• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಏನಿದು ಸವರನ್ ಗೋಲ್ಡ್ ಬಾಂಡ್? ಏನು ಪ್ರಯೋಜನ?

By ವಿಕಾಸ್ ನಂಜಪ್ಪ
|

ನವದೆಹಲಿ, ಸೆ. 10: ಚಿನ್ನದ ನಗದೀಕರಣಕ್ಕಾಗಿ ಕೇಂದ್ರ ಸರ್ಕಾರ ಮೂರು ಪ್ರಮುಖ ಯೋಜನೆಗಳನ್ನು ಘೋಷಿಸಿದ್ದು, ಈ ಪೈಕಿ ಸವರನ್ ಗೋಲ್ಡ್ ಬಾಂಡ್ ಯೋಜನೆಗೆ ಕೇಂದ್ರ ಸಚಿವ ಸಂಪುಟದ ಒಪ್ಪಿಗೆ ಸಿಕ್ಕಿದೆ. ಚಿನ್ನದ ಖರೀದಿಗೆ ಬದಲಿ ಸೌಲಭ್ಯ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ದೇಶದಲ್ಲಿರುವ ಸುಮಾರು 20 ಸಾವಿರ ಟನ್‌ ಚಿನ್ನವನ್ನು ನಗದಾಗಿ ಪರಿ­­­ವರ್ತಿಸಲು ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು, ಹಾಲಿ ಜಾರಿಯಲ್ಲಿರುವ ಚಿನ್ನದ ಠೇವಣಿ ಮತ್ತು ಚಿನ್ನ ಸಾಲ ಯೋಜನೆಗೆ ಬದಲಾಗಿ ಮೂರು ಹೊಸ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಚಿನ್ನ ನಗದೀಕರಣ, ಸವರನ್ ಗೋಲ್ಡ್ ಬಾಂಡ್ ಹಾಗೂ ಇಂಡಿಯನ್ ಗೋಲ್ಡ್ ಕಾಯಿನ್ ಮೂರು ಹೊಸ ಯೋಜನೆಗಳಾಗಿವೆ.

ಸವರನ್ ಗೋಲ್ಡ್ ಯೋಜನೆಯ ಮೊದಲ ಹಂತದಲ್ಲಿ ಸುಮಾರು 50 ಟನ್ ಗಳಷ್ಟು ಮೌಲ್ಯಕ್ಕೆ ಸಮಾನವಾದ 13,500 ಕೋಟಿ ರು ಬೆಲೆ ಬಾಳುವ ಬಾಂಡ್ ಗಳನ್ನು ಸರ್ಕಾರ ವಿತರಿಸಲಿದೆ. [ಭಾರತದ ಪ್ರಮುಖ ನಗರಗಳಲ್ಲಿನ ಪ್ರಸ್ತುತ ಚಿನ್ನದ ಬೆಲೆ ಎಷ್ಟು ]

ಇದರಿಂದ ಚಿನ್ನದ ಆಮದು ಕಡಿಮೆ ಮಾಡುವುದು ಹಾಗೂ ಜನರು ಬಳಸದೆ ಕಪಾಟು ಸೇರಿರುವ ಚಿನ್ನವನ್ನು ಬ್ಯಾಂಕ್​ನಲ್ಲಿಡುವಂತೆ ಮಾಡಿ ಬಡ್ಡಿ ನೀಡುವುದು ಸರ್ಕಾರದ ಉದ್ದೇಶವಾಗಿದೆ.

ಪ್ರತಿ ವರ್ಷ 1,000 ಟನ್ ಗಳಷ್ಟು ಚಿನ್ನ ಬಳಕೆಯಾಗುತ್ತಿದ್ದು, ಹೆಚ್ಚಿನ ಪ್ರಮಾಣ ಆಮದಾಗುತ್ತಿದೆ. ಇಂಧನದ ನಂತರ ಚಿನ್ನ ಆಮದು ಪ್ರಮಾಣವೇ ಅಧಿಕವಾಗಿದೆ. [ಬೆಂಗಳೂರು ಸಂಸ್ಥೆ ಪಾಲಾದ ಅತಿ ದೊಡ್ಡ ಚಿನ್ನ ಶುದ್ಧೀಕರಣ ಘಟಕ]

ಏನಿದು ಸವರನ್ ಗೋಲ್ಡ್ ಬಾಂಡ್?

* ಈ ಚಿನ್ನದ ಬಾಂಡ್ ನಲ್ಲಿ ಗ್ರಾಹಕರು ವಾರ್ಷಿಕವಾಗಿ 500 ಗ್ರಾಂ ತನಕ ಹೂಡಿಕೆ ಮಾಡಬಹುದು.

* ಹೂಡಿಕೆ ಉದ್ದೇಶದಿಂದ ಚಿನ್ನ ಖರೀದಿದಾರರಿಗೆ ಈ ಯೋಜನೆ

* 2, 5, 10 ಗ್ರಾಂಗಳ ಬಾಂಡ್​ಗಳು ಲಭ್ಯ

* ಚಿನ್ನದ ಗಟ್ಟಿ ಬದಲು ಬಾಂಡ್ ಖರೀದಿಗೆ ಅವಕಾಶ

* ವಾರ್ಷಿಕ 500 ಗ್ರಾಂ ಗರಿಷ್ಠ ಹೂಡಿಕೆ ಮಿತಿ

* 5-7 ವರ್ಷಗಳ ಅವಧಿಗೆ ಬಾಂಡ್ ವಿತರಣೆ

* 2015-16ರ ಕೇಂದ್ರ ಬಜೆಟ್ ನಲ್ಲಿ ಘೋಷಿತ ಯೋಜನೆ ಇದಾಗಿದೆ.

ಬಾಂಡ್ ಎಲ್ಲಿ ಸಿಗುತ್ತದೆ?: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳು, ಎನ್ ಬಿಎಫ್ ಸಿ ಹಾಗೂ ಅಂಚೆ ಕಚೇರಿ ಗಳಲ್ಲಿ ಸಿಗುತ್ತದೆ.

ಏನು ಪ್ರಯೋಜನ?: ಇತರೆ ಚಿನ್ನದ ಯೋಜನೆ ಮೇಲಿನ ಹೂಡಿಕೆಗೆ ಅನ್ವಯವಾಗುವ ತೆರಿಗೆ ಈ ಯೋಜನೆಗೂ ಅನ್ವಯವಾಗುತ್ತದೆ. ಹೂಡಿಕೆ ಮೇಲೆ ಬ್ಯಾಂಕಿನಿಂದ ಸಾಲ ಪಡೆಯಬಹುದಾಗಿದೆ. ಈ ಯೋಜನೆ ಭಾರತೀಯ ನಾಗರಿಕರಿಗೆ ಮಾತ್ರ ಲಭ್ಯವಿದೆ. ಹೂಡಿಕೆ ಮಾಡುವ ಚಿನ್ನದ ಗುಣಮಟ್ಟದ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ.

English summary
Oneindia Explainer : The government of India has approved the sovereign gold bond scheme. Sovereign gold bonds are certificates issued by the government saying that investors bought a certain amount of gold.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more