ನಿತ್ಯ ಪೆಟ್ರೋಲ್-ಡೀಸೆಲ್ ಬೆಲೆ ನಿಗದಿ, ಮೇ 1ರಿಂದ ಈ 5 ನಗರದಲ್ಲಿ ಪ್ರಯೋಗ

Posted By:
Subscribe to Oneindia Kannada

ನವದೆಹಲಿ, ಏಪ್ರಿಲ್ 12: ಆಯಾ ದಿನವೇ ಪೆಟ್ರೋಲ್ -ಡೀಸೆಲ್ ದರ ನಿಗದಿ ಮಾಡಬೇಕು ಎಂದು ಸಾರ್ವಜನಿಕ ಉದ್ದಿಮೆಯ ತೈಲ ಕಂಪೆನಿಗಳು ಚಿಂತನೆ ನಡೆಸಿರುವುದು ನಿಮಗೆ ಈಗಾಗಲೇ ಗೊತ್ತಿದೆ. ಅದರೆ ಯಾವಾಗಿನಿಂದ ಜಾರಿಗೆ ತರ್ತಾರೆ, ಇಡೀ ದೇಶದಲ್ಲಿ ತರ್ತಾರಾ ಎಂಬೆಲ್ಲ ಪ್ರಶ್ನೆಗಳಿಗೆ ಈ ವರದಿಯಲ್ಲಿ ಉತ್ತರವಿದೆ.

ದೇಶದಾದ್ಯಂತ ಈ ಆಲೋಚನೆ ಕಾರ್ಯರೂಪಕ್ಕೆ ತರುವ ಮೊದಲು ದೇಶದ ಐದು ನಗರಗಳಲ್ಲಿ ಮೇ 1ರಿಂದ ಈ ಯೋಜನೆ ಜಾರಿಗೆ ಬರುತ್ತದೆ. ದಕ್ಷಿಣದ ಪುದುಚೆರಿ-ವಿಶಾಖಪಟ್ಟಣ, ಪಶ್ಚಿಮದ ಉದಯ್ ಪುರ್, ಪೂರ್ವ ಭಾಗದ ಜಮ್ಷೆಡ್ ಪುರ್ ಮತ್ತು ಉತ್ತರದ ಚಂಡೀಗಢದಲ್ಲಿ ನಿತ್ಯ ಪೆಟ್ರೋಲ್-ಡೀಸೆಲ್ ದರ ನಿಗದಿ ಪಡಿಸುವ ಪ್ರಯೋಗ ಮಾಡಲಾಗುತ್ತದೆ ಎಂದು ಎಕನಾಮಿಕ್ ಟೈಮ್ಸ್ ನಲ್ಲಿ ವರದಿಯಾಗಿದೆ.[ಪ್ರತಿದಿನ ಪೆಟ್ರೋಲ್, ಡೀಸೆಲ್ ದರ ಪರಿಷ್ಕರಿಸಲು ಚಿಂತನೆ]

Oil PSUs to revise fuel price in 5 cities daily from May 1

ಸದ್ಯಕ್ಕೆ ಸಾರ್ವಜನಿಕ ಉದ್ದಿಮೆಯ ತೈಲ ಕಂಪೆನಿಗಳು ಹದಿನೈದು ದಿನಕ್ಕೊಮ್ಮೆ ಬೆಲೆ ನಿಗದಿ ಮಾಡುತ್ತವೆ. ರುಪಾಯಿ ಮೌಲ್ಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದ ಆಧಾರದಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಇಂದಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂನ ಬಂಕ್ ಗಳೇ ದೇಶದಲ್ಲಿ ಶೇ 90ರಷ್ಟಿವೆ.

ಈ ಐದು ನಗರಗಳಲ್ಲಿ ಇವುಗಲ ಇನ್ನೂರು ಬಂಕ್ ಗಳಿವೆ ಎಂದು ಮೂಲಗಳು ತಿಳಿಸಿವೆ. ಪ್ರಾಯೋಗಿಕವಾಗಿ ಮಾಡುವುದರಿಂದ ಇಡೀ ದೇಶದಲ್ಲಿ ಯೋಜನೆ ಜಾರಿಗೆ ತಂದರೆ ಎದುರಾಗಬಹುದಾದ ಸವಾಲುಗಳು ಏನು ಎಂದು ಗೊತ್ತಾಗುತ್ತದೆ. ಆದ್ದರಿಂದ ಹೀಗೆ ಮಾಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India's state-owned fuel retailers plan to implement daily revision of fuel price in five cities from May 1 ahead of a nationwide roll out of the scheme, industry sources said.
Please Wait while comments are loading...