• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರಲ್ಲಿ ಒನ್‍ಪ್ಲಸ್ 2019 ಬಿಡುಗಡೆಗೆ ಅದ್ದೂರಿ ಕಾರ್ಯಕ್ರಮ

|

ಬೆಂಗಳೂರು, ಏಪ್ರಿಲ್ 24: ಯಶಸ್ವಿಯಾದ ವರ್ಷವನ್ನು ಪೂರೈಸಿದ ಹಿನ್ನೆಲೆಯಲ್ಲಿ 2019ರ ಹೊಚ್ಚ ಹೊಸದಾದ ಒನ್‍ಪ್ಲಸ್ ಅನ್ನು ಬೆಂಗಳೂರು ಇಂಟರ್ ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ ನಲ್ಲಿ 2019 ರ ಮೇ 14 ರಂದು ಸಂಜೆ 8.15 ಕ್ಕೆ ಬಿಡುಗಡೆ ಮಾಡಲಾಗುತ್ತಿದೆ. ಇದು ಹೊಸ ಉತ್ಪನ್ನದ ಅತಿದೊಡ್ಡ ಕಾರ್ಯಕ್ರಮವಾಗಿದೆ. ಕೌಶಲ್ಯಭರಿತವಾದ ಕಲೆಗಾರಿಕೆ ಮತ್ತು ಪ್ರಗತಿದಾಯಕ ತಂತ್ರಜ್ಞಾನಗಳು ಸೇರಿದಂತೆ ಭವಿಷ್ಯದ ವೈಶಿಷ್ಟ್ಯತೆಗಳನ್ನು ಒಳಗೊಂಡ ಹೊಸ ಡಿವೈಸ್ ಅನ್ನು ಪರಿಚಯಿಸಲಾಗುತ್ತಿದೆ.

2019 ರ ಏಪ್ರಿಲ್ 25 ರಂದು ಬೆಳಗ್ಗೆ 10 ಗಂಟೆಯಿಂದ ಒನ್‍ಪ್ಲಸ್.ಇನ್ ನಲ್ಲಿ ಕಾರ್ಯಕ್ರಮಗಳ ಪ್ರವೇಶಪತ್ರಗಳನ್ನು ಪಡೆಯಬಹುದಾಗಿದೆ. ಅತ್ಯದ್ಭುತವಾದ ಡಿವೈಸ್‍ಗಳ ಬಿಡುಗಡೆ ಸಮಾರಂಭಕ್ಕೆ ಸಾಕ್ಷಿಯಾಗಬಹುದಾಗಿದೆ. ಒನ್‍ಪ್ಲಸ್‍ನ ಸಿಬ್ಬಂದಿ ಮತ್ತು ಇತರೆ ಸಮುದಾಯದ ಸದಸ್ಯರನ್ನು ಭೇಟಿ ಮಾಡಲು ಹಾಗೂ ಹಲವಾರು ಸಂವಾದಗಳ ಅನುಭವ, ಹೊಸ ಹೊಸ ಉತ್ಪನ್ನಗಳ ಪ್ರಾತ್ಯಕ್ಷಿಕೆಯನ್ನೂ ವೀಕ್ಷಿಸಬಹುದಾಗಿದೆ. ಇದಕ್ಕಾಗಿ ಕೂಡಲೇ ನೀವು ನೋಂದಣಿ ಮಾಡಿಸಿಕೊಳ್ಳಿ.

ಇನ್ಮುಂದೆ ರಿಲಯನ್ಸ್ ಡಿಜಿಟಲ್ ಮಳಿಗೆಯಲ್ಲೂ ಒನ್ ಪ್ಲಸ್ ಲಭ್ಯ

ಕಾರ್ಯಕ್ರಮ ಪಟ್ಟಿ:

* 2019 ರ ಮೇ 14 ರಂದು

* ಮಾಧ್ಯಮ ನೋಂದಣಿ: ಸಂಜೆ 7 ಗಂಟೆಯಿಂದ

* ಬಿಡುಗಡೆ ಕಾರ್ಯಕ್ರಮ ರಾತ್ರಿ 8.15 ರಿಂದ.

ನೂತನ ಮೈಲಿಗಲ್ಲು ಸ್ಥಾಪಿಸುವ ಈ ಕಾರ್ಯಕ್ರಮದಲ್ಲಿ ಒನ್‍ಪ್ಲಸ್‍ಗೆ ಒಂದು ರೂಪ ಕೊಡುವಲ್ಲಿ ಶ್ರಮಿಸಿದ ಒನ್‍ಪ್ಲಸ್ ಸಮುದಾಯ ಇರಲಿದೆ. ಒನ್‍ಪ್ಲಸ್ ಕಂಪನಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದಾಖಲೆಯ ರೂಪದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ವಿಶ್ವದಾದ್ಯಂತದ ಒನ್‍ಪ್ಲಸ್‍ನ 8000 ಕ್ಕೂ ಅಧಿಕ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಭಾರತವಷ್ಟೇ ಅಲ್ಲ, ಯುಎಸ್‍ಎ ಮತ್ತು ಯೂರೋಪ್‍ನಲ್ಲಿಯೂ ಈ ಹೊಸ ಡಿವೈಸ್‍ಗಳ ಬಿಡುಗಡೆ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿವೆ.

ಬೆಂಗಳೂರಿನಲ್ಲಿ ನಡೆಯಲಿರುವ ಈ ಅಭೂತಪೂರ್ವವಾದ ಕಾರ್ಯಕ್ರಮದಲ್ಲಿ ಹಾಜರಾಗಲು ಸಾಧ್ಯವಾಗದಿರುವವರು ಲೈವ್‍ಸ್ಟ್ರೀಂನಲ್ಲಿ ಕಾರ್ಯಕ್ರಮವನ್ನು ವೀಕ್ಷಿಸಬಹುದಾಗಿದೆ. ಈ ಬಿಡುಗಡೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ಒನ್‍ಪ್ಲಸ್ 7 ಸರಣಿಯ ಅಧಿಕೃತ ಪೇಜ್ ಒನ್‍ಪ್ಲಸ್.ಇನ್ ಗೆ ಭೇಟಿ ನೀಡಬಹುದಾಗಿದೆ. ಒನ್‍ಪ್ಲಸ್ 7 ಸರಣಿಯ ನೋಟಿಫೈ ಮಿ'ಯಲ್ಲಿ ಲೈವ್ ಇರುತ್ತದೆ. ಅಲ್ಲದೇ, ನಮ್ಮ ಅಧಿಕೃತ ಎಕ್ಸ್‍ಕ್ಲೂಸಿವ್ ಆನ್‍ಲೈನ್ ಮಾರಾಟ ಸಂಸ್ಥೆನಲ್ಲಿಯೂ ನೇರಪ್ರಸಾರವಿರಲಿದೆ.

English summary
OnePlus on Tuesday announced that it will unveil its 2019 flagship smartphones in India on May 14. Following the footsteps of other premium smartphones’ brands, the company will launch more than one model this time. In India, the event will be hosted at Bangalore International Exhibition Centre
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X