ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಒಕಿನಾವಾ ಇ-ಸ್ಕೂಟರ್ ಮನೆ ಬಾಗಿಲಿಗೆ ಡೆಲಿವರಿ

|
Google Oneindia Kannada News

ಬೆಂಗಳೂರು ಆಗಸ್ಟ್ 19: ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರವಾಹನ ತಯಾರಿಕಾ ಕಂಪನಿಯಾದ ಒಕಿನಾವಾ, ಬೆಂಗಳೂರು ನಗರದಲ್ಲಿ ಇ ಸ್ಕೂಟರ್ ಖರೀದಿದಾರರಿಗೆ ವಿಶಿಷ್ಟವಾಗಿ ಮನೆ ಬಾಗಿಲಿಗೆ ಡೆಲಿವರಿ ಸರ್ವೀಸ್ ಆರಂಭಿಸಿದೆ. ಕಂಪನಿ ಉಚಿತವಾಗಿ ಈ ಸರ್ವೀಸ್ ಖರೀದಿದಾರರಿಗೆ ಅನುಕೂಲ ನೀಡುತ್ತಿದೆ. ನಗರದಲ್ಲಿ ಮನೆಬಾಗಿಲಿಗೆ ಇಲೆಕ್ಟ್ರಿಕ್ ಸ್ಕೂಟರ್ ವಿತರಿಸುವ ಕಾರ್ಯಕ್ಕೆ ಬ್ರಾಂಡ್ ಚಾನೆಲ್ ಪಾಲುದಾರರೊಂದಿಗೆ ಸಹಭಾಗಿತ್ವ ಹೊಂದಿದೆ.

Recommended Video

MS Dhoniಗೆ ಬಹಳ ವಿಶೇಷ ಗೌರವ ಸಲ್ಲಿಸಲಿದೆ ಮುಂಬೈ ಕ್ರಿಕೆಟ್ | Oneindia Kannada

ಕೋವಿಡ್-19 ಸಾಂಕ್ರಾಮಿಕ ಆರಂಭವಾದ ಸಮಯದಿಂದ ಒಕಿನಾವಾ ತನ್ನ ಶೇರುದಾರರಿಗೆ ಸುಲಭ ಮತ್ತು ಸುರಕ್ಷಿತ ವಿಧಾನ ಪರಿಚಯಿಸಲು ಅವಿರತವಾಗಿ ಕೆಲಸ ಮಾಡುತ್ತಿದೆ. ಬ್ರಾಂಡ್ ಪ್ರಕ್ರಿಯೆಯಲ್ಲಿರುವ ದೈಹಿಕ ಸಂವಹನ ಕಡಿಮೆ ಮಾಡುವ ದಿಕ್ಕಿನಲ್ಲಿ ತನ್ನ ವೆಬ್ ಸೈಟ್ ಮೂಲಕ ಉತ್ಪನ್ನಗಳ ಆನ್ ಲೈನ್ ಬುಕ್ಕಿಂಗ್ ಇತ್ತೀಚೆಗಷ್ಟೇ ಆರಂಭಿಸಿದೆ. ಮನೆಬಾಗಿಲಿಗೆ ಸರ್ವೀಸ್ ನೀಡುವ ಹೊಸ ಪರಿಕಲ್ಪನೆ ಇದೇ ದಿಕ್ಕಿನಲ್ಲಿ ಕಂಪನಿಯ ಮತ್ತೊಂದು ಅಭಿಯಾನವಾಗಿದೆ. ಸರ್ವೀಸ್ ಒಕಿನಾವಾ ವೆಬ್ ಸೈಟ್ ಮೂಲಕ ಮಾಡಲಾಗುವ ಎಲ್ಲಾ ಬುಕ್ಕಿಂಗ್ ಗೆ ಅನ್ವಯವಾಗುತ್ತದೆ.

ಹೀರೋ ಎಲೆಕ್ಟ್ರಿಕ್ ಸ್ಕೂಟರ್: 2,999 ರೂ. ಕಂತುಗಳಿಂದ ಆರಂಭಹೀರೋ ಎಲೆಕ್ಟ್ರಿಕ್ ಸ್ಕೂಟರ್: 2,999 ರೂ. ಕಂತುಗಳಿಂದ ಆರಂಭ

ಈ ಸರ್ವೀಸ್ ಬೆಂಗಳೂರು ನಗರದಲ್ಲಿ ಆಗಸ್ಟ್ 15, 2020 ರಿಂದ ಆರಂಭವಾಗಿದೆ. ಬ್ರಾಂಡ್ ಬೆಂಗಳೂರಿನ ಅನುಭವದ ಫಲಿತಾಂಶ ಆಧರಿಸಿ, ಸರ್ವಿಸ್ ಅನ್ನು ಭಾರತದಾದ್ಯಂತ ಇತರ ನಗರಗಳಿಗೆ ವಿಸ್ತರಿಸುವ ಯೋಜನೆ ಹೊಂದಿದೆ.

Okinawa electric scooters home delivery begins in Bengaluru

ಒಕಿನಾವಾ ಕುರಿತು: ಎಂಡಿ ಜಿತೇಂದರ್ ಶರ್ಮಾ ಮತ್ತು ಅಧ್ಯಕ್ಷ ಶ್ರೀಮತಿ ರೂಪಲಿ ಶರ್ಮಾ 2015 ರಲ್ಲಿ ಇದನ್ನು ಸ್ಥಾಪಿಸಿದರು. ಒಕಿನಾವಾ ಇಂದು ಭಾರತೀಯ ಆಟೋಮೊಬೈಲ್ ಕಂಪನಿಗಳಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮತ್ತು ಹೆಚ್ಚು ಪ್ರಸಿದ್ಧವಾಗುತ್ತಿರುವ ಹೆಸರಾಗಿದೆ. ಒಕಿನಾವಾ-''ಮೇಕ್ ಇನ್ ಇಂಡಿಯಾ''ಪರಿಕಲ್ಪನೆಯನ್ನು ಕೇಂದ್ರೀಕರಿಸಿದ 100% ಮೊದಲ ಭಾರತೀಯ ಎಲೆಕ್ಟ್ರಿಕ್ ದ್ವಿಚಕ್ರವಾಹನ ತಯಾರಿಕಾ ಕಂಪನಿಯಾಗಿದೆ. ಕಂಪನಿ ಗುರುಗ್ರಾಮದಲ್ಲಿ ಮುಖ್ಯ ಕಚೇರಿಯನ್ನು ಹೊಂದಿದ್ದು, ರಾಜಸ್ಥಾನದ ಭಿವಾಡಿಯಲ್ಲಿ ತಯಾರಿಕಾ ಘಟಕ ಹೊಂದಿದೆ.

ಈಗ ಖರೀದಿಸಿ, 6 ತಿಂಗಳ ಬಳಿಕ ಪಾವತಿಸಿ ಟಿವಿಎಸ್ ಯೋಜನೆಈಗ ಖರೀದಿಸಿ, 6 ತಿಂಗಳ ಬಳಿಕ ಪಾವತಿಸಿ ಟಿವಿಎಸ್ ಯೋಜನೆ

''ನಾವೀಗ ಇ-ವಾಣಿಜ್ಯ ವೆಬ್ ಸೈಟ್ ಆರಂಭಿಸಿದ್ದೇವೆ. ಡೀಲರ್ ಶಿಪ್ ಅಪ್ಲಿಕೇಶನ್ ಪ್ರಕ್ರಿಯೆಯೂ ಡಿಜಿಟಲೀಕರಣವಾಗಿದೆ. ಮನೆಬಾಗಿಲಿಗೆ ಸರ್ವೀಸ್ ಎನ್ನುವ ಹೊಸ ಪರಿಕಲ್ಪನೆ ಗ್ರಾಹಕರು ಉತ್ಪನ್ನ ಪಡೆಯಲು ಮನೆಯಿಂದ ಹೊರಗೆ ಪ್ರಯಾಣಿಸುವ ಅಗತ್ಯವಿಲ್ಲದಂತೆ ಮಾಡುತ್ತದೆ. ಜೊತೆಗೆ, ಉತ್ಪನ್ನವನ್ನು ಸರಿಯಾಗಿ ಸ್ಯಾನಿಟೈಸ್ ಮಾಡುವುದರೊಂದಿಗೆ ಡೆಲಿವರಿ ಮಾಡಲು ಬರುವ ವ್ಯಕ್ತಿಯ ಉಷ್ಣಾಂಶ ಪರೀಕ್ಷೆಯನ್ನೂ ಮಾಡಲಾಗುತ್ತದೆ," ಎಂದು ಒಕಿನಾವಾ ದ ಎಂಡಿ ಮತ್ತು ಸಂಸ್ಥಾಪಕ, ಮಿ. ಜಿತೇಂದರ್ ಶರ್ಮಾ ಹೇಳಿದ್ದಾರೆ.

English summary
Okinawa, the Gurugram-based electric two-wheeler manufacturer, has announced the commencement of home delivery of its e-scooters in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X