ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒನ್‌ಪ್ಲಸ್ ಸಹ ಸ್ಥಾಪಕನಿಂದ ''ನಥಿಂಗ್' ಎಂಬ ಸಂಸ್ಥೆ ಸ್ಥಾಪನೆ

|
Google Oneindia Kannada News

ಬೀಜಿಂಗ್, ಜನವರಿ 27: ವಿಶ್ವದ ಅಗ್ರಗಣ್ಯ ಸ್ಮಾರ್ಟ್ ಫೋನ್ ಒನ್‌ಪ್ಲಸ್ ಸಹ ಸ್ಥಾಪಕ ಕಾರ್ಲ್ ಪಾಯಿ ಅವರು ತಮ್ಮದೇ ಆದ ಹೊಸ ಉದ್ಯಮ ಆರಂಭಿಸಿದ್ದಾರೆ. ಗ್ರಾಹಕರ ಬೇಡಿಕೆ ತಕ್ಕಂತೆ ಉತ್ಪನ್ನ ಒದಗಿಸುವ ತಂತ್ರಜ್ಞಾನ ಸಂಸ್ಥೆ ಇದಾಗಿದ್ದು, ಹೊಸ ಸಂಸ್ಥೆಗೆ ''ನಥಿಂಗ್'' ಎಂಬ ವಿಭಿನ್ನ ಹೆಸರಿಟ್ಟು ಗಮನ ಸೆಳೆದಿದ್ದಾರೆ.

ಬೀಜಿಂಗ್ ನಲ್ಲಿ ಜನಿಸಿದ ಕಾರ್ಲ್ ಅವರು ಸದ್ಯ ಸ್ವೀಡನ್ ದೇಶದ ಪೌರತ್ವ ಹೊಂದಿದ್ದಾರೆ. ಟೆಕ್ ಲೋಕದ ತಜ್ಞ, ಉದ್ಯಮಿಗಳಲ್ಲಿ ಜನಪ್ರಿಯರಾಗಿದ್ದಾರೆ. 2013ರಲ್ಲಿ ಪೀಟ್ ಲಾಯು ಜೊತೆಗೂಡಿ ಒನ್‌ಪ್ಲಸ್ ಸಂಸ್ಥೆ ಸ್ಥಾಪಿಸಿದರು. ಸಂಸ್ಥೆಯ ಜಾಗತಿಕ ನಿರ್ದೇಶಕರಾಗಿದ್ದರು. ಅಕ್ಟೋಬರ್ 2020ರಲ್ಲಿ ಒನ್‌ಪ್ಲಸ್ ತೊರೆದಿದ್ದರು.

OnePlus co-founder Carl Pei launches Company Nothing

ನೋಕಿಯಾದಲ್ಲಿ ಮೊದಲಿಗೆ ತರಬೇತಿ ಪಡೆದುಕೊಂಡಿದ್ದ ಕಾರ್ಲ್ ನಂತರ ಒಪ್ಪೋ ಕಂಪನಿ ಸೇರಿದರು. ಅಲ್ಲಿ ಪೀಟ್ ಲಾಯು ಜೊತೆ ಗೆಳೆತನ ಬೆಳೆಯಿತು. ಒಪ್ಪೊ ತೊರೆದು ಇವರಿಬ್ಬರು ಒನ್‌ಪ್ಲಸ್ ಸ್ಥಾಪಿಸಿ ಕೆಲ ವರ್ಷಗಳಲ್ಲೇ ವಿಶ್ವದ ಅಗ್ರಗಣ್ಯ ಬ್ರ್ಯಾಂಡ್ ಆಗಿ ರೂಪಿಸಿದರು. ಈಗ 31 ವರ್ಷ ವಯಸ್ಸಿನ ಕಾರ್ಲ್ ಯಾವ ಹೊಸ ಉತ್ಪನ್ನಗಳೊಂದಿಗೆ ನಂಥಿಂಗ್ ಕಂಪನಿ ಬೆಳೆಸುತ್ತಾರೆ ಎಂಬ ಕುತೂಹಲ ಟೆಕ್ ಲೋಕದಲ್ಲಿ ಮನೆ ಮಾಡಿದೆ. ಒನ್‌ಪ್ಲಸ್ 7ಸರಣಿ ಸ್ಮಾರ್ಟ್ ಫೋನ್ ಲೋಕಾರ್ಪಣೆ ಮಾಡಲು ಬೆಂಗಳೂರಿಗೂ ಒಮ್ಮೆ ಕಾರ್ಲ್ ಬಂದಿದ್ದರು.

English summary
OnePlus co-founder Carl Pei launches a new consumer tech company and it's literally called Nothing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X