• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

100 ರು ಗಡಿ ದಾಟಿದ ಇಂಧನ ಬೆಲೆ, ಪ್ರಧಾನಿ ವಿರುದ್ಧ ಕಿಡಿ!

|

ಇಸ್ಲಾಮಾಬಾದ್, ಜೂನ್ 28: ಕೊರೊನಾವೈರಸ್ ಸೋಂಕಿನಿಂದ ಪಾಕಿಸ್ತಾನಕ್ಕೂ ಕೂಡಾ ಆರ್ಥಿಕ ಹೊಡೆತ ಬಿದ್ದಿದೆ. ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ಸರ್ಕಾರವು ಇಂಧನ ಬೆಲೆ ಏರಿಕೆ ಮಾಡಿದ್ದರಿಂದ ವಿಪಕ್ಷಗಳು ಗರಂ ಆಗಿ ಪ್ರತಿಭಟನೆ ನಡೆಸಿವೆ.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ಪೆಟ್ರೋಲ್ ದರದಲ್ಲಿ ಪ್ರತಿ ಲೀಟರ್ ಮೇಲೆ 25 ರು ಹಾಗೂ ಡೀಸೆಲ್ ದರದಲ್ಲಿ ಪ್ರತಿ ಲೀಟರ್ ಮೇಲೆ 21 ರು ಹೆಚ್ಚಳ ಮಾಡಲಾಗಿದ್ದು, ಈ ವಾರಾಂತ್ಯದಲ್ಲಿ ನೂತನ ದರ ಜಾರಿಗೆ ಬಂದಿದೆ.

21ದಿನಗಳ ಬಳಿಕ ಏನಿದು ಅಚ್ಚರಿ, ತೈಲ ಬೆಲೆ ಏರಿಕೆ ಸ್ಥಗಿತ

ಪಾಕಿಸ್ತಾನದ ವಿತ್ತ ಸಚಿವಾಲಯ ಈ ಕುರಿತು ನೀಡಿರುವ ಅಧಿಕೃತ ಸೂಚನೆಯಂತೆ ಪರಿಷ್ಕತ ದರ ಪಟ್ಟಿ ಪ್ರಕಾರ, ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 74.52 ರು ಬದಲಿಗೆ 100.10 ಪ್ರತಿ ಲೀಟರ್ ಆಗಿದೆ. ಇದೇ ವೇಳೆ ಡೀಸೆಲ್ ಬೆಲೆ 80.15 ರು ನಿಂದ 101.46 ರು ಗೇರಿದೆ.

ಸೀಮೆಎಣ್ಣೆ ಬೆಲೆ 23.50 ರು ಏರಿಕೆ ಮಾಡಲಗಿದೆ. ಹೀಗಾಗಿ, 35.56 ರು ನಿಂದ 59.06 ರು ಪ್ರತಿ ಲೀಟರ್ ನಂತೆ ವ್ಯಾಪಾರವಾಗಲಿದೆ. ಪಾಕಿಸ್ತಾನದ ಹಲವೆಡೆ ಎಲ್ ಪಿಜಿ ಸಂಪರ್ಕ ಇಲ್ಲದ ಕಾರಣ, ಸೀಮೆಎಣ್ಣೆ ಬಳಕೆ ಅಧಿಕವಾಗಿದೆ.

ಮಾರ್ಚ್ 1 ರಿಂದ ಕೊವಿಡ್ 19 ಪರಿಸ್ಥಿತಿ ಇದ್ದರೂ ಇಮ್ರಾನ್ ಖಾನ್ ಸರ್ಕಾರವು ನಾಲ್ಕು ಬಾರಿ ಇಂಧನ ಬೆಲೆಯನ್ನು ಪರಿಷ್ಕರಿಸಿ,ಪ್ರತಿ ಲೀಟರ್ ಮೇಲೆ 42.10 ರು ನಷ್ಟುಇಳಿಕೆ ಮಾಡಿತ್ತು. ಆದರೆ, ಈಗ ಬೆಲೆ ಏರಿಕೆ ಅನಿವಾರ್ಯ ಎಂದು ಸರ್ಕಾರ ಹೇಳಿದೆ. ಅಲ್ಲದೆ, ದಕ್ಷಿಣ ಏಷ್ಯಾದಲ್ಲೇ ಪಾಕಿಸ್ತಾನದಲ್ಲಿ ಕಡಿಮೆ ದರದಲ್ಲಿ ಇಂಧನ ಲಭ್ಯವಾಗುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

English summary
Opposition leaders slammed the Imran Khan government its decision to increase the prices of all petroleum products increased the price of petrol by over Rs 25 per litre and diesel by Rs 21 per litre.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X