ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಲಾ ಎಸ್1 ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ: 2024ಕ್ಕೆ ಓಲಾ ಇವಿ ಕಾರು ಮಾರುಕಟ್ಟೆಗೆ

|
Google Oneindia Kannada News

ಓಲಾ ಆಗಸ್ಟ್ 15ರಂದು ಭಾರತದಲ್ಲಿ ಹೊಸ ಓಲಾ ಎಸ್‌1 (Ola S1) ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಹೊಸ ಓಲಾ ಎಸ್‌1 ಅನ್ನು ಕಂಪನಿಯು ಕಳೆದ ವರ್ಷ ಬಿಡುಗಡೆ ಮಾಡಿದ ಓಲಾ ಎಸ್‌1 ಪ್ರೊ ನ ವಿನ್ಯಾಸದ ಮೇಲೆ ನಿರ್ಮಿಸಲಾಗಿದೆ. ಓಲಾ ಎಸ್‌1 3 ಕಿಲೋ ವ್ಯಾಟ್ ಬ್ಯಾಟರಿ ಚಾಲಿತವಾಗಿದ್ದು ಅದು ಒಮ್ಮೆ ಚಾರ್ಜ್ ಮಾಡಿದ 131 ಕಿಲೋ ಮೀಟರ್ ಚಲಿಸುತ್ತದೆ ಎಂದು ಕಂಪನಿ ತಿಳಿಸಿದೆ. ಬಹು ನಿರೀಕ್ಷಿತ ಇವಿ ಕಾರಿನ ಬಗ್ಗೆಯೂ ಮಾಹಿತಿ ನೀಡಿರುವ ಓಲಾ 2024ರಲ್ಲಿ ಕಾರು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

ಪ್ರತಿ ಗಂಟೆಗೆ 95 ಕಿಲೋ ಮೀಟರ್ ವೇಗವನ್ನು ನೀಡುತ್ತದೆ ಎಂದು ಹೇಳಲಾಗಿದೆ. ಓಲಾ ಎಸ್‌1 ‍ಇವಿ ಸ್ಕೂಟರ್ 99,999 ರುಪಾಯಿ (ಎಕ್ಸ್ ಶೋರೂಂ) ಪರಿಚಯಾತ್ಮಕ ಬೆಲೆಯಲ್ಲಿ ಲಭ್ಯವಿರುತ್ತದೆ. ಈಗಾಗಲೇ ಕಂಪನಿ ಬುಕಿಂಗ್ ಆರಂಭಿಸಿದೆ. 500 ರುಪಾಯಿ ನೀಡುವ ಮೂಲಕ ನೀವು ಓಲಾ ಎಸ್‌ 1 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬುಕ್ ಮಾಡಬಹುದಾಗಿದೆ. ಸೆಪ್ಟೆಂಬರ್ 7 ರಿಂದ ಓಲಾ ಎಸ್‌1 ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಗ್ರಾಹಕರಿಗೆ ವಿತರಿಸಲಾಗುತ್ತದೆ.

ಉಬರ್‌ ಜೊತೆ ವಿಲೀನ: ಓಲಾ ಸಿಇಒ ಹೇಳಿದ್ದೇನು?ಉಬರ್‌ ಜೊತೆ ವಿಲೀನ: ಓಲಾ ಸಿಇಒ ಹೇಳಿದ್ದೇನು?

 ಐದು ಬಣ್ಣಗಳ ಆಯ್ಕೆ

ಐದು ಬಣ್ಣಗಳ ಆಯ್ಕೆ

ಹೊಸ ಓಲಾ ಎಸ್‌1 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕೆಂಪು, ಜೆಟ್ ಕಪ್ಪು, ಪಿಂಗಾಣಿ ಬಿಳಿ, ನಿಯೋ ಮಿಂಟ್ ಮತ್ತು ಲಿಕ್ವಿಡ್ ಸಿಲ್ವರ್ ಎಂಬ ಐದು ಬಣ್ಣದ ಆಯ್ಕೆಗಳಲ್ಲಿ ನೀಡಲಾಗುತ್ತಿದೆ. ಗ್ರಾಹಕರು ತಮ್ಮ ನೆಚ್ಚಿನ ಬಣ್ಣದ ಸ್ಕೂಟರ್ ಅನ್ನು ಬುಕ್ ಮಾಡಬಹುದಾಗಿದೆ.
ಹೊಸ ಓಲಾ ಎಸ್‌1 ಎಲೆಕ್ಟ್ರಿಕ್ ಸ್ಕೂಟರ್ ಓಲಾ ಎಸ್‌1 ಪ್ರೋಗೆ ಸಂಗೀತ ಪ್ಲೇಬ್ಯಾಕ್ ಕಾರ್ಯವನ್ನು ಸೇರಿಸುವ MoveOS 2.0 ಅನ್ನು ರನ್ ಮಾಡುತ್ತದೆ. ಹೆಚ್ಚುವರಿಯಾಗಿ ಒಎಸ್‌ ಸಹ ಕಂಪ್ಯಾನಿಯನ್ ಅಪ್ಲಿಕೇಶನ್ ಕಾರ್ಯವನ್ನು ಅನ್‌ಲಾಕ್ ಮಾಡಿದೆ, ಇದು ಚಾರ್ಜ್ ಸ್ಥಿತಿ, ಓಡೋಮೀಟರ್ ಓದುವಿಕೆ ಮತ್ತು ಇತರ ಸ್ಕೂಟರ್‌ಗಳ ಮೆಟ್ರಿಕ್‌ಗಳಿಗೆ ರಿಮೋಟ್ ಪ್ರವೇಶದಂತಹ ಸಂಪರ್ಕಿತ ವೈಶಿಷ್ಟ್ಯಗಳನ್ನು ನೀಡುತ್ತದೆ. ಓಲಾ ಎಸ್‌1 ದೀಪಾವಳಿಯಲ್ಲಿ ಬಿಡುಗಡೆಗೊಳ್ಳುವ MoveOS 3.0 ಅಪ್‌ಡೇಟ್‌ ಆಯ್ಕೆಯನ್ನು ಬೆಂಬಲಿಸುತ್ತದೆ ಎಂದು ಕಂಪನಿ ಹೇಳಿದೆ.

 ಸ್ಕೂಟರ್ ಖರೀದಿಗೆ ಬಹುಪಾವತಿ ಆಯ್ಕೆ

ಸ್ಕೂಟರ್ ಖರೀದಿಗೆ ಬಹುಪಾವತಿ ಆಯ್ಕೆ

ಕ್ರೆಡಿಟ್ ಕಾರ್ಡ್, ಇಎಂಐ, ಸಾಲಗಳು ಮತ್ತು ನಗದು ಸೇರಿದಂತೆ ಬಹು ಪಾವತಿ ಆಯ್ಕೆಗಳ ಮೂಲಕ ಖರೀದಿದಾರರು ಓಲಾ ಎಸ್‌1 ಎಲೆಕ್ಟ್ರಿಕ್ ಸ್ಕೂಟರ್‌ ಖರೀದಿ ಮಾಡಬಹುದಾಗಿದೆ. ಹೊಸ ಓಲಾ ಎಸ್‌1 ಸ್ಕೂಟರ್‌ನ ಇಎಂಐ 2,999 ರುಪಾಯಿಗಳಿಂದ ಪ್ರಾರಂಭವಾಗುತ್ತದೆ.
ಓಲಾ ಎಸ್‌1 ಪ್ರೊ ಮತ್ತು ಓಲಾ ಎಸ್‌1 ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ವಿಸ್ತೃತ ವಾರಂಟಿಯನ್ನು ಖರೀದಿಸಲು ಕಂಪನಿಯು ಖರೀದಿದಾರರಿಗೆ ಆಫರ್ ನೀಡಿದೆ.

 ಒಂದು ಮಿಲಿಯನ್ ಇವಿ ಕಾರುಗಳ ಉತ್ಪಾದನೆ ಗುರಿ

ಒಂದು ಮಿಲಿಯನ್ ಇವಿ ಕಾರುಗಳ ಉತ್ಪಾದನೆ ಗುರಿ

ಓಲಾ ಕಂಪನಿಯು ತನ್ನ ಮುಂಬರುವ ಎಲೆಕ್ಟ್ರಿಕ್ ಕಾರಿನ ಮೊದಲ ಲುಕ್‌ ಅನ್ನು 75ನೇ ಸ್ವಾತಂತ್ರ್ಯ ದಿನದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದೆ. ಓಲಾ ಕಂಪನಿಯ ಪ್ರಕಾರ, ಕಾರು ಒಮ್ಮೆ ಚಾರ್ಜ್ ಮಾಡಿದರೆ 500 ಕಿಲೋ ಮೀಟರ್ ಚಲಿಸುತ್ತದೆ. ಕೇವಲ 4 ಸೆಕೆಂಡುಗಳಲ್ಲಿ 0 ರಿಂದ 100 ಕಿಲೋ ಮೀಟರ್ / ಗಂ‍ಟೆಗೆ ವೇಗವನ್ನು ಪಡೆಯಲು ಸಾಧ್ಯವಾಗುತ್ತದೆ. ಕಾರು ಸಂಪೂರ್ಣ ಗಾಜಿನ ಛಾವಣಿಯನ್ನು ಸಹ ಹೊಂದಿರುತ್ತದೆ. ಅಲ್ಲದೆ ಹಲವು ವೈಶಿಷ್ಟ್ಯಗಳೊಂದಿಗೆ ಕಾರು ಮಾರುಕಟ್ಟೆಗೆ ಪ್ರವೇಶಿಸಲಿದೆ ಎಂದು ಓಲಾ ಕಂಪನಿ ಹೇಳಿಕೊಂಡಿದೆ.

ಓಲಾ ಸಿಇಒ ಮತ್ತು ಕೋಫೌಂಡರ್ ಭವಿಶ್ ಅಗರ್ವಾಲ್ ಮಾತನಾಡಿ, ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಕ್ರಾಂತಿಯನ್ನು ಆರಂಭಿಸುವ ಬಗ್ಗೆ ಮಾತನಾಡಿದ್ದಾರೆ. ಕಂಪನಿಯ ಓಲಾ ಫ್ಯೂಚರ್ ಕಾರ್ಖಾನೆಯು ಭವಿಷ್ಯದಲ್ಲಿ ಒಂದು ಮಿಲಿಯನ್ ಇವಿ ಕಾರುಗಳನ್ನು ಉತ್ಪಾದಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳುತ್ತಾರೆ.

 2024ಕ್ಕೆ ಬರಲಿಗೆ ಓಲಾ ಎಲೆಕ್ಟ್ರಿಕ್ ಕಾರು

2024ಕ್ಕೆ ಬರಲಿಗೆ ಓಲಾ ಎಲೆಕ್ಟ್ರಿಕ್ ಕಾರು

"ಭಾರತದಲ್ಲಿ ಇದುವರೆಗೆ ನಿರ್ಮಿಸಲಾದ ಅತ್ಯಂತ ಸ್ಪೋರ್ಟಿ ಕಾರು ಆಗಿದ್ದು, ಸಂಪೂರ್ಣ ಗಾಜಿನ ಮೇಲ್ಛಾವಣಿಯನ್ನು ಹೊಂದಿದ್ದು, ಇದು ಮೂವ್ ಓಎಸ್ ಮತ್ತು ಸಹಾಯದ ಚಾಲನಾ ಸಾಮರ್ಥ್ಯ ವಿಶ್ವದ ಯಾವುದೇ ಕಾರಿನಂತೆ ಉತ್ತಮವಾಗಿರುತ್ತದೆ. ಇದು ಕೀ ರಹಿತ ಮತ್ತು ಹ್ಯಾಂಡಲ್‌ಲೆಸ್ ಆಗಿರುತ್ತದೆ" ಎಂದು ಓಲಾ ಎಲೆಕ್ಟ್ರಿಕ್ ಸಂಸ್ಥಾಪಕ ಮತ್ತು ಸಿಇಒ ಭವಿಶ್ ಅಗರ್ವಾಲ್ ಲೈವ್‌ಸ್ಟ್ರೀಮ್‌ನಲ್ಲಿ ಹೇಳಿದರು.

ಕಂಪನಿಯು ವಾಹನದ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ. ಕಾರಿನ ವಿನ್ಯಾಸ ಮತ್ತು ಕಾರ್ಯಕ್ಷಮತೆಯ ಅಂಕಿಅಂಶಗಳ ಕುರಿತು ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ. 2024 ರಲ್ಲಿ ಈ ಕಾರು ಬಿಡುಗಡೆಯಾಗಲಿದೆ ಎಂದು ಓಲಾ ಘೋಷಿಸಿದೆ.

English summary
Ola has launched the new Ola S1 electric scooter in India today. The Ola S1 will be available at an introductory price of Rs 99,999 (ex-showroom). The company has started accepting bookings for the new Ola S1 electric scooter at Rs 500 and the deliveries of the EV will begin September 7 onwards. The company has announced its new much awaited EV car. The company says the car will arrive in 2024 and it will have a range of 500 kms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X