ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ಲಿಪ್‌ಕಾರ್ಟ್‌ನ 50,000 ಕಿರಾಣ ಪಾಲುದಾರರು ಸಜ್ಜು: ಹಬ್ಬಕ್ಕೆ ಉತ್ಪನ್ನಗಳ ವಿತರಣೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 14: ಹಬ್ಬದ ಸೀಸನ್ ಮತ್ತು ಬಿಗ್ ಬಿಲಿಯನ್ ಡೇಗಳಿಗೆ ಸಿದ್ಧತೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಭಾರತದ ದೇಶೀಯ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ತನ್ನ ಕಿರಾಣ ಸೇರ್ಪಡೆ ಕಾರ್ಯಕ್ರಮವನ್ನು ಗಣನೀಯ ಪ್ರಮಾಣದಲ್ಲಿ ವಿಸ್ತರಣೆ ಮಾಡಿಕೊಂಡಿದೆ. ಇದರ ಪ್ರಮುಖ ಉದ್ದೇಶ 850 ಕ್ಕೂ ಹೆಚ್ಚು ನಗರಗಳಲ್ಲಿ ಗ್ರಾಹಕರಿಗೆ ಉತ್ಪನ್ನಗಳನ್ನು ತ್ವರಿತವಾಗಿ ತಲುಪಿಸುವುದಾಗಿದೆ.

50,000 ಕ್ಕೂ ಅಧಿಕ ಕಿರಾಣಗಳ ಜತೆಗೆ ಪಾಲುದಾರಿಕೆ ಹೊಂದಿರುವ ಫ್ಲಿಪ್ ಕಾರ್ಟ್ ಲಕ್ಷಾಂತರ ಗ್ರಾಹಕರಿಗೆ ತ್ವರಿತವಾಗಿ ಇ-ಕಾಮರ್ಸ್ ಅನುಭವವನ್ನು ನೀಡುವ ಉದ್ದೇಶವನ್ನು ಹೊಂದಿದೆ. ಇದೇ ವೇಳೆ, ಕಿರಾಣಗಳಿಗೆ ಡಿಜಿಟಲ್ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದು ಮತ್ತು ಹೆಚ್ಚುವರಿ ಆದಾಯ ಗಳಿಕೆಗೆ ಅವಕಾಶಗಳನ್ನು ಕಲ್ಪಿಸುತ್ತಿದೆ.

ಫ್ಲಿಪ್‌ಕಾರ್ಟ್‌ನಿಂದ ವೋಲ್‌ಸೇಲ್ ವ್ಯಾಪಾರ ಶುರುಫ್ಲಿಪ್‌ಕಾರ್ಟ್‌ನಿಂದ ವೋಲ್‌ಸೇಲ್ ವ್ಯಾಪಾರ ಶುರು

ಪಾಲುದಾರಿಕೆಯನ್ನು ಹೊಂದಿರುವ ಕಿರಾಣಗಳಿಗೆ ನೆರವಾಗುವುದು ಮತ್ತು ಹಬ್ಬದ ಸಂದರ್ಭದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಹಾಯ ಮಾಡಲೆಂದು ಫ್ಲಿಪ್ ಕಾರ್ಟ್ ನ ತಂಡವು ಸಂಪರ್ಕರಹಿತವಾದ ಸೇರ್ಪಡೆ ಪ್ರಕ್ರಿಯೆಯನ್ನು ನಡೆಸುತ್ತಿದೆ. ಅಂದರೆ, ಕಿರಾಣ ಪಾಲುದಾರರು ನೇರವಾಗಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಅಪ್ ಲೋಡ್ ಮಾಡಬಹುದು.

Over 50,000 Kiranas Parner With Flipkart To Deliver Festive Cheer For India

ಕೋವಿಡ್-19 ಸಂದರ್ಭದಲ್ಲಿ ಅವರು ಹೊರಗೆ ಬಾರದೇ ತಡೆರಹಿತವಾಗಿ ಆನ್ ಬೋರ್ಡಿಂಗ್ ಅನ್ನು ಇದು ಸಕ್ರಿಯಗೊಳಿಸುತ್ತದೆ. ವಿವರವಾದ ಪರಿಶೀಲನೆಯ ನಂತರ, ಕಿರಾಣಗಳನ್ನು ಈ ಕಾರ್ಯಕ್ರಮದಡಿಗೆ ತರಲಾಗುತ್ತದೆ. ಅದಕ್ಕೂ ಮೊದಲು ಅವರು ಡೆಲಿವರಿ ಶಿಪ್ ಮೆಂಟ್ ಗಳನ್ನು ಮಾಡಬಹುದಾಗಿದೆ. ಆ್ಯಪ್ ಆಧಾರಿತ ಡ್ಯಾಶ್ ಬೋರ್ಡ್ ಗಳು ಮತ್ತು ಡಿಜಿಟಲ್ ಪಾವತಿಗಳು ಸೇರಿದಂತೆ ವಿವಿಧ ಟೂಲ್ ಗಳಲ್ಲಿ ತಂಡವು ಡಿಜಿಟಲ್ ತರಬೇತಿಯನ್ನು ನೀಡಲಿದೆ. ಈ ಮೂಲಕ ಕಿರಾಣಗಳು ಸಾಂಪ್ರಾದಾಯಿಕ ಸಾಮಾನ್ಯ ವ್ಯವಹಾರ ಸ್ಟೋರ್ ಗಳಿಂದ ಆಧುನಿಕ ಅನುಕೂಲಕರ ಸ್ಟೋರ್ ಗಳಿಗೆ ತಮ್ಮ ವ್ಯವಹಾರವನ್ನು ರೂಪಾಂತರ ಅಥವಾ ಪರಿವರ್ತನೆ ಮಾಡಿಕೊಳ್ಳಲು ನೆರವಾಗುತ್ತದೆ.

''ಫ್ಲಿಪ್ ಕಾರ್ಟ್ ತಂತ್ರಜ್ಞಾನ ಆಧಾರಿತ ಅಂತರ್ಗತ ಬೆಳವಣಿಗೆಯಲ್ಲಿ ನಂಬಿಕೆ ಇಟ್ಟಿದೆ. ಇದಕ್ಕಾಗಿ ಎಲ್ಲಾ ಪರಿಸರ ವ್ಯವಸ್ಥೆಯ ಪಾಲುದಾರರನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ ಮತ್ತು ನಮ್ಮ ಕಿರಾಣ ಪಾಲುದಾರರು ಈ ಪರಿಸರ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದ್ದಾರೆ. ಭಾರತದ ಅತ್ಯಂತ ಹಳೆಯ ರೀಟೇಲ್ ಮಾದರಿಯಾಗಿರುವ ಕಿರಾಣಗಳ ಸೌಲಭ್ಯಗಳು, ದಾಸ್ತಾನು, ಮಾಹಿತಿ ಮತ್ತು ಸೋರ್ಸಿಂಗ್ ನಂತಹ ಸಪ್ಲೈ ಚೈನ್ ಅನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡುತ್ತವೆ ಮತ್ತು ಗ್ರಾಹಕರೊಂದಿಗೆ ದೀರ್ಘಕಾಲದ ಸಂಬಂಧವನ್ನು ಕಾಪಾಡಿಕೊಳ್ಳುತ್ತವೆ. ಅವರ ಸಂಯೋಜಿತ ಉಪಸ್ಥಿತಿ ಮತ್ತು ಫ್ಲಿಪ್ ಕಾರ್ಟ್ ನ ಆವಿಷ್ಕಾರಗಳಿಂದಾಗಿ ಈ ಕಾರ್ಯಕ್ರಮ ದೇಶದಲ್ಲಿ ಕಿರಾಣ ಪರಿಸರ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಸಹಕಾರಿಯಾಗಿದೆ. ಕಿರಾಣಗಳು ತಮ್ಮನ್ನು ತಾವು ಮತ್ತಷ್ಟು ವೃದ್ಧಿಸಿಕೊಳ್ಳಲು ಮತ್ತು ವೇಗವಾಗಿ ಬೆಳೆಯುತ್ತಿರುವ ಇ-ಕಾಮರ್ಸ್ ಉದ್ಯಮದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ದೇಶಾದ್ಯಂತ ಕಿರಾಣಗಳಿಂದ ಹೆಚ್ಚಿನ ಪಾಲ್ಗೊಳ್ಳುವಿಕೆ ಆಗುತ್ತಿರುವುದಕ್ಕೆ ನಮಗೆ ಸಂತಸವೆನಿಸುತ್ತಿದೆ'' ಎಂದು ಫ್ಲಿಪ್ ಕಾರ್ಟ್ ನ ಇಕಾರ್ಟ್ ಮತ್ತು ಮಾರ್ಕೆಟ್ ಪ್ಲೇಸ್ ನ ಹಿರಿಯ ಉಪಾಧ್ಯಕ್ಷ ಅಮಿತೇಶ್ ಝಾ ಹೇಳಿದ್ದಾರೆ.

Recommended Video

European Guide Vision ಸಂಸ್ಥೆ Infosys ತೆಕ್ಕೆಗೆ | Oneindia Kannada

ಲಕ್ಷಾಂತರ ಮಾರಾಟಗಾರರು ಮತ್ತು ಎಂಎಸ್ಎಂಇಗಳೊಂದಿಗೆ ಪಾಲುದಾರಿಕೆಯೊಂದಿಗೆ ಫ್ಲಿಪ್ ಕಾರ್ಟ್ ತನ್ನ ಶಕ್ತಿಶಾಲಿ ಸಪ್ಲೈಚೈನ್ ನೊಂದಿಗೆ ಪ್ರತಿದಿನ ಸೇವೆಗೆ ಅವಕಾಶವಿರುವ ಶೇ. 100 ರಷ್ಟು ಪ್ರದೇಶಗಳಿಗೆ ಲಕ್ಷಾಂತರ ಶಿಪ್ ಮೆಂಟ್ ಗಳನ್ನು ವಿತರಣೆ ಮಾಡುತ್ತಿದೆ. ಕಳೆದ ವರ್ಷ, ಫ್ಲಿಪ್ ಕಾರ್ಟ್ ನ ಬಿಗ್ ಬಿಲಿಯನ್ ಡೇ ಸಂದರ್ಭದಲ್ಲಿ ಕಿರಾಣಗಳು ಒಂದು ದಶಲಕ್ಷಕ್ಕೂ ಅಧಿಕ ಶಿಪ್ ಮೆಂಟ್ ಗಳನ್ನು ವಿತರಣೆ ಮಾಡಿದ್ದವು. ಈ ಮೂಲಕ ಗ್ರಾಹಕರಿಗೆ ಇ-ಕಾಮರ್ಸ್ ಅನುಭವವನ್ನು ನೀಡಿದ್ದವು.

English summary
E-commerce company Flipkart Partnering with more than 50,000 grocery stores, aims to provide an e-commerce experience to millions of customers quickly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X