ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒರೈಯನ್ ಗೆ ವರ್ಷದ ಅತ್ಯುತ್ತಮ ಶಾಪಿಂಗ್ ಮಾಲ್ ಪ್ರಶಸ್ತಿ

By Rajendra
|
Google Oneindia Kannada News

ಬೆಂಗಳೂರು, ಮೇ.9: ವಸತಿ ಸಮುಚ್ಚಯ ಹಾಗೂ ವಾಣಿಜ್ಯ ಕಟ್ಟಡದ ನಿರ್ಮಾಣದಲ್ಲಿ ಖ್ಯಾತಿ ಪಡೆದಿರುವ ಬ್ರಿಗೇಡ್ ಗ್ರೂಪ್ ಅವರ ಬ್ರಿಗೇಡ್ ಗೇಟ್ ವೇ ಬಳಿ ಇರುವ ಒರೈನ್ ಮಾಲ್ 2ನೇ ಇಂಡಿಯನ್ ರಿಟೇಲ್ ಅವಾರ್ಡ್ 2015 ಅತ್ಯತ್ತಮ ಮಾಲ್ ಎಂಬ ಹೆಗ್ಗಳಿಗೆ ಪ್ರಾಪ್ತವಾಗಿದೆ. ಇದಲ್ಲದೆ ಇತ್ತೀಚೆಗ 4ನೇ ಇಂಡಿಯನ್ ಇ-ರಿಟೇಲ್ ಅವಾರ್ಡ್ 2015 ನ್ನೂ ತನ್ನದಾಗಿಸಿದೆ.

ರಿಟೇಲರ್ಸ್ ಹಾಗೂ ಇ ರಿಟೇಲರ್ಸ್ ವಿಭಾಗದಲ್ಲಿ 2ನೇ ಇಂಡಿಯನ್ ರಿಟೇಲರ್ಸ್ ಅವಾರ್ಡ್ 2015 ಹಾಗೂ 4ನೇ ಇಂಡಯನ್ ಇ-ರಿಟೇಲರ್ಸ್ ಅವಾರ್ಡ್ ಗ ಳು ಏಷ್ಯಾದಲ್ಲೇ ಅತ್ಯಂತ ಘನತೆಯುಳ್ಳ ಪ್ರಶಸ್ತಿಗಳಾಗಿದೆ. ದೇಶದಲ್ಲಿನ ರಿಟೇಲ್ ಹಾಗೂ ಇ-ರಿಟೇಲ್ ವಿಭಾಗದ ವ್ಯಾಪಾರದಲ್ಲಿ ಇನ್ನಷ್ಟು ಬೆಳವಣಿಗೆ ಹಾಗೂ ಸಧೃಢಗೊಳಿಸುವ ಉದ್ದೇಶದೊಂದಿಗೆ ಹಮ್ಮಿಕೊಂಡಿದ್ದ ಅತ್ಯಂತ ದೊಡ್ಡದಾದ ಕೈಗಾರಿಕೋದ್ಯಮ ಕಾರ್ಯಕ್ರಮವಾಗಿದೆ.

Orion Mall
ಕಳೆದ 3 ಅವಾರ್ಡ್ ಕಾರ್ಯಕ್ರಮದಲ್ಲಿ 2000 ಕ್ಕೂ ಅಧಿಕ ನಾಮಿನೇಟರ್ ಗಳು, 800ಕ್ಕೂ ಹೆಚ್ಚು ಗಣ್ಯರು, ಹಾಗೂ 300ಕ್ಕೂ ಅಧಿಕ ವಿವಿಧ ಕ್ಷೇತ್ರದ ನಾಯಕರು ಪಾಲ್ಗೊಂಡಿದ್ದರು. ಅವಾರ್ಡ್ ನಿಂದ ವಿಜೇತ ಕಂಪನಿಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ವ್ಯಾಪಾರಸ್ಥರೆಂದು ಮನ್ನಣೆ ಲಭಿಸುತ್ತದೆ. ಮನು ನಾಯರ್, ಸೀನಿಯರ್ ಡಿಜಿಎಂ, ಫೆಸಿಲಿಟಿ, ಒರೈಯನ್ ಮಾಲ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದರು.

ಬೆಂಗಳೂರಿನಲ್ಲಿ ಅತ್ಯಂತ ಅಚ್ಚುಕಟ್ಟಾದ ಮೂಲಸೌಕರ್ಯ ಹೊಂದಿರುವ ಮಾಲ್ ಒರೈಯನ್ ಮಾಲ್ ಆಗಿದ್ದು, ಅಂತಾರಾಷ್ಟ್ರೀಯ ಮಟ್ಟದ ಎಲ್ಲಾ ಬ್ರ್ಯಾಂಡೆಡ್ ವಸ್ತುಗಳು ಇಲ್ಲಿ ಶಾಂಪಿಂಗ್ ಗೆ ಲಭ್ಯವಿದೆ. ಝóರಾ, ಒನ್ಲಿ, ಮ್ಯಾಂಗೋ, ಸ್ವರೋಸ್ಕಿ, ಜ್ಯಾಕ್ ಎನ್ ಜಾನ್ಸ್ ಇತ್ಯಾದಿ ಎಲ್ಲಾ ವಿಧದ ಬ್ರ್ಯಾಂಡೆಡ್ ವಸ್ತುಗಳು ಒರೈಯನ್ ಮಾಲ್ ನಲ್ಲಿ ಲಭ್ಯವಿದೆ. ಗ್ರಾಹಕರಿಗೆ ಒಂದೇ ಕಡೆಯಲ್ಲಿ ಅಗತ್ಯವಾದ ಎಲ್ಲಾ ವಸ್ತುಗಳು ಲಭಿಸುತ್ತದೆ.

ಒರೈಯನ್ ಮಾಲ್ ಗೆ ಸಂದ ಪ್ರಶಸ್ತಿಗಳು
ಓರೈಯನ್ ಮಾಲ್ ಗೆ ವರ್ಷವೊಂದರಲ್ಲಿ ಸುಮಾರು 17 ಲಕ್ಷ ಮಂದಿ ಭೇಟಿ ನೀಡುತ್ತಿದ್ದು, ಬ್ರಿಗೇಡ್ ಗೇಟ್ ವೇ ಎನ್ ಕ್ಲೇವ್ ನ ಒಂದು ಭಾಗವಾಗಿದೆ. 8 ಚದರಡಿಯ ಅಂತಾರಾಷ್ಟ್ರೀಯ ಮಟ್ಟದ ಶಾಪಿಂಗ್ ಅನುಭವ ಲಭಿಸಲಿದೆ. ಕಳೆದ ಮೂರು ವರ್ಷದಲ್ಲಿ ಒರೈಯನ್ ಮಾಲ್ ಅತ್ಯುತ್ತಮ ಹಾಗೂ ಹೆಚ್ಚಿನ ಘನತೆಯುಳ್ಳ ಪ್ರಶಸ್ತಿಗಳನ್ನು ತನ್ನದಾಗಿಸಿದೆ.

English summary
One of Bangalore’s popular malls, Orion Mall, developed by premier real estate developer Brigade Group and located in the Brigade Gateway enclave, received the award for the Best Shopping Mall in the South India Region at the prestigious Indian Retail Awards 2015. Franchise India presented the 2nd Indian Retail Awards 2015 and the 4th e-Retail Awards 2015 recently.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X