ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒನ್‍ಪ್ಲಸ್6 ಲೋಕಾರ್ಪಣೆ ಪಾಪ್-ಅಪ್ ಮಳಿಗೆಯಲ್ಲಿ ನೂಕು ನುಗ್ಗಲು

By Mahesh
|
Google Oneindia Kannada News

ಬೆಂಗಳೂರು, ಮೇ 21, 2018: ಬಹು-ನಿರೀಕ್ಷಿತ ಒನ್ ಪ್ಲಸ್ 6ರ ಜಾಗತಿಕ ಲೋಕಾರ್ಪಣೆ ಬೆನ್ನಲ್ಲೇ, ಜನಪ್ರಿಯ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ತಯಾರಕ ಸಂಸ್ಥೆಯು ಅಭಿಮಾನಿಗಳಿಗೆ ಒಂದು ಅದ್ಭುತ ಅವಕಾಶವನ್ನು ಕಲ್ಪಿಸಿದೆ.

ಬ್ರಿಗೇಡ್ ರಸ್ತೆಯಲ್ಲಿರುವ ಒನ್‍ಪ್ಲಸ್ ಎಕ್ಸ್‍ಪೀರಿಯೆನ್ಸ್ ಸ್ಟೋರ್‍ನಲ್ಲಿ ಎರಡು - ದಿನಗಳ ಪಾಪ್-ಅಪ್ ಮಳಿಗೆಯಲ್ಲಿ ಕಂಪನಿಯ ಅತ್ಯಾಧುನಿಕ ಫ್ಲ್ಯಾಗ್‍ಶಿಪ್ ಡಿವೈಸ್ ಅನ್ನು ಅನುಭವಿಸುವ ಮತ್ತು ಖರೀದಿಸುವ ಅವಕಾಶವನ್ನು ಗ್ರಾಹಕರಿಗೆ ನೀಡಲಾಗಿದೆ.

ಒನ್‍ಪ್ಲಸ್‍ನಿಂದ ಬೈಬ್ಯಾಕ್ ಯೋಜನೆ ಆರಂಭಒನ್‍ಪ್ಲಸ್‍ನಿಂದ ಬೈಬ್ಯಾಕ್ ಯೋಜನೆ ಆರಂಭ

ಬಹುನಿರೀಕ್ಷಿತ ಪಾಪ್-ಅಪ್ ಮಳಿಗೆಯ ಉದ್ಘಾಟನೆಯಲ್ಲಿ ನೂರಾರು ಸಂಖ್ಯೆಯ ಅಭಿಮಾನಿಗಳು ನೆರೆದಿದ್ದು ವಿಶೇಷವಾಗಿತ್ತು. ಫೋನ್ ಖರೀದಿಗೆ ಮೊದಲು ಬಂದವರಿಗಷ್ಟೇ ಮೊದಲ ಆದ್ಯತೆ ನೀತಿಯನ್ನು ಅನುಸರಿಸಿದ್ದ ಕಾರಣ, ಫೋನ್ ಅನ್ನು ಮೊದಲು ತಮ್ಮದಾಗಿಸಿಕೊಳ್ಳಬೇಕು ಎಂಬ ಉತ್ಸುಕತೆಯಿಂದ ಈ ಅಭಿಮಾನಿಗಳು ಇಷ್ಟೊಂದು ಸಂಖ್ಯೆಯಲ್ಲಿ ನೆರೆದಿದ್ದರು.ಇಲ್ಲಿ ಫೋನ್ ಖರೀದಿಸಿದ ಪ್ರತಿಯೊಬ್ಬರೂ ವಿಶೇಷವಾದ ಆಡ್-ಆನ್ ಗಳು ಮತ್ತು ಒನ್‍ಪ್ಲಸ್ ಗೂಡೀಸ್‍ಗಳನ್ನು ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಒನ್‍ಪ್ಲಸ್ ಇಂಡಿಯಾ ಜನರಲ್ ಮ್ಯಾನೇಜರ್ ವಿಕಾಸ್ ಅಗರ್ವಾಲ್, "ಪ್ರತಿ ಬಾರಿಯೂ ನಮ್ಮ ಪಾಪ್-ಅಪ್ ಮಳಿಗೆಗಳಲ್ಲಿ ನಮ್ಮ ಹೊಸ ಡಿವೈಸ್‍ಗಳನ್ನು ತಮ್ಮದಾಗಿಸಿಕೊಳ್ಳಲು ಹಾಗೂ ಅದರ ಮೊದಲ ಅನುಭವ ಪಡೆಯಲು ನೂರಾರು ಅಭಿಮಾನಿಗಳು ಸೇರುವುದು ಖುಷಿಯ ಸಂಗತಿ.

ಜಾಗತಿಕವಾಗಿ ಪಾಪ್-ಅಪ್ ಮಳಿಗೆ ಹೊಂದಿರುವ ಸಂಸ್ಥೆ

ಜಾಗತಿಕವಾಗಿ ಪಾಪ್-ಅಪ್ ಮಳಿಗೆ ಹೊಂದಿರುವ ಸಂಸ್ಥೆ

'ಜಾಗತಿಕವಾಗಿ ಪಾಪ್-ಅಪ್ ಮಳಿಗೆಯನ್ನು ಹೊಂದಿರುವ ಏಕೈಕ ಸ್ಮಾರ್ಟ್ ಫೋನ್ ಬ್ರಾಂಡ್ ಎಂಬ ಹೆಗ್ಗಳಿಗೆ ಒನ್‍ಪ್ಲಸ್‍ಗಿದೆ. ಇದು ಒನ್‍ಪ್ಲಸ್ ತಂಡದ ಜೊತೆಗೆ ಸಂಪರ್ಕ ಸಾಧಿಸಲು ಮತ್ತು ಸಂವಾದ ನಡೆಸಲು ನಮ್ಮ ಸಮುದಾಯಕ್ಕೂ ಅವಕಾಶ ಕಲ್ಪಿಸುತ್ತದೆ. ಅಲ್ಲದೆ, ಒಂದು ಬ್ರ್ಯಾಂಡ್ ಆಗಿ, ಅವರ ನಿರೀಕ್ಷೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲೂ ನೆರವಾಗಿದೆ' ಎಂದರು.

ಅಭಿಮಾನಿಗಳೊಂದಿಗೆ ಒನ್ ಪ್ಲಸ್ ಸಂಪರ್ಕ

ಅಭಿಮಾನಿಗಳೊಂದಿಗೆ ಒನ್ ಪ್ಲಸ್ ಸಂಪರ್ಕ

ಒನ್‍ಪ್ಲಸ್ 2 ಬಿಡುಗಡೆಯಾದಾಗಿನಿಂದಲೂ ಇಂತಹ ಪಾಪ್-ಅಪ್ ಮಳಿಗೆಗಳ ಮೂಲಕವಾಗಿ ಅಭಿಮಾನಿಗಳೊಂದಿಗೆ ಒನ್ ಪ್ಲಸ್ ಸಂಪರ್ಕ ಸಾಧಿಸುತ್ತಲೇ ಬಂದಿದೆ. ಮೇ 21 ಮತ್ತು ಮೇ 22ರಂದು ಏಕಕಾಲದಲ್ಲಿ ಹಲವು ನಗರಗಳಲ್ಲಿ ಪಾಪ್-ಅಪ್ ಕಾರ್ಯಕ್ರಮಗಳು ನಡೆಯಲಿವೆ. ಜತೆಗೆ, ನ್ಯೂಯಾರ್ಕ್, ಸ್ಯಾನ್ ಫ್ರಾನ್ಸಿಸ್ಕೋ, ಲಂಡನ್, ಪ್ಯಾರಿಸ್, ಮಿಲನ್, ಬರ್ಲಿನ್, ಬೀಜಿಂಗ್, ಬೆಂಗಳೂರು, ದೆಹಲಿ, ಮುಂಬೈ, ಪುಣೆ, ಚೆನ್ನೈ, ಹೈದರಾಬಾದ್, ಕೋಲ್ಕತ್ತಾ, ಅಹಮದಾಬಾದ್ ಮತ್ತು ಇನ್ನೂ ಅನೇಕ ನಗರಗಳು ಸೇರಿದಂತೆ ವಿಶ್ವದಾದ್ಯಂತ ನಡೆಯಲಿವೆ.

ಗಾಜಿನ ವಿನ್ಯಾಸ ಹೊಂದಿರುವ ಈ ಫೋನ್

ಗಾಜಿನ ವಿನ್ಯಾಸ ಹೊಂದಿರುವ ಈ ಫೋನ್

ಒನ್‍ಪ್ಲಸ್ ಸರಣಿಯಲ್ಲೇ ಸಂಪೂರ್ಣ ಗಾಜಿನ ವಿನ್ಯಾಸ ಹೊಂದಿರುವ ಈ ಫೋನ್, ಕಂಪನಿಯು ಹೊರತಂದಿರುವ ಅತಿ ಅತ್ಯಾಧುನಿಕ ಹ್ಯಾಂಡ್ ಸೆಟ್ ಇದಾಗಿದೆ. 6.28 ಇಂಚಿನ 19:9 ಅಮೋಲ್ಡ್ ಫುಲ್ ಆಫ್ಟಿಕ್ ಡಿಸ್‍ಪ್ಲೇ ಮತ್ತು ಕ್ವಾಲ್‍ಕಾಮ್ ಸ್ನ್ಯಾಪ್‍ಡ್ರ್ಯಾಗನ್ 845 ಹೊಂದಿರುವ ಒನ್‍ಪ್ಲಸ್ 6, ಅತ್ಯುತ್ತಮ ವೀಕ್ಷಣೆ ಅನುಭವ ಹಾಗೂ ನಯವಾದ ಕಾರ್ಯಕ್ಷಮತೆ ಹೊಂದಿದೆ. ಈ ಕೆಳಗಿನ ವೇರಿಯೆಂಟ್‍ಗಳಲ್ಲಿ ಇದು ಲಭ್ಯವಿದೆ.

ಪಾಪ್-ಅಪ್ ಮಳಿಗೆಯಲ್ಲಿ ಆಫ್ ಲೈನ್ ಮಾರಾಟ

ಪಾಪ್-ಅಪ್ ಮಳಿಗೆಯಲ್ಲಿ ಆಫ್ ಲೈನ್ ಮಾರಾಟ

ಇದರಲ್ಲಿನ ಮಿರರ್ ಬ್ಲ್ಯಾಕ್ ಮಾಡೆಲ್ ಪಾಪ್-ಅಪ್ ಮಳಿಗೆಯಲ್ಲಿ ಆಫ್ ಲೈನ್ ಮಾರಾಟಕ್ಕೂ ಲಭ್ಯವಿದೆ. ಇದರಲ್ಲಿ 6 ಜಿಬಿ ರಾಮ್+ 64 ಜಿಬಿ ಸ್ಟೋರೇಜ್ ಹಾಗೂ 8 ಜಿಬಿ ರಾಮ್ + 128 ಜಿಬಿ ಸ್ಟೋರೇಜ್ ಆಯ್ಕೆಯೂ ಇದೆ. ಮಿಡ್ ನೈಟ್ ಬ್ಲ್ಯಾಕ್ ವಿಧವು ಕೇವಲ 8 ಜಿಬಿ ರಾಮ್ + 128 ಜಿಬಿ ಸ್ಟೋರೇಜ್ ನಲ್ಲಿ ಲಭ್ಯವಿದೆ. 6ಜಿಬಿ/64 ಜಿಬಿ ಮಾಡೆಲ್ 34,999 ರೂ.ಗಳು ಹಾಗೂ 8ಜಿಬಿ/128 ಜಿಬಿ ಮಾಡೆಲ್ 39,999 ರೂ.ಗಳಿಗೆ ದೊರೆಯಲಿದೆ.

English summary
OnePlus community gather in throngs at the OnePlus 6 pop-up store in Bengaluru to buy the latest flagship
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X