• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾರ್ವತ್ರಿಕ ಚುನಾವಣೆಗೂ ಮುನ್ನ ಪೆಟ್ರೋಲ್ ಪಂಪ್ ಸಂಖ್ಯೆ ಡಬ್ಬಲ್!

|

ನವದೆಹಲಿ, ನವೆಂಬರ್ 26: ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ದೇಶಾದ್ಯಂತ 65 ಸಾವಿರ ಪೆಟ್ರೋಲ್ ಪಂಪ್ ಗಳ ಸ್ಥಾಪನೆಗೆ ಅನುಮತಿ ನೀಡುವುದಾಗಿ ತಿಳಿಸಿವೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್(ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪ್ ಲಿಮಿಟೆಡ್ (ಬಿಪಿಸಿಎಲ್) ಹಾಗೂ ಹಿಂದೂಸ್ತಾನ್ ಪೆಟ್ರೋಲ್ ಕಾರ್ಪ್ ಲಿಮಿಟೆಡ್ (ಎಚ್ ಪಿ ಸಿಎಲ್) ಭಾನುವಾರ(ನವೆಂಬರ್ 25)ದಂದು ನೀಡಿರುವ ಪತ್ರಿಕಾ ಜಾಹೀರಾತು ಪ್ರಕಟಣೆಯಂತೆ ದೇಶದೆಲ್ಲೆಡೆ 55,649 ಪೆಟ್ರೋಲ್ ಪಂಪ್ ಗಳು ತಲೆ ಎತ್ತಲಿವೆ. ಇದು ಜಾರಿಗೆ ಬಂದ ನಂತರ ದೇಶದ ಪೆಟ್ರೋಲ್ ಪಂಪ್ ಗಳ ಸಂಖ್ಯೆ ಈಗಿರುವುದಕ್ಕಿಂತ ದ್ವಿಗುಣವಾಗಲಿದೆ.

ರಾಜ್ಯದಲ್ಲಿ ಹೊಸದಾಗಿ 5,024 ಸಾವಿರ ಓಎಂಸಿ ಪೆಟ್ರೋಲ್ ಬಂಕ್

ಎಚ್ ಪಿ ಸಿಎಲ್ ನ ಸಂಚಾಲಕ ವಿಶಾಲ್ ಬಾಜಪೇಯಿ ಮಾತನಾಡಿ, ದೇಶದಲ್ಲಿ ಈಗ ಇರುವ ಹಳೇ ಬಂಕ್‌ಗಳು ಡಿಸೆಂಬರ್ 31ರೊಳಗೆ ಆಟೋಮೇಷನ್ ತಂತ್ರಜ್ಞಾನ ಅಳವಡಿಸಿಕೊಳ್ಳಲಿವೆ. ಇಂಧನ ಬೇಡಿಕೆ ಹೆಚ್ಚಿರುವುದರಿಂದ ಪಂಪ್ ಗಳ ಸಂಖ್ಯೆ ಹೆಚ್ಚಳ ಮಾಡಲಾಗುತ್ತಿದೆ.

ಇದರಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಐದು ರಾಜ್ಯಗಳು ಸೇರಿಲ್ಲ ಎಂದಿದ್ದಾರೆ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ ಗಢ, ತೆಲಂಗಾಣ ಹಾಗೂ ಮಿಜೋರಾಂನಲ್ಲಿ ಡಿಸೆಂಬರ್ ನಲ್ಲಿ ವಿಧಾನಸಭೆ ಚುನಾವಣೆ ನಿಗದಿಯಾಗಿದೆ.

ಸರ್ಕಾರಿ ಸ್ವಾಮ್ಯದ ಮೂರು ಪಂಪ್ ಗಳ ಸಂಖ್ಯೆ

ಸರ್ಕಾರಿ ಸ್ವಾಮ್ಯದ ಮೂರು ಪಂಪ್ ಗಳ ಸಂಖ್ಯೆ

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರಸಕ್ತ 27,377 ಪೆಟ್ರೋಲ್ ಪಂಪ್ ಹೊಂದಿದ್ದು, ಅದು ಹೊಸದಾಗಿ 26,982 ಪೆಟ್ರೋಲ್ ಪಂಪ್ ಗಳನ್ನು ತೆರೆಯಲು ಮುಂದಾಗಿದೆ. ಬಿಪಿಸಿಎಲ್ 14,592 ಪಂಪ್ ಗಳನ್ನು ಹೊಂದಿದ್ದು, 15,802 ಹೊಸ ಪಂಪ್ ಗಳನ್ನು ಆರಂಭಿಸಲಿದೆ. ಎಚ್ ಪಿ ಸಿಎಲ್ 15,287 ಪೆಟ್ರೋಲ್ ಪಂಪ್ ಹೊಂದಿದ್ದು, 12,865 ಪಂಪ್ ಗಳನ್ನು ಹೆಚ್ಚಿಗೆ ಪಡೆಯಲಿದೆ.

ಪೆಟ್ರೋಲ್ ಪಂಪ್ ಸ್ಥಾಪನೆಯ ನಿಯಮ

ಪೆಟ್ರೋಲ್ ಪಂಪ್ ಸ್ಥಾಪನೆಯ ನಿಯಮ

ಪೆಟ್ರೋಲ್ ಪಂಪ್ ಸ್ಥಾಪನೆಯ ನಿಯಮಗಳಲ್ಲೂ ಸಹ ಸಡಿಲಿಕೆ ತರಲಾಗಿದೆ. ಶೈಕ್ಷಣಿಕ ಅರ್ಹತೆಯನ್ನು ಹತ್ತನೇ ತರಗತಿಗೆ ಇಳಿಸಲಾಗಿದೆ. ಪೆಟ್ರೋಲ್ ಪಂಪ್ ಮಾಲೀಕರಾಗಲು, ಸ್ಥಾಪನೆಯಾಗಲಿರುವ ಸ್ಥಳದ ಮಾಲೀಕತ್ವ ಹೊಂದಿದ್ದರೆ ಸಾಕು.

ಪೆಟ್ರೋಲ್ ಪಂಪ್ ಸ್ಥಾಪನೆಗೆ ಜಾಹೀರಾತು

ಪೆಟ್ರೋಲ್ ಪಂಪ್ ಸ್ಥಾಪನೆಗೆ ಜಾಹೀರಾತು

ಕಳೆದ ನಾಲ್ಕು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪೆಟ್ರೋಲ್ ಪಂಪ್ ಸ್ಥಾಪನೆಗೆ ಜಾಹೀರಾತು ಹೊರಡಿಸಲಾಗಿದೆ. ಪ್ರಸಕ್ತ ದೇಶದಲ್ಲಿ 63,674 ಪೆಟ್ರೋಲ್ ಪಂಪ್ ಗಳಿವೆ. ಖಾಸಗಿ ವಲಯದಲ್ಲಿ ಎಸ್ಸಾರ್ ಆಯಿಲ್ ಲಿಮಿಟೆಡ್ 4,895, ರಿಲಯನ್ಸ್ ಇಂಡಸ್ಟ್ರೀ 1,400 ಹಾಗೂ ರಾಯಲ್ ಡಚ್/ ಶೆಲ್ 116 ಮಳಿಗೆಗಳನ್ನು ಹೊಂದಿವೆ.

ಸ್ಥಳದ ಮಾಲೀಕತ್ವ ಇಲ್ಲದಿದ್ದರೂ ಪಂಪ್

ಸ್ಥಳದ ಮಾಲೀಕತ್ವ ಇಲ್ಲದಿದ್ದರೂ ಪಂಪ್

ನಿಮ್ಮ ಹೆಸರಿನಲ್ಲಿ ಉದ್ದೇಶಿತ ಜಾಗದ ಮಾಲೀಕತ್ವ ಇಲ್ಲದಿದ್ದರೂ ಅರ್ಜಿ ಹಾಕಬಹುದು. ಆದರೆ, ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನ ಸ್ಥಳವನ್ನು ಪರಿಶೀಲಿಸಲು ತೋರಿಸಿದರೆ ಸಾಕು. ಓಪನ್ ಬಿಡ್ಡಿಂಗ್, ಆನ್ ಲೈನ್ ಗಣಕೀಕೃತ ವ್ಯವಸ್ಥೆ ಹೀಗೆ ಹೆಚ್ಚು ತಾಂತ್ರಿಕವಾಗಿ, ಪಾರದರ್ಶಕವಾಗಿ ಪ್ರಕ್ರಿಯೆ ಜಾರಿಗೊಳಿಸಲಾಗುತ್ತಿದೆ.

English summary
Ahead of general elections, public sector oil companies plan to allot about 65,000 petrol pumps across the country to nearly double the existing retail network, officials said on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X