ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಹು ನಿರೀಕ್ಷಿತ ಓಲಾ ಸ್ಕೂಟರ್ 10 ವಿಶಿಷ್ಟ ಬಣ್ಣಗಳಲ್ಲಿ ಮಾರುಕಟ್ಟೆಗೆ

|
Google Oneindia Kannada News

ಬೆಂಗಳೂರು, ಜುಲೈ 23: ಬಹು ನಿರೀಕ್ಷಿತ ಓಲಾ ಎಲೆಕ್ಟ್ರಿಕ್ ಸ್ಕೂಟರ್‍ಗಳು, ದ್ವಿಚಕ್ರ ವಾಹನ ಸರಣಿಯಲ್ಲೇ ವಿಸ್ತೃತ ಶ್ರೇಣಿ ಎನಿಸಿದ 10 ವಿಶಿಷ್ಟ ಹಾಗೂ ಆಕರ್ಷಕ ಬಣ್ಣಗಳಲ್ಲಿ ಲಭ್ಯ ಎಂದು ಓಲಾ ಇಲೆಕ್ಟ್ರಿಕ್ ಬಹಿರಂಗಪಡಿಸಿದೆ. ಬಿಡುಗಡೆ ಸನ್ನಿಹಿತವಾಗುತ್ತಿರುವಂತೆ ನಿಖರವಾಗಿ ಬಣ್ಣಗಳ ಹೆಸರುಗಳನ್ನು ಪ್ರಕಟಿಸಲಾಗುವುದಾದರೂ, ನೀಲಿ ಮತ್ತು ಕಪ್ಪು, ಆಕರ್ಷಕ ಬಣ್ಣಗಳಾದ ಕೆಂಪು, ಪಿಂಕ್ ಮತ್ತು ಹಳದಿ ಹಾಗೂ ಬಿಳಿ ಮತ್ತು ಸಿಲ್ವರ್‌ ಬಣ್ಣಗಳು ಮೆಟ್ಟೆ ಮತ್ತು ಗ್ಲೋಸ್ ಶೇಡ್‍ಗಳಲ್ಲಿ ಲಭ್ಯ ಎನ್ನುವುದನ್ನು ಪ್ರಕಟಿಸಿದೆ.

ಸಮಗ್ರ ಬಣ್ಣಗಳ ಶ್ರೇಣಿಯನ್ನು ಮೊದಲ ಬಾರಿಗೆ ಇಂದು ಫಿಲ್ಮ್ ಒಂದನ್ನು ಟ್ವೀಟ್ ಮಾಡುವ ಮೂಲಕ ಓಲಾದ ಅಧ್ಯಕ್ಷ ಮತ್ತು ಸಿಇಓ ಭವಿಷ್ ಅಗರ್‍ವಾಲ್ ಪ್ರಕಟಿಸಿದ್ದಾರೆ. "ಇದು ಹತ್ತು ಬಣ್ಣಗಳ ಕ್ರಾಂತಿ" ಎಂದು ಅವರು ಬಣ್ಣಿಸಿದ್ದಾರೆ.

ಓಲಾ ಸ್ಕೂಟರ್ ತನ್ನ ಗ್ರಾಹಕರಿಗೆ ಸರಿಸಾಟಿ ಇಲ್ಲದ ಸ್ಕೂಟರ್ ಅನುಭವವನ್ನು ಒದಗಿಸುತ್ತದೆ ಹಾಗೂ ಇದೀಗ ಗ್ರಾಹಕರು ವೈವಿಧ್ಯಮಯ ಶ್ರೇಣಿಯ ಬಣ್ಣಗಳಿಂದ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಇದರ ಜತೆಗೆ ಇಡೀ ವರ್ಗದಲ್ಲೇ ಅತಿ ಹೆಚ್ಚಿನ ವೇಗ, ಅಭೂತಪೂರ್ವ ಶ್ರೇಣಿ, ಅತಿದೊಡ್ಡ ಬೂಟ್ ಸ್ಥಳಾವಕಾಶ, ಜಾಗತಿಕ ವಿನ್ಯಾಸ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಇವಿಷ್ಟೂ ಆಕ್ರಮಣಕಾರಿ ಬೆಲೆಗೆ ಲಭ್ಯವಾಗಲಿದ್ದು, ಗ್ರಾಹಕರು ಖರೀದಿಸಬಹುದಾದ ಅತ್ಯುತ್ತಮ ಸ್ಕೂಟರ್ ಎನಿಸಲಿದೆ. ಓಲಾ ಇದರ ಮತ್ತಷ್ಟು ವಿಶೇಷತೆಗಳು ಹಾಗೂ ಬೆಲೆಯನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಿದೆ.

Ola Electric Scooter 10 unique colours With Doorstep delivery

ಕಳೆದ ಗುರುವಾರ ಸಂಜೆ ಕಂಪನಿ ಈ ವಿನೂತನ ಸ್ಕೂಟರ್‌ನ ಕಾಯ್ದಿರಿಸುವಿಕೆಯನ್ನು ಮುಕ್ತಗೊಳಿಸಿದ ಮೊದಲ 24 ಗಂಟೆಗಳಲ್ಲೇ ದಾಖಲೆ ಸಂಖ್ಯೆಯ ಅಂದರೆ ಒಂದು ಲಕ್ಷಕ್ಕೂ ಅಧಿಕ ಓಲಾ ಸ್ಕೂಟರ್‌ಗಳು ಕಾಯ್ದಿರಿಸಲ್ಪಟ್ಟಿವೆ. ಗ್ರಾಹಕರು ತಮ್ಮ ಸ್ಕೂಟರ್‌ಗಳನ್ನು ಮರುಪಾವತಿಸಬಹುದಾದ ರೂ. 499ನ್ನು ಪಾವತಿಸಿ ಕಾಯ್ದಿರಿಸಲು ಅವಕಾಶವಿದೆ. ಓಲಾ ಸ್ಕೂಟರ್ ಬಿಡುಗಡೆಯಾದ ಬಳಿಕ ಹೀಗೆ ಕಾಯ್ದಿರಿಸಿದ ಗ್ರಾಹಕರು ಮನೆಬಾಗಿಲಿಗೆ ವಿತರಣೆಯಲ್ಲಿ ಆದ್ಯತೆ ಪಡೆಯಲಿದ್ದಾರೆ.

ಸಿಇಎಸ್‍ನಲ್ಲಿ ಐಎಚ್‍ಎಸ್ ಮೆರಿಟ್ ಇನ್ನೊವೇಶನ್ ಅವಾರ್ಡ್ ಮತ್ತು ಜರ್ಮನ್ ಡಿಸೈನ್ ಅವಾರ್ಡ್ ಸೇರಿದಂತೆ ಓಲಾ ಸ್ಕೂಟರ್ ಈಗಾಗಲೇ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಓಲಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಸರಣಿಯಲ್ಲಿ ಮೊದಲನೆಯದಾದ ಓಲಾ ಸ್ಕೂಟರನ್ನು ಭಾರತದ ತಮಿಳುನಾಡಿನ 500 ಎಕರೆ ಪ್ರದೇಶದಲ್ಲಿ ನಿರ್ಮಿಸಲಾದ ವಿಶ್ವದ ಅತಿದೊಡ್ಡ, ಅತ್ಯಾಧುನಿಕ ಮತ್ತು ಸುಸ್ಥಿರ ದ್ವಿಚಕ್ರವಾಹನ ಫ್ಯಾಕ್ಟರಿ ಎನಿಸಿದ ಓಲಾ ಫ್ಯೂಚರ್ ಫ್ಯಾಕ್ಟರಿಯಲ್ಲಿ ಉತ್ಪಾದಿಸಲಾಗುತ್ತದೆ.

Ola Electric Scooter 10 unique colours With Doorstep delivery

ಓಲಾ ಸ್ಕೂಟರ್ ಫ್ಯಾಕ್ಟರಿಯ ಮೊದಲ ಹಂತ ವಾರ್ಷಿಕವಾಗಿ 20 ಲಕ್ಷ ವಾಹನಗಳ ಉತ್ಪಾದನಾ ಸಾಮರ್ಥ್ಯದೊಂದಿಗೆ ಶೀಘ್ರವೇ ಕಾರ್ಯಾರಂಭ ಮಾಡಲಿದೆ. ಮುಂದಿನ ವರ್ಷದ ವೇಳೆಗೆ ಇದು ಪೂರ್ಣಪ್ರಮಾಣದಲ್ಲಿ ಸಜ್ಜಾದಾಗ ವಾರ್ಷಿಕ ಒಂದು ಕೋಟಿ ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಲಿದೆ.

ಓಲಾ ಬಗ್ಗೆ: ಓಲಾ ಭಾರತದ ಅತಿದೊಡ್ಡ ಸಂಚಾರ ಪ್ಲಾಟ್‍ಫಾರಂ ಆಗಿದ್ದು, ವಿಶ್ವದ ಅತಿದೊಡ್ಡ ಸವಾರಿ ಸೌಲಭ್ಯ ಕಲ್ಪಿಸುವ ಕಂಪನಿಗಳಲ್ಲೊಂದಾಗಿದೆ. ಮೂರು ಖಂಡಗಳಲ್ಲಿ ನೂರು ಕೋಟಿಗೂ ಅಧಿಕ ಮಂದಿಗೆ ಬೇಡಿಕೆಗೆ ಅನುಸಾರವಾಗಿ ವಾಹನ ಪೂಋಐಸುವ ಮೂಲಕ ನಗರ ಸಂಚಾರ ವ್ಯವಸ್ಥೆಯಲ್ಲಿ ಕ್ರಾಂತಿಯನ್ನು ಉಂಟುಮಾಡಿದೆ. ಸವಾರಿ ಸೌಲಭ್ಯ ಕಲ್ಪಿಸುವ ಪ್ಲಾಟ್‍ಫಾರಂ ಹಾಗೂ ವಿಶ್ವದ ಅತಿದೊಡ್ಡ ಹಾಗೂ ಅತ್ಯಾಧುನಿಕ ಮತ್ತು ಸುಸ್ಥಿರ ದ್ವಿಚಕ್ರ ವಾಹನ ಉತ್ಪಾದಿಸುವ ಫ್ಯೂಚರ್ ಫ್ಯಾಕ್ಟರಿ ಮೂಲಕ ಅತ್ಯಾಧುನಿಕ ಎಲೆಕ್ಟ್ರಿಕ್ ವಾಹನಗಳ ಮೂಲಕ ಇಂದು ಓಲಾ ವಿಶ್ವವನ್ನು ಸುಸ್ಥಿರ ಸಂಚಾರದತ್ತ ಮುನ್ನಡೆಸುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದೆ. ವಿಶ್ವವನ್ನು ಸುಸ್ಥಿರ ಸಂಚಾರ ವ್ಯವಸ್ಥೆಗೆ ವರ್ಗಾಯಿಸಲು ಓಲಾ ಬದ್ಧವಾಗಿದ್ದು, ನಾವು ಇಂದು ಕಾಣುವ ವಿಶ್ವವನ್ನು ಮತ್ತಷ್ಟು ಉತ್ತಮಗೊಳಿಸುವ ಪ್ರಯತ್ನ ನಡೆಸುತ್ತದೆ.

English summary
Consumers to get a choice of 10 unique and vibrant colours for the much-awaited Ola Scooter
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X