಕೂ ಹೆಚ್ಚು ಗೂಗಲ್ ಉದ್ಯೋಗಿಗಳು ಆಲ್ಫಾಬೆಟ್ ಮತ್ತು ಗೂಗಲ್ ಸಿಇಒ ಸುಂದರ್ ಪಿಚೈ ಅವರಿಗೆ ಬಹಿರಂಗಪತ್ರ ಬರೆಸಿದ್ದಾರೆ.

ಈ ಬಹಿರಂಗ ಪತ್ರ 'ಮೀಡಿಯಂ'ನಲ್ಲಿ ಪ್ರಕಟವಾಗಿದ್ದು, ಕಂಪೆನಿಯಲ್ಲಿ ಕಿರುಕುಳ ಎದುರಿಸುತ್ತಿರುವ ಉದ್ಯೋಗಿಗಳಿಗೆ ಸುರಕ್ಷಿತ ವಾತಾವರಣ ಒದಗಿಸುವಂತೆ ಪಿಚೈ ಅವರನ್ನು ಒತ್ತಾಯಿಸಿದ್ದಾರೆ. ಗೂಗಲ್ ತಮ್ಮ ಮೇಲಿನ ಕಿರುಕುಳ ಪ್ರಕರಣವನ್ನು ಹೇಗೆ ನಿರ್ವಹಿಸಿತ್ತು ಎಂಬ ಬಗ್ಗೆ ಗೂಗಲ್‌ನ ಮಾಜಿ ಎಂಜಿನಿಯರ್ ಎಮಿ ನೀಟ್‌ಫೀಲ್ಡ್ ಅವರು 'ದಿ ನ್ಯೂಯಾರ್ಕ್ ಟೈಮ್ಸ್‌'ನಲ್ಲಿ ಲೇಖನ ಬರೆದ ಕೆಲವು ದಿನಗಳ ಬಳಿಕ ಈ ಪತ್ರ ಬರೆಯಲಾಗಿದೆ.

ಮಾರುವೇಷದಲ್ಲಿ ಬಳಕೆದಾರರ ದತ್ತಾಂಶ ಕದಿಯುತ್ತಿರುವ ಗೂಗಲ್ ವಿರುದ್ಧ ಮೊಕದ್ದಮೆಮಾರುವೇಷದಲ್ಲಿ ಬಳಕೆದಾರರ ದತ್ತಾಂಶ ಕದಿಯುತ್ತಿರುವ ಗೂಗಲ್ ವಿರುದ್ಧ ಮೊಕದ್ದಮೆ

ಎಮಿ ನೀಟ್‌ಫೀಲ್ಡ್ ಅವರನ್ನು ಹೇಗೆ ತಮ್ಮ ಕಿರುಕುಳದಾರನ ಪಕ್ಕವೇ ಕೂರುವಂತೆ ಮಾಡಲಾಗಿತ್ತು ಎಂಬುದನ್ನು 500ಕ್ಕೂ ಅಧಿಕ ಉದ್ಯೋಗಿಗಳು ಸಹಿ ಹಾಕಿರುವ ಬಹಿರಂಗ ಪತ್ರದಲ್ಲಿ ಉಲ್ಲೇಖಿಸಲಾಗಿದೆ. 'ಗೂಗಲ್‌ನಲ್ಲಿ ಕೆಲಸ ಮಾಡಿದ ಬಳಿಕ ಒಂದು ಕೆಲಸವನ್ನು ನಾನು ಪ್ರೀತಿಸಲು ಅವಕಾಶವನ್ನೇ ನೀಡಿಲ್ಲ' ಎಂದು ಬರೆದಿದ್ದ ಎಮಿ, ತಮ್ಮನ್ನು ಕಿರಿಕುಳದಾರನ ಪಕ್ಕವೇ ಕೂರುವಂತೆ ಮತ್ತು ಅವರೊಂದಿಗೆ ಪದೇ ಪದೇ ಮುಖಾಮುಖಿ ಸಭೆ ನಡೆಸುವಂತೆ ಒತ್ತಡ ಹೇರಲಾಗುತ್ತಿತ್ತು ಎಂಬುದನ್ನು ವಿವರಿಸಿದ್ದರು. ಮುಂದೆ ಓದಿ.

ಇತರರಿಗೂ ಇದೇ ಅನುಭವ

ಇತರರಿಗೂ ಇದೇ ಅನುಭವ

'ಅವರೊಂದಿಗೆ ನಾಟಕ ಮಾಡಿಕೊಂಡು ಕೆಲಸ ಮಾಡಲು ನನ್ನಿಂದ ಸಾಧ್ಯವಿರಲಿಲ್ಲ. ನಾನು ಕೌನ್ಸೆಲಿಂಗ್ ಪಡೆಯಬಹುದು ಅಥವಾ ಮನೆಯಿಂದ ಕೆಲಸ ಮಾಡುವ ಅವಕಾಶ ಅಥವಾ ರಜೆ ಪಡೆಯಬಹುದು ಎಂದು ತನಿಖೆ ನಡೆಸಿದವರು ಸಲಹೆ ನೀಡಿದ್ದರು. ಆದರೆ ಜನಾಂಗೀಯ ನಿಂದನೆ ಮತ್ತು ಲೈಂಗಿಕ ಕಿರುಕುಳ ಎದುರಿಸಿದ ಇತರೆ ಉದ್ಯೋಗಿಗಳಿಗೂ ಗೂಗಲ್ ಇದೇ ರೀತಿಯ ಪ್ರತಿಕ್ರಿಯೆ ನೀಡಿತ್ತು ಎನ್ನುವುದು ಬಳಿಕ ಗೊತ್ತಾಗಿತ್ತು' ಎಂದು ಆಕೆ ಬರೆದಿದ್ದರು.

ಗೂಗಲ್ ಸಂಸ್ಥೆ ಸಿಇಒ ಸುಂದರ್ ಪಿಚ್ಚೈ ವಿರುದ್ಧ ಎಫ್‌ಐಆರ್ ದಾಖಲಿಸಿ ಬಳಿಕ ಕೈಬಿಟ್ಟ ವಾರಾಣಸಿ ಪೊಲೀಸರುಗೂಗಲ್ ಸಂಸ್ಥೆ ಸಿಇಒ ಸುಂದರ್ ಪಿಚ್ಚೈ ವಿರುದ್ಧ ಎಫ್‌ಐಆರ್ ದಾಖಲಿಸಿ ಬಳಿಕ ಕೈಬಿಟ್ಟ ವಾರಾಣಸಿ ಪೊಲೀಸರು

ಕಿರುಕುಳ ನೀಡಿದವರಿಗೆ ರಕ್ಷಣೆ

ಕಿರುಕುಳ ನೀಡಿದವರಿಗೆ ರಕ್ಷಣೆ

ನೀಟ್‌ಫೀಲ್ಡ್ ಅವರ ಪ್ರಕರಣ ಮೊದಲೇನಲ್ಲ. ಕಂಪೆನಿಯು ಕಿರುಕುಳಕ್ಕೆ ಒಳಗಾದ ವ್ಯಕ್ತಿಗೆ ರಕ್ಷಣೆ ನೀಡುವ ಬದಲು ಕಿರುಕುಳ ನೀಡುವವರನ್ನೇ ರಕ್ಷಿಸುವ ಇತಿಹಾಸವನ್ನು ಹೊಂದಿದೆ. ಕಿರುಕುಳವಾಗುತ್ತಿದೆ ಎಂದು ಮಾಹಿತಿ ನೀಡುವ ಉದ್ಯೋಗಿಗೆ ತೀವ್ರ ಕೆಲಸದ ಹೊರೆ ನೀಡಲಾಗುತ್ತದೆ. ಹೀಗಾಗಿ ಆಲ್ಫಾಬೆಟ್‌ಅನ್ನು ಬಿಟ್ಟು ಹೊರನಡೆಯುತ್ತಾರೆ. ಆದರೆ ಕಿರುಕುಳ ನೀಡುವಾತ ಉಳಿದುಕೊಳ್ಳುತ್ತಾರೆ. ಅಥವಾ ಆತನ ವರ್ತನೆಗೆ ಬಹುಮಾನ ನೀಡಲಾಗುತ್ತದೆ ಎಂದು ಪಿಚೈ ಅವರಿಗೆ ಬರೆದ ಪತ್ರದಲ್ಲಿ ಆರೋಪಿಸಲಾಗಿದೆ.

ಆರೋಪಕ್ಕೆ ಒಳಗಾದವರಿಗೆ ಭಾರಿ ಮೊತ್ತ

ಆರೋಪಕ್ಕೆ ಒಳಗಾದವರಿಗೆ ಭಾರಿ ಮೊತ್ತ

ತನ್ನೊಂದಿಗೆ ಮೌಖಿಕ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಡ ಹೇರಿದ್ದರು ಎಂದು ಮಹಿಳೆಯಿಂದ ಆರೋಪಕ್ಕೆ ಒಳಗಾಗಿದ್ದ ಆಂಡ್ರಾಯ್ಡ್ ಮೊಬೈಲ್ ಸಾಫ್ಟ್‌ವೇರ್ ತಯಾರಕ ಆಂಡಿ ರುಬಿನ್ ಅವರಿಗೆ 90 ಮಿಲಿಯನ್ ಡಾಲರ್ ಎಕ್ಸಿಟ್ ಪ್ಯಾಕೇಜ್ ನೀಡಲಾಗಿತ್ತು. ಲೈಂಗಿಕ ದೌರ್ಜನ್ಯದ ಕುರಿತಾದ ವಿಚಾರಣೆ ಬಳಿಕ ರಾಜೀನಾಮೆ ನೀಡಿದ್ದ ಅಮಿತ್ ಸಿಂಘಾಲ್ ಅವರಿಗೆ 35 ಮಿಲಿಯನ್ ಡಾಲರ್ ನೀಡಲಾಗಿತ್ತು.

2018ರಲ್ಲಿಯೂ ಪ್ರತಿಭಟನೆ

2018ರಲ್ಲಿಯೂ ಪ್ರತಿಭಟನೆ

2018ರಲ್ಲಿ ಕೂಡ 20,000ಕ್ಕೂ ಅಧಿಕ ಗೂಗಲ್ ಉದ್ಯೋಗಿಗಳು ಲೈಂಗಿಕ ಕಿರುಕುಳ ಪ್ರಕರಣ ಮತ್ತು ಕಿರುಕುಳದಾರರ ರಕ್ಷಣೆ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಆದರೆ ಇದುವರೆಗೂ ಗೂಗಲ್‌ನ ಕಾರ್ಯಾಚರಣೆ ಸ್ವರೂಪದಲ್ಲಿ ಬದಲಾವಣೆಯಾಗಿಲ್ಲ ಎಂದು ಪತ್ರ ಬಹಿರಂಗಪಡಿಸಿದೆ.

ಗೂಗಲ್ ನಿರಾಕರಣೆ

ಗೂಗಲ್ ನಿರಾಕರಣೆ

ಈ ಆರೋಪಗಳನ್ನು ಗೂಗಲ್ ತಳ್ಳಿಹಾಕಿದೆ. ನಮ್ಮ ಒಟ್ಟಾರೆ ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ಸುಧಾರಣೆ ತಂದಿದ್ದೇವೆ. ಉದ್ಯೋಗಿಗಳ ಸಮಸ್ಯೆಯನ್ನು ಬಗೆಹರಿಸಲು ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಅವರ ಕಳವಳಗಳನ್ನು ನಿರ್ವಹಿಸಲು ಮತ್ತು ತನಿಖೆ ನಡೆಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅದು ಸಮರ್ಥಿಸಿಕೊಂಡಿದೆ.

English summary
Over 500 employees of Google writes an open letter to Google CEO Sundar Pichai agaist harassment in company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X