• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಓಕಿ ಎಲೆಕ್ಟ್ರಾನಿಕ್ಸ್: ಅತ್ಯಾಕರ್ಷಕ ಎಲ್‌ಇಡಿ ಟಿವಿಗಳು

|

ನವದೆಹಲಿ, ಆಗಸ್ಟ್‌ 19: ಒರಿಜಿನಲ್ ಎಕ್ವಿಪ್ಮೆಂಟ್ ಮ್ಯಾನ್ಯುಫಾಕ್ಚರರ್ ಮತ್ತು ಒರಿಜಿನಲ್ ಡಿಸೈನ್ ಮ್ಯಾನ್ಯುಫಾಕ್ಚರ್‌ನ ವಿಶೇಷತೆ ಹೊಂದಿರುವ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಉತ್ಪಾದನಾ ಸಂಸ್ಥೆಗಳಲ್ಲೊಂದಾದ ಓಕೀ ವೆಂಚರ್ಸ್ ಪ್ರೈ. ಲಿ, ತಮ್ಮ ಸ್ವಂತ ಬ್ರ್ಯಾಂಡ್‍ನ ಗ್ರಾಹಕ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಆರಂಭಿಸಲು ಓಕೀ ಎಲೆಕ್ಟ್ರಾನಿಕ್ಸ್ ಅನ್ನು ಸ್ಥಾಪಿಸುತ್ತಿದೆ.

ಮುಂದಿನ ತಿಂಗಳುಗಳಲ್ಲಿ ಉನ್ನತ ಗುಣಮಟ್ಟದ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಆರಂಭಿಸುವ ಯೋಜನೆ ಹೊಂದಿರುವ ಓಕೀ ವೆಂಚರ್ಸ್ ಅಕ್ಟೋಬರ್ 2020ರ ವೇಳೆಗೆ, ಅಂದರೆ ದೀಪಾವಳಿಯ ಹಬ್ಬದ ಮುನ್ನ ಕೋಲ್ಕತಾದಲ್ಲಿ ತಮ್ಮ ಟಿವಿಗಳ ಉತ್ಪಾದನಾ ಕಾರ್ಖಾನೆಯನ್ನು ಪ್ರತ್ಯೇಕವಾಗಿ ಆರಂಭಿಸಲು ಸಜ್ಜಾಗಿದೆ. ಇದಲ್ಲದೆ ಡಿಸೆಂಬರ್ 2020ರ ವೇಳೆಗೆ ಮಹಾರಾಷ್ಟ್ರದಲ್ಲಿ ಬೃಹತ್ ಅತ್ಯಾಧುನಿಕ ಎಲೆಕ್ಟ್ರಾನಿಕ್ ಉತ್ಪಾದನಾ ಕಾರ್ಖಾನೆಯನ್ನು ಆರಂಭಿಸಲೂ ಸಜ್ಜಾಗಿದೆ.

ವಿಶ್ವದ ಮೊದಲ ಪಾರದರ್ಶಕ ಟಿವಿ: ಬೆಲೆ ಕೇಳಿದ್ರೆ ದಂಗಾಗ್ತೀರಾ..!

ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಬರ ಭಾರತದ ಅಂಗವಾಗಿ ಭಾರತದಲ್ಲೇ ಟಿವಿ ತಯಾರಿಕಾ ಕಾರ್ಖಾನೆಯನ್ನು ಆರಂಭಿಸಲಾಗುತ್ತಿದೆ. ಜೊತೆಗೆ ಓಕಿ, ಗ್ರಾಹಕರಿಗೆ ಅಂತಿಮ ಮಟ್ಟದ ದೂರದರ್ಶನ ವೀಕ್ಷಣಾ ಅನುಭವವನ್ನು ನೀಡಲಿದೆ. ಓಕೀ ಸ್ಮಾರ್ಟ್ ಟಿವಿ ಶ್ರೇಣಿಯು 24"ನಿಂದ 65" ವರೆಗೆ ವಿವಿಧ ಗಾತ್ರಗಳಲ್ಲಿ ಲಭ್ಯವಿದ್ದು, ಇದರಲ್ಲಿರುವ ಆಂತರಿಕ ಸೌಂಡ್ ಬಾರ್ ವೀಕ್ಷಕರಿಗೆ ಮನೆಯಲ್ಲಿಯೇ ಥಿಯೇಟರ್ ಮಾದರಿಯ ಅನುಭವ ನೀಡಲಿದೆ.

ಓಕಿ ಎಲೆಕ್ಟ್ರಾನಿಕ್ಸ್‌ ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಲಭ್ಯವಿದ್ದು, ನಟಿ ಕಾಜಲ್ ಅಗರ್ವಾಲ್‌ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಓಕೀ ಟಿವಿಗಳ ದರವು ರೂ. 6500 ದಿಂದ ಆರಂಭವಾಗಿ ರೂ. 85,999 ವರೆಗೆ ಇದೆ.

ಓಕೀ ವೆಂಚರ್ಸ್ ಪ್ರೈ.ಲಿ ಬಗ್ಗೆ:

2011ರಲ್ಲಿ ಸಂಸ್ಥಾಪಿಸಲಾದ ಓಕೀ ವೆಂಚರ್ಸ್ ಪ್ರೈ ಲಿ ಭಾರತೀಯ ಸಂಸ್ಥೆಯಾಗಿದ್ದು, ಇದರ ಉದ್ಯಮಗಳ ಪಟ್ಟಿಯಲ್ಲಿ ಉತ್ಪಾದನೆ, ಗೇಮಿಂಗ್ ಮತ್ತು ಆರೋಗ್ಯಸೇವೆಗಳು ಇದೆ. ಒಂಬತ್ತು ವರ್ಷಗಳ ಕಡಿಮೆ ಅವಧಿಯಲ್ಲಿ, ಓಕೀ ವೆಂಚರ್ಸ್ ಪ್ರಸಿದ್ಧವಾದ ಭಾರತೀಯ ಬ್ರ್ಯಾಂಡ್ ಆಗಿ ಬೆಳೆದಿದ್ದು, ಭಾರತದಾದ್ಯಂತ ಲಕ್ಷಾಂತರ ಗ್ರಾಹಕರನ್ನು ತಲುಪಿದೆ.

English summary
OKIE Ventures is in the process of setting up an LED TV assembling factory in Kolkata and have it operational before Diwali 2020
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X