ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಯೋ- ಒನ್‍ಪ್ಲಸ್ 6ಟಿ ಅನ್‍ಲಾಕ್ ಅಫರ್ ತಕ್ಷಣವೇ ಕ್ಯಾಶ್ ಬ್ಯಾಕ್

|
Google Oneindia Kannada News

ಬೆಂಗಳೂರು, ಅಕ್ಟೋಬರ್ 30: 'ಜಿಯೋ- ಒನ್‍ಪ್ಲಸ್ 6ಟಿ ಅನ್‍ಲಾಕ್ ದಿ ಸ್ಪೀಡ್ ಆಫರ್' ಒದಗಿಸಲಿದೆ ಕೇಳರಿಯದ 5,400 ರೂ. ಇನ್‍ಸ್ಟಂಟ್ ಕ್ಯಾಶ್‍ಬ್ಯಾಕ್.

ಒನ್‍ಪ್ಲಸ್ 6ಟಿ ಅಕ್ಟೋಬರ್ 30, 2018ರಂದು ರಾತ್ರಿ 8:30ಕ್ಕೆ ನವದೆಹಲಿಯ ಇಂದಿರಾ ಗಾಂಧಿ ಕ್ರೀಡಾ ಸಂಕೀರ್ಣದಲ್ಲಿರುವ ಕೆಡಿಜೆಡಬ್ಲ್ಯೂ ಸ್ಟೇಡಿಯಂನಲ್ಲಿ ಬಿಡುಗಡೆಗೊಂಡಿದೆ. ನವೆಂಬರ್ 2, 2018ರಿಂದ ಎಲ್ಲಾ ಆನ್‍ಲೈನ್ ಮತ್ತು ಆಫ್‍ಲೈನ್ ವಿಧಾನಗಳಲ್ಲಿ ಒನ್‍ಪ್ಲಸ್ 6ಟಿ ಮಾರಾಟ ಆರಂಭವಾಗಲಿದೆ.

ಇನ್ಮುಂದೆ ರಿಲಯನ್ಸ್ ಡಿಜಿಟಲ್ ಮಳಿಗೆಯಲ್ಲೂ ಒನ್ ಪ್ಲಸ್ ಲಭ್ಯಇನ್ಮುಂದೆ ರಿಲಯನ್ಸ್ ಡಿಜಿಟಲ್ ಮಳಿಗೆಯಲ್ಲೂ ಒನ್ ಪ್ಲಸ್ ಲಭ್ಯ

ಒನ್‍ಪ್ಲಸ್, ಪ್ರೀಮಿಯಂ ಸ್ಮಾರ್ಟ್‍ಫೋನ್ ಬ್ರಾಂಡ್ ಆಗಿದ್ದು, ಇದು ವರ್ಧಿತ ಹೈಸ್ಪೀಡ್ ಡಾಟಾ ಅನುಭವವನ್ನು ತರಲು ಹಾಗೂ ಒನ್‍ಪ್ಲಸ್ ಹಾಗೂ ಜಿಯೋ ಬಳಕೆದಾರರಿಗೆ ಗ್ರಾಹಕ ಸ್ನೇಹಿ ಆಫರ್ ನೀಡುವ ಸಲುವಾಗಿ ವಿಶ್ವದ ಅತಿದೊಡ್ಡ ಮೊಬೈಲ್ ಡಾಟಾ ನೆಟ್‍ವರ್ಕ್ ಆಗಿರುವ ಜಿಯೋದೊಂದಿಗಿನ ತನ್ನ ಸಹಭಾಗಿತ್ವವವನ್ನು ಪ್ರಕಟಿಸಿದೆ.

ಅಮೆಜಾನ್ : ಪ್ರೀ ಬುಕ್ಕಿಂಗ್ ನಲ್ಲಿ ದಾಖಲೆ ಬರೆದ ಒನ್ ಪ್ಲಸ್ಅಮೆಜಾನ್ : ಪ್ರೀ ಬುಕ್ಕಿಂಗ್ ನಲ್ಲಿ ದಾಖಲೆ ಬರೆದ ಒನ್ ಪ್ಲಸ್

ತನ್ನ ಮುಂಬರುವ ಫ್ಲಾಗ್‍ಶಿಪ್ ಡಿವೈಸ್, ಒನ್‍ಪ್ಲಸ್ 6ಟಿನೊಂದಿಗೆ, ಈ ಬ್ರಾಂಡ್ ಗ್ರಾಹಕರಿಗೆ ಹಿಂದೆಂದೂ ಕಂಡರಿಯದ ಜಿಯೋ-ಒನ್‍ಪ್ಲಸ್ 6ಟಿ ಅನ್‍ಲಾಕ್ ದಿ ಸ್ಪೀಡ್ ಆಫರ್ ಅನ್ನು ನೀಡಲಿದೆ. ಇದು ಎಲ್ಲಾ ಒನ್‍ಪ್ಲಸ್ 6ಟಿ ಹಾಗೂ ಜಿಯೋ ಬಳಕೆದಾರರಿಗೆ ಅನೂಹ್ಯವಾದ ಕೊಡುಗೆ ನೀಡಲಿದೆ.

ಜಿಯೋ-ಒನ್‍ಪ್ಲಸ್ 6ಟಿ ಅನ್‍ಲಾಕ್ ದಿ ಸ್ಪೀಡ್ ಆಫರ್

ಜಿಯೋ-ಒನ್‍ಪ್ಲಸ್ 6ಟಿ ಅನ್‍ಲಾಕ್ ದಿ ಸ್ಪೀಡ್ ಆಫರ್

ಮೊದಲ ಬಾರಿಗೆ ಈ ರೀತಿಯ ಆಫರ್ ನೀಡಲಾಗುತ್ತಿದ್ದು, ಇದು 299 ರೂ.ನ ಮೊದಲ ಪ್ರಿಪೇಯ್ಡ್ ರಿಚಾರ್ಜ್ ಮೇಲೆ 5,400 ರೂ.ನ ಇನ್‍ಸ್ಟಂಟ್ ಕ್ಯಾಶ್‍ಬ್ಯಾಕ್ ಒದಗಿಸಲಿದೆ. ಈ ಆಫರ್ ಹೊಂದುವವರು ಮೈಜಿಯೋ ಆಪ್‍ನಲ್ಲಿ ತಲಾ 150 ರೂ. ಮೌಲ್ಯದ 36 ವೋಚರ್‍ಗಳ ರೂಪದಲ್ಲಿ ಕ್ಯಾಶ್‍ಬ್ಯಾಕ್ ಪಡೆಯಲಿದ್ದಾರೆ.

ಗ್ರಾಹಕರು ಈ ವೋಚರ್‍ಗಳನ್ನು 299 ರೂ.ನ ನಂತರದ ರಿಚಾರ್ಜ್ ವೇಳೆ ರಿಡೀಮ್ ಮಾಡಿಕೊಳ್ಳಬಹುದು. ಆಗ ಗ್ರಾಹಕರು ಕೇವಲ 149 ರೂ. ಬೆಲೆ ನೀಡಿದಂತಾಗುತ್ತದೆ. ಈ ಪ್ಲಾನ್ ಅಡಿಯಲ್ಲಿ 28 ದಿನಗಳ ಕಾಲ ಪ್ರತಿದಿನ 3ಜಿಬಿ 4ಜಿ ಡಾಟಾ ಹೊಂದಬಹುದು, ಅನಿಯಮಿತ ಧ್ವನಿ ಕರೆಗಳು, ಎಸ್‍ಎಂಎಸ್ ಸಿಗಲಿದೆ.

ಜತೆಗೆ ಜಿಯೋದ ಪ್ರೀಮಿಯಂ ಅಪ್ಲಿಕೇಶನ್‍ಗಳನ್ನೂ ಹೊಂದಬಹುದಾಗಿದೆ. 36 ರಿಚಾರ್ಜ್‍ಗಳ ಮೂಲಕ 3ಟಿಬಿಯಷ್ಟು 4ಜಿ ಡಾಟಾವನ್ನು ಗ್ರಾಹಕರು ಹೊಂದಲಿದ್ದಾರೆ.

ಒನ್‍ಪ್ಲಸ್ 6ಟಿ ಡಿವೈಸ್‍ಗಳ ಲಭ್ಯತೆ

ಒನ್‍ಪ್ಲಸ್ 6ಟಿ ಡಿವೈಸ್‍ಗಳ ಲಭ್ಯತೆ

ಜಿಯೋ ಅನ್‍ಲಾಕ್ ದಿ ಸ್ಪೀಡ್ ಆಫರ್ ಒನ್‍ಪ್ಲಸ್ 6ಟಿ ಖರೀದಿಸುವ ಪ್ರಸ್ತುತ ಇರುವ ಹಾಗೂ ಹೊಸ ಜಿಯೋ ಗ್ರಾಹಕರಿಬ್ಬರಿಗೂ ಲಭಿಸಲಿದೆ. ರಿಲಯನ್ಸ್ ಡಿಜಿಟಲ್ ಸ್ಟೋರ್, ಮೈಜಿಯೋ ಸ್ಟೋರ್ಸ್, ಜಿಯೋ ರಿಟೈಲರ್ಸ್ ಮತ್ತು ಮೈಜಿಯೋ ಆಪ್‍ನಲ್ಲಿ 299 ರೂ. ಮೊದಲ ಪ್ರಿಪೇಯ್ಡ್ ರಿಚಾರ್ಜ್ ಮಾಡಿಸಿಕೊಂಡಾಗ ಈ ಆಫರ್ ಲಭ್ಯವಾಗಲಿದೆ.

ಮೈಜಿಯೋ ಆಪ್ ಮೂಲಕ ನಂತರದ ರಿಚಾರ್ಜ್ ಮಾಡಿಕೊಂಡಾಗ ಮಾತ್ರ ಈ ಕ್ಯಾಶ್‍ಬ್ಯಾಕ್ ವೋಚರ್ ಗಳನ್ನು ರಿಡೀಮ್ ಮಾಡಿಕೊಳ್ಳಬಹುದಾಗಿದೆ.

ನೆಟ್‍ವರ್ಕ್ ಅನುಕೂಲ

ನೆಟ್‍ವರ್ಕ್ ಅನುಕೂಲ

ಜಿಯೋ, ವಿಶ್ವದ ಅತಿದೊಡ್ಡ ಮೊಬೈಲ್ ಡಾಟಾ ನೆಟ್‍ವರ್ಕ್ ಆಗಿದ್ದು, ಇದು ಭಾರತ ಮತ್ತು ಭಾರತೀಯರ ಗೇಮ್ ಚೇಂಜರ್ ಆಗಿದೆ. ಜಿಯೋ ವಿಶ್ವದ ಅತಿದೊಡ್ಡ ಮೊಬೈಲ್ ಡಾಟಾ ನೆಟ್‍ವರ್ಕ್ ಆಗಿದೆ ಮತ್ತು ದೇಶದ ಅತಿವೇಗದ ನೆಟ್‍ವರ್ಕ್ ಆಗಿ ಸತತವಾಗಿ rank ಗಳಿಸಿದೆ. ಜಿಯೋದ ಸುಧಾರಿತ ತಂತ್ರಜ್ಞಾನ, ಹೈ ಸ್ಪೀಡ್ ಡಾಟಾ, ಉಚಿತ ಎಚ್‍ಡಿ ಧ್ವನಿ ಮತ್ತು ಪ್ರೀಮಿಯಂ ಕಂಟೆಂಟ್‍ನೊಂದಿಗೆ ಒನ್‍ಪ್ಲಸ್ 6ಟಿ ಬಳಕೆದಾರರು ತಡೆರಹಿತ ಹೈ ಸ್ಪೀಡ್ ಡಾಟಾ ಅನುಭವ ಪಡೆಯಲು ಸಾಧ್ಯವಾಗಲಿದೆ ಮತ್ತು ಡಿವೈಸ್‍ನ ನೈಜ ಸಾಮಥ್ರ್ಯ ಕಾಣಲಿದ್ದಾರೆ. ಭಾರತದಾದ್ಯಂತ 4ಜಿ ನೆಟ್‍ವರ್ಕ್ ಹಾಗೂ ಧ್ವನಿ ಸೇವೆಗಳನ್ನು (ವೋಲ್ಟೆ) ಒದಗಿಸುತ್ತಿರುವ ಏಕೈಕ ನೆಟ್‍ವರ್ಕ್ ಜಿಯೋ ಆಗಿದೆ.

ಹೊಸ ಒನ್‍ಪ್ಲಸ್ 6ಟಿ

ಹೊಸ ಒನ್‍ಪ್ಲಸ್ 6ಟಿ

ಹೊಸ ಒನ್‍ಪ್ಲಸ್ 6ಟಿ ಫ್ಯೂಚರಿಸ್ಟಿಕ್ ಸ್ಕ್ರೀನ್ ಅನ್‍ಲಾಕ್ ತಂತ್ರಜ್ಞಾನದೊಂದಿಗಿನ ಕಂಪನಿಯ ಮೊದಲ ಡಿವೈಸ್ ಆಗಿದೆ, ಇದರಲ್ಲಿ ದೊಡ್ಡನೆಯ 3700 ಎಂಎಎಚ್ ಬ್ಯಾಟರಿ ಇದೆ, ಜತೆಗೆ ಒನ್‍ಪ್ಲಸ್‍ನ ಜನಪ್ರಿಯ ಅತಿವೇಗದಲ್ಲಿ ಚಾರ್ಜ್ ಆಗುವ ತಂತ್ರಜ್ಞಾನವೂ ಇರಲಿದೆ.

ಕ್ವಾಲ್‍ಕಮ್‍ನ ಫ್ಲಾಗ್‍ಶಿಪ್ ಪ್ರೊಸೆಸರ್, ಸ್ನಾಪ್‍ಡ್ರಾಗನ್ 845 ಎಸ್‍ಒಸಿಯೂ ಇದರಲ್ಲಿರಲಿದೆ.ಆಕ್ಸಿಜನ್ ಒಎಸ್ ಸಾಫ್ಟ್ ವೇರ್ ಇದರಲ್ಲಿದೆ. ಎಐ ಆಧಾರಿತ ಆಲ್ಗೊರಿತಂ ಸೇರ್ಪಡೆ ಮಾಡಲಾಗಿದ್ದು, ಇದು ರಾತ್ರಿ ವೇಳೆ ಬ್ಯಾಕ್‍ಗ್ರೌಂಡ್ ಬಳಕೆ ಕಡಿಮೆ ಮಾಡಲಿದೆ. ಇದರಿಂದಾಗಿ ಪವರ್ ಬಳಕೆಯೂ ತಗ್ಗಲಿದೆ.

ಒನ್‍ಪ್ಲಸ್ ಬಗ್ಗೆ

ಒನ್‍ಪ್ಲಸ್ ಬಗ್ಗೆ

ಒನ್‍ಪ್ಲಸ್ ಒಂದು ಜಾಗತಿಕ ಮೊಬೈಲ್ ತಂತ್ರಜ್ಞಾನ ಸಂಸ್ಥೆಯಾಗಿದ್ದು. ಒನ್‍ಪ್ಲಸ್ ಯಾವತ್ತೂ ನಿಂತ ನೀರಾಗುವುದಿಲ್ಲ ಎಂಬ ಮಂತ್ರದೊಂದಿಗೆ ಕಾರ್ಯಾಚರಿಸುವ ಸಂಸ್ಥೆ. ಉನ್ನತ ಕಾರ್ಯಕ್ಷಮತೆಯ ಹಾರ್ಡ್‍ವೇರ್ ಹಾಗೂ ಪ್ರೀಮಿಯಂ ಬಿಲ್ಡ್ ಗುಣಮಟ್ಟದೊಂದಿಗಿನ ಆಕರ್ಷಕ ವಿನ್ಯಾಸದ ಡಿವೈಸ್‍ಗಳನ್ನು ನಿರ್ಮಿಸುತ್ತದೆ. ಬಳಕೆದಾರರು ಹಾಗೂ ಅಭಿಮಾನಿಗಳ ಸಮುದಾಯದೊಂದಿಗೆ ಬಲಿಷ್ಠವಾದ ಬಂಧವವನ್ನು ನಿರ್ಮಿಸಿದೆ.

English summary
“The Jio-OnePlus 6T Unlock the Speed offer will be live on Jio platform once the OnePlus 6T is available in the market which is scheduled for 2nd November.”
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X