ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನ್ ಲೈನ್ ಶಾಂಪಿಂಗ್ ಸಂಸ್ಥೆಯಲ್ಲಿ 12 ಸಾವಿರ ನೇಮಕಾತಿ

By Mahesh
|
Google Oneindia Kannada News

ಬೆಂಗಳೂರು, ಜೂ.24: ಆನ್ ಲೈನ್ ಶಾಪಿಂಗ್ ಕ್ಷೇತ್ರದ ಅಗ್ರಗಣ್ಯ ಸಂಸ್ಥೆ ಫ್ಲಿಪ್ ಕಾರ್ಟ್ ಭಾರತದಲ್ಲಿ ತನ್ನ ಮಾರುಕಟ್ಟೆ ವಿಸ್ತರಣೆಗೆ ಮುಂದಾಗಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸುಮಾರು 12 ಸಾವಿರ ಮಂದಿ ನೇಮಕಾತಿ ಮಾಡಿಕೊಳ್ಳಲಿದೆ.

ಫ್ಲಿಪ್ ಕಾರ್ಟ್ ತನ್ನ ಉದ್ಯೋಗಿಗಳ ಸಂಖ್ಯೆಯನ್ನು 13,000 ದಿಂದ 25,000ಕ್ಕೇರಿಸಲಿದೆ. ತಂತ್ರಜ್ಞಾನ, ಗ್ರಾಹಕ ಸೇವೆ ಮುಂತಾದ ವಿಭಾಗಗಳಲ್ಲಿ ಹೆಚ್ಚಿನ ಅಭ್ಯರ್ಥಿಗಳ ನೇಮಕ ನಡೆಯಲಿದೆ ಎಂದು ಫ್ಲಿಪ್ ಕಾರೆಟ್ ಸಿಪಿಒ ಮೇಕಿನ್ ಮಹೇಶ್ವರಿ ಹೇಳಿದ್ದಾರೆ.

ಇಂಜಿನಿಯರಿಂಗ್ ವಿಭಾಗದಲ್ಲಿ 1,200 ಅಭ್ಯರ್ಥಿಗಳ ನೇಮಕಾತಿ 2014ರ ಅಂತ್ಯದೊಳಗೆ ನಡೆಯಲಿದೆ. ಬೆಂಗಳೂರು ಮೂಲದ ಫ್ಲಿಪ್ ಕಾರ್ಟ್ ಸಂಸ್ಥೆ ವರ್ಷಾಂತ್ಯಕ್ಕೆ 30ಕ್ಕೂ ಅಧಿಕ ನಗರಗಳಲ್ಲಿ ತನ್ನ ಕೇಂದ್ರ ವಿಸ್ತರಣೆ ಮಾಡಲಿದೆ.

ದೇಶದ ಉತ್ಪಾದನಾ ಕ್ಷೇತ್ರದ ಅಗ್ರಗಣ್ಯ ತಾಣಗಳಾದ ತಿರುಪ್ಪೂರ್ ಹಾಗೂ ಲೂಧಿಯಾನದ ಕಾರ್ಖಾನೆಗಳ ಜತೆ ಫ್ಲಿಪ್ ಕಾರ್ಟ್ ನೇರ ಸಂಪರ್ಕ ಸಾಧಿಸಿದ್ದು ಗ್ರಾಹಕದ ಬೇಡಿಕೆಗೆ ತಕ್ಕಂತೆ ಉತ್ಪನ್ನಗಳನ್ನು ಒದಗಿಸಲು ಸಜ್ಜಾಗುತ್ತಿದೆ. ಸೂರತ್, ಆಗ್ರಾ ಕಡೆ ಮತ್ತೊಂದು ತಂಡ ತೆರಳಿದ್ದು ರೆಡಿ ಮೇಟ್ ಅಪರೆಲ್ಸ್, ಚರ್ಮದ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಒದಗಿಸಲಿದೆ.

Flipkart to hire 12,000 people this year

ಇತ್ತೀಚೆಗಷ್ಟೇ ಆನ್ ಲೈನ್ ಶಾಪಿಂಗ್ ಸಂಸ್ಥೆ ಮಿಂಟ್ರಾ ಡಿಸೈನ್ಸ್ ಅನ್ನು 2000 ಕೋಟಿ ರುಗೂ ಅಧಿಕ ಡೀಲ್ ಮೂಲಕ ತನ್ನ ತೆಕ್ಕೆಗೆ ಹಾಕಿಕೊಂಡಿರುವ ಫ್ಲಿಪ್ ಕಾರ್ಟ್ ಈಗ ದೇಶದ ಇ ಕಾಮರ್ಸ್ ಕ್ಷೇತ್ರದ ಅಧಿಪತಿ ಆಗಲು ಹೊರಟಿದೆ.[ವಿವರ ಇಲ್ಲಿದೆ ಓದಿ]

ಗೂಗಲ್ ನೀಡಿರುವ ಮಾಹಿತಿ ಪ್ರಕಾರ ದೇಶದ ಇ ಕಾಮರ್ಸ್ ಕ್ಷೇತ್ರ 2012ರಲ್ಲಿ 1.5 ಬಿಲಿಯನ್ ಡಾಲರ್ ನಷ್ಟಿತ್ತು 2013ರಲ್ಲಿ 2.5 ರಿಂದ 2.8 ಬಿಲಿಯನ್ ಡಾಲರ್ ನಷ್ಟಾಗಿದೆ ಎಂದು ತಿಳಿದು ಬಂದಿದೆ. ಆನ್ ಲೈನ್ ಗ್ರಾಹಕರ ಸಂಖ್ಯೆ 2012ರಲ್ಲಿ 8 ಮಿಲಿಯನ್ ನಷ್ಟಿತ್ತು 2013ರಲ್ಲಿ 20 ಮಿಲಿಯನ್ ದಾಟಿದೆ.

English summary
Flipkart will hire 12,000 people this year to beef up its support and technology operations as the homegrown firm witnesses strong surge in online shopping in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X