ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಮುಂದೆ ರಿಲಯನ್ಸ್ ಡಿಜಿಟಲ್ ಮಳಿಗೆಯಲ್ಲೂ ಒನ್ ಪ್ಲಸ್ ಲಭ್ಯ

|
Google Oneindia Kannada News

ಮುಂಬೈ, ಅಕ್ಟೋಬರ್ 24: ದೇಶದ ನಂ. 1 ಹಾಗೂ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕನ್ಸ್ಯೂಮರ್ ಇಲೆಕ್ಟ್ರಾನಿಕ್ಸ್ ಮಾರಾಟ ಸಂಸ್ಥೆ ರಿಲಯನ್ಸ್ ಡಿಜಿಟಲ್ ಜೊತೆಗಿನ ಒಪ್ಪಂದವನ್ನು ಅಧಿಕ ಮೌಲ್ಯದ (ಪ್ರೀಮಿಯಂ) ಸ್ಮಾರ್ಟ್‌ಫೋನುಗಳ ನಿರ್ಮಾತೃ ಒನ್‌ಪ್ಲಸ್ ಇಂದು ಘೋಷಿಸಿದೆ.

ಗ್ರಾಹಕರು ದೇಶದೆಲ್ಲೆಡೆಯ ನಗರಗಳಲ್ಲಿ ಒನ್‌ಪ್ಲಸ್ ಮೊಬೈಲ್ ಫೋನುಗಳನ್ನು ಬಳಸಿ ನೋಡಲು ಹಾಗೂ ಕೊಂಡುಕೊಳ್ಳಲು, ಒನ್‌ಪ್ಲಸ್ ಹಾಗೂ ರಿಲಯನ್ಸ್ ಡಿಜಿಟಲ್ ಸಂಸ್ಥೆಗಳು ಈ ಸಹಭಾಗಿತ್ವದ ಮೂಲಕ ಹೆಚ್ಚಿನ ಸಂಖ್ಯೆಯ ಕೇಂದ್ರಗಳನ್ನು ಒದಗಿಸುತ್ತಿವೆ.

ಆಫ್‌ಲೈನ್ ಚಾನೆಲ್ ಪಾರ್ಟ್‌ನರ್ ರೂಪದಲ್ಲಿ ರಿಲಯನ್ಸ್ ಡಿಜಿಟಲ್‌ನ ಪ್ರವೇಶದೊಡನೆ, ಅನುಕೂಲಕರ ಸ್ಥಳಗಳಲ್ಲಿರುವ ಮಳಿಗೆಗಳಲ್ಲಿ ಒನ್‌ಪ್ಲಸ್ ಉತ್ಪನ್ನಗಳನ್ನು ಬಳಸಿ ನೋಡುವ, ಆನ್‌ಲೈನ್‌ನಷ್ಟೇ ಬೆಲೆಯಲ್ಲಿ ಕೊಳ್ಳುವ ಅವಕಾಶ ಗ್ರಾಹಕರಿಗೆ ದೊರಕಲಿದೆ. ಇದರ ಜೊತೆಗೆ ಅವರು ರಿಲಯನ್ಸ್ ಡಿಜಿಟಲ್ ಮಳಿಗೆಗಳಲ್ಲಿ ನಡೆಸಲಾಗುವ ಪ್ರಚಾರ ಅಭಿಯಾನಗಳ ಲಾಭವನ್ನೂ ಪಡೆದುಕೊಳ್ಳಬಹುದಾಗಿದೆ.

ಅಮೆಜಾನ್ : ಪ್ರೀ ಬುಕ್ಕಿಂಗ್ ನಲ್ಲಿ ದಾಖಲೆ ಬರೆದ ಒನ್ ಪ್ಲಸ್ಅಮೆಜಾನ್ : ಪ್ರೀ ಬುಕ್ಕಿಂಗ್ ನಲ್ಲಿ ದಾಖಲೆ ಬರೆದ ಒನ್ ಪ್ಲಸ್

ಈ ಸಂದರ್ಭದಲ್ಲಿ ಮಾತನಾಡಿದ ಒನ್‌ಪ್ಲಸ್ ಇಂಡಿಯಾದ ಪ್ರಧಾನ ವ್ಯವಸ್ಥಾಪಕ ವಿಕಾಸ್ ಅಗರ್‌ವಾಲ್, "ಭಾರತದಲ್ಲಿ ಅಧಿಕ ಮೌಲ್ಯದ (ಪ್ರೀಮಿಯಂ) ಸ್ಮಾರ್ಟ್‌ಫೋನುಗಳ ಮಾರುಕಟ್ಟೆ ಏಕಪ್ರಕಾರವಾಗಿ ಬೆಳೆಯುತ್ತಿದ್ದು, ಆನ್‌ಲೈನ್ ಮತ್ತು ಆಫ್‌ಲೈನ್ ವೇದಿಕೆಗಳೆರಡನ್ನೂ ಪರಿಣಾಮಕಾರಿಯಾಗಿ ಬಳಸಿಕೊಂಡು ಗ್ರಾಹಕರನ್ನು ತಲುಪುವ ಮೂಲಕ ಒನ್‌ಪ್ಲಸ್ ಈ ಮಾರುಕಟ್ಟೆಯಲ್ಲಿ ಬೆಳೆಯಲು ಬಯಸುತ್ತದೆ.

ರಿಲಯನ್ಸ್ ಡಿಜಿಟಲ್ ಜೊತೆಗಿನ ಈ ಸಹಭಾಗಿತ್ವದಿಂದಾಗಿ, ಹಲವು ನಗರಗಳಲ್ಲಿ ಬೆಳೆಯುತ್ತಿರುವ ತನ್ನ ಗ್ರಾಹಕ ಸಮುದಾಯವನ್ನು ಹೆಚ್ಚು ಸಶಕ್ತವಾದ ಭೌತಿಕ ಅಸ್ತಿತ್ವದೊಡನೆ ತಲುಪುವುದು ಒನ್‌ಪ್ಲಸ್‌ಗೆ ಸಾಧ್ಯವಾಗುತ್ತದೆ. ಗ್ರಾಹಕರಿಗೆ ಅತ್ಯುತ್ತಮ ಅನುಭವವನ್ನು ಮಾತ್ರ ನೀಡುವ ರಿಲಯನ್ಸ್ ಡಿಜಿಟಲ್‌ನ ಗುರಿ ಹಾಗೂ ಒನ್‌ಪ್ಲಸ್‌ನ ಗ್ರಾಹಕಪರ ಸಿದ್ಧಾಂತಕ್ಕೆ ಉತ್ತಮ ಹೊಂದಾಣಿಕೆ ಇದೆ." ಎಂದರು.

ಬ್ರಾಂಡ್‌ನ ಆಫ್‌ಲೈನ್ ಕಾರ್ಯತಂತ್ರ

ಬ್ರಾಂಡ್‌ನ ಆಫ್‌ಲೈನ್ ಕಾರ್ಯತಂತ್ರ

ಈ ಸಂದರ್ಭದಲ್ಲಿ ಮಾತನಾಡಿದ ಒನ್‌ಪ್ಲಸ್ ಇಂಡಿಯಾದ ಪ್ರಧಾನ ವ್ಯವಸ್ಥಾಪಕ ವಿಕಾಸ್ ಅಗರ್ ವಾಲ್, "ಬ್ರಾಂಡ್‌ನ ಆಫ್‌ಲೈನ್ ಕಾರ್ಯತಂತ್ರವನ್ನು ತೀವ್ರಗೊಳಿಸುತ್ತಿರುವ ನಡೆಯು ಸದ್ಯ ಅಸ್ತಿತ್ವದಲ್ಲಿರುವ ಆನ್‌ಲೈನ್ ವ್ಯವಹಾರ ಮಾದರಿಗೆ ಪೂರಕವಾಗಿದೆ. ಅಲ್ಲದೆ ಗ್ರಾಹಕರು ಬ್ರಾಂಡ್‌ನೊಂದಿಗೆ ಭೌತಿಕವಾಗಿಯೂ ಸಂಪರ್ಕದಲ್ಲಿರಲು, ಉತ್ಪನ್ನಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಅರ್ಥಮಾಡಿಕೊಳ್ಳಲು ಹಾಗೂ ಆಫ್‌ಲೈನ್ ಗ್ರಾಹಕರ ನಡುವೆಯೂ ಬ್ರಾಂಡ್‌ಗೆ ಹೆಚ್ಚಿನ ಪ್ರಚಾರ ಮತ್ತು ವಿಶ್ವಾಸಾರ್ಹತೆ ದೊರಕಲು ಇದು ಸಹಾಯ ಮಾಡಲಿದೆ," ಎಂದು ಅವರು ಹೇಳಿದರು

 ರಿಲಯನ್ಸ್ ಡಿಜಿಟಲ್‌ನ ಸಿಇಓ ಬ್ರಿಯಾನ್ ಬೇಡ್

ರಿಲಯನ್ಸ್ ಡಿಜಿಟಲ್‌ನ ಸಿಇಓ ಬ್ರಿಯಾನ್ ಬೇಡ್

ಈ ಸಹಭಾಗಿತ್ವ ಕುರಿತು ವಿವರಿಸಿದ ರಿಲಯನ್ಸ್ ಡಿಜಿಟಲ್‌ನ ಸಿಇಓ ಬ್ರಿಯಾನ್ ಬೇಡ್, "ಒನ್‌ಪ್ಲಸ್ ಜೊತೆಗೆ ನಮ್ಮ ಸಹಭಾಗಿತ್ವವನ್ನು ಘೋಷಿಸಲು ರಿಲಯನ್ಸ್ ಡಿಜಿಟಲ್ ಸಂತೋಷಿಸುತ್ತದೆ. ನಾವು ಮಾರಾಟಮಾಡುವ ಉತ್ಪನ್ನಗಳ ಸಾಲಿಗೆ ಒನ್‌ಪ್ಲಸ್ 6ಖಿಯನ್ನು ಸೇರಿಸಿಕೊಳ್ಳುವ ಮೂಲಕ, ಗ್ರಾಹಕರು ತಮ್ಮ ತಂತ್ರಜ್ಞಾನದ ಅಗತ್ಯಗಳನ್ನು ಪೂರೈಸಿಕೊಳ್ಳಲು ಅವರಿಗೆ ವಿಶ್ವದರ್ಜೆಯ ರೀಟೇಲ್ ಅನುಭವ ನೀಡುವ ನಮ್ಮ ನಿರಂತರ ಪ್ರಯತ್ನದ ಕುರಿತು ಮತ್ತೊಮ್ಮೆ ಹೇಳಲು ಬಯಸುತ್ತಿದ್ದೇವೆ." ಎಂದು ಹೇಳಿದರು.

ಭಾರತೀಯ ಮಾರುಕಟ್ಟೆಯಲ್ಲಿ ಶೇ. 40 ಪಾಲು

ಭಾರತೀಯ ಮಾರುಕಟ್ಟೆಯಲ್ಲಿ ಶೇ. 40 ಪಾಲು

ಭಾರತೀಯ ಮಾರುಕಟ್ಟೆಯ ಕುರಿತು ತನ್ನ ಬದ್ಧತೆಯನ್ನು ಪುನರುಚ್ಚರಿಸಿರುವ ಒನ್‌ಪ್ಲಸ್ ಪಾಲಿಗೆ ರಿಲಯನ್ಸ್ ಡಿಜಿಟಲ್ ಜೊತೆಗಿನ ಈ ಒಪ್ಪಂದವು ಮತ್ತೊಂದು ಜಾಗತಿಕ ಪ್ರಥಮ ಸಾಧನೆಯಾಗಿದೆ.

ಕೌಂಟರ್‌ಪಾಯಿಂಟ್‌ ಮಾರ್ಕೆಟ್ ಮಾನಿಟರ್ ಸರ್ವಿಸ್‌ನ 2018ರ ಎರಡನೇ ತ್ರೈಮಾಸಿಕ ವರದಿಯ ಪ್ರಕಾರ, ಭಾರತೀಯ ಮಾರುಕಟ್ಟೆಯಲ್ಲಿ ಶೇ. 40ಕ್ಕೂ ಹೆಚ್ಚಿನ ಪಾಲಿನೊಡನೆ ಅಧಿಕ ಮೌಲ್ಯದ (ಪ್ರೀಮಿಯಂ) ಸ್ಮಾರ್ಟ್‌ಫೋನುಗಳ ಅತಿದೊಡ್ಡ ನಿರ್ಮಾತೃ ಎಂಬ ಹೆಗ್ಗಳಿಕೆಗೆ ಒನ್‌ಪ್ಲಸ್ ಪಾತ್ರವಾಗಿದೆ.
ಲೈವ್ ಡೆಮೋ ಫೋನುಗಳೊಡನೆ ವ್ಯವಹರಿಸಿ

ಲೈವ್ ಡೆಮೋ ಫೋನುಗಳೊಡನೆ ವ್ಯವಹರಿಸಿ

ಈ ಸಹಭಾಗಿತ್ವದ ಅನ್ವಯ, ಒನ್‌ಪ್ಲಸ್ ಹಾಗೂ ರಿಲಯನ್ಸ್ ಡಿಜಿಟಲ್ ಸಂಸ್ಥೆಗಳು ಗ್ರಾಹಕರ ಅನುಕೂಲಕ್ಕಾಗಿ ಲೈವ್ ಡೆಮೋ ಫೋನುಗಳೊಡನೆ ಪ್ರತ್ಯೇಕ ಎಕ್ಸ್‌ಪೀರಿಯೆನ್ಸ್ ಜೋನ್‌ಗಳನ್ನು ರೂಪಿಸಲಿವೆ. ಈ ಕೇಂದ್ರಗಳಲ್ಲಿ ತರಬೇತಿ ಹೊಂದಿದ ಸಿಬ್ಬಂದಿ ಕೂಡ ಇರಲಿದ್ದು ಗ್ರಾಹಕರು ಒನ್‌ಪ್ಲಸ್ ಸಾಧನಗಳನ್ನು ಕುರಿತ ತಮ್ಮ ಪ್ರಶ್ನೆಗಳಿಗೆ ಅವರಿಂದ ನೇರವಾಗಿ ಉತ್ತರ ಪಡೆದುಕೊಳ್ಳಬಹುದಾಗಿದೆ.

English summary
Reliance Digital partnership with OnePlus. With this partnership, OnePlus products will be available at Reliance Digital stores across India, starting with the upcoming launch of OnePlus 6T.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X