ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಎನ್ ಜಿಸಿ ತೆಕ್ಕೆಗೆ ಎಚ್ ಪಿಸಿಎಲ್- ಇದು 44 ಸಾವಿರ ಕೋಟಿ ವ್ಯವಹಾರ

ಒಎನ್ ಜಿಸಿ ತೆಕ್ಕೆಗೆ ಎಚ್ ಪಿಸಿಎಲ್ ಬರಲಿದೆ ಎಂಬುದು ಸದ್ಯಕ್ಕೆ ವ್ಯವಹಾರ ಜಗತ್ತಿನ ಅತಿದೊಡ್ಡ ಸುದ್ದಿ. ಏಕೆಂದರೆ ಇದು ನಲವತ್ನಾಲ್ಕು ಸಾವಿರ ಕೋಟಿ ರುಪಾಯಿಗಳ ವ್ಯವಹಾರ. ಅದರ ಸುತ್ತಲಿನ ಲೆಕ್ಕಾಚಾರಗಳು ಇಲ್ಲಿವೆ

|
Google Oneindia Kannada News

ನವದೆಹಲಿ, ಫೆಬ್ರವರಿ 27: ಭಾರತದ ಅತಿದೊಡ್ಡ ತೈಲ ಹಾಗೂ ಅನಿಲ ಉತ್ಪಾದನಾ ಕಂಪೆನಿ ಒಎನ್ ಜಿಸಿ (ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಷನ್ ಎಚ್ ಪಿಸಿಎಲ್ ನಲ್ಲಿ ಸರಕಾರ ಹೊಂದಿರುವ ಶೇ 51.11 ರಷ್ಟು ಪಾಲನ್ನು ತನ್ನ ವಶಕ್ಕೆ ಪಡೆಯುವ ಸಾಧ್ಯತೆಗಳಿವೆ.

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಭಾರತದಲ್ಲೇ ಮೂರನೇ ಅತಿದೊಡ್ಡ ತೈಲ ಚಿಲ್ಲರೆ ಮಾರಾಟಗಾರ ಕಂಪನಿ. ಇದರ ಜತೆಗೆ ಹೆಚ್ಚುವರಿಯಾಗಿ ಶೇ 26ರಷ್ಟು ಷೇರುಗಳನ್ನು ಷೇರುದಾರರಿಂದಲೂ ಖರೀದಿಸುವ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಇದರಿಂದ ಒಟ್ಟಾರೆಯಾಗಿ ಶೇ 77.11ರಷ್ಟು ಎಚ್ ಪಿಸಿಎಲ್ ಷೇರುಗಳನ್ನು ಒಎನ್ ಜಿಸಿ ಪಡೆಯಲಿದೆ.[ಆಕ್ಸಿಸ್ ಬ್ಯಾಂಕ್ ಷೇರುಗಳಲ್ಲಿ ಅದೆಂಥ ಮಿಂಚು, ಇದೆಂಥ ತಲ್ಲಣ?]

ONGC may acquire HPCL in around 44000 crore deal

ಇವೆಲ್ಲ ಶೇಕಡಾವಾರಿನ ಲೆಕ್ಕಾಚಾರ ಆಯಿತು. ಒಟ್ಟಾರೆ ಇದು 44 ಸಾವಿರ ಕೋಟಿ ರುಪಾಯಿಗಳ ವ್ಯವಹಾರ. ಈಗಿನ ಮಾರುಕಟ್ಟೆ ದರದಲ್ಲಿ ಹೇಳಬೇಕೆಂದರೆ 6.6 ಬಿಲಿಯನ್ ಅಮೆರಿಕನ್ ಡಾಲರ್ ಆಗುತ್ತದೆ. ಸರಕಾರದ ಉದ್ದೇಶ ಏನೆಂದರೆ ತೈಲ ಉತ್ಪಾದನೆ ಮಾಡುವಂಥ ಕಂಪನಿ ಹಾಗೂ ರಿಫೈನರಿ ಕಂಪನಿ ಎರಡೂ ಒಟ್ಟಾಗಬೇಕು ಎಂದು ಉನ್ನತ ಮೂಲಗಳು ತಿಳಿಸಿವೆ.[ಏ.1ರಿಂದಲೇ ಎಸ್ ಬಿಐ ಜತೆ 5 ಸಹವರ್ತಿ ಬ್ಯಾಂಕ್‌ ಗಳ ವಿಲೀನ]

ಇಲ್ಲಿ ಆಯ್ಕೆಗಳು ಬಹಳ ಸೀಮಿತ ಎಚ್ ಪಿಸಿಎಲ್ ಹಾಗೂ ಬಿಪಿಸಿಎಲ್ ನ ಒಎನ್ ಜಿಸಿ ಜೊತೆಗೆ ಸೇರಿಸಬೇಕು ಹಾಗೂ ಐಒಸಿ ಮತ್ತು ಒಐಎಲ್ ಅನ್ನು ಒಂದಾಗಿ ಮಾಡಬೇಕು. ಇದರಿಂದ ಗ್ರಾಹಕರಿಗೆ ಕೂಡ ಎರಡೇ ಆಯ್ಕೆ ಉಳಿಯುತ್ತವೆ. ಎಚ್ ಪಿಸಿಎಲ್ ಅನ್ನು ಒಎನ್ ಜಿಸಿ ಜತೆಗೆ ಸೇರಿಸಬಹುದು. ಆದರೆ ಬಿಪಿಸಿಎಲ್ ಪ್ರತ್ಯೇಕವಾಗಿಯೇ ಉಳಿಯುವ ಸಾಧ್ಯತೆ ಇದೆ.

ಆ ಮೂಲಕ ಗ್ರಾಹಕರಿಗೆ ಮೂರು ಆಯ್ಕೆ ಉಳಿಯುತ್ತವೆ. ಐಒಸಿ, ಒಎನ್ ಜಿಸಿ-ಎಚ್ ಪಿಸಿಎಲ್ ಹಾಗೂ ಬಿಪಿಸಿಎಲ್- ಈ ಮೂರರ ಪೈಕಿ ಎಲ್ಲಾದರೂ ಪೆಟ್ರೋಲ್-ಡೀಸೆಲ್ ಖರೀದಿಸಬಹುದು. ಇದು ಹನ್ನೆರಡು ವರ್ಷಗಳ ಹಿಂದಿನ ಪ್ರಸ್ತಾವ. ಆಗಿನ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್ ಈ ರೀತಿ ಪ್ರಸ್ತಾವ ಮಾಡಿದ್ದರು. ಈ ಬಾರಿ ಬಜೆಟ್ ನಲ್ಲಿ ಅರುಣ್ ಜೇಟ್ಲಿ ಮತ್ತೊಮ್ಮೆ ಹೇಳಿದ್ದರು.['ಬೇಕೆಂತಲೇ ಹೊಸಬರಿಗೆ ಕಡಿಮೆ ಸಂಬಳ ಕೊಡುತ್ತಿವೆ ಐಟಿ ಕಂಪೆನಿಗಳು']

ಇದರಿಂದ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ನೀಡಬಹುದು ಎಂಬುದು ಮಾತ್ರವಲ್ಲ, ಪೆಟ್ರೋಲ್-ಡೀಸೆಲ್ ಬೆಲೆ ಏರಿಳಿತದ ಮಧ್ಯೆ ಆಗುವ ನಷ್ಟವನ್ನು ಸರಿದೂಗಿಸಿಕೊಂಡು ಹೋಗಲು ಕೂಡ ಅನುಕೂಲ ಆಗುತ್ತದೆ.

English summary
ONGC may buy all of the government's 51.11 percent stake in Hindustan Petroleum Corporation Ltd and follow it up with an open offer to acquire additional 26 percent from other shareholders of HPCL. The deal for the 77.11 percent stake would be worth Rs 44,000 crore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X