ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಯಿಲ್‌ ಇಂಡಿಯಾ ಲಿಮಿಟೆಡ್‌ಗೆ 249 ಕೋಟಿ ರೂಪಾಯಿ ತ್ರೈಮಾಸಿಕ ನಷ್ಟ

|
Google Oneindia Kannada News

ನವದೆಹಲಿ, ಆಗಸ್ಟ್‌ 22: ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶದ ಎರಡನೇ ಅತಿದೊಡ್ಡ ತೈಲ ಮತ್ತು ಅನಿಲ ಉತ್ಪಾದಕ ಆಯಿಲ್ ಇಂಡಿಯಾ ಲಿಮಿಟೆಡ್ ಇತಿಹಾಸದಲ್ಲಿ ಎರಡನೇ ಬಾರಿಗೆ ತ್ರೈಮಾಸಿಕ ನಷ್ಟ ಅನುಭವಿಸಿದೆ.

ಕಚ್ಚಾ ತೈಲ ಬೆಲೆಗಳು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆಯಾದ ನಂತರ ಆಯಿಲ್ ಇಂಡಿಯಾ ಲಿಮಿಟೆಡ್ ಎರಡನೇ ಬಾರಿಗೆ ನಷ್ಟ ಕಂಡಿದೆ. ಹಿಂದಿನ ಅವಧಿಗೆ ಇದೇ ಅವಧಿಯಲ್ಲಿ 624.80 ಕೋಟಿ ನಿವ್ವಳ ಲಾಭದೊಂದಿಗೆ ಹೋಲಿಸಿದರೆ 2020-21ರ ಹಣಕಾಸು ವರ್ಷದ ಮೊದಲ ತ್ರೈಮಾಸಿದಲ್ಲಿ 248.61 ಕೋಟಿ ನಿವ್ವಳ ನಷ್ಟವನ್ನು ಹೊಂದಿದೆ.

ಟಾಟಾ ಪವರ್ ತೆರಿಗೆ ನಂತರದ ಏಕೀಕೃತ ಲಾಭ ಶೇ. 10ರಷ್ಟು ಏರಿಕೆಟಾಟಾ ಪವರ್ ತೆರಿಗೆ ನಂತರದ ಏಕೀಕೃತ ಲಾಭ ಶೇ. 10ರಷ್ಟು ಏರಿಕೆ

''ಇದು ಒಐಎಲ್ ಇತಿಹಾಸದಲ್ಲೇ ಎರಡನೇ ತ್ರೈಮಾಸಿಕ ನಷ್ಟವಾಗಿದೆ. 2018-19ರ ಆರ್ಥಿಕ ವರ್ಷದಲ್ಲಿ ನಮಗೆ ತ್ರೈಮಾಸಿಕ ನಷ್ಟವಾಗಿತ್ತು" ಎಂದು ಒಐಎಲ್ ಹಣಕಾಸು ನಿರ್ದೇಶಕ ಹರೀಶ್ ಮಾಧವ್ ಶನಿವಾರ ಹೇಳಿದ್ದಾರೆ.

OIL Q1 Report: Net Loss Rs 249 Crore

ಜೂನ್ ತ್ರೈಮಾಸಿಕದಲ್ಲಿ ಕಂಪನಿಯು ಉತ್ಪಾದಿಸಿದ ತೈಲದ ಬೆಲೆ ಬ್ಯಾರೆಲ್‌ಗೆ 30.43 ಡಾಲರ್‌ಗೆ ಇಳಿದಿದ್ದರಿಂದ ಈ ನಷ್ಟವು ಸಂಭವಿಸಿದೆ. ಒಂದು ವರ್ಷದ ಹಿಂದೆ ಬ್ಯಾರೆಲ್ ಬೆಲೆ 66.33 ಡಾಲರ್‌ಗೆ ತಲುಪಿದೆ ಎಂದು ಅವರು ಹೇಳಿದರು.

English summary
Oil India Ltd, the nation's second largest state oil and gas producer, logged second quarterly loss in its history in April-June after crude oil prices slumped to lower than cost of production.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X