ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್‌ ಹೊಸ ರೂಪಾಂತರಕ್ಕೆ ಹೆಸರಿಟ್ಟ ಬಳಿಕ 'ಓಮಿಕ್ರಾನ್‌' ಕ್ರಿಪ್ಟೋ ಶೇ. 900 ಏರಿಕೆ!

|
Google Oneindia Kannada News

ನವದೆಹಲಿ, ನವೆಂಬರ್‌ 29: ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್‌ನ ಹೊಸ ರೂಪಾಂತರಕ್ಕೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಹೆಚ್‌ಒ) ಓಮಿಕ್ರಾನ್‌ ಎಂದು ಹೆಸರಿಟ್ಟಿದೆ. ಈ ನಡುವೆ ಈ ಹಿಂದೆ ಅಷ್ಟೇನೂ ಪ್ರಸಿದ್ಧವಾಗಿರದ ಕ್ರಿಪ್ಟೋಕರೆನ್ಸಿಯಾದ 'ಓಮಿಕ್ರಾನ್' ಶೇಕಡ 900 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ವರದಿಯು ಉಲ್ಲೇಖ ಮಾಡಿದೆ.

ಓಮಿಕ್ರಾನ್‌ ಕ್ರಿಪ್ಟೋಕರೆನ್ಸಿ ಬೆಲೆಯು ನವೆಂಬರ್ 27 ರಂದು ಸುಮಾರು 65 ಡಾಲರ್‌ ಅಂದರೆ ಅಂದಾಜು 4,883 ರೂಪಾಯಿ ಆಗಿತ್ತು. ಆದರೆ ಕೊರೊನಾ ವೈರಸ್‌ನ ಹೊಸ ರೂಪಾಂತರಕ್ಕೆ ಓಮಿಕ್ರಾನ್‌ ಎಂದು ಹೆಸರು ಇಟ್ಟ ಬಳಿಕ ಈ ಓಮಿಕ್ರಾನ್‌ ಕ್ರಿಪ್ಟೋಕರೆನ್ಸಿ ಬೆಲೆಯು ನಿರಂತರವಾಗಿ ಏರಿಕೆ ಕಂಡಿದೆ. ನವೆಂಬರ್ 29 ರಂದು, ಅಂದರೆ ಇಂದು ಓಮಿಕ್ರಾನ್‌ ಕ್ರಿಪ್ಟೋಕರೆನ್ಸಿ ಬೆಲೆಯು ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ.

ಓಮಿಕ್ರಾನ್‌ ರೂಪಾಂತರ: ಭಾರತಕ್ಕೆ ಆಗಮಿಸುವವರಿಗೆ ಹೊಸ ನಿಯಮ: ಇಲ್ಲಿದೆ ವಿವರಓಮಿಕ್ರಾನ್‌ ರೂಪಾಂತರ: ಭಾರತಕ್ಕೆ ಆಗಮಿಸುವವರಿಗೆ ಹೊಸ ನಿಯಮ: ಇಲ್ಲಿದೆ ವಿವರ

ನವೆಂಬರ್ 27 ರಂದು ಸುಮಾರು 65 ಡಾಲರ್‌ ಆಗಿದ್ದು ಓಮಿಕ್ರಾನ್‌ ಕ್ರಿಪ್ಟೋಕರೆನ್ಸಿ ಬೆಲೆಯು ನವೆಂಬರ್ 29 ರಂದು 689 ಡಾಲರ್‌ಗೆ ಏರಿಕೆ ಕಂಡಿದೆ. ಅಂದರೆ ಅಂದಾಜು ರೂ. 51,765 ರಷ್ಟು ಗರಿಷ್ಠ ಮಟ್ಟಕ್ಕೆ ತಲುಪಿದೆ. ಕಳೆ ಮೂರು ದಿನದಲ್ಲೇ ಈ ಭಾರೀ ಏರಿಕೆ ದಾಖಲಾಗಿದೆ. ನವೆಂಬರ್ 27 ರ ಬಳಿಕ ಮೂರು ದಿನದಲ್ಲೇ ಓಮಿಕ್ರಾನ್‌ ಕ್ರಿಪ್ಟೋಕರೆನ್ಸಿ ಬೆಲೆಯು ಶೇಕಡ 945 ರಷ್ಟು ಹೆಚ್ಚಳವನ್ನು ದಾಖಲು ಮಾಡಿದೆ.

Omicron cryptocurrency shoots up by 900% after WHO gives new COVID variant same name

ಇಂದು ಹೇಗಿದೆ ಓಮಿಕ್ರಾನ್‌ ಕ್ರಿಪ್ಟೋಕರೆನ್ಸಿ ಬೆಲೆ?

CoinMarketCap ಪ್ರಕಾರ ಇಂದು ಸಂಜೆ, ಓಮಿಕ್ರಾನ್‌ ಕ್ರಿಪ್ಟೋಕರೆನ್ಸಿ ಬೆಲೆಯು 612.67 ಡಾಲರ್‌ ಆಗಿತ್ತು. ಅಂದರೆ ಅಂದಾಜು ರೂ. 45,972 ಗೆ ಇಳಿಕೆ ಕಂಡಿದೆ. ಕೊರೊನಾ ವೈರಸ್‌ ಸೋಂಕಿನ ಹೊಸ ರೂಪಾಂತರಕ್ಕೆ ಓಮಿಕ್ರಾನ್‌ ಎಂದು ಹೆಸರು ಇಟ್ಟ ಬಳಿಕ ಈ ಅಭೂತಪೂರ್ವ ಏರಿಕೆಯು ಕಂಡು ಬಂದಿದೆ. ಆದರೆ ಈ ಹಿನ್ನೆಲೆಯಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗಳು ಕೂಡಾ ವ್ಯಕ್ತವಾಗಿದೆ.

ಓಮಿಕ್ರಾನ್‌ ಅತ್ಯಂತ ಅಪಾಯಕಾರಿ: ಗಂಭೀರ ಪರಿಣಾಮದ ಎಚ್ಚರಿಕೆ ನೀಡಿದ WHOಓಮಿಕ್ರಾನ್‌ ಅತ್ಯಂತ ಅಪಾಯಕಾರಿ: ಗಂಭೀರ ಪರಿಣಾಮದ ಎಚ್ಚರಿಕೆ ನೀಡಿದ WHO

ಈ ಬಗ್ಗೆ ಟ್ವೀಟ್‌ ಒಂದರಲ್ಲಿ ನೆಟ್ಟಿಗರು, "ಹೊಸ ಕೋವಿಡ್‌ ರೂಪಾಂತರದ ಹೆಸರಿನ ಕ್ರಿಪ್ಟೋ ಟೋಕನ್ ಓಮಿಕ್ರಾನ್‌ ಮೂರು ದಿನಗಳಲ್ಲಿ ಶೇಕಡ 650 ಕ್ಕಿಂತ ಅಧಿಕ ಹೆಚ್ಚಳವಾಗಿದೆ. ಈಗ 400 ಡಾಲರ್‌ಗಿಂತಲೂ ಅಧಿಕ ಮೌಲ್ಯವನ್ನು ಕ್ರಿಪ್ಟೋ ಟೋಕನ್ ಓಮಿಕ್ರಾನ್‌ ಹೊಂದಿದೆ. ಇದು ನಾವು ದೈತ್ಯ ಗುಳ್ಳೆಯಲ್ಲಿ (ನೀರಿನ ಗುಳ್ಳೆ ಕ್ಷಣಿಕ ಎಂಬ ಅರ್ಥ) ನಿಂತಿದ್ದೇವೆ ಎಂಬ ಸಂಕೇತವಲ್ಲದೆ ಮತ್ತೇನು ಎಂದು ನನಗೆ ತಿಳಿಯುತ್ತಿಲ್ಲ," ಎಂದು ಅಭಿಪ್ರಾಯಿಸಿದ್ದಾರೆ.

ಇತರೆ ಕ್ರಿಪ್ಟೋಕರೆನ್ಸಿಗಳ ಮೌಲ್ಯ ಕುಸಿತ

ಕಳೆದ ವಾರದಲ್ಲಿ ಇತರ ಕ್ರಿಪ್ಟೋಕರೆನ್ಸಿಗಳು ತಮ್ಮ ಮೌಲ್ಯಗಳಲ್ಲಿ ಕುಸಿತ ಕಂಡು ಬಂದಿದೆ. ಆದರೆ ಈ ನಡುವೆಯೂ ಓಮಿಕ್ರಾನ್ ಟೋಕನ್ ವಾರಾಂತ್ಯದಲ್ಲಿ ಭಾರೀ ಏರಿಕೆ ಕಂಡಿದೆ. ಇನ್ನು ಇತ್ತೀಚೆಗೆ ಕ್ರಿಪ್ಟೋಕರೆನ್ಸಿ ನಾಶವಾಗುವ ಬಗ್ಗೆ ಮಾಹಿತಿ ನೀಡಿದ್ದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ರಘುರಾಮ್ ರಾಜನ್, "ಇಂದು ಅಸ್ತಿತ್ವದಲ್ಲಿ ಇರುವ 6000ಕ್ಕೂ ಹೆಚ್ಚು ಕ್ರಿಪ್ಟೋಕರೆನ್ಸಿಗಳಲ್ಲಿ ಬಹುತೇಕ ಕ್ರಿಪ್ಟೋಕರೆನ್ಸಿಗಳು ನಾಶವಾಗಲಿದೆ. ಕೇವಲ ಒಂದು ಅಥವಾ ಎರಡು ಅಥವಾ ಕೆಲವು ಮಾತ್ರ ಕ್ರಿಪ್ಟೋಕರೆನ್ಸಿಗಳು ಉಳಿಯಲಿದೆ," ಎಂದು ಹೇಳಿರುವುದು ನಾವು ಈ ಸಂದರ್ಭದಲ್ಲಿ ಸ್ಮರಿಸಬಹುದು.

ಓಮಿಕ್ರಾನ್‌ ಕೋವಿಡ್‌ ರೂಪಾಂತರ

ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಕೋವಿಡ್‌ನ ಹೊಸ ರೂಪಾಂತರ ಓಮಿಕ್ರಾನ್‌ ಕಾಣಿಸಿಕೊಂಡಿದೆ. ಇದರ ಹೊಸ ರೂಪಾಂತರ B.1.1.529 ಆಗಿದೆ. ನವೆಂಬರ್‌ 24 ರಂದು ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಈ ಹೊಸ ಕೋವಿಡ್‌ ರೂಪಾಂತರವು ಕಾಣಿಸಿಕೊಂಡಿದೆ. ಆ ಬಳಿಕ ಹಲವಾರು ದೇಶಗಳಲ್ಲಿ ಈ ಕೊರೊನಾ ಹೊಸ ರೂಪಾಂತರವು ಕಾಣಿಸಿಕೊಂಡಿದೆ. ಬ್ರಿಟನ್‌, ಹಾಂಗ್‌ಕಾಂಗ್‌, ಬೆಲ್ಜಿಯಂ, ಬೋಟ್ಸ್ವಾನ, ಜರ್ಮನಿ, ಇಸ್ರೇಲ್ ಹಾಗೂ ಹಲವಾರು ದೇಶಗಳಲ್ಲಿ ಈ ರೂಪಾಂತರ ಕಾಣಿಸಿಕೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆಯು ಈ ರೂಪಾಂತರ ಓಮಿಕ್ರಾನ್‌ ಭಾರೀ ಅಪಾಯಕಾರಿ ಎಂದು ಎಚ್ಚರಿಕೆ ನೀಡಿದೆ.

Recommended Video

ಕೃಷಿ ಕಾಯ್ದೆ ರದ್ದತಿ ಮಸೂದೆ ಮಂಡಿಸಲು ಸರ್ಕಾರದ ಸಿದ್ಧತೆ ಹೇಗಿದೆ? | Oneindia Kannada

(ಒನ್‌ಇಂಡಿಯಾ ಸುದ್ದಿ)

English summary
Omicron cryptocurrency shoots up by 900% after WHO gives new COVID variant same name.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X