ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೇಜಾನ್ ಅಧಿಪತ್ಯ ಅಂತ್ಯಕ್ಕೆ ಭಾರತದಿಂದ ಓಎನ್‌ಡಿಸಿ ಅಸ್ತ್ರ

|
Google Oneindia Kannada News

ನವದೆಹಲಿ, ಏ. 29: ಅಮೆರಿಕದ ಪ್ರಮುಖ ಇ-ಕಾಮರ್ಸ್ ದೈತ್ಯ ಕಂಪನಿಗಳಾದ ಅಮೇಜಾನ್ ಮತ್ತು ವಾಲ್‌ ಮಾರ್ಟ್ ಭಾರತದ ಇ-ಮಾರುಕಟ್ಟೆಯಲ್ಲಿ ಬಹುತೇಕ ಸಂಪೂರ್ಣ ಹಿಡಿತ ಹೊಂದಿವೆ. ಹಾಗೆಯೇ ಇವರು ಮಾರುಕಟ್ಟೆಯಲ್ಲಿ ಕಾನೂನುಬಾಹಿರವಾಗಿ ವ್ಯವಹಾರ ನಡೆಸುತ್ತಿರುವ ಆರೋಪ ಇದೆ. ಈ ಬಹುರಾಷ್ಟ್ರೀಯ ಕಂಪನಿಗಳ ಅಧಿಪತ್ಯಕ್ಕೆ ಕಡಿವಾಣ ಹಾಕಲು ಭಾರತ ಸರಕಾರ ಡಿಜಿಟಲ್ ಕಾಮರ್ಸ್ ಮುಕ್ತ ಜಾಲ (ಒಎನ್‌ಡಿಸಿ - Open Network for Digital Commerce) ಎಂಬ ಹೊಸ ವ್ಯವಸ್ಥೆ ಆರಂಭಿಸುತ್ತಿದೆ. ಇಂದು ಅದರ ಬಿಡುಗಡೆ ಆಗುತ್ತಿದೆ.

ಅಮೇಜಾನ್ ಮತ್ತು ವಾಲ್‌ಮಾರ್ಟ್‌ಗೆ ಜೋಡಿತವಾದ ಕೆಲ ಭಾರತೀಯ ಮಾರಾಟಗಾರರ ಕಚೇರಿಗಳ ಮೇಲೆ ನಿನ್ನೆ ಗುರುವಾರ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸಿದ್ದರು. ಅದರಲ್ಲಿ ಅಮೇಜಾನ್ ಮತ್ತು ವಾಲ್‌ಮಾರ್ಟ್ ಕಂಪನಿಗಳು ನಿರ್ದಿಷ್ಟ ಮಾರಾಟಗಾರರಿಗೆ ಮಾತ್ರ ಆದ್ಯತೆ ಕೊಟ್ಟಿರುವ ವಿಚಾರ ಬೆಳಕಿಗೆ ಬಂದಿದೆ. ಇದು ಭಾರತದ ಸ್ಪರ್ಧಾತ್ಮಕತೆ ಕಾನೂನುಗಳ (Competition Laws) ಉಲ್ಲಂಘನೆ ಎಂದು ಹೇಳಲಾಗಿದೆ.

ಬಹುಕೋಟಿ ಐಪಿಎಲ್ ಬಿಡ್ಡಿಂಗ್ ರೇಸ್: ಅಮೆಜಾನ್, ರಿಲಯನ್ಸ್, ಸೋನಿ ಪೈಪೋಟಿಬಹುಕೋಟಿ ಐಪಿಎಲ್ ಬಿಡ್ಡಿಂಗ್ ರೇಸ್: ಅಮೆಜಾನ್, ರಿಲಯನ್ಸ್, ಸೋನಿ ಪೈಪೋಟಿ

ಅಮೇಜಾನ್ ಮತ್ತು ಫ್ಲಿಪ್‌ಕಾರ್ಟ್ ಪ್ಲಾಟ್‌ಫಾರ್ಮ್‌ಗಳಲ್ಲಿ ಕೆಲವೇ ಕೆಲ ಮಾರಾಟಗಾರರಿಗೆ ಅನುಕೂಲ ಆಗುತ್ತಿದೆ. ಬಹಳ ಅಗ್ರೆಸಿವ್ ಆಗಿ ಪ್ರೈಸಿಂಗ್ ಇಟ್ಟು ಸಣ್ಣ ಮಾರಾಟಗಾರ ಸ್ಪರ್ಧೆಯನ್ನು ಹತ್ತಿಕ್ಕಲಾಗುತ್ತಿದೆ ಎಂಬುದು ಕೆಲ ಭಾರತೀಯ ರೀಟೇಲ್ ಮಾರಾಟಗಾರರ ಅಸಮಾಧಾನವಾಗಿದೆ. ಈಗ ಕೇಂದ್ರ ಸರಕಾರ ತನ್ನದೇ ಆದ ಒಎನ್‌ಡಿಸಿ ಪ್ಲಾಟ್‌ಫಾರ್ಮ್ ಅನ್ನು ಆರಂಭಿಸುತ್ತಿರುವುದನ್ನು ಇವರು ಸ್ವಾಗತಿಸಿದ್ದಾರೆ.

Centre launching ONDC platform to counter dominance of Amazon, Walmart

ಕೇಂದ್ರ ಸರಕಾರ ಕಳೆದ ವರ್ಷವೇ ಒಎನ್‌ಡಿಸಿ ಜಾಲ ರೂಪಿಸುವ ಯೋಚನೆ ಆರಂಭಿಸಿತ್ತು. ಉದ್ಯಮ ಮತ್ತು ಆಂತರಿಕ ವ್ಯಾಪಾರ ಉತ್ತೇಜಕ ಇಲಾಖೆ (ಡಿಪಿಐಐಟಿ- Department for Promotion of Industry and Internal Trade) ಇದರ ಸೃಷ್ಟಿಕರ್ತ. ಕಳೆದ ವರ್ಷ, ಅಂದರೆ 2021, ಡಿಸೆಂಬರ್ 31ರಂದು ಒಎನ್‌ಡಿಸಿಯನ್ನ ರೂಪಿಸಲಾಗಿದೆ.

ಫ್ಲಿಪ್‌ಕಾರ್ಟ್‌ ಪೇ ಲೇಟರ್: 42 ಮಿಲಿಯನ್‌ಗೂ ಹೆಚ್ಚು ವಹಿವಾಟು ಫ್ಲಿಪ್‌ಕಾರ್ಟ್‌ ಪೇ ಲೇಟರ್: 42 ಮಿಲಿಯನ್‌ಗೂ ಹೆಚ್ಚು ವಹಿವಾಟು

ಇದು ಓಪನ್ ಸೋರ್ಸ್ ಟೆಕ್ನಾಲಜಿ ನೆಟ್ವರ್ಕ್ ಆಗಿದ್ದು ಖಾಸಗಿ ವಲಯದವರ ನೇತೃತ್ವದಲ್ಲೇ ಇದು ನಡೆಯಲಿದೆ. ಇದು ಓಪನ್ ಸೋರ್ಸ್ ಪ್ಲಾಟ್‌ಫಾರ್ಮ್ ಆದ್ದರಿಂದ ಎಲ್ಲಾ ರೀತಿಯ ಮಾರಾಟಗಾರರು ಮತ್ತು ಗ್ರಾಹಕರಿಗೆ ಮುಕ್ತ ಅವಕಾಶ ಕಲ್ಪಿಸುತ್ತದೆ. ಯಾರು ಯಾವುದೇ ಪ್ಲಾಟ್‌ಫಾರ್ಮ್‌ನಲ್ಲಿ ನೊಂದಾಯಿಸಿದರೂ ಅವರಿಗೆ ಒಎನ್‌ಡಿಸಿಯಲ್ಲಿ ವೇದಿಕೆ ಇದ್ದೇ ಇರುತ್ತದೆ.

ಒಎನ್‌ಡಿಸಿಯಲ್ಲಿ 3 ಕೋಟಿ ಮಾರಾಟಗಾರರು ಮತ್ತು 1 ಕೋಟಿ ವ್ಯಾಪಾರಿಗಳ ಒಂದು ದೊಡ್ಡ ಆನ್‌ಲೈನ್ ಜಾಲ ರೂಪಿಸುವ ಗುರಿ ಇದೆ. ಬೆಂಗಳೂರು ಸೇರಿದಂತೆ ಸದ್ಯ ಐದಾರು ನಗರಗಳಲ್ಲಿ ಇದರ ಪ್ರಯೋಗ ನಡೆಯಲಿದೆಯಾದರೂ ಆಗಸ್ಟ್ ತಿಂಗಳೊಳಗೆ 100 ನಗರಗಳಿಗೆ ವಿಸ್ತರಣೆ ಆಗಲಿದೆ.

ಸ್ಥಳೀಯ ಭಾಷೆಗಳಲ್ಲಿರುವ ಆ್ಯಪ್‌ಗಳತ್ತ ಗಮನ ಕೊಡಲಾಗುತ್ತಿದ್ದು, ಸಣ್ಣ ವರ್ತಕರು ಮತ್ತು ಗ್ರಾಮೀಣ ಭಾಗದ ಗ್ರಾಹಕರನ್ನ ಹೆಚ್ಚಾಗಿ ದೃಷ್ಟಿಯಲ್ಲಿಟ್ಟುಕೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸರಕಾರದ ದಾಖಲೆ ಪ್ರಕಾರ ಅಮೇಜಾನ್ ಮತ್ತು ವಾಲ್‌ಮಾರ್ಟ್ ಕಂಪನಿಗಳು ಭಾರತದ ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ಅರ್ಧಕ್ಕಿಂತ ಹೆಚ್ಚು ಪಾಲು ಹೊಂದಿವೆ. ಈ ದೈತ್ಯ ಕಂಪನಿಗಳ ಕೆಲ ವ್ಯವಹಾರಗಳಿಂದಾಗಿ ಸಣ್ಣ ವ್ಯಾಪಾರಿಗಳಿಗೆ ಭಾರೀ ದೊಡ್ಡ ಹೊಡೆತ ಬಿದ್ದಿದೆ.

ಈ ಎರಡೂ ಕಂಪನಿಗಳು ಅಮೆರಿಕದವು. ವಾಲ್‌ಮಾರ್ಟ್ ಕೆಲ ವರ್ಷಗಳ ಹಿಂದೆ ಫ್ಲಿಪ್‌ಕಾರ್ಟ್ ಅನ್ನು ಖರೀದಿ ಮಾಡಿದೆ. ಈಗ ತಾವು ನಿಯಮಬಾಹಿರವಾಗಿ ಸ್ಪರ್ಧಾತ್ಮಕತೆಯನ್ನ ಹತ್ತಿಕ್ಕುತ್ತಿವೆ ಎಂದು ಸರಕಾರ ಮಾಡಿರುವ ಆರೋಪಗಳ ಬಗ್ಗೆ ಈ ಎರಡು ಕಂಪನಿಗಳು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಹೂಡಿಕೆ ಲಭ್ಯ: ಇನ್ನು, ಒಎನ್‌ಡಿಸಿ ಯೋಜನೆಗೆ ಹಲವು ಹಣಕಾಸು ಸಂಸ್ಥೆಗಳು ಬಂಡವಾಳ ಹಾಕುತ್ತಿವೆ. ಎಸ್‌ಬಿಐ, ಐಸಿಐಸಿಐ, ಬ್ಯಾಂಕ್ ಆಫ್ ಬರೋಡಾ ಸಂಸ್ಥೆಗಳು 255ಕೋಟಿ ರೂ ಹೂಡಿಕೆ ಮಾಡುತ್ತಿವೆ.

(ಒನ್ಇಂಡಿಯಾ ಸುದ್ದಿ)

English summary
India will launch an open network for digital commerce as the government tries to end the dominance of U.S. companies Amazon.com and Walmart in the fast-growing e-commerce market.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X