ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2021ಕ್ಕೆ ಮಾರುಕಟ್ಟೆ ಪ್ರವೇಶಿಸಲಿದೆ ಓಲಾ ಎಲೆಕ್ಟ್ರಿಕ್ ಸ್ಕೂಟರ್

|
Google Oneindia Kannada News

ನವದೆಹಲಿ, ನವೆಂಬರ್ 21: ಆ್ಯಪ್ ಆಧಾರಿತ ಬಾಡಿಗೆ ಕಾರು ಬುಕ್ಕಿಂಗ್ ಸೇವಾ ಆಧಾರಿತ ಸಂಸ್ಥೆ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ಪಿಟಿಐ ವರದಿಗಳ ಪ್ರಕಾರ, ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತದಲ್ಲಿ 2021 ರ ಜನವರಿಯಲ್ಲಿ ಪರಿಚಯಿಸುವ ನಿರೀಕ್ಷೆಯಿದೆ.

ಮೇ 2020 ರಲ್ಲಿ, ಓಲಾ ನೆದರ್ಲೆಂಡ್ಸ್‌ ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಎಟರ್ಗೊ ಬಿವಿ ಯನ್ನು ಬಹಿರಂಗಪಡಿಸದ ಮೊತ್ತಕ್ಕೆ ಸ್ವಾಧೀನಪಡಿಸಿಕೊಳ್ಳುವುದಾಗಿ ಘೋಷಿಸಿತು. ನಂತರದಲ್ಲಿ ಅದರ ಮೂಲ ಸ್ಥಳದಲ್ಲಿಯೇ ಉತ್ಪನ್ನಗಳನ್ನು ತಯಾರಿಸಿ ಭಾರತಕ್ಕೆ ತರಲಿದೆ . ಭಾರತಕ್ಕೆ ಅಷ್ಟೇ ಅಲ್ಲದೆ ಏಕಕಾಲದಲ್ಲಿ ಹಲವಾರು ಯುರೋಪಿಯನ್ ಮಾರುಕಟ್ಟೆಗಳಲ್ಲಿ ಮಾರಾಟವಾಗಲಿದೆ.

 OLA Electric Scooters To Be Launched In India By January 2021

ಮಾಸಿಕ 2950 ರೂ. ಪಾವತಿ: ಸಿಗಲಿದೆ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್ ಮಾಸಿಕ 2950 ರೂ. ಪಾವತಿ: ಸಿಗಲಿದೆ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್

ಓಲಾ ಕಂಪನಿಯು ಸರ್ಕಾರದ ಆತ್ಮ ನಿರ್ಭರ್ ಅಭಿಯಾನದಲ್ಲಿ ಭಾಗವಹಿಸಲು ಮತ್ತು ಸ್ಥಳೀಯ ಬೇಡಿಕೆಯನ್ನು ಪೂರೈಸಲು ಉತ್ಸಾಹ ತೋರಿದ್ದು, ಭಾರತದಲ್ಲಿಯೇ ತನ್ನ ಉತ್ಪಾದನಾ ಘಟಕ ಪ್ರಾರಂಭಿಸುವುದಕ್ಕೂ ಕೂಡ ಯೋಜಿಸುತ್ತಿದೆ ಎಂದು ತಿಳಿದುಬಂದಿದೆ.

 OLA Electric Scooters To Be Launched In India By January 2021

ಭಾರತದಲ್ಲಿ ಅತಿದೊಡ್ಡ ವಿದ್ಯುತ್ ದ್ವಿಚಕ್ರ ವಾಹನ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಕಂಪನಿಯು ವಿವಿಧ ರಾಜ್ಯ ಸರ್ಕಾರಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಹೇಳಲಾಗಿದೆ. ಇದು ವರ್ಷಕ್ಕೆ 2 ಮಿಲಿಯನ್ ಘಟಕಗಳ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ.

English summary
Ola, the ride-hailing cab service platform expected to introduce its first electric scooter in India sometime in January 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X