ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇ -ಸ್ಕೂಟರ್ ಮಾರಾಟ: 2 ದಿನಗಳಲ್ಲೇ 1,110 ಕೋಟಿ ಬಾಚಿದ ಓಲಾ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 17: ಓಲಾ ಎಲೆಕ್ಟ್ರಿಕ್ ಸ್ಕೂಟರನ್ನು ಅಧಿಕೃತ ವೆಬ್ ತಾಣ ಮೂಲಕ ಕೇವಲ ರೂ. 499 ಪಾವತಿಸಿ ಕಾಯ್ದಿರಿಸಬಹುದಾಗಿದೆ. ಕಂಪನಿ ಗ್ರಾಹಕರಿಂದ ಅಭೂತಪೂರ್ವ ಸ್ಪಂದನೆಯನ್ನು ಕಾಣುತ್ತಿದ್ದು, ದಾಖಲೆ ಸಂಖ್ಯೆಯಲ್ಲಿ ಸ್ಕೂಟರ್ ಕಾಯ್ದಿರಿಸಲು ಗ್ರಾಹಕರು ವೆಬ್‍ಸೈಟ್‍ಗೆ ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಎರಡು ದಿನಗಳಲ್ಲೇ ಸುಮಾರು 1,100 ಕೋಟಿ ರು ಮಾರಾಟದ ದಾಖಲೆ ಸಾಧಿಸಲಾಗಿದೆ ಎಂದು ಓಲಾ ಸಹ ಸ್ಥಾಪಕ ಭವೀಶ್ ಅಗರವಾಲ್ ಹೇಳಿದ್ದಾರೆ.

ಪ್ರತಿ ಸೆಕೆಂಡಿಗೆ ನಾಲ್ಕು ಸ್ಕೂಟರ್ ಎಂಬಂತೆ ಮಾರಾಟವಾಗಿದ್ದು, ಜುಲೈ ನಂತರ ಸೆಪ್ಟೆಂಬರ್ ತಿಂಗಳಲ್ಲಿ ಮಾರಾಟ ದಾಖಲೆ ಬರೆಯಲಾಗಿದೆ. ದೀಪಾವಳಿ ಸಂದರ್ಭದಲ್ಲಿ ನವೆಂಬರ್ ತಿಂಗಳಲ್ಲಿ ಮತ್ತೊಮ್ಮೆ ಆನ್ ಲೈನ್ ಬುಕ್ಕಿಂಗ್ ಓಪನ್ ಆಗಲಿದೆ ಎಂದು ಸಂಸ್ಥೆ ಹೇಳಿದೆ. ಓಲಾ ಎಸ್ 1 ಹಾಗೂ ಎಸ್ 1 ಪ್ರೊ ಮಾದರಿಯ ಎರಡು ಇ ಸ್ಕೂಟರ್ ಭರ್ಜರಿ ಬೇಡಿಕೆ ಹೊಂಡಿದ್ದು, ಮೊದಲ ದಿನವೇ 600 ಕೋಟಿ ರು ಮೌಲ್ಯದ ಸ್ಕೂಟರ್ ಮಾರಾಟ ಕಂಡಿತ್ತು.

ಬ್ಲೂಸ್ಮಾರ್ಟ್ ಜೊತೆ ಜಿಯೋ-ಬಿಪಿ ಒಪ್ಪಂದ, ಇವಿ ಚಾರ್ಜಿಂಗ್ ಕೇಂದ್ರ ಸ್ಥಾಪನೆಬ್ಲೂಸ್ಮಾರ್ಟ್ ಜೊತೆ ಜಿಯೋ-ಬಿಪಿ ಒಪ್ಪಂದ, ಇವಿ ಚಾರ್ಜಿಂಗ್ ಕೇಂದ್ರ ಸ್ಥಾಪನೆ

ಇಷ್ಟು ದೊಡ್ಡ ಮಟ್ಟದ(ಮೌಲ್ಯದ ಲೆಕ್ಕದಲ್ಲಿ) ಮಾರಾಟ ಆಟೋಮೊಬೈಲ್ ಕ್ಷೇತ್ರದಲ್ಲಿ ಇದೇ ಮೊದಲು ಕಂಡಿದ್ದು, ಇ ಕಾಮರ್ಸ್ ಕ್ಷೇತ್ರದಲ್ಲೂ ದಾಖಲೆ ಎನಿಸಿಕೊಂಡಿದೆ, ನಾವು ನಿಜವಾಗಲೂ ಡಿಜಿಟಲ್ ಇಂಡಿಯಾದಲ್ಲಿ ಜೀವಿಸುತ್ತಿದ್ದೇವೆ ಎಂದು ಭವೇಶ್ ಟ್ವೀಟ್ ಮಾಡಿದ್ದಾರೆ.

ಇವಿಟ್ರಿಕ್ ಮೋಟಾರ್ಸ್ 2 ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಇವಿಟ್ರಿಕ್ ಮೋಟಾರ್ಸ್ 2 ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ತಾಂತ್ರಿಕ ಕಾರಣದಿಂದ ಸೆಪ್ಟೆಂಬರ್ 8ರಂದು ನಡೆಯಬೇಕಿದ್ದ ಆನ್ ಲೈನ್ ಮಾರಾಟ ಸೆಪ್ಟೆಂಬರ್ 15ಕ್ಕೆ ಮುಂದೂಡಲಾಗಿತ್ತು. ವೆಬ್ ತಾಣದ ಬದಲಿಗೆ ಓಲಾ ಆಪ್‌ನಲ್ಲಿ ಮಾತ್ರ ಬುಕ್ಕಿಂಗ್ ಅವಕಾಶ ಲಭ್ಯವಿತ್ತು. ಬುಕ್ಕಿಂಗ್ ಮಾಡಿದ 72 ಗಂಟೆಗಳ ಅವಧಿಯಲ್ಲಿ ಡೆಲಿವರಿ ದಿನಾಂಕವನ್ನು ತಿಳಿಸಲಾಗುತ್ತಿದ್ದು, ಅಕ್ಟೋಬರ್ ತಿಂಗಳಲ್ಲೇ ವಾಹನ ಖರೀದಿದಾರರ ಬಳಿ ಸೇರಲಿದೆ.

ಈ ಬಗ್ಗೆ ಸಿಇಒ ಭವಿಷ್ ಅಗರ್ವಾಲ್ ಪ್ರತಿಕ್ರಿಯಿಸಿ

ಈ ಬಗ್ಗೆ ಸಿಇಒ ಭವಿಷ್ ಅಗರ್ವಾಲ್ ಪ್ರತಿಕ್ರಿಯಿಸಿ

ಓಲಾ ಸಮೂಹದ ಅಧ್ಯಕ್ಷ ಮತ್ತು ಸಮೂಹ ಸಿಇಒ ಭವಿಷ್ ಅಗರ್ವಾಲ್ ಈ ಬಗ್ಗೆ ಪ್ರತಿಕ್ರಿಯಿಸಿ, "ನಮ್ಮ ಮೊದಲ ಎಲೆಕ್ಟ್ರಿಕ್ ವಾಹನಗಕ್ಕೆ ಭಾರತದಾದ್ಯಂತ ಗ್ರಾಹಕರಿಂದ ಅದ್ಭುತ ಸ್ಪಂದನೆ ಬಂದಿರುವುದು ನನಗೆ ರೋಮಾಂಚನ ತಂದಿದೆ. ಈ ಅಭೂತಪೂರ್ವ ಬೇಡಿಕೆಯು, ಗ್ರಾಹಕರು ಎಲೆಕ್ಟ್ರಿಕ್ ವಾಹನಗಳಿಗೆ ವರ್ಗಾವಣೆಗೊಳ್ಳುತ್ತಿರುವ ಸ್ಪಷ್ಟ ಸೂಚಕವಾಗಿದೆ. ವಿಶ್ವವನ್ನು ಸುಸ್ಥಿರ ಸಂಚಾರಕ್ಕೆ ವರ್ಗಾಯಿಸುವ ನಮ್ಮ ದೂರದೃಷ್ಟಿಯಲ್ಲಿ ಇದು ದೊಡ್ಡ ಹೆಜ್ಜೆಯಾಗಿದೆ. ಓಲಾ ಸ್ಕೂಟರ್ ಕಾಯ್ದಿರಿಸಿ, ಇವಿ ಕ್ರಾಂತಿಯಲ್ಲಿ ಪಾಲ್ಗೊಂಡ ಎಲ್ಲ ಗ್ರಾಹಕರಿಗೆ ನಾನು ಅಭಿನಂದನೆ ಸಲ್ಲಿಸುತ್ತಿದ್ದೇನೆ. ಇದು ಕೇವಲ ಆರಂಭ ಮಾತ್ರ!" ಎಂದು ಹೇಳಿದರು.

ತಮಿಳುನಾಡಿನ 500 ಎಕರೆ ಪ್ರದೇಶದಲ್ಲಿ ದ್ವಿಚಕ್ರವಾಹನ ಫ್ಯಾಕ್ಟರಿ

ತಮಿಳುನಾಡಿನ 500 ಎಕರೆ ಪ್ರದೇಶದಲ್ಲಿ ದ್ವಿಚಕ್ರವಾಹನ ಫ್ಯಾಕ್ಟರಿ

ಓಲಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಸರಣಿಯಲ್ಲಿ ಮೊದಲನೆಯದಾದ ಓಲಾ ಸ್ಕೂಟರನ್ನು ಭಾರತದ ತಮಿಳುನಾಡಿನ 500 ಎಕರೆ ಪ್ರದೇಶದಲ್ಲಿ ನಿರ್ಮಿಸಲಾದ ವಿಶ್ವದ ಅತಿದೊಡ್ಡ, ಅತ್ಯಾಧುನಿಕ ಮತ್ತು ಸುಸ್ಥಿರ ದ್ವಿಚಕ್ರವಾಹನ ಫ್ಯಾಕ್ಟರಿ ಎನಿಸಿದ ಓಲಾ ಫ್ಯೂಚರ್ ಫ್ಯಾಕ್ಟರಿಯಲ್ಲಿ ಉತ್ಪಾದಿಸಲಾಗುತ್ತದೆ. ಓಲಾ ಸ್ಕೂಟರ್ ಫ್ಯಾಕ್ಟರಿಯ ಮೊದಲ ಹಂತ ವಾರ್ಷಿಕವಾಗಿ 20 ಲಕ್ಷ ವಾಹನಗಳ ಉತ್ಪಾದನಾ ಸಾಮರ್ಥ್ಯದೊಂದಿಗೆ ಶೀಘ್ರವೇ ಕಾರ್ಯಾರಂಭ ಮಾಡಲಿದೆ. ಮುಂದಿನ ವರ್ಷದ ವೇಳೆಗೆ ಇದು ಪೂರ್ಣಪ್ರಮಾಣದಲ್ಲಿ ಸಜ್ಜಾದಾಗ ವಾರ್ಷಿಕ ಒಂದು ಕೋಟಿ ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಲಿದೆ.

ಆಡಿಯಿಂದ ಮೂರು ಎಲೆಕ್ಟ್ರಿಕ್ ಎಸ್‍ಯುವಿಗಳ ಬಿಡುಗಡೆಆಡಿಯಿಂದ ಮೂರು ಎಲೆಕ್ಟ್ರಿಕ್ ಎಸ್‍ಯುವಿಗಳ ಬಿಡುಗಡೆ

ಓಲಾ ಇ -ಸ್ಕೂಟರ್ ಬೆಲೆ

ಓಲಾ ಇ -ಸ್ಕೂಟರ್ ಬೆಲೆ

ಓಲಾ ಸ್ಕೂಟರ್ ಬಿಡುಗಡೆಯಾದ ಬಳಿಕ ಹೀಗೆ ಕಾಯ್ದಿರಿಸಿದ ಗ್ರಾಹಕರು ಮನೆಬಾಗಿಲಿಗೆ ವಿತರಣೆಯಲ್ಲಿ ಆದ್ಯತೆ ಪಡೆಯಲಿದ್ದಾರೆ. ಸಿಇಎಸ್‍ನಲ್ಲಿ ಐಎಚ್‍ಎಸ್ ಮೆರಿಟ್ ಇನ್ನೊವೇಶನ್ ಅವಾರ್ಡ್ ಮತ್ತು ಜರ್ಮನ್ ಡಿಸೈನ್ ಅವಾರ್ಡ್ ಸೇರಿದಂತೆ ಓಲಾ ಸ್ಕೂಟರ್ ಈಗಾಗಲೇ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಆಗಸ್ಟ್15ರಂದು ಅಧಿಕೃತವಾಗಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಓಲಾ ಎಸ್ 1 ಸ್ಕೂಟರ್ ಬೆಲೆ 99,999 ರು ಹಾಗೂ ಎಸ್1 ಪ್ರೊ 1,29,999 ರು(ಎಕ್ಸ್- ರೂಂ ಫೇಮ್ II ಸಬ್ಸಿಡಿ ಹಾಗೂ ರಾಜ್ಯದ ಸಬ್ಸಿಡಿ ರಹಿತ)

ವಿಶ್ವದ ಅತಿದೊಡ್ಡ ಸವಾರಿ ಸೌಲಭ್ಯ

ವಿಶ್ವದ ಅತಿದೊಡ್ಡ ಸವಾರಿ ಸೌಲಭ್ಯ

ಓಲಾ ಬಗ್ಗೆ: ಓಲಾ ಭಾರತದ ಅತಿದೊಡ್ಡ ಸಂಚಾರ ಪ್ಲಾಟ್‍ಫಾರಂ ಆಗಿದ್ದು, ವಿಶ್ವದ ಅತಿದೊಡ್ಡ ಸವಾರಿ ಸೌಲಭ್ಯ ಕಲ್ಪಿಸುವ ಕಂಪನಿಗಳಲ್ಲೊಂದಾಗಿದೆ. ಮೂರು ಖಂಡಗಳಲ್ಲಿ ನೂರು ಕೋಟಿಗೂ ಅಧಿಕ ಮಂದಿಗೆ ಬೇಡಿಕೆಗೆ ಅನುಸಾರವಾಗಿ ವಾಹನ ಪೂರೈಸುವ ಮೂಲಕ ನಗರ ಸಂಚಾರ ವ್ಯವಸ್ಥೆಯಲ್ಲಿ ಕ್ರಾಂತಿಯನ್ನು ಉಂಟುಮಾಡಿದೆ. ಸವಾರಿ ಸೌಲಭ್ಯ ಕಲ್ಪಿಸುವ ಪ್ಲಾಟ್‍ಫಾರಂ ಹಾಗೂ ವಿಶ್ವದ ಅತಿದೊಡ್ಡ ಹಾಗೂ ಅತ್ಯಾಧುನಿಕ ಮತ್ತು ಸುಸ್ಥಿರ ದ್ವಿಚಕ್ರ ವಾಹನ ಉತ್ಪಾದಿಸುವ ಫ್ಯೂಚರ್ ಫ್ಯಾಕ್ಟರಿ ಮೂಲಕ ಅತ್ಯಾಧುನಿಕ ಎಲೆಕ್ಟ್ರಿಕ್ ವಾಹನಗಳ ಮೂಲಕ ಇಂದು ಓಲಾ ವಿಶ್ವವನ್ನು ಸುಸ್ಥಿರ ಸಂಚಾರದತ್ತ ಮುನ್ನಡೆಸುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದೆ. ವಿಶ್ವವನ್ನು ಸುಸ್ಥಿರ ಸಂಚಾರ ವ್ಯವಸ್ಥೆಗೆ ವರ್ಗಾಯಿಸಲು ಓಲಾ ಬದ್ಧವಾಗಿದ್ದು, ನಾವು ಇಂದು ಕಾಣುವ ವಿಶ್ವವನ್ನು ಮತ್ತಷ್ಟು ಉತ್ತಮಗೊಳಿಸುವ ಪ್ರಯತ್ನ ನಡೆಸುತ್ತದೆ.

English summary
Ola co-founder Bhavish Aggarwal noted that while the company has stopped the buying process now, the purchase window will re-open on November 1, just in time for Diwali
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X