ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಬೋರ್ಗಿನಿ ಕಾರು ಖರೀದಿಯಲ್ಲಿ ಬೆಂಗಳೂರಿಗರು ಮುಂದು!

|
Google Oneindia Kannada News

ಬೆಂಗಳೂರು, ಜನವರಿ 13: ಭಾರತದಲ್ಲಿ ಆರ್ಥಿಕ ಕುಸಿತದ ಪರಿಣಾಮವಾಗಿ ಆಟೋಮೊಬೈಲ್ ಕ್ಷೇತ್ರಕ್ಕೆ ಭಾರಿ ಹೊಡೆತ ಬಿದ್ದಿದೆ. ಆದರೆ, ಭಾರತದಲ್ಲಿ ಐಷಾರಾಮಿ ಕಾರುಗಳ ಖರೀದಿ ಜೋರಾಗಿದ್ದು, ದಕ್ಷಿಣ ಭಾರತದ ಮೂರು ನಗರಗಳ ಕಾರುಪ್ರಿಯರೇ ಶೇ 50ರಷ್ಟು ವಾಹನ ಖರೀದಿಸುತ್ತಿದ್ದಾರೆ ಎಂಬ ಅಂಕಿ ಅಂಶ ಹೊರಬಂದಿದೆ.

ಐಎಎನ್ಎಸ್ ಸಂಸ್ಥೆಯೊಡನೆ ಮಾತನಾಡಿದ ಲಂಬೋರ್ಗಿನಿ ಇಂಡಿಯಾ ಮುಖ್ಯಸ್ಥ ಶರದ್ ಅಗರವಾಲ್, ಲಂಬೋರ್ಗಿನಿ ಖರೀದಿಯಲ್ಲಿ ದಕ್ಷಿಣ ಭಾರತ ಮುಂದಿದೆ ಅದರಲ್ಲೂ ಬೆಂಗಳೂರು ಮುಂಚೂಣಿಯಲ್ಲಿದೆ. ಸೂಪರ್ ಕಾರ್, ಐಷಾರಾಮಿ ಕಾರ್ ಸಂಗ್ರಹದ ಕ್ರೇಜ್ ಈ ಭಾಗದಲ್ಲಿ ಹೆಚ್ಚಿದೆ ಎಂದಿದ್ದಾರೆ.

2019ರಲ್ಲಿ ಒಂದು ಕಾರು ಮಾತ್ರ ಸೇಲ್, ನ್ಯಾನೋ ಉತ್ಪಾದನೆ ಸ್ಥಗಿತ2019ರಲ್ಲಿ ಒಂದು ಕಾರು ಮಾತ್ರ ಸೇಲ್, ನ್ಯಾನೋ ಉತ್ಪಾದನೆ ಸ್ಥಗಿತ

ಭಾರತದ ಇತರೆಡೆಗೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಮಾರುಕಟ್ಟೆ ತ್ವರಿತಗತಿಯಲ್ಲಿ ವಿಸ್ತರಣೆಯಾಗುತ್ತಿದೆ. ಐಟಿ ಹಬ್ ಹೆಚ್ಚಾಗಿರುವ ಕಾರಣವೂ ಇದಕ್ಕೆ ಪೂರಕವಾಗಿರಬಹುದು. ಬೆಂಗಳೂರು, ಹೈದರಾಬಾದ್ ಹಾಗೂ ಚೆನ್ನೈನಗರದಲ್ಲಿನ ಕಾರುಪ್ರಿಯರಿಗೆ ಲಂಬೋರ್ಗಿನಿ ಕ್ರೇಜ್ ಹೆಚ್ಚಿದೆ.

Over 50% of Lamborghini sales in India come from 3 major cities in the south

ಬೆಂಗಳೂರು ನಮಗೆ ಮುಖ್ಯ ಕೇಂದ್ರವಾಗಿದ್ದು, ವಿದೇಶಿ ನೇರ ಬಂಡವಾಳ ಹೂಡಿಕೆ(ಎಫ್ ಡಿಐ) ಇಲ್ಲಿ ಸಾಧ್ಯವಾಗಿರುವುದರಿಂದ ವ್ಯಾಪಾರ, ವಹಿವಾಟು ಸುಗುಮವಾಗಿದೆ ಎಂದಿದ್ದಾರೆ.

63 ನಿಯಮಿತ ಆವೃತ್ತಿಯ ಅವೆಂಟಡರ್ ಎಸ್ ವಿ ಜೆ ಕಾರುಗಳನ್ನು ಬೆಂಗಳೂರಿನ ವ್ಯಕ್ತಿಯೊಬ್ಬರು ಖರೀದಿಸಿದ್ದು, ಈ ಕಾರು ಹೊಂದಿರುವ ಏಕೈಕ ಭಾರತೀಯ ಎನಿಸಿಕೊಂಡಿದ್ದಾರೆ. ಹೀಗಾಗಿ ಇಟಾಲಿಯನ್ ಕಾರು ಉತ್ಪಾದಕರಿಗೆ ಬೆಂಗಳೂರು ಉತ್ತಮ ಮಾರುಕಟ್ಟೆ ತಾಣವಾಗಿ ಪರಿಣಮಿಸಿದೆ.

ಡಿಸೆಂಬರ್ ತಿಂಗಳಲ್ಲಿ ಉತ್ಪಾದನೆ ಸ್ಥಗಿತಗೊಳಿಸಿದ ಅಶೋಕ್ ಲೇಲ್ಯಾಂಡ್ಡಿಸೆಂಬರ್ ತಿಂಗಳಲ್ಲಿ ಉತ್ಪಾದನೆ ಸ್ಥಗಿತಗೊಳಿಸಿದ ಅಶೋಕ್ ಲೇಲ್ಯಾಂಡ್

ಭಾರತದಲ್ಲಿ ದೆಹಲಿ, ದೆಹಲಿ ಹಾಗೂ ಬೆಂಗಳೂರಿನಲ್ಲಿ ಲಂಬೋರ್ಗಿನಿ ಶೋ ರೂಮ್ ಇದೆ. ದಕ್ಷಿಣ ಭಾರತದ ಇತರೆ ನಗರಗಳಿಗೆ ಬೆಂಗಳೂರಿನಿಂದಲೇ ಕಾರು ಪೂರೈಕೆಯಾಗುತ್ತದೆ. 2019ರಲ್ಲಿ ಎಷ್ಟು ಮಾರಾಟವಾಯಿತು ಎಂಬುದರ ಬಗ್ಗೆ ಇಟಲಿಯ ಕೇಂದ್ರ ಕಚೇರಿ ಇನ್ನೂ ಮಾಹಿತಿ ಹಂಚಿಕೊಂಡಿಲ್ಲ ಎಂದು ಅಗರವಾಲ್ ಹೇಳಿದ್ದಾರೆ.

Over 50% of Lamborghini sales in India come from 3 major cities in the south

2019ರಲ್ಲಿ ಐಷಾರಾಮಿ ಕಾರುಗಳ ಮಾರಾಟ ಶೇ 20 ರಷ್ಟು ಕುಸಿತ ಕಂಡಿದೆ. ಆದರೆ ಲಂಬೋರ್ಗಿನಿ ಕಾರು ಎರಡಂಕಿಯ ಮಾರಾಟ ಕಂಡಿದೆ. ಉದ್ಯಮಿಗಳು ಇಟಲಿಯನ್ ಕಾರು ಖರೀದಿಯತ್ತ ಮನಸ್ಸು ಮಾಡಿದ್ದಾರೆ.

ಊರಸ್, ಹರಾಕನ್, ಅವೆಂಟಡರ್ ವಿವಿಧ ಶ್ರೇಣಿಯ ಕಾರುಗಳು ವಿಶ್ವದೆಲ್ಲೆಡೆ ರೀಟೈಲ್ ಮಳಿಗೆಗಳಲ್ಲಿ ಲಭ್ಯ. ಆದರೆ, ಭಾರತಕ್ಕೆ ಕಾರುಗಳು ಆಮದಾಗುವ ಹೊತ್ತಿಗೆ 3.5 ಪಟ್ಟು ದರ ಅಧಿಕವಾಗುತ್ತದೆ. ಆಮದು ಕಾರಿಗೆ ತೆರಿಗೆ ಆ ಪ್ರಮಾಣದಲ್ಲಿದೆ. ಲಂಬೋರ್ಗಿನಿ ಕಾರು ಬೆಲೆ 3.10 ಕೋಟಿ ರು ನಿಂದ 5.13 ಕೋಟಿರು ತನಕ ಇದೆ. ಬೆಂಗಳೂರಲ್ಲಿ ಸೈಂಟ್ ಮಾರ್ಕ್ಸ್ ಚರ್ಚ್ ಎದುರು ಲ್ಯಾವೆಲ್ಲೆ ರಸ್ತೆಯಲ್ಲಿರುವ ಶೋ ರೂಮಿಗೆ ಇತ್ತೀಚೆಗೆ ಲಂಬೋರ್ಗಿನಿಯ ಸಿಇಒ ಮಟೆಯೊ ಒರ್ಟೆನ್ಜಿ ಭೇಟಿ ನೀಡಿ, Huracan Evo Spyder ಮಾಡೆಲ್ ಮಾರುಕಟ್ಟೆಗೆ ಪರಿಚಯಿಸಿದರು.

English summary
The automobile sector of the country has been badly hit due to the economic slowdown. Over 50% of Lamborghini sales in India come from 3 major cities in the south.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X