ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2 ಸಾವಿರ ಉದ್ಯೋಗಿಗಳ ನೇಮಕಾತಿ ಮಾಡಲಿದೆ ಓಲಾ

|
Google Oneindia Kannada News

ನವದೆಹಲಿ, ಆಗಸ್ಟ್ 26: ಓಲಾ ಎಲೆಕ್ಟ್ರಿಕ್ ಮೊಬಿಲಿಟಿ 2 ಸಾವಿರ ಜನರ ನೇಮಕಾತಿಗೆ ಮುಂದಾಗಿದೆ. ಮುಂದಿನ ಆರು ತಿಂಗಳಿನಲ್ಲಿ ಈ ನೇಮಕಾತಿ ನಡೆಯಲಿದ್ದು, ಇಂಜಿನಿಯರ್ ಸೇರಿದಂತೆ ವಿವಿಧ ಹುದ್ದೆ ಭರ್ತಿ ಮಾಡಲಾಗುತ್ತದೆ.

Recommended Video

ಕೊನೆಗೂ Africa , Polioದಿಂದ ಮುಕ್ತ | Oneindia Kannada

ಓಲಾದ ಸಹ ಸಂಸ್ಥಾಪಕ ಭವಿಷ್‌ ಅಗರ್ವಾಲ್ ಈ ಕುರಿತು ಮಾಹಿತಿ ನೀಡಿದ್ದಾರೆ. ಓಲಾ ಇ-ಸ್ಕೂಟರ್ ಪರಿಚಯಿಸಲಿದ್ದು, ಇದಕ್ಕೆ ಪೂರಕವಾಗಿ 2 ಸಾವಿರ ಜನರಿಗೆ ಉದ್ಯೋಗ ನೀಡಲಿದೆ. ಸಂಸ್ಥೆಯ ಉದ್ಯೋಗಿಗಳಿಗೆ ಬರೆದಿರುವ ಪತ್ರದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಭವಿಷ್ಯದಲ್ಲಿ ಉತ್ತಮ ಬೇಡಿಕೆ ಇದೆ ಎಂದು ಅವರು ಹೇಳಿದ್ದಾರೆ.

'1000 ಇಂಜಿನಿಯರ್‌ಗಳು, ಒಂದು ಸಾವಿರ ಇತರ ಹುದ್ದೆಗಳಿಗೆ ಮುಂದಿನ ಆರು ತಿಂಗಳಿನಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಉತ್ತಮ ಕೌಶಲ್ಯ ಹೊಂದಿರುವವರು ನಮ್ಮ ಬೇರೆ-ಬೇರ ತಂಡಕ್ಕೆ ಸೇರಲಿದ್ದಾರೆ" ಎಂದು ತಿಳಿಸಿದ್ದಾರೆ.

Ola Electric Mobility To Hire 2000 People Golbally

ಲಾಕ್ ಡೌನ್ ಘೋಷಣೆಯಾದ ಬಳಿಕ ಓಲಾಕ್ಕೆ ಸಹ ಅಪಾರವಾದ ನಷ್ಟ ಉಂಟಾಗಿತ್ತು. ಮೇ ತಿಂಗಳಿನಲ್ಲಿ ಸಂಸ್ಥೆ 1,400 ಉದ್ಯೋಗ ಕಡಿತ ಮಾಡುವ ಘೋಷಣೆ ಮಾಡಿತ್ತು. ಈಗ ಎಲೆಕ್ಟ್ರಿಕ್ ಸ್ಕೂಟರ್ ಯೋಜನೆ ಭಾಗವಾಗಿ 2 ಸಾವಿರ ಜನರಿಗೆ ಉದ್ಯೋಗ ನೀಡಲಿದೆ.

ಕೆಲವು ತಿಂಗಳ ಹಿಂದೆ ಓಲಾ ದೇಶಾದ್ಯಂತ ಎಲೆಕ್ಟ್ರಿಕ್ ಕಾರುಗಳ ಚಾರ್ಜಿಂಗ್ ಪಾಯಿಂಟ್ ಆರಂಭಿಸಿತ್ತು. ಈಗ ಎರಡು ಮತ್ತು ಮೂರು ಚಕ್ರದ ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗೆ ಇಳಿಸಲು ಓಲಾ ಮುಂದಾಗಿದೆ.

2017ರಲ್ಲಿ ಓಲಾ ಮಹಾರಾಷ್ಟ್ರದ ನಾಗ್ಪುರದಲ್ಲಿ ಪ್ರಾಯೋಗಿಕವಾಗಿ ಎಲೆಕ್ಟ್ರಿಕ್ ವಾಹನ ಸಂಚಾರ ಆರಂಭಿಸಿತ್ತು. 2018ರಲ್ಲಿ ಅದನ್ನು ಓಲಾ ಎಲೆಕ್ಟ್ರಿಕ್ ಮೊಬಿಲಿಟಿ ಎಂದು ಘೋಷಣೆ ಮಾಡಲಾಯಿತು.

English summary
For electric two wheeler project Ola Electric Mobility (OEM) plans to hire 2,000 people globally in next six months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X