ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2021ರಲ್ಲಿ ಭಾರತೀಯ ಕಂಪನಿಗಳಿಂದ ಶೇ.7.7ರಷ್ಟು ವೇತನ ಹೆಚ್ಚಳ ಸಾಧ್ಯತೆ

|
Google Oneindia Kannada News

ನವದೆಹಲಿ,ಫೆಬ್ರವರಿ 23: 2021 ರಲ್ಲಿ ಭಾರತೀಯ ಕಂಪನಿಗಳು ಶೇ.7.7ರಷ್ಟು ವೇತನ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

20ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿರುವ 1,200 ಕಂಪನಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು, ವೇತನ ಹೆಚ್ಚಳಕ್ಕೆ ಕಂಪನಿಗಳು ಚಿಂತನೆ ನಡೆಸಿರುವುದು ಚೇತರಿಕೆಯ ಲಕ್ಷಣವಾಗಿದ್ದು, ಇದೇ ವೇಳೆ ಕಾರ್ಮಿಕ ವೇತನ ಸಂಹಿತೆಗಳೂ ಸಹ ಪರಿಸ್ಥಿತಿಗಳನ್ನು ಬದಲಾವಣೆ ಮಾಡಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಬಜೆಟ್‌ 2021: ನೌಕರರ ವೇತನ, ನಿವೃತ್ತಿ ಉಳಿತಾಯ ತಗ್ಗಬಹುದುಬಜೆಟ್‌ 2021: ನೌಕರರ ವೇತನ, ನಿವೃತ್ತಿ ಉಳಿತಾಯ ತಗ್ಗಬಹುದು

ಭಾರತೀಯ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಶೇ.7.7 ರಷ್ಟು ವೇತನ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಇತ್ತೀಚಿನ ಸಮೀಕ್ಷೆಯಿಂದ ಬಹಿರಂಗಗೊಂಡಿದೆ.

Organisations In India Projecting 7.7% Salary Increase In 2021: Survey

ಈ ಪ್ರಮಾಣದ ವೇತನ ಪರಿಷ್ಕರಣೆ BRIC ರಾಷ್ಟ್ರಗಳ ಪೈಕಿ ಅತಿ ಹೆಚ್ಚಿನದ್ದಾಗಿರಲಿದ್ದು, 2020 ರಲ್ಲಿ ಮಾಡಲಾಗಿದ್ದ ಶೇ.6.1 ರಷ್ಟು ವೇತನ ಹೆಚ್ಚಳಕ್ಕಿಂತಲೂ ಹೆಚ್ಚಿರಲಿದೆ ಎಂದು ಸಮೀಕ್ಷೆ ತಿಳಿಸಿದೆ.

ಮುಂಬರುವ ಬದಲಾವಣೆಯ ಹಾಗೂ ಅಸ್ಥಿರತೆಗಳಿಗೆ ಸಂಬಂಧಿಸಿದಂತೆ 2021 ರ ವೇತನ ಹೆಚ್ಚಳ ದೀರ್ಘಾವಧಿಯಲ್ಲಿ ಪರಿಣಾಮ ಹೊಂದಿರಲಿದೆ ಎಂದು ಅಯಾನ್ ಪಿಎಲ್ಸಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿತಿನ್ ಸೇಥಿ ಮಾಹಿತಿ ನಿಡಿದ್ದಾರೆ.

ಜಾಗತಿಕ ವೃತ್ತಿಪರ ಸೇವೆಗಳ ಸಂಸ್ಥೆ ಅಯಾನ್ ಪಿಎಲ್ಸಿ ಸಂಸ್ಥೆ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಭಾರತೀಯ ಕಂಪನಿಗಳ ಸಮೀಕ್ಷೆ ನಡೆಸಿದ್ದು, ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಶೇ.88 ರಷ್ಟು ಕಂಪನಿಗಳು ವೇತನ ಹೆಚ್ಚಳಕ್ಕೆ ಒಲವು ತೋರಿವೆ. 2020 ರಲ್ಲಿ ಶೇ.75 ರಷ್ಟು ಕಂಪನಿಗಳಷ್ಟೇ ವೇತನ ಹೆಚ್ಚಳ ಮಾಡುವತ್ತ ಒಲವು ತೋರಿದ್ದವು.

English summary
Companies in India are likely to offer a 7.7 per cent salary increase in 2021, one of the highest among the BRIC nations, and higher than the average actual increase of 6.1 per cent in 2020
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X