ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕಕ್ಕೆ ಬರುತ್ತಾ ಓಲಾ ಎಲೆಕ್ಟ್ರಿಕ್ ಕಾರು ತಯಾರಿಕಾ ಘಟಕ?

|
Google Oneindia Kannada News

ಬೆಂಗಳೂರು: ಮೊಬಿಲಿಟಿ ದೈತ್ಯ ಓಲಾ ಎಲೆಕ್ಟ್ರಿಕ್ ತನ್ನ ಸೆಲ್ ಮತ್ತು ಎಲೆಕ್ಟ್ರಿಕ್ ಕಾರು ಕಾರ್ಖಾನೆಗಳನ್ನು ಸ್ಥಾಪಿಸಲು ಭೂಮಿಯ ಹುಡುಕಾಟದಲ್ಲಿದೆ. ಅನೇಕ ರಾಜ್ಯಗಳೊಂದಿಗೆ ಈ ಕುರಿತು ಮಾತುಕತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಓಲಾ ಎಲೆಕ್ಟ್ರಿಕ್‌ಗೆ ತನ್ನ ಸೆಲ್ ಗಿಗಾಫ್ಯಾಕ್ಟರಿ ಮತ್ತು ಎಲೆಕ್ಟ್ರಿಕ್ ಕಾರ್ ಕಾರ್ಖಾನೆಯನ್ನು ಸ್ಥಾಪಿಸಲು 1,000 ಎಕರೆ ಭೂಮಿ ಅಗತ್ಯವಿದೆ, ಇದಕ್ಕಾಗಿ ಓಲಾ 10,000 ಕೋಟಿ ಹೂಡಿಕೆ ಮಾಡಲು ಯೋಜಿಸಿದೆ.

Fact check: ದ್ವಿಚಕ್ರ ವಾಹನಗಳ ಉತ್ಪಾದನೆ ನಿಲ್ಲಿಸುವಂತೆ EV ತಯಾರಕರಿಗೆ ಕೇಂದ್ರ ಸೂಚನೆ?Fact check: ದ್ವಿಚಕ್ರ ವಾಹನಗಳ ಉತ್ಪಾದನೆ ನಿಲ್ಲಿಸುವಂತೆ EV ತಯಾರಕರಿಗೆ ಕೇಂದ್ರ ಸೂಚನೆ?

ಈಗಾಗಲೇ ಹಲವು ರಾಜ್ಯಗಳು ಭೂಮಿ ನೀಡಲು ಹಲವು ರಾಜ್ಯಗಳು ಮುಂದಾಗಿವೆ, ಈ ಕುರಿತು ಪೈಪೋಟಿ ಏರ್ಪಟ್ಟಿದೆ ಎಂದು ಮೂಲಗಳು ತಿಳಿಸಿದೆ. ಓಲಾ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ಈಗಾಗಲೇ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ.

 ಜೂನ್ ತಿಂಗಳ ಆರಂಭದಲ್ಲಿ ಅಂತಿಮ ತೀರ್ಮಾನ

ಜೂನ್ ತಿಂಗಳ ಆರಂಭದಲ್ಲಿ ಅಂತಿಮ ತೀರ್ಮಾನ

ಓಲಾ ಸಂಸ್ಥೆ ತನ್ನ ಬಹು ನಿರೀಕ್ಷಿತ ಕಾರು, ದ್ವಿಚಕ್ರ ಮತ್ತು ಬಿಡಿಭಾಗಗಳ ಉತ್ಪಾದನಾ ಕಾರ್ಖಾನೆ ಸ್ಥಾಪಿಸಲು 1000 ಎಕರೆ ಭೂಮಿಯ ಅಗತ್ಯವಿದೆ. ಭೂಸ್ವಾಧೀನಕ್ಕಾಗಿ ಉತ್ತರ ಪ್ರದೇಶ, ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ತಮಿಳುನಾಡು ಮತ್ತು ತೆಲಂಗಾಣ ಸರ್ಕಾರಗಳೊಂದಿಗೆ ಮಾತುಕತೆ ನಡೆಸುತ್ತಿದ್ದು, ಜೂನ್ ತಿಂಗಳ ಆರಂಭದಲ್ಲಿ ಕಂಪನಿಯು ಅದನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಓಲಾ ಸಂಸ್ಥೆಯ ವಕ್ತಾರರು ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ಡಿಸೆಂಬರ್ 2020 ರಲ್ಲಿ, ಓಲಾ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳ ಉತ್ಪಾದನೆಯನ್ನು ತಮಿಳುನಾಡಿನಲ್ಲಿ ಪ್ರಾರಂಭಿಸಿತು. ಕೃಷ್ಣಗಿರಿಯಲ್ಲಿ 500 ಎಕರೆ ವಿಸ್ತೀರ್ಣದಲ್ಲಿ ಕಾರ್ಖಾನೆ ನಿರ್ಮಿಸಿದೆ. ಇದು ಪ್ರಪಂಚದ ಅತಿ ದೊಡ್ಡ ದ್ವಿಚಕ್ರ ವಾಹನ ಕಾರ್ಖಾನೆಯಾಗಿದೆ.

 ದೋಷಯುಕ್ತ ಎಲೆಕ್ಟ್ರಿಕ್ ವಾಹನ ಉತ್ಪಾದಿಸಿದರೆ ಕಂಪನಿಗೆ 'ಭಾರೀ ದಂಡ' : ನಿತಿನ್ ಗಡ್ಕರಿ ಎಚ್ಚರಿಕೆ ದೋಷಯುಕ್ತ ಎಲೆಕ್ಟ್ರಿಕ್ ವಾಹನ ಉತ್ಪಾದಿಸಿದರೆ ಕಂಪನಿಗೆ 'ಭಾರೀ ದಂಡ' : ನಿತಿನ್ ಗಡ್ಕರಿ ಎಚ್ಚರಿಕೆ

 ಪಿಎಲ್‌ಐ ಯೋಜನೆಯಡಿ ಓಲಾ ಆಯ್ಕೆ

ಪಿಎಲ್‌ಐ ಯೋಜನೆಯಡಿ ಓಲಾ ಆಯ್ಕೆ

ಭಾರತದಲ್ಲಿ ಅಡ್ವಾನ್ಸ್ಡ್ ಕೆಮಿಸ್ಟ್ರಿ ಸೆಲ್ ಬ್ಯಾಟರಿ ಸ್ಟೋರೇಜ್ ಪ್ರೋಗ್ರಾಂ ಅಡಿಯಲ್ಲಿ ಬ್ಯಾಟರಿ ಉತ್ಪಾದನಾ ಸಾಮರ್ಥ್ಯಗಳಿಗಾಗಿ ಉತ್ಪಾದನಾ-ಸಂಯೋಜಿತ ಪ್ರೋತ್ಸಾಹ ಯೋಜನೆಯಡಿಯಲ್ಲಿ ಬಿಡ್ ಸಲ್ಲಿಸಿದ 10 ಕಂಪನಿಗಳಲ್ಲಿ ಓಲಾ ಎಲೆಕ್ಟ್ರಿಕ್ ಒಂದಾಗಿದೆ. 18,100 ಕೋಟಿ ರೂಪಾಯಿ ವೆಚ್ಚದ ಉತ್ಪಾದನೆ ಆಧಾರಿತ ಪ್ರೋತ್ಸಾಹ (ಪಿಎಲ್ಐ) ಯೋಜನೆ ಅಡಿಯಲ್ಲಿ ಸರ್ಕಾರದಿಂದ ಆಯ್ಕೆಯಾದ ಏಕೈಕ ಭಾರತೀಯ ಆಟೋ ಮತ್ತು ಎಲೆಕ್ಟ್ರಿಕ್ ವಾಹನ ಕಂಪನಿಯಾಗಿದೆ.

ಪಿಎಲ್‌ಐ ಬಿಡ್‌ನಲ್ಲಿ ಅನುಮತಿಸಲಾದ ಗರಿಷ್ಠ 20 ಗಿಗಾವ್ಯಾಟ್‌ ಸಾಮರ್ಥ್ಯಕ್ಕೆ ಓಲಾ ಬಿಡ್‌ ಸಲ್ಲಿಸಿದೆಯಾದರೂ, ಕಂಪನಿ ಸಂಸ್ಥಾಪಕ ಮತ್ತು ಸಿಇಒ ಭವಿಶ್ ಅಗರ್ವಾಲ್ ತನ್ನ ದ್ವಿಚಕ್ರ ಮತ್ತು ಕಾರ್‌ಗಳಿಗೆ ಬೇಕಾದ ಬ್ಯಾಟರಿ ಉತ್ಪಾದನೆಗೆ 50 ಗಿಗಾವ್ಯಾಟ್‌ ಸಾಮರ್ಥ್ಯದ ಬೃಹತ್‌ ಕಂಪನಿ ಸ್ಥಾಪಿಸುವ ಯೋಜನೆ ಹೊಂದಿರುವುದಾಗಿ ಈ ಹಿಂದೆ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದರು.

 ಕಾರು ಉತ್ಪಾದಿಸಲು ಸಿದ್ಧತೆ

ಕಾರು ಉತ್ಪಾದಿಸಲು ಸಿದ್ಧತೆ

ಓಲಾ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಮುಂದಿನ 2-3 ವರ್ಷಗಳಲ್ಲಿ ನಿರ್ಮಿಸಲು ದ್ವಿಚಕ್ರ ವಾಹಗಳಿಗಾಗಿ ಅಸ್ತಿತ್ವದಲ್ಲಿರುವ ಫ್ಯೂಚರ್ ಫ್ಯಾಕ್ಟರಿಯಿಂದ ಪ್ರತ್ಯೇಕವಾಗಿ ಹೊಸ ಕಾರ್ಖಾನೆ ಸ್ಥಾಪಿಸುವ ಉದ್ದೇಶ ಹೊಂದಿದೆ ಎಂದು ಈಗಾಗಲೇ ಓಲಾ ಸಿಇಒ ಅಗರ್ವಾಲ್ ಹೇಳಿದ್ದಾರೆ.

ಇದೀಗ ಹೆಚ್ಚುವರಿ 1,000 ಎಕರೆ ಭೂಮಿಗಾಗಿ ಓಲಾ ಹುಡುಕಾಡುತ್ತಿದ್ದು, ಇಲ್ಲಿ ಪ್ರತ್ಯೇಕ ಫ್ಯಾಕ್ಟರಿ ನಿರ್ಮಿಸಲಿದೆ. ಕಾರು ತಯಾರಿಗಾಗಿ ಬಹು ನಿರೀಕ್ಷಿತ 'ಕಾರ್ ಫ್ಯಾಕ್ಟರಿ' ಹಾಗೂ ದ್ವಿಚಕ್ರ ವಾಹನ ಮತ್ತು ಕಾರುಗಳಿಗಾಗಿ ಸೆಲ್ ಉತ್ಪಾದಿಸಲು 'ಗಿಗಾಫ್ಯಾಕ್ಟರಿ' ನಿರ್ಮಿಸಲು ಕಂಪನಿ ಉದ್ದೇಶಿಸಿದೆ.

 ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಉತ್ಪಾದನೆಯಲ್ಲಿ ನಂ.1

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಉತ್ಪಾದನೆಯಲ್ಲಿ ನಂ.1

ದೇಶೀಯ ದ್ವಿಚಕ್ರ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ಹೊಸದಾಗಿ ಪ್ರವೇಶಿಸಿದ ಓಲಾ ಇದೀಗ ಮಾರುಕಟ್ಟೆಯ ನಾಯಕನಾಗಿ ಹೊರಹೊಮ್ಮಿದೆ, ಗ್ರಾಹಕರಿಗೆ ನೇರವಾಗಿ ವಾಹನಗಳ ವಿತರಣೆ ಮತ್ತು ಸೇವೆಯೊಂದಿಗೆ ಉದ್ಯಮದ ಮೇಲೆ ಅಧಿಪತ್ಯ ಸಾಧಿಸಿದೆ.

ಕಳೆದ ವರ್ಷ ಡಿಸೆಂಬರ್ 15 ರಂದು ತನ್ನ ಮೊದಲ ವಿತರಣೆಯಿಂದ, ಓಲಾ ಎಲೆಕ್ಟ್ರಿಕ್ ಭಾರತದ ನಂ. 1 ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಮಾರ್ಪಟ್ಟಿದೆ. ಕಂಪನಿಯು ಇತ್ತೀಚೆಗೆ ಅದರ ವ್ಯಾಪ್ತಿಯನ್ನು ಹೆಚ್ಚಿಸುವ ಹೊಸ ಇಕೋ ಮೋಡ್‌ನಂತಹ ವೈಶಿಷ್ಟ್ಯಗಳೊಂದಿಗೆ ಎಸ್‌1 ಪ್ರೊ ಗಾಗಿ ಹೊಸ ಸಾಫ್ಟ್‌ವೇರ್ ಅಪ್‌ಗ್ರೇಡ್ ಮೂವ್ ಒಎಸ್‌2 (MoveOS2) ಅನ್ನು ಪರಿಚಯಿಸಿತು.

ಹೊಸ ಇಕೋ ಮೋಡ್, ಇದು ಒಂದೇ ಚಾರ್ಜ್‌ನಲ್ಲಿ 165 ಕಿ.ಮೀ. ಮೈಲೇಜ್ ನೀಡುತ್ತದೆ. ಕಂಪ್ಯಾನಿಯನ್ ಅಪ್ಲಿಕೇಶನ್ ಓಲಾ ಎಸ್‌1 ಪ್ರೊ (Ola S1 Pro) ಅನ್‌ಲಾಕ್ ಮಾಡುತ್ತದೆ ಮತ್ತು ಲಾಕ್ ಮಾಡುತ್ತದೆ, ಕ್ರೂಸ್ ಕಂಟ್ರೋಲ್ ವೈಶಿಷ್ಟ್ಯವು ಸವಾರನಿಗೆ ಆರಾಮದಾಯಕವಾದ ಸವಾರಿ, ತಡೆರಹಿತ ನ್ಯಾವಿಗೇಷನ್ ಹೊಂದಲು ಅನುವು ಮಾಡಿಕೊಡುತ್ತದೆ.

(ಒನ್ಇಂಡಿಯಾ ಸುದ್ದಿ)

English summary
Mobility giant Ola Electric is scouting for land to set up its cell and electric car factories and is in talks with multiple states, sources said. Some states are already vying, sources aware of the matter said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X